Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಬಸವನಬಾಗೇವಾಡಿ: ಶ್ರೇಷ್ಠ ಭಕ್ತ ಕನಕದಾಸರು ನೀಡಿರುವ ಸಂದೇಶಗಳು ಇಡೀ ಮನುಕುಲಕ್ಕೆ ಹರುಷ ತರುವ ಜೊತೆಗೆ ಮನ ಪರಿವರ್ತನೆಗೆ ನಾಂದಿಯಾಗಿವೆ ಎಂದು ನಂದಿ ಸಕ್ಕರೆ ಕಾರ್ಖಾನೆಯ ನಿರ್ದೇಶಕ ಸತ್ಯಜೀತ ಪಾಟೀಲ ಹೇಳಿದರು.ಪಟ್ಟಣದ ಬಸವ ಭವನದಲ್ಲಿ ತಾಲೂಕಾಡಳಿತ, ತಾಲೂಕು ಪಂಚಾಯತಿ ಹಾಗೂ ತಾಲೂಕು ಕುರುಬರ ಸಂಘದ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಕ್ತ ಕನಕದಾಸರ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಲೌಕಿಕ ತೊರೆದವರು ಸಂತರಾಗಿರುವುದನ್ನು ನೋಡುತ್ತೇವೆ. ಸಂತರು ಸ್ವಾರ್ಥಿಗಳಾಗದೇ ಇಡೀ ಸಮಾಜಕ್ಕೆ ತಮ್ಮ ಜೀವನ ಮುಡುಪಾಗಿಟ್ಟಿರುತ್ತಾರೆ. ಇಂತಹ ಸಾಲಿನಲ್ಲಿ ಭಕ್ತ ಕನಕದಾಸರು ನಿಲ್ಲುತ್ತಾರೆ. ನಮ್ಮ ದೇಶ ಭವ್ಯ ಪರಂಪರೆ, ಸಂಸ್ಕ್ರತಿ, ಆಧ್ಯಾತ್ಮ, ಭಾವೈಕ್ಯತೆ ಹೊಂದಿದೆ ಎಂದರು.ನನ್ನ ತಂದೆ ಸಚಿವ ಶಿವಾನಂದ ಪಾಟೀಲರು ೩೦ ವರ್ಷಗಳ ಕಾಲ ಡಿಸಿಸಿ ಬ್ಯಾಂಕಿನ ಅಧ್ಯಕ್ಷರಾಗುವ ಮೂಲಕ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. ಮೊದಲು ಜಿಲ್ಲೆಯಲ್ಲಿ ಪ್ರತಿನಿತ್ಯ ೨೫ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿತ್ತು. ಇದೀಗ ಡಿಸಿಸಿ ಬ್ಯಾಂಕಿನ ಸಹಕಾರದಿಂದಾಗಿ ದಿನಕ್ಕೆ ೫೭ ಸಾವಿರ ಲೀಟರ್…
ಸಿಂದಗಿ: ಕನಕದಾಸರ ಕೀರ್ತನೆಗಳು ಮತ್ತು ಸಂದೇಶಗಳು ನಮಗೆ ದಾರಿದೀಪವಾಗಬೇಕು ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಪಟ್ಟಣದ ತಾಲೂಕಾಡಳಿತ ಸೌಧದ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ಹಮ್ಮಿಕೊಂಡ ೫೩೬ನೆಯ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಾತಿ ವಾಸನೆಯನ್ನೂ ಬಿಟ್ಟು ಮನುಷ್ಯರಂತೆ ಬದುಕಿ ಎಂದು ಮನುಕುಲಕ್ಕೆ ಉಪದೇಶ ಮಾಡಿದ ಮಹಾನ್ ಸಂತನನ್ನು ನಾವೆಂದಿಗೂ ಮರೆಯಲು ಸಾಧ್ಯವಿಲ್ಲ. ಕನ್ನಡ ನಾಡಿನ ಸಾಹಿತ್ಯ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಕನಕದಾಸರ ಕೊಡುಗೆ ಅನನ್ಯವಾಗಿದೆ. ಕನಕದಾಸರ ಕೀರ್ತನೆಗಳು ಎಂದಗೂ ನಮಗೆ ದಾರಿದೀಪ. ಇತ್ತಿಚಿನ ದಿನಮಾನಗಳಲ್ಲಿ ಮೋಬೈಲ್‌ದಿಂದಾಗಿ ಹಲವಾರು ತಾರತಮ್ಯಗಳನ್ನು ಗಮನಿಸುತ್ತಿದ್ದೇವೆ. ಈ ಓಂದು