ಆಲಮಟ್ಟಿ: ಇಲ್ಲಿಯ ವಿವಿಧ ಉದ್ಯಾನಗಳನ್ನು ನಿರ್ವಹಣೆಯ ಕಾಮಗಾರಿ ಹೊರಗುತ್ತಿಗೆ ಟೆಂಡರ್ ಕರೆಯಲಾಗಿದ್ದು, ಅದನ್ನು ರದ್ದುಗೊಳಿಸಲು ಆಗ್ರಹಿಸಿ ಸಂಯುಕ್ತ ಆಲಮಟ್ಟಿ ಕೆಬಿಜೆಎನ್ ಎಲ್ ಗಾರ್ಡ್ನ್ ಡಿ ಗ್ರುಪ್ ನೌಕರರ ಸಂಘ ಸೋಮವಾರದಿಂದ ಇಲ್ಲಿಯ ಮುಖ್ಯ ಎಂಜಿನಿಯರ್ ಕಚೇರಿ ಎದುರು ಅನಿರ್ದಿಷ್ಟ ಅಹೋರಾತ್ರಿ ಪ್ರತಿಭಟನೆ ಆರಂಭಿಸಿದರು.
ಉದ್ಯಾನಗಳಿಂದ ಮೆರವಣಿಗೆಯ ಮೂಲಕ ಆಗಮಿಸಿದ ಅರಣ್ಯ ದಿನಗೂಲಿಗಳು ಮುಖ್ಯ ಎಂಜಿನಿಯರ್ ಕಚೇರಿ ಎದುರು ಕುಳಿತು ಪ್ರತಿಭಟನೆ ಆರಂಭಿಸಿದರು.
ಕಳೆದ ೨೨ ವರ್ಷಕ್ಕೂ ಹೆಚ್ಚಿನ ಕಾಲದಿಂದ ೩೦೦ ಕ್ಕೂ ಅಧಿಕ ಅರಣ್ಯ ದಿನಗೂಲಿ ಕಾರ್ಮಿಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಲಮಟ್ಟಿಯ ವಿವಿಧ ಉದ್ಯಾನಗಳ ನಿರ್ಮಾಣ ಹಾಗೂ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.
ಅವರಿಗೆಲ್ಲಾ ಅರಣ್ಯ ಇಲಾಖೆಯ ನಿಗದಿಪಡಿಸಿರುವ ದಿನಗೂಲಿಗಳ ಆಧಾರದ ಮೇಲೆ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗವೂ ವೇತನ ಪಾವತಿ ಮಾಡುತ್ತಿದೆ.
ಅತ್ಯಂತ ಕಡಿಮೆ ಸಂಬಳದಲ್ಲಿ ಇಲ್ಲಿ ದುಡಿಯುತ್ತಿದ್ದಾರೆ. ಆದರೆ ಈಗ ಈ ಉದ್ಯಾನದ ನಿರ್ವಹಣೆಯ ಹೊಣೆಯನ್ನು ಹೊರಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿದೆ. ಇದರಿಂದ ಕಳೆದ ೨೫ ವರ್ಷಗಳಿಂದಲೂ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ನೌಕರಿ ಕಳೆದುಕೊಳ್ಳುವ ಭೀತಿ ಆವರಿಸಿದೆ. ಇದೇ ಸಂಬಳದಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡಿರುವ ಕಾರ್ಮಿಕರಿಗೆ ಹೊರಗುತ್ತಿಗೆ ಟೆಂಡರ್ ದಿಗಿಲು ಬಡಿಸಿದೆ ಎಂದು ಅವರು ಹೇಳಿದರು.
ಟೆಂಡರ್ ರದ್ದುಗೊಳಿಸುವವರೆಗೂ ಅನಿರ್ದಿಷ್ಟ ಅಹೋರಾತ್ರಿ ಧರಣಿ ನಡೆಸುವುದಾಗಿ ಎಂದು ಎಐಯುಟಿಯುಸಿಯ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಎಚ್.ಟಿ. ಹೇಳಿದರು.
ಎಐಯುಟಿಯುಸಿಯ ರಾಜ್ಯ ಮುಖಂಡ ಟಿ.ಎಸ್. ಸುನಿಲಕುಮಾರ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಕಾರ್ಮಿಕರ ಅನ್ಯಾಯದ ಕುರಿತು ಪ್ರತಿಭಟಿಸಿದರು.
ಪ್ರತಿಭಟನೆಯಲ್ಲಿ ದ್ಯಾಮಣ್ಣ ಬಿರಾದಾರ, ಸಿ.ಎ. ಕುಂಬಾರ, ಭೀಮಶಿ ಬ್ಯಾಲಾಳ, ಅನಿತಾ ಜಾಧವ, ಯಲ್ಲವ್ವ ಮೇಟಿ, ಬಾಷ ವಾಲಿಕಾರ, ಸತೀಶ ಮುಕಾರ್ತಿಹಾಳ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment