Author: editor.udayarashmi@gmail.com

ಯಡ್ರಾಮಿ: ೧೨ನೇ ಶತಮಾನದಲ್ಲಿ ಸಮ ಸಮಾಜಕ್ಕಾಗಿ ವಚನ ಚಳುವಳಿ ಹುಟ್ಟಿಕೊಂಡರೆ ೧೫ ನೇ ಶತಮಾನದಲ್ಲಿನ ವೇಮನಾರಾಧ್ಯರ ಸಾಹಿತ್ಯ ಮೋಕ್ಷ ಪ್ರಾಪ್ತಿಯನ್ನು ಹಂಬಲಿಸುವ ತ್ರಿಪದಿಗಳಾಗಿವೆ ಎಂದು ಸಾಹಿತಿ-ಸಂಶೋಧಕ ನಿಂಗನೌಡ ದೇಸಾಯಿ ಹೇಳಿದರು.ಪಟ್ಟಣದ ಸಗರಾದ್ರಿ ಸಾಂಸ್ಕೃತಿಕ ಸಂಗಮ ಟ್ರಸ್ಟ್ ಹಾಗೂ ಶ್ರೀ ಮುರಘೇಂದ್ರ ಶಿವಯೋಗಿ ಫೌಂಡೇಶನ್ ಸಹಯೋಗದಲ್ಲಿ ಶನಿವಾರ ಆನ್ಲೈನ್ ಹುಣ್ಣಿಮೆ ಕಾರ‍್ಯಕ್ರಮ (ಸಂಗಮ-೫೩)ದಲ್ಲಿ “ಬಸವಣ್ಣ ಮತ್ತು ವೇಮನ ವಚನಗಳ ಸಾಮ್ಯತೆ” ಎಂಬ ವಿಷಯದ ಕುರಿತು ಅವರು ಉಪನ್ಯಾಸ ನೀಡಿದರು.ಬಸವಣ್ಣ ಮತ್ತು ವೇಮನರ ಬದುಕಿನಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣುತ್ತೇವೆ. ಆದರೆ ಇಬ್ಬರು ಮಹಾನ್‌ಪುರುಷರು ರಚನೆ ಮಾಡಿದ ಸಾಹಿತ್ಯದಲ್ಲಿನ ತತ್ವಗಳ ಸಾಮ್ಯತೆ ಗುರುತಿಸಬಹುದಾಗಿದೆ. ಬಸವಣ್ಣನವರು ಸಮಾಜ ಸುಧಾರಕರಾಗಿ ಸಮಾನತೆಗಾಗಿ ಅತಿದೊಡ್ಡ ಚಳುವಳಿಗೆ ನಾಂದಿ ಹಾಡಿದರು. ವೇಮನ ಮೂಲತಃ ಆಂಧ್ರ ನಾಡಿನವರಾಗಿದ್ದು, ಪ್ರಾರಂಭದಲ್ಲಿ ವೇಮನರು ಭೋಗಾದಿ ಜೀವನಕ್ಕೆ ಅಂಟಿಕೊಂಡಿದ್ದರೂ ಮುಂದೆ ಮನಸ್ಸು ಪರಿವರ್ತನೆ ಮಾಡಿಕೊಂಡು ಆಧ್ಯಾತ್ಮದತ್ತ ಒಲವು ಬೆಳೆಸಿಕೊಳ್ಳುವ ಮೂಲಕ ಅನುಭಾವ ಸಾಹಿತ್ಯದ ರಚನೆಯಲ್ಲಿ ತೊಡಗಿಸಿಕೊಂಡರು. ವೇಮನರು ೩೮೧೩ ಅನುಭಾವದ ತ್ರಿಪದಿಗಳನ್ನು ರಚಿಸದ್ದಾರೆ. ಬಸವಣ್ಣವರ ವಚನಗಳು ಮುಖ್ಯವಾಗಿ…

Read More

ಅದೊಂದು ದೊಡ್ಡ ಸರೋವರ. ಆ ಸರೋವರದಲ್ಲಿ ನೂರಾರು ಮೀನು ಕಪ್ಪೆ ಏಡಿಗಳೂ ವಾಸವಾಗಿದ್ದವು. ಅದೇ ಸರೋವರದಲ್ಲಿ ಒಂದು ಬಕಪಕ್ಷಿಯೂ ಇತ್ತು. ಅದು ಮೀನು ಕಪ್ಪೆಮರಿಗಳನ್ನು ತಿಂದು ಬದುಕುತ್ತಿತ್ತು .ದಿನ ಕಳೆದಂತೆ ಆ ಬಕಪಕ್ಷಿಗೆ ವಯಸ್ಸಾಗುತ್ತಾ ಬಂತು. ಬಕಪಕ್ಷಿ ಇನ್ನು ಬೇಟೆಯಾಡಿ ಬದುಕುವ ಶಕ್ತಿ ಕಳೆದುಕೊಳ್ಳುವಂತಹ ಸಮಯ ಬಂತು. ಅದು ಒಂದು ಸಂಚನ್ನು ರೂಪಿಸಿತ್ತು. ಬಕಪಕ್ಷಿ ಬೇಟೆಯಾಡುವುದನ್ನು ನಿಲ್ಲಿಸಿ ಧ್ಯಾನ ಮಾಡುವುದರಲ್ಲೇ ಮಗ್ನವಾಗಿತ್ತು. ಕಪ್ಪೆಮರಿಗಳು ಮೀನಿನಮರಿಗಳು ಬಕಪಕ್ಷಿಯ ಬಳಿಗೆ ಸುಳಿದಾಡಿದಾಗಿಯೂ ಬಕಪಕ್ಷಿ ಸುಮ್ಮನಿತ್ತು. ಇವುಗಳ ಚೇಷ್ಟೆ ಜೋರಾದರೂ ಬಕಪಕ್ಷಿ ಸುಮ್ಮನಿರುವುದನ್ನು ಗಮನಿಸಿದ ಮುದಿಕಪ್ಪೆಯೊಂದು ಕೇಳಿತು”ಯಾಕಣ್ಣ ಸಪ್ಪಗಿದ್ದ …?”ಬಕಪಕ್ಷಿ ಹೇಳಿತು” ಏನು ಮಾಡುವುದನ್ನು ನನಗೊಂದು ಸಮಸ್ಯೆ ಕಾಡುತ್ತಿದೆ “” ಅದು ಯಾವ ಸಮಸ್ಯೆ…?”” ಇನ್ನು ಕೆಲವೇ ದಿನದಲ್ಲಿ ನಮ್ಮ ಬದುಕು ಮುಗಿದೇ ಹೋಗಲಿದೆ…”” ಹೌದೇ “”ನಮ್ಮ ಈ ಕೆರೆಯ ನೀರು ಕೆಲವೇ ದಿನಗಳಲ್ಲಿ ಬತ್ತಿ ಹೋಗಲಿದೆ ನಮ್ಮ ಗ್ರಾಮಕ್ಕೆ ಭೀಕರ ಬರಗಾಲ ಕಾಡಲಿದೆ “”ಮುಂದೇನು ಗತಿ “”ನೋಡು ನಾನು ನನ್ನ ಕುರಿತಾಗಿ ಯೋಚಿಸುತ್ತಿಲ್ಲ ನಾನು…