ದೆಸೆಯಲ್ಲಿ ಅಂದಿನ ಶರಣರು, ಶಂತರು, ದಾರ್ಶನಿಕರು ಸೇರಿದಂತೆ ದಾಸ ಶ್ರೇಷ್ಠ ಕನಕದಾಸರು ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಿದ್ದು ಶ್ಲಾಘನೀಯ. ದಾಸ ಸಾಹಿತ್ಯಕ್ಕೆ ವೈಚಾರಿಕ ನೆಲೆಗಟ್ಟನ್ನು ಒದಗಿಸಿದ ಭಕ್ತ ಶ್ರೇಷ್ಠ ಸಂತ ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿ ಉನ್ನತ ಚಿಂತನೆಗಳನ್ನು ಬಿತ್ತಿದ್ದಾರೆ. ಕನಕದಾಸರ ತತ್ವಾದರ್ಶ,…
ಸಿಂದಗಿ: ಕನಕದಾಸರ ಕೀರ್ತನೆಗಳ ಪ್ರತಿ ಸಾಲಿನಲ್ಲಿಯೂ ಸಾವಿರಾರು ನಿಘುಡಾರ್ಥ ಹಾಗೂ ಅಧ್ಬುತ ಸಂದೇಶ ಅಡಗಿದೆ ಎಂದು ಬಿಜೆಪಿಯ ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶಿಲ್ಪಾ ಕುದರಗೊಂಡ ಹೇಳಿದರು. ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಹಮ್ಮಿಕೊಂಡ ೩೫೬ನೆಯ ಭಕ್ತ ಕನಕದಾಸರ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹುಟ್ಟು ಸಾವಿನ ಚಕ್ರದಿಂದ ಪಾರಾಗಬೇಕಾದರೇ ಏನು ಮಾಡಬೇಕು ಎಂದು ಗುರುಗಳು ಕೇಳಿದ ಪ್ರಶ್ನೆಗೆ ಅವರೇ ಕಾಯಬೇಕು ಎಂದು ಉತ್ತರಿಸಿದ ಕನಕದಾಸರ ಮಾತನ್ನು ಕೇಳಿದ ಸಬಿಕರು ಅವರೇ ಕಾಯಿ ತಂದುಕೊಟ್ಟರAತೆ. ಆದರೆ ಅವರೇ ಕಾಯಬೇಕು ಎನ್ನುವ ಮಾತು ದೇವರೇ ಕಾಯಬೇಕು ಎಂದರ್ಥ. ನಾನು ಎಂಬ ಅಹಂಕಾರ ಅಳಿದು ಹೋದರೆ ಸ್ವರ್ಗಕ್ಕೆ ಹೋಗಬಹುದು ಎಂದರು.ಈ ವೇಳೆ ಲಿಂಬೆ ಅಭಿವೃದ್ಧಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ, ಅಬು ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಂ.ಎ.ಖತೀಬ, ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾಧ್ಯಕ್ಷ ಆನಂದ ಶಾಬಾದಿ, ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ದೇವರೆಡ್ಡಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಕಸಾಪ ನೂತನ ಅಧ್ಯಕ್ಷ ಶಿವಾನಂದ…
ಮುದ್ದೇಬಿಹಾಳ: ಡಿ೧ ರಂದು ಪಟ್ಟಣದಲ್ಲಿ ಹೊಸ ೧೧೦ಕೆವಿ ಮಾರ್ಗ ನಿರ್ಮಾಣದ ಬಾಕಿ ಉಳಿದಿರುವ ಕಾಮಗಾರಿ ಕೈಗೊಳ್ಳುವದರಿಂದ ವಿದ್ಯಾನಗರ, ಮಾರುತಿ ನಗರ, ಆಲಮಟ್ಟಿ ರಸ್ತೆ, ಸಂಗಮೇಶ್ವರ ನಗರ ಹಾಗೂ ಹುಡಕೋ ಬಡಾವಣೆಗಳಲ್ಲಿ ಬೆಳಿಗ್ಗೆ ೯ರಿಂದ ಸಂಜೆ೬ ಗಂಟೆಯವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.
