ವಿಜಯಪುರ: ರಾಮ ಮಂದಿರ ನಿರ್ಮಾಣ ಕಾರ್ಯದ ಹೋರಾಟದ ಕರ್ಣಧಾರತ್ವ ವಹಿಸಿದ ಹಾಗೂ ಜನಸೇವೆಯನ್ನೇ ತಮ್ಮ ಜೀವನ ಎಂದು ಭಾವಿಸಿದ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ ಅವರಿಗೆ ಭಾರತ ರತ್ನ ಘೋಷಣೆಯಾಗಿರುವುದು ಸಂತಸವನ್ನು ಇಮ್ಮಡಿಗೊಳಿಸಿದೆ ಎಂದು ವಿಜಯಪುರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಉಮೇಶ ಕಾರಜೋಳ ಹೇಳಿದ್ದಾರೆ.
ರಾಜಕೀಯ ರಂಗದಲ್ಲಿ ಭೀಷ್ಮ ಪಿತಾಮಹನಂತೆ ಗೋಚರಿಸುವ ಅಪರೂಪದ ವ್ಯಕ್ತಿತ್ವ ಎಲ್.ಕೆ. ಅಡ್ವಾಣಿ ಅವರದ್ದು. ಜನರ ಧ್ವನಿಯಾಗಿ ಸಂಸತ್ ನಲ್ಲಿ ಗುಡುಗುತ್ತಿದ್ದ ಅವರು ಸಿದ್ದಾಂತಗಳೊಂದಿಗೆ ರಾಜಿ ಮಾಡಿಕೊಂಡವರಲ್ಲ. ದಿ.ಅಟಲ್ ಬಿಹಾರಿ ವಾಜಪೇಯಿ ಹಾಗೂ ಅಡ್ವಾಣಿ ಜಿ ಅವರ ಜೋಡಿ ದೇಶದಲ್ಲಿ ಅನುಪಮ ಪ್ರಗತಿಯ ಕ್ರಾಂತಿಯನ್ನೇ ಉಂಟು ಮಾಡಿತು.
ಹಿಂದುತ್ವದ ಮೇಲೆ ಅಚಲ ಶ್ರದ್ದೆ, ಜನರ ಮೇಲೆ ಅಪಾರ ಕಳಕಳಿ, ಎಷ್ಟೇ ಕಷ್ಟ ಬಂದರೂ ಛಲದಿಂದ ಹೋರಾಡುವ ಜನನಾಯಕರಾಗಿರುವ ಎಲ್.ಕೆ. ಅಡ್ವಾಣಿ ಒಬ್ಬ ಆದರ್ಶಮಯಿ, ಕರುಣಾಮಯಿ. ರಾಷ್ಟ್ರಕ್ಕೆ ಕೊಡುಗೆ ನೀಡಿದ ಅಡ್ವಾಣಿಜಿ ಅವರು ಒಬ್ಬ ಶ್ರೇಷ್ಠ ರತ್ನ, ಈಗ ಅವರು ಭಾರತ ರತ್ನಕ್ಕೆ ಭಾಜನರಾಗಿರುವುದು ಸಕಲರೂ ಸಂತಸ ಪಡುವ ಸಂಗತಿಯಾಗಿದೆ ಎಂದು ಕಾರಜೋಳ ಪ್ರತಿಕ್ರಿಯಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

