Author: editor.udayarashmi@gmail.com

ಬೆಂಗಳೂರು: ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ಯೋಜನೆಯಾದ “ಯುವನಿಧಿ” ಯೋಜನೆಯಲ್ಲಿ ಪದವಿ | ಸ್ನಾತಕೊತ್ತರ ಪದವಿ ಮತ್ತು ಡಿಪ್ಲೊಮಾಗಳನ್ನು ೨೦೨೨-೨೩ನೇ ಶೈಕ್ಷಣಿಕ ವರ್ಷದಲ್ಲಿ ವ್ಯಾಸಂಗ ಮಾಡಿ ೨೦೨೩ರಲ್ಲಿ ತೇರ್ಗಡೆಯಾಗಿ ಅರ್ಹತೆ ಹೊಂದಿದ ಅಭ್ಯರ್ಥಿಗಳು ಈಗಾಗಲೇ ಸೇವಾ ಸಿಂಧು ಪೋರ್ಟಲ್‌ನಲ್ಲಿ ನೋಂದಣಿಯಾಗಿದ್ದು ಹಾಗೂ ಫಲಿತಾಂಶದ ನಂತರ ನಿರುದ್ಯೋಗಿಗಳಾಗಿ ೧೮೦ ದಿವಸಗಳು ಪೂರೈಸಿದ ಅಭ್ಯರ್ಥಿಗಳಿಗೆ ಜನವರಿ ೨೦೨೪ ರಂದು ನೇರ ನಗದು ವರ್ಗಾವಣೆ ಮಾಡಲಾಗಿರುತ್ತದೆ. ಅಭ್ಯರ್ಥಿಗಳು ಈ ಪ್ರಯೋಜನವನ್ನು ಪ್ರತಿ ತಿಂಗಳು ಪಡೆಯಬೇಕಿದ್ದರೆ, ಪ್ರತಿ ಮಾಹೆಯಲ್ಲಿ ತಾನು ನಿರುದ್ಯೋಗಿಯೆಂದು, ವ್ಯಾಸಂಗ ಮುಂದುವರೆಸುತ್ತಿಲ್ಲವೆಂದು ಹಾಗೂ ಸ್ವಯಂ ಉದ್ಯೋಗಿಯಲ್ಲವೆಂದು ಸ್ವಯಂ ಘೋಷಣೆಯನ್ನು ಮಾಡಬೇಕಾಗಿರುತ್ತದೆ. ಪ್ರಸ್ತಕ ಫೆಬ್ರವರಿ ಮಾಹೆಯಲ್ಲಿ ದಿನಾಂಕ: ೨೯-೦೨-೨೦೨೪ ರವರೆಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಸ್ವಯಂ ಘೋಷಣೆ ಪ್ರಮಾಣ ಪತ್ರವನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಪ್ರಯೋಜನೆ ಪಡೆಯುತ್ತಿರುವ ಅರ್ಹ ಅಭ್ಯರ್ಥಿಗಳು ಪ್ರತಿ ತಿಂಗಳು ಸ್ವಯಂ ಘೋಷಣೆ ಮಾಡದಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ನೇರ ನಗದು ವರ್ಗಾವಣೆಯನ್ನು ಮಾಡಲಾಗುವುದಿಲ್ಲ ಎಂಬುದಾಗಿ ತಿಳಿಯಪಡಿಸಲಾಗಿದೆ. ಈಗಾಗಲೇ ನೋಂದಾಯಿಸಿಕೊಂಡ ಅಭ್ಯರ್ಥಿಗಳಿಗೆ ಜನವರಿ ೨೦೨೪ರಲ್ಲಿ ನೇರ…