ಮುದ್ದೇಬಿಹಾಳ: ಪಟ್ಟಣದ ಕೆರೆ ಹತ್ತಿರದ ತರಕಾರಿ ಮಾರುಕಟ್ಟೆಯ ಪಕ್ಕದ ನಾಗೂರ ಅವರ ಹೊಲದಲ್ಲಿರುವ ಹಳ್ಳದ ನೀರಿನಲ್ಲಿ ಮೃತ ದೇಹವೊಂದು ಗುರುವಾರ ಪತ್ತೆಯಾಗಿದೆ.ಮೃತರನ್ನು ಅಬ್ದುಲ್‌ಹಮೀದ ತಂದೆ ಅಬ್ದುಲ್‌ಹಜೀಜ್ ಮೋಮಿನ(೬೩) ಎಂದು ಗುರುತಿಸಲಾಗಿದೆ.ಮೃತನು ಸುಮಾರು ವರ್ಷಗಳಿಂದ ವಿಪರೀತ ಸೆರೆ ಕುಡಿಯುತ್ತಿದ್ದು ಪಟ್ಟಣದ ತುಂಬೆಲ್ಲ ಸುತ್ತಾಡಿ ಪ್ಲಾಸ್ಟಿಕ್ ಆರಿಸುವ ಕೆಲಸ ಮಾಡುತ್ತಿದ್ದು ಮೃತನ ಮರಣದಲ್ಲಿ ಸಮಶಯವಿರುತ್ತದೆ ಅಂತಾ ಇಲ್ಲಿನ ಪೊಲೀಸ್ ಠಾಣೆಯಲ್ಲಿ ಮೃತನ ತಾಯಿ ದೂರು ದಾಖಲಿಸಿದ್ದಾಳೆ. ಮೃತರಿಗೆ ಪತ್ನಿ, ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧುಬಳಗ ಇದೆ.
ಮುದ್ದೇಬಿಹಾಳ: ಬೆಳೆ ಉತ್ಪಾದನಾ ತಂತ್ರಜ್ಞಾನಗಳ ಜೊತೆ ಪೀಡೆ, ಪೋಷಕಾಂಶ ನಿರ್ವಹಣೆಯಲ್ಲಿ ವೈಜ್ಞಾನಿಕತೆಯನ್ನು ಅಳವಡಿಸಿ ಕೈಗೊಳ್ಳಲಾಗುವ ಬೇಸಾಯ ಪದ್ಧತಿಗಳಿಂದ ಅಧಿಕ ಇಳುವರಿ ಪಡೆಯುವ ಮೂಲಕ ಆದಾಯ ಹೆಚ್ಚಿಸಿಕೊಳ್ಳಲು ರೈತರಿಗೆ ಸಾಧ್ಯವಾಗಲಿದೆ ಎಂದು ಪರಪ್ಪ ಮಾಸ್ತರ ಸಾವಯವ ಕೃಷಿ ವಿದ್ಯಾಪೀಠದ ಅಧ್ಯಕ್ಷ ಅರವಿಂದ ಕೊಪ್ಪ ಹೇಳಿದರು.ತಾಲೂಕಿನ ಬಸರಕೋಡ ಗ್ರಾಮದ ಶ್ರೀಮಂತ ಶ್ರೀ ಶ್ರೀಶೈಲ ಸೂಳಿಭಾವಿಯವರ ತೋಟದಲ್ಲಿ ಯುನೈಟೆಡ್ ಫಾಸ್ಫರಸ್ ಲಿಮಿಟೆಡ್ ಕಂಪನಿಯವರು ಏರ್ಪಡಿಸಿದ್ದ ಮೆಕ್ಕೆಜೋಳ ಬೆಳೆ ಪ್ರಾತ್ಯಕ್ಷಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.