Read More

ಮೋರಟಗಿ: ತಂದೆಯ ಕೊಟ್ಟ ಬಹುದೊಡ್ಡ ಬಳುವಳಿಯಲ್ಲಿ ನನ್ನ ರಾಜಕೀಯವೂ ಸೇರಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಮೀಪದ ಕುಳೇಕುಮಟಗಿ ಗ್ರಾಮದಲ್ಲಿ ನೂತನ ಶಾಸಕರಾಗಿ ಆಯ್ಕೆಯಾದ ಪ್ರಯುಕ್ತ ಗ್ರಾಮಸ್ಥರಿಂದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದ ಅವರು, ಅಶೋಕ ಮನಗೂಳಿ ಯಾರು ಅನ್ನುವುದು ಜನತೆಯ ಹೃದಯದಲ್ಲಿ ಮೂಡುವಂತೆ ಮಾಡಿದ್ದು ನಮ್ಮ ದಿ.ತಂದೆಯವರು. ನನ್ನ ತಂದೆ ಕಷ್ಟದ ಜೀವನ ಮೆಟ್ಟಿ ಜನರ ಕಷ್ಟ ಪರಿಹರಿಸುವ ಶಾಸಕರಾಗಿ, ಸಚಿವರಾಗಿ, ನೂರಾರು ಗ್ರಾಮಗಳಲ್ಲಿ ಮೂಲ ಸೌಕರ್ಯ, ದೇವಸ್ಥಾನಗಳ ಜೀರ್ಣೋದ್ಧಾರ, ರಸ್ತೆ ಕಾಮಗಾರಿ ಹೀಗೆ ಹತ್ತು ಹಲವು ಯೋಜನೆಗಳನ್ನು ಕೈಗೊಂಡು, ರೈತರ ಕಷ್ಟ ಅರಿತು ಗುತ್ತಿ ಬಸವಣ್ಣ ಏತ ನೀರಾವರಿಗೆ ಕಂಕಣತೊಟ್ಟು ಕಾರ್ಯಗತ ಮಾಡಿದವರು ನನ್ನ ತಂದೆ. ಅವರ ರಾಜಕೀಯದಲ್ಲಿ ಪಳಗಿದ ನಾನು ಜನ ಸಾಮಾನ್ಯರಿಗೆ ಸ್ಪಂದಿಸುವ ಅನುಭವ ಪಡೆದೆ. ತಂದೆಯಿಂದ ಕಲಿತ ರಾಜಕೀಯದಿಂದಾಗಿ ಇಂದು ಶಾಸಕನಾಗಿ ಆಯ್ಕೆಯಾಗಿರುವೆ. ನೀವು ಇಟ್ಟ ಪ್ರೀತಿ ವಿಶ್ವಾಸ ಮುಂದಿನ ಬಾರಿ ಅಂದರೆ ಐದು ವರ್ಷ ಕಳೆದ ಮೇಲೆ ನಾನು ಪ್ರಾಮಾಣಿಕವಾಗಿ ಸೇವೆ ಮಾಡಿ ನಿಮ್ಮಭರವಸೆ…

Read More

ವಿಜಯಪುರ: ವಾರ್ಡ್ ನಂ. ೧೬ರಲ್ಲಿ ಜಿಲ್ಲೆಯ ವೀರ ಮಹಾರಾಣಾ ಪ್ರತಾಪ್ ಸಿಂಹ ಸೇವಾ ಅಭಿವೃದ್ಧಿ ಸಂಘದ ಪದಾಧಿಕಾರಿಗಳಿಗೆ ಸನ್ಮಾನ ಜರುಗಿತು.ಜಿಲ್ಲಾ ರಜಪೂತ್ ಸಮಾಜದ ಅಧ್ಯಕ್ಷ ಪರಶುರಾಮ್ ಸಿಂಗ್ ರಜಪೂತ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಿದ್ದು ಸಿಂಗ್ ರಜಪುತ್, ದತ್ತು ಸಿಂಗ್ ರಜಪೂತ, ಮೋಹನ್ ಸಿಂಗ್ ರಜಪೂತ, ಪ್ರಕಾಶ್ ರಜಪೂತ, ಕಾರ್ಯದರ್ಶಿಗಳಾದ ರಮೇಶ್ ಸಿಂಗ್ ಹಜೇರಿ ಹಾಗೂ ಪುಂಡಲಿಕ್ ರಜಪೂತ, ಸಂತೋಷ್ ತೇಲಿ, ಸುನಿಲ್ ಸಿಂಗ್ ಸದಿವಾಲೆ, ಪ್ರತಾಪ್ ಸಿಂಗ್ ಹಜೇರಿ, ದುಂಡಿ ಸಿಂಗ್ ಹಜೇರಿ, ಮನೋಹರ್ ಸಿಂಗ್ ರಜಪೂತ, ಅಂಬಾಭವಾನಿ ದೇವಸ್ಥಾನದ ಅರ್ಚಕರು ಹಾಗೂ ಗುಲಾಬ್ ಚೌಹಾನ್, ರವಿ ಚೌಹಾನ್, ನಬಿ ಬಿಜಾಪುರ್, ರಾಜು ಸಿಂಗ್ ರಜಪೂತ, ಕೆ ಎಸ್ ಟಿ ಸಂಘದ ಅಧ್ಯಕ್ಷ ಶಿವಾನಂದ್ ಹಿರೇಕುರುಬರ, ರಾಣಿ ಚೆನ್ನಮ್ಮ ಸಂಘದ ಅಧ್ಯಕ್ಷ ಚನ್ನು ಬೆಳೇಗಾವ್, ಬಸವರಾಜ ದೊಡ್ಡಮನಿ, ಸಂತೋಷ್ ರಜಪೂತ, ಇಂದಿರಾಬಾಯಿ ರಜಪೂತ, ಜಯಶ್ರೀ ರಜಪೂತ, ಲಕ್ಷ್ಮಿ ರೈಚೂರ್, ಸವಿತಾ ಚೌಹಾನ್ ಸೇರಿದಂತೆ ಇನ್ನು ಹಲವರು ಭಾಗಿಯಾಗಿದ್ದರುಈ ಸಮಯ ಜಿಲ್ಲಾ…