Read More

ವಿಜಯಪುರ: ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ೨೦೨೩-೨೪ನೇ ಸಾಲಿನ ದಿಶಾ ಪ್ರಗತಿ ಪರಿಶೀಲನಾ ಸಭೆಯನ್ನು ಸಂಸದ ರಮೇಶ ಜಿಗಜಿಗಣಿ ಅವರ ಅಧ್ಯಕ್ಷತೆಯಲ್ಲಿ ಇದೇ ಫೆ.೨೮ ರಂದು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬೆಳಿಗ್ಗೆ ೧೧ ಗಂಟೆಗೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಿಷಿ ಆನಂದ ಅವರು ಶನಿವಾರ ದೇವರಹಿಪ್ಪರಗಿ ತಾಲೂಕಿನ ಮಾರ್ಕಬ್ಬಿನಹಳ್ಳಿ, ಸಾತಿಹಾಳ, ಕೋರವಾರ ಗ್ರಾಮ ಪಂಚಾಯತಿಯ ವಿವಿಧ ನರೇಗಾ ಕಾಮಗಾರಿಗಳ ಪರಿಶೀಲನೆ ನಡೆಸಿದರು.ಶನಿವಾರ ದೇವರಹಿಪ್ಪರಗಿ ತಾಲೂಕಿನ ವಿವಿಧೆಡೆ ಭೇಟಿ ನೀಡಿದ ಅವರು, ಮಾರ್ಕಬ್ಬಿನಹಳ್ಳಿ ಗ್ರಾಮ ಪಂಚಾಯಿತಿಯ ರಸ್ತೆ ಬದಿಯಲ್ಲಿನ ಸಾಮಾಜಿಕ ಅರಣ್ಯ ಕಾಮಗಾರಿ ವೀಕ್ಷಣೆ ಮಾಡಿ, ಬೇಸಿಗೆ ಸಮಯದಲ್ಲಿ ಸಸಿಗಳಿಗೆ ನೀರಿನ ವ್ಯವಸ್ಥೆ ಮಾಡಿ ಸಸಿಗಳು ಹಾಳಾಗದಂತೆ ನೋಡಿಕೊಳ್ಳಬೇಕು. ಈ ವರ್ಷ ೨೯ ಸಾವಿರ ಸಸಿ ನೀಡುವ ಗುರಿ ಸಾಧಿಸುವಂತೆ ಅವರು ಸೂಚನೆ ನೀಡಿದರು.ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳ ದಾಖಲಾತಿ, ಪೌಷ್ಟಿಕ ಆಹಾರ ಮತ್ತು ಶೌಚಾಲಯ ವ್ಯವಸ್ಥೆ ಕುರಿತು ಪರಿಸೀಲಿಸಿ, ಅಂಗನವಾಡಿಯಲ್ಲಿ ತಯಾರಿಸಿದ ಆಹಾರವನ್ನು ಖುದ್ದು ಊಟ ಮಾಡುವ ಮೂಲಕ ಮಕ್ಕಳಿಗೆ ನೀಡುವ ಆಹಾರದ ಗುಣಮಟ್ಟವನ್ನು ಪರಿಶೀಲನೆ ನಡೆಸಿದ ಅವರು, ಅಂಗನವಾಡಿ ಕೇಂದ್ರ ಮೇಲ್ಚಾವಣಿ ದುರಸ್ತಿಗೊಳಿಸಬೇಕು. ಕಟ್ಟಡ ಮೇಲ್ಚಾವಣಿ ದುರಸ್ತಿ ಮತ್ತು ಶಾಲಾ ಕೊಠಡಿಯಲ್ಲಿ ಟ್ಯೂಬಲೈಟ್, ಪ್ಯಾನ್…