ಮನುಷ್ಯನ ಆರೋಗ್ಯ ದೃಷ್ಠಿಯಿಂದಲೂ ಉತ್ತಮ ಆಹಾರ ಉತ್ಪನ್ನವಾಗಿ ಕಂಡು ಬರುವ ಮೆಕ್ಕೆಜೋಳ ಬೆಳೆ ಪ್ರದೇಶ ವಿಸ್ತರಣೆ ಇರುವ ಅವಕಾಶವನ್ನು ರೈತರು ಸದುಪಯೋಗ ಪಡಿಸಿಕೊಳ್ಳಬೇಕು. ಪಶು ಸಂಗೋಪನೆಯಲ್ಲಿ ಮುಖ್ಯ ಆಹಾರವಾಗಿ ಪರಿಗಣಿಸಲಾಗುತ್ತಿರುವ ಮೆಕ್ಕೆಜೋಳ ಬೆಳಯಲ್ಲಿ ಇಳುವರಿ ಅಧಿಕಗೊಳಿಸುವ ತಾಂತ್ರಿಕತೆಯ ನೆರವು ಪಡೆಯಲು ರೈತರು ಮುಂದಾಗಬೇಕೆಂದು ಕರೆ ನೀಡಿದರು.ಅಧ್ಯಕ್ಷತೆ ವಹಿಸಿದ್ದ ಬಸರಕೋಡ ಮಂಡಳ ಪಂಚಾಯತ ಮಾಜಿ ಪ್ರಧಾನ ಶ್ರೀಶೈಲ ಸೂಳಿಭಾವಿ ಮಾತನಾಡಿದರು.ಅತಿಥಿ ಉಪನ್ಯಾಸ ನೀಡಿದ ಯುಪಿಎಲ್ ಕಂಪನಿ ನೋಡಲ ಅಧಿಕಾರಿ ಮಂಜುನಾಥ ಮಾತನಾಡಿದರು.ಕಂಪನಿಯ ತಾಲೂಕು ವಿತರಕ…
ಆಲಮಟ್ಟಿ: ಗ್ರಾಮದ ಆರ್.ಎಸ್. ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸಿ ಗುರುವಾರ ವಯೋನಿವೃತ್ತಿಗೊಂಡ ದೈಹಿಕ ಶಿಕ್ಷಣ ಶಿಕ್ಷಕಿ, ತಾಲ್ಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷೆ ಕೆ.ಎಸ್. ಧನಶೆಟ್ಟಿ ಅವರನ್ನು ಗುರುವಾರ ಆಲಮಟ್ಟಿಯಲ್ಲಿ ಸನ್ಮಾನಿಸಲಾಯಿತು. ವಿವಿಧ ಗಣ್ಯರು ಮಾತನಾಡಿ ಅವರ ಸೇವಾ ಮನೋಭಾವನೆಯ ಗುಣಗಾನ ಮಾಡಿದರು. 20 ಕ್ಕೂ ವಿವಿಧ ಸಂಘಟನೆಯವರು, ಗ್ರಾಮಸ್ಥರು ಧನಶೆಟ್ಟಿ ಅರನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ನಿಡಗುಂದಿಯ ರುದ್ರಮುನಿ ಸ್ವಾಮೀಜಿ, ಯು.ವೈ. ಬಶೆಟ್ಟಿ, ಎಸ್.ಎಂ. ಜಲ್ಲಿ, ಬಿ.ಟಿ. ಗೌಡರ, ಎಂ.ಎಸ್. ಮುಕಾರ್ತಿಹಾಳ, ಆರ್.ಎಸ್. ಕಮತ, ಸಲೀಂ ದಡೆದ, ಆರ್.ಬಿ. ಗೌಡರ, ಎಂ.ಆರ್. ಮಕಾನದಾರ್, ಬಿ.ಡಿ. ಚಲವಾದಿ, ಎಂ.ಎಂ. ಮುಲ್ಲಾ, ಎಂ.ಬಿ. ಹೆಬ್ಬಾಳ, ಮುತ್ತು ಯಳಮೇಲಿ, ರಾಜು ಹಲಗಿ