Read More

ವಿಜಯಪುರ: ಶರೀರ ಕ್ರಿಯಾ ಶಾಸ್ತ್ರಜ್ಞರ ರಾಷ್ಟ್ರೀಯ 34ನೇ ಸಮ್ಮೇಳನ ನವೆಂಬರ್ 1ರಿಂದ ನವೆಂಬರ್ 3ರ ವರೆಗೆ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದಲ್ಲಿ ನಡೆಯಲಿದೆ.ಸಮ್ಮೇಳನ ಆರಂಭದ ಒಂದು ದಿನ ಮುಂಚೆ ನಿರಂತರ ವೈದ್ಯಕೀಯ ಶಿಕ್ಷಣ ಅಂಗವಾಗಿ ಆರೋಗ್ಯ ಮತ್ತು ಸುಖಃಸ್ಥಿತಿ ಶಾರೀರಿಕ ಶಾಸ್ತ್ರ ಕುರಿತು ಕಾರ್ಯಾಗಾರ ನಡೆಯಲಿದೆ.ಈ ರಾಷ್ಟ್ರಿಯ ಸಮ್ಮೇಳನದಲ್ಲಿ ದೆಹಲಿಯ, ಎ.ಐ.ಐ.ಎಂ.ಎಸ್. ನ ನಿವೃತ್ತ ಡೀನ್ ಹಾಗೂ ಐಐಟಿ ಯ ಪ್ರಾಧ್ಯಾಪಕ ಡಾ. ಕೆ. ಕೆ. ದೀಪಕ ಮುಖ್ಯ ಅತಿಥಿಯಾಗಿ ಪಾಲ್ಗೋಳ್ಳುತ್ತಿದ್ದು, 88 ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಖ್ಯಾತಿಯ ಭಾಷಣಕಾರರ ಪ್ರಬಂಧ ಮಂಡನೆ ಸೇರಿದಂತೆ ಸುಮಾರು 250 ಪ್ರತಿನಿಧಿಗಳು ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ರಾಷ್ಟ್ರೀಯ ಶರೀರಕ್ರಿಯಾ ಶಾಸ್ತ್ರಜ್ಞರ ಸೊಸೈಟಿ ನೀಡುವ 6 ರಾಷ್ಟ್ರೀಯ ಭಾಷಣ ಪ್ರಶಸ್ತಿಗಳನ್ನು ಈ ಸಮ್ಮೇಳನದಲ್ಲಿ ನೀಡಿ ಗೌರವಿಸಲಾಗುವುದು.ರಕ್ತನಾಳ, ನರಮಂಡಲ, ನಿರ್ನಾಕಗ್ರಂಥಿ ಶರೀರಕ್ರಿಯಾ ಶಾಸ್ತ್ರ್ರ, ರೋಗವಿಜ್ಞಾನ ಮುಂತಾದ ವಿಷಯಗಳ ಕುರಿತು ವಿಚಾರ ಸಂಕಿರಣಗಳನ್ನು ನಡೆಸಿಕೊಡಲಾಗುತ್ತದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಬ್ರೆಝಿಲ್ ನ ಸಾವೋ ಪಾಲೋ ವಿಶ್ವವಿದ್ಯಾಲಯದ ಡಾ.…