Read More

ಕರ್ನಾಟಕ ದರ್ಶನ ಪ್ರವಾಸಕ್ಕೆ ಚಾಲನೆ ನೀಡಿದ ಮಲ್ಲಿಕಾರ್ಜುನ ಭಜಂತ್ರಿ ಅಭಿಮತ ವಿಜಯಪುರ: ಐತಿಹಾಸಿಕ ಪ್ರವಾಸಿ ತಾಣ, ಸ್ಮಾರಕಗಳ ದರ್ಶನ ಮಾಡುವ ಮೂಲಕ ವಿದ್ಯಾರ್ಥಿಗಳು ಇತಿಹಾಸ, ಕಲೆ, ಸಂಸ್ಕೃತಿ, ಐತಿಹಾಸಿಕ ಸ್ಥಳಗಳ ಮಹತ್ವ ತಿಳಿದುಕೊಳ್ಳಲು ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮವು ಸಹಾಯಕಾರಿಯಾಗಲಿದೆ ಎಂದು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಮಲ್ಲಿಕಾರ್ಜುನ ಭಜಂತ್ರಿ ಅವರು ಹೇಳಿದರು.ಶನಿವಾರ ಪ್ರವಾಸೋದ್ಯಮ ಇಲಾಖೆ ಹಾಗೂ ಕೆ.ಎಸ್.ಟಿ.ಡಿ.ಸಿ ವತಿಯಿಂದ ೨೦೨೩-೨೪ನೇ ಸಾಲಿನ ಕರ್ನಾಟಕ ದರ್ಶನ ಪ್ರವಾಸ ಕಾರ್ಯಕ್ರಮಕ್ಕೆ ಹೊಟೇಲ್ ಮಯೂರ ಆವರಣದಲ್ಲಿ ವಿಜಯಪುರ ನಗರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್. ತಳವಾರ, ಬೆಂಗಳೂರ ಕೆ.ಎಸ್.ಟಿ.ಡಿ.ಸಿ ಟೂರ್ ವ್ಯವಸ್ಥಾಪಕರಾದ ಯಶ್ವಂತ್ ಅವರೊಂದಿಗೆ ಚಾಲನೆ ನೀಡಿದರು.ಈ ಯೋಜನೆಯಡಿ ವಿಜಯಪುರ ಜಿಲ್ಲೆಗಳಲ್ಲಿನ ಸರ್ಕಾರಿ ಪ್ರೌಢಶಾಲೆ, ಮೊರಾರ್ಜಿ ದೇಸಾಯಿ ಹಾಗೂ ಕ್ರೈಸ್ ವಸತಿ ಶಾಲೆಗಳಲ್ಲಿ ೮ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಾಗೂ ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳು ಸೇರಿದಂತೆ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ವರ್ಗದ ವಿದ್ಯಾರ್ಥಿಗಳಿಗೆ ಕರ್ನಾಟಕ ದರ್ಶನ…

Read More

ವಿಜಯಪುರ: ಆರ್ಕಿಟೆಕ್ಟ್ ಗಳ ಹಿತ ಕಾಪಾಡುವಂತೆ ಆಗ್ರಹಿಸಿ ಇಂಡಿಯನ್ ಇನಸ್ಟಿಟ್ಯೂಟ್ ಆಫ್ ಕರ್ನಾಟಕ ವಿಜಯಪುರ ಶಾಖೆಯ ವಾಸ್ತುಶಿಲ್ಪಿಗಳು ಶನಿವಾರ ಸಂಜೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಮೂಲ ಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು.ರಾಜ್ಯ ಸರಕಾರದ ಕರ್ನಾಟಕ ಸಿವಿಲ್ ಎಂಜಿನಿಯರ್ಸ್ ಬಿಲ್- 2024 ನಲ್ಲಿ ವಾಸ್ತುಶಿಲ್ಪಿಗಳ ಹಿತ ಕಡೆಗಣಿಸಲಾಗಿದೆ. ಇದು ಏಕಮುಖವಾಗಿದ್ದು, ಇದರಿಂದ ಕೇವಲ ಸಿವಿಲ್ ಎಂಜಿನಿಯರ್ ಗಳಿಗೆ ಹೆಚ್ಚಿನ ಅವಕಾಶ ಸಿಗಲಿದೆ. ಆದರೆ, ವೃತ್ತಿಪರತೆ ಮತ್ತು ನೈಪುಣ್ಯತೆಯಲ್ಲಿ ಹೆಚ್ಚಿನ ಅಧ್ಯಯನ ಮಾಡಿರುವ ಮತ್ತು ಅನುಭವ ಹೊಂದಿರುವ ವಾಸ್ತುಶಿಲ್ಪಿಗಳಿಗೆ ಅನ್ಯಾಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಬಿಲ್ ನಲ್ಲಿರುವ ಲೋಪದೋಷಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ, ಸಮಾಜ ವಾಸ್ತುಶಿಲ್ಪಿಗಳ ನೈಪುಣ್ಯತೆ ಮತ್ತು ಜ್ಞಾನದಿಂದ ಸಮಾಜಕ್ಕೆ ವಂಚಿತವಾಗುತ್ತದೆ. ಕೇಂದ್ರ ಕಾನೂನಿನಲ್ಲಿ ವೃತ್ತಿನಿರತ ವಾಸ್ತುಶಿಲ್ಪಿಗಳು, ನಗರ ಯೋಜನೆಕಾರರು ಹಾಗೂ ಇನ್ನಿತರರ ಹಿತ ಕಾಪಾಡುವ ಅಂಶಗಳಿವೆ. ರಾಜ್ಯದಲ್ಲಿಯೂ ಇದೇ ಮಾದರಿಯ ಬಿಲ್ ಅಗತ್ಯವಿದೆ ಎಂದು ಅವರು…

