ತಿಕೋಟಾ: ವಿಧ್ಯಾರ್ಥಿಗಳು ತಮ್ಮ ಅಂತರಾಳದಲ್ಲಿರುವ ವಿಶೇಷ ಪ್ರತಿಭೆಯು ತಾವೇ ತಯಾರಿಸಿದ ವಿಜ್ಞಾನದ ಮಾದರಿಗಳಲ್ಲಿ ವ್ಯಕ್ತವಾಗಿದೆ ಎಂದು ನಿಕಟಪೂರ್ವ ಸಂಪನ್ಮೂಲ ವ್ಯಕ್ತಿ ರಮೇಶ ರಜಪೂತ ಹೇಳಿದರು.
ಪಟ್ಟಣದ ಶಿವಲಕ್ಷ್ಮೀ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ರಾಷ್ಟ್ರೀಯ ವಿಜ್ಞಾನ ದಿನದ ಪ್ರಯುಕ್ತ ನಡೆದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಪ್ರತಿಭಾನ್ವೇಷಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಮಾಡಿರುವ ಚಂದ್ರಯಾನ-3 ಆದಿತ್ಯ-ಎಲ್1, ಗ್ಲೋಬಲ್ ವಾರ್ಮಿಂಗ್, ಜಲಚಕ್ರ, ಕಾಡು ಬೆಳೆಸಿ ನಾಡು ಉಳಿಸಿ, ವಾಟರ್ ಇರಿಗೇಶನ್ ಮುಂತಾದ ಮಾದರಿಗಳನ್ನು ಮಾಡಿರುವ ವಿದ್ಯಾರ್ಥಿಗಳು ಮುಂದಿನ ಭಾವಿ ಜೀವನದ ವಿಜ್ಞಾನಿಗಳಾಗಿ ಹೊರಹೊಮ್ಮುತ್ತಾರೆ. ರಾಮಮಂದಿರ, ಶಿವಲಕ್ಷ್ಮೀ ಶಾಲೆ, ಮನೆಯ ಮಾದರಿ, ಸರ್ಕಾರಿ ಆಸ್ಪತ್ರೆ, ಮಾಡಿರುವ ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ಉತ್ತಮ ಇಂಜಿನಿಯರ್ ಗಳಾಗುತ್ತಾರೆ ಎಂದು ಶುಭ ಹಾರೈಸಿದರು.
ಕ್ಲಸ್ಟರ ಸಿಆರ್‌ಪಿ ಸುಜಾತ ಬಾಗಲಕೋಟ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಜಿ.ಎಸ್.ಹಂಜಗಿ, ಅತಿಥಿಗಳಾಗಿ ಆರಕ್ಷಕ ಠಾಣೆ ಸಿಬ್ಬಂದಿ ಜಗದೀಶ ಹುನಗುಂದ, ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹಾಂತೇಶ್ ಗುಜುರಿ, ಸುರೇಶ್ ಪೂಜಾರಿ, ಮದಾರ್ ಮುಜಾವರ್, ಸಿ.ಎಂ. ಸಾಲಿಮಠ, ಶಿವಾನಂದ ಹಂಜಗಿ, ಪ್ರಕಾಶ ಹಡಪದ, ಅರುಣ್ ಗಡೇರ, ಸಚಿನ್ ಅವಟಿ, ಎ. ವಿ. ಕಟ್ಟಿ, ಪವಿತ್ರ ಕುಂಬಾರ, ಐಶ್ವರ್ಯ ಅಣ್ಣೆಪ್ಪನವರ ಇದ್ದರು.
ನಿರೂಪಣೆಯನ್ನು ಸೌಮ್ಯ ಹಿಪ್ಪರಗಿ, ಪ್ರಾರ್ಥನೆ ಪಿ.ಎನ್. ಬೆಳ್ಳೂಂಡಗಿ, ವಂದನಾರ್ಪಣೆ ಎಸ್. ಪಿ. ಜೋಶಿ ನೆರವೇರಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