Read More

ವಿಜಯಪುರ: ಪರಿಸರ ಸಂರಕ್ಷಣೆ ಮತ್ತು ಪ್ರಾಚೀನ ಸ್ಮಾರಕಗಳ ಸಂರಕ್ಷಣೆ ಉದ್ದೇಶದಿಂದ ಡಿಸೆಂಬರ್ 24 ರಂದು ನಗರದಲ್ಲಿ ಆಯೋಜಿಸಲಾಗಿರುವ ವೃಕ್ಷೋತ್ಥಾನ್ ಹೆರಿಟೇಜ್ ರನ್- 2023 ಪೂರ್ವ ಸಿದ್ಧತೆಗಳ ಕುರಿತು ಕೋರ್ ಕಮಿಟಿ ಸಭೆ ಶನಿವಾರ ಸಂಜೆ ನಡೆಯಿತು.ಡಾ. ಮಹಾಂತೇಶ ಬಿರಾದಾರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಪಾಲ್ಗೋಂಡ ಕೋರ್ ಕಮಿಟಿಯ ನಾನಾ ಉಪಸಮಿತಿಗಳ ಪ್ರಮುಖರು, ಈವರೆಗೆ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.ರೂಟ್ ಕಮಿಟಿ ಉಸ್ತುವಾರಿ ಸೋಮಶೇಖರ ಸ್ವಾಮಿ ಮತ್ತು ಸಂತೋಷ ಅವರಸಂಗ ಮಾತನಾಡಿ, ಈ ಸ್ಪರ್ಧೆಯಲ್ಲಿ ಪಾಲ್ಗೋಳ್ಳಲಿರುವ ಓಟಗಾರರಿಗೆ ಚೇತೋಹಾರಿ ಪಾನೀಯ(ಎನರ್ಜೆಲ್) ನೀಡಲು ಎಫ್.ಡಿ.ಸಿ ಕಂಪನಿ ಮುಂದೆ ಬಂದಿದೆ. ಏಳು ಹೈಡ್ರೆಶನ್ ಪಾಯಿಂಟ್ಸ್ ಗಳಲ್ಲಿ ಈ ಕಂಪನಿಯ ಸದಸ್ಯರು ಓಟಗಾರರಿಗೆ ಚೇತೋಹಾರಿ ಪಾನೀಯ ವ್ಯವಸ್ಥೆ ಮಾಡಲಿದ್ದಾರೆ. ಒಟ್ಟು ಏಳು ವಿಭಾಗಗಳಲ್ಲಿ ಈ ಓಟ ನಡೆಯಲಿದ್ದು, 21 ಕಿ. ಮೀ., 10 ಕಿ. ಮೀ., 5 ಕಿ. ಮೀ, 3.50 ಕಿ.ಮೀ., ಹಿರಿಯ ನಾಗರಿಕರು, ವಿಕಲಚೇತನರು ಹಾಗೂ ಮಕ್ಕಳ ವಿಭಾಗದಲ್ಲಿ ಈ ಓಟ ನಡೆಯಲಿದೆ.…

Read More

ಕಾರ್ಯನಿರತ ಪತ್ರಕರ್ತರ ಸಂಘದಿಂದ ಸಚಿವ ಶಿವಾನಂದ ಪಾಟೀಲರಿಗೆ ಸನ್ಮಾನ ವಿಜಯಪುರ: 37ನೇ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನವನ್ನು ವಿಜಯಪುರ ಜಿಲ್ಲಾ ಘಟಕ ಸಂಘಟಿಸಿ, ಮಾದರಿ ಸಮ್ಮೇಳನ ಮಾಡುವ ಮೂಲಕ ರಾಜ್ಯದ ಪತ್ರಕರ್ತರ ಪ್ರಶಂಸೆಗೆ ಪಾತ್ರವಾಗಿದ್ದು ಸ್ತುತ್ಯ ಕಾರ್ಯ ಎಂದು ಜವಳಿ, ಸಕ್ಕರೆ ಅಭಿವೃದ್ಧಿ ಹಾಗೂ ಎಪಿಎಂಸಿ ಸಚಿವ ಶಿವಾನಂದ ಪಾಟೀಲ ಹೇಳಿದರು.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಪುನರಾಯ್ಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಸಚಿವರ ನಿವಾಸದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ, ಅವರು ಮಾತನಾಡಿದರು.ಸಮ್ಮೇಳನದ ಯಶಸ್ಸಿಗೆ ಜಿಲ್ಲೆಯ ಜನಪ್ರತಿನಿಧಿಗಳು, ಮಾಜಿ ಜನಪ್ರತಿನಿಧಿಗಳು ನಾನಾ ಸಂಘ-ಸಂಸ್ಥೆಗಳ ಸಹಕಾರದಲ್ಲಿ ವಿಜಯಪುರ ಸಮ್ಮೇಳನ ಯಶಸ್ಸು ಕಂಡಿತು. ಇದಕ್ಕೆ ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳ ದಣಿವರಿಯದ ಕಾರ್ಯವೂ ಕಾರಣವಾಗಿದೆ ಎಂದರು.ಭವಿಷ್ಯದ ದಿನಗಳಲ್ಲಿ ಸಂಘ ನಿರಂತರ ಚಟುವಟಿಕೆಗಳನ್ನು ಹಮ್ಮಿಕೊಂಡರೆ, ಸಂಘದ ಚಟುವಟಿಕೆಗಳಿಗೆ ಕೈ ಜೋಡಿಸುವುದಾಗಿ ಸಚಿವರು ಭರವಸೆ ನೀಡಿದರು.ಸಮ್ಮೇಳನದ ಸವಿನೆನಪಿಗಾಗಿ ಸಂಘ ಹೊರತಂದ ಪತ್ರಕರ್ತ ಸ್ಮರಣ ಸಂಚಿಕೆ ಮೇಲೆ ಕಣ್ಣಾಡಿಸಿದ ಸಚಿವರು, ಸ್ಮರಣ…