Read More

“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್. ಕೆ. ಬೆಂಗಳೂರು ಇಸ್ರೇಲ್ ಪ್ಯಾಲೆಸ್ಚನ್ಯುದ್ಧದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರ ಮಾರಣಹೋಮವಾಗಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ದಿನೇ ದಿನೇ ಹೆಚ್ಚಾಗುತ್ತಿದೆ. ಸಾವು ನೋವುಗಳು ಲೆಕ್ಕಕ್ಕೂ ಸಿಗುತ್ತಿಲ್ಲ…….. ಒಂದು ಕ್ಷಣ ಅಲ್ಲಿನ ಜನಜೀವನ ವ್ಯವಸ್ಥೆಯನ್ನು ವೈಯಕ್ತಿಕ ಮಟ್ಟದಲ್ಲಿ ನಿಂತು ಯೋಚಿಸಿ ನೋಡಿ. ನಾವುಗಳು ಕೇವಲ ಬಸ್ಸು ಅಥವಾ ರೈಲು ಅಥವಾ ವಿಮಾನ ಪ್ರಯಾಣದಲ್ಲಿ ಒಂದಷ್ಟು ತಡವಾದರೆ, ಒಂದಷ್ಟು ಹೆಚ್ಚು ಜನಸಂಖ್ಯೆ ಹೆಚ್ಚಾದರೆ ನಾವು ಅನುಭವಿಸುವ ಮಾನಸಿಕ ಕಸಿವಿಸಿ ಎಷ್ಟಿರುತ್ತದೆ ಅಥವಾ ಆಸ್ಪತ್ರೆಗಳಲ್ಲಿ ನಾವು ಹೋದಾಗ ಅಲ್ಲಿನ ವಾತಾವರಣ, ಅಲ್ಲಿ ಕಾಯಬೇಕಾದ ಪರಿಸ್ಥಿತಿ, ಅಲ್ಲಿನ ಜನರ ನಡವಳಿಕೆ ಈ ಎಲ್ಲವನ್ನು ಗಮನಿಸಿದಾಗ ಅದನ್ನು ಸಹಿಸುವುದೇ ಸಾಕಷ್ಟು ಕಿರಿಕಿರಿ ಅಥವಾ ಹಿಂಸಾತ್ಮಕವಾಗಿರುತ್ತದೆ. ಎಲ್ಲಾ ವ್ಯವಸ್ಥೆಗಳು ಅನುಕೂಲಕರವಾಗಿ ಇದ್ದಾಗಲೇ ನಮಗೆ ಆ ಪರಿಸ್ಥಿತಿ ಉಂಟಾಗುತ್ತದೆ. ಇನ್ನು ಇಡೀ ಆಡಳಿತ ವ್ಯವಸ್ಥೆಯೇ ಕುಸಿದು ಬಿದ್ದು ಬಾಂಬು ಬಂದೂಕುಗಳ ನಡುವೆ ಬದುಕುತ್ತಿರುವ ಜನರ ಜೀವನ ಶೈಲಿ ಹೇಗಿರಬಹುದು…

Read More

ಭಾರತೀಯ ಜನತಾ‌ ಪಕ್ಷದ ಯುವ‌ ಮೋರ್ಚಾ ರಾಜ್ಯ ಕಾರ್ಯದರ್ಶಿಯನ್ನಾಗಿ ಬಾಳಪ್ಪ ಗೂಗಿಹಾಳ ಅವರನ್ನು ನೇಮಕ ‌ಮಾಡಿ ಯುವ ಮೋರ್ಚಾ ರಾಜ್ಯಾಧ್ಯಕ್ಷ ಧೀರಜ್ ಮುನಿರಾಜು ಆದೇಶ ಹೊರಡಿಸಿದ್ದಾರೆ.ವಿದ್ಯಾರ್ಥಿ ಹಂತದಿಂದಲೇ ಹೋರಾಟದಲ್ಲಿ ತೊಡಗಿಸಿಕೊಂಡು ಎಬಿವಿಪಿ ಸಂಘಟನೆ ಸಕ್ರೀಯ ಸದಸ್ಯನಾಗಿ ಶಿವಮೊಗ್ಗ, ಬಳ್ಳಾರಿ‌ ಮೊದಲಾದ ಜಿಲ್ಲೆಗಳಲ್ಲಿ ಎಬಿವಿಪಿ ಸಂಘಟನೆ ಬಲಪಡಿಸುವ ಜೊತೆಗೆ ವಿಭಾಗ ಸಂಘಟನಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ಹಣಮಾಪೂರ ಗ್ರಾ.ಪಂ. ಸದಸ್ಯರಾಗಿ, ಯುವ‌ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿರುವ ಅವರಿಗೆ ರಾಜ್ಯ ಘಟಕದ ನೂತನ ಜವಾಬ್ದಾರಿ ವಹಿಸಿ ಆದೇಶ ಪತ್ರ ನೀಡಲಾಗಿದೆ.

Read More

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ಉಮೇಶ ಕಾರಜೋಳ ಅಸಮಾಧಾನ ವಿಜಯಪುರ: ನಗರದ ಬಬಲೇಶ್ವರ ‌ನಾಕಾ‌ ಬಳಿ ನಿರ್ಮಿಸಲಾಗಿರುವ ಸರ್ದಾರ ವಲ್ಲಭಭಾಯಿ ಪಟೇಲ್ ವಾಣಿಜ್ಯ ಸಂಕೀರ್ಣದ‌ ಮಳಿಗೆಗಳ‌ ಹಂಚಿಕೆಯಾಗಬೇಕಾಗಿದೆ,‌ ವಿಶೇಷವಾಗಿ ಎಸ್.ಇ.ಪಿ -ಟಿ.ಎಸ್.ಪಿ ಅನುನದಾದಡಿಯಲ್ಲಿ ನಿರ್ಮಿಸಿದ ಈ‌ ಮಳಿಗೆಗಳನ್ನು ಪರಿಶಿಷ್ಟ ಜಾತಿ ಸಮುದಾಯಕ್ಕೆ ಹಂಚಬೇಕು ಆದರೆ ಮಹಾನಗರ ಪಾಲಿಕೆಯ ಸಭೆಯಲ್ಲಿ ಈ ಬಗ್ಗೆ ಯಾವ ಉಲ್ಲೇಖವೂ ಇಲ್ಲದೇ ಇರುವುದು ಆತಂಕಕ್ಕೆ ಕಾರಣವಾಗಿದೆ, ಈ ವಿಷಯವಾಗಿ ಮಹಾನಗರ ಪಾಲಿಕೆ ನಿಯಮಾವಳಿ ಗಾಳಿಗೆ ತೂರಿದೆಯೇ ಎಂದು ಬಿಜೆಪಿ ಮುಖಂಡ ಉಮೇಶ ಕಾರಜೋಳ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಈ ಕುರಿತು ಶನಿವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು,ರಸ್ತೆ ಅತಿಕ್ರಮಣದಲ್ಲಿ ಅಂಗಡಿ ಕಳೆದುಕೊಂಡಿರುವವರಿಗೆ ಹಾಗೂ ಉಳಿದವರಿಗೆ ಹಂಚಿಕೆ‌ ಮಾಡುವ ವಿಷಯ ಬರೆಯಲಾಗಿದೆ. ಈ ಮಳಿಗೆಗಳನ್ನು ಉಳಿದ ‌ಸಮುದಾಯಗಳಿಗೆ ಹಂಚಿಕೆ‌ ಮಾಡಲು ಬರುವುದೇ‌‌ ಇಲ್ಲ. ೨೦೨೦-೨೧ ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆಯ ಎಸ್.ಇ.ಪಿ-ಟಿ.ಎಸ್.ಪಿ ಅಡಿಯಲ್ಲಿ ೩.೫೬ ಕೋಟಿ ರೂ. ವೆಚ್ಚದಲ್ಲಿ ಈ ಮಳಿಗೆ‌ ನಿರ್ಮಿಸಿ ೨೦೨೨ ರಲ್ಲಿ ಕಾಮಗಾರಿ ಪೂರ್ಣಗೊಳಿಸಿ…

Read More

ಕೆಂಭಾವಿ: ಪಟ್ಟಣದ ಆನಂದ ಬುದ್ಧ ವಿಹಾರದಲ್ಲಿ ಪ್ರತಿ ತಿಂಗಳ ಹುಣ್ಣಿಮೆ ಕಾರ್ಯಕ್ರಮವನ್ನು ಮಾಡಲಾಯಿತು.ಇದೆ ಸಂದರ್ಭದಲ್ಲಿ ಪ್ರತಿಯೊಂದು ಹಳ್ಳಿ ಗ್ರಾಮದವರು ಬಂದು ಹುಣ್ಣಿಮೆ ಕಾರ್ಯಕ್ರಮ ಮಾಡಬೇಕು. ಬೌದ್ಧ ಧರ್ಮವನ್ನು ನಾವು ನೀವೆಲ್ಲರೂ ಪಾಲಿಸಬೇಕು. ಏಕೆಂದರೆ ಬೌದ್ಧ ಧರ್ಮದಲ್ಲಿ ಪ್ರೀತಿ, ಕರುಣೆ, ಶಾಂತಿ ಇರುತ್ತದೆ ಹಾಗೂ ಯಾವುದೇ ಆಡಂಬರಗಳು ಆಗಲಿ ಮೂಡನಂಬಿಕೆಗಳು ಆಗಲಿ ಇರುವುದಿಲ್ಲ. ಒಳ್ಳೆ ಮಾರ್ಗವನ್ನು ತೋರಿಸೋದೇ ಬೌದ್ಧ ಧರ್ಮವಾಗಿದೆ ಎಂದು ಮಡಿವಾಳಪ್ಪ ಕಟ್ಟಿಮನಿ ಕಿರದಳ್ಳಿ ಹೇಳಿದರು.ತ್ರೀ ಶರಣ ಪಾಠಣವನ್ನು ಮಲ್ಲಿಕಾರ್ಜುನ ಕಟ್ಟಿಮನಿ ಬೋಧಿಸಿದರು.ಈ ಸಂದರ್ಭದಲ್ಲಿ ಭೀಮರಾಯ್ ಮಾಲಹಳ್ಳಿಕರ್, ಪುಂಡಲಿಕ್ ಬಸರಿಗಿಡ, ಧರ್ಮಣ್ಣ ಬಡಿಗೇರ್, ಮಲ್ಲಪ್ಪ ಇಂಗಳಗಿ, ಬಸವಣ್ಣಪ್ಪ ಆರ್ ಮಾಳಳ್ಳಿಕರ್, ಸಂಗಣ್ಣ ಚಿಂಚೋಳಿ, ಬಸವರಾಜ ಯಡಿಯಾಪೂರ, ಶರಣು ಕಡಕಲ್ ಇತರರು ಇದ್ದರು.

Read More