Read More

ಭಾವರಶ್ಮಿ ಒಂದೂರಲ್ಲಿ ಒಬ್ಬ ಬಾಲಕನಿದ್ದ. ಅವನಿಗೆ ಗೆಲುವಿನ ಹುಚ್ಚು. ಗೆಲ್ಲಬೇಕು ಯಶಸ್ಸು ಪಡೆಯಬೇಕು ಎಂಬ ಅತಿಯಾದ ಹಸಿವು. ಅವನಿಗೆ ಗೆಲ್ಲುವುದೆಂದರೆ ಎಲ್ಲವೂ ಆಗಿತ್ತು. ಯಶಸ್ಸು ಎನ್ನುವುದು ಗೆಲುವಿನಿಂದಲೆ ಅಳೆಯುವವನಾಗಿದ್ದ. ಅವನು ಅದ್ಭುತವಾದಂತಹ ಓಟಗಾರನಾಗಿದ್ದ. ಅಲ್ಲಿ ನಡೆಯುವ ಓಟದ ಸ್ಪರ್ಧೆ ಅಥವಾ ಪಂದ್ಯಗಳಲ್ಲಿ ಗೆಲುವನ್ನು ಇನ್ನಾರಿಗೂ ಅವನು ಬಿಟ್ಟುಕೊಟ್ಟಿರಲಿಲ್ಲ. ತುಂಬಾ ಪ್ರಖ್ಯಾತನಾಗಿಬಿಟ್ಟ. ಹೀಗೆ ಒಂದು ದಿನ ಆ ಊರಿನಲ್ಲಿ ಒಂದು ಪಂದ್ಯ ಏರ್ಪಾಡಾಯಿತು. ಅದರ ತಯಾರಿಯಲ್ಲಿ ಅವನಿದ್ದ. ಅತೀ ದೊಡ್ಡ ಜನ ಸಾಗರವೆ ಪಂದ್ಯ ನೋಡಲು ಅಲ್ಲಿ ಸೇರಿತ್ತು. ಅವನ ಪ್ರಖ್ಯಾತಿಯನ್ನು ಕೇಳಲ್ಪಟ್ಟ ಪಕ್ಕದ ಊರಿನ ವಯಸ್ಕ ಅನುಭವಿ ಮುದುಕನೊಬ್ಬ ಅವನ ಗೆಲುವನ್ನು ನೋಡಲು ಅಲ್ಲಿ ನಡೆಯುತ್ತಿರುವ ಓಟದ ಸ್ಪರ್ಧೆಗೆ ಆಗಮಿಸುತ್ತಾನೆ. ಪಂದ್ಯ ಪ್ರಾರಂಭವಾಯ್ತು. ಅತೀ ಕಷ್ಟಕರವಾದ ಸ್ಪರ್ಧೆ ಅದಾಯಿತು. ಅದಾಗ್ಯೂ ಆ ಬಾಲಕ ಗೆಲುವು ಸಾಧಿಸಿದ. ನೆರೆದ ಜನಸ್ತೋಮ ಹರ್ಷ ಭರಿತರಾಗಿ ಚಪ್ಪಾಳೆಯ ಮಳೆಯನ್ನೇ ಹರಿಸುತ್ತ, ಆ ಬಾಲಕನತ್ತ ಕೈ ಬೀಸುತ್ತಾ ಇವನ ಗೆಲುವಿಗೆ ಸಾಕ್ಷಿಯಾದರು. ಆದರೆ ಆ ವಯಸ್ಕ ಮುದುಕ…

Read More

ಕಾವ್ಯರಶ್ಮಿ -ಡಾ. ವೆಂಕಟಕೃಷ್ಣ ಕೆ. ಭುವಿಯ ಶಕ್ತಿಗಳು ಗರ್ಭದಲಿ ಸಂಚಯಿಸಿಅದರೊಳಗೆ ಸರ್ವ ಸದ್ಗುಣಗಳು ಮೇಳೈಸಿರೂಪಿತ ಕುಸುಮವದು ಮನಸಾರೆ ಹಾರೈಸಿ ಸಹನೆ ಜಾಣ್ಮೆಗಳೊಡನೆ ಆಸೀಮ ಬಲವಂತೆದೃಢ ಮನಸಿನೊಡನೆ ಸಾಧಿಸುವ ಛಲವಂತೆಭರವಸೆ ಭರಪೂರ ಧೈರ್ಯದ ಸಂಕೇತವಂತೆ ಪ್ರಳಯಕ್ಕೂ ತಳಮಳಿಸದ ಅದಮ್ಯ ಮನೋಬಲಬದುಕಲ್ಲಿ ಏಳುವ ಸುಳಿಗಾಳಿಮಳೆಯಲ್ಲೂ ಅಚಲಸಂಸಾರ ಸಂಕಟಕೂ ಕೆಂಗೆಡದ ಅಖಂಡ ಆತ್ಮಬಲ ಹೆಣ್ಣೆಂದರೆ ಸಾಮರ್ಥ್ಯ ಮುತ್ತು ಹವಳಗಳ ವಾರಿಧಿಮನ ಮಾಡಿದರೆ ಸಾಧನೆಗಿಲ್ಲ ಯಾವುದೇ ಪರಿಧಿಮಾನಿನಿಯು ಮೇದಿನಿಗೆ ದೇವರ ಅಮೂಲ್ಯ ನಿಧಿ ॥

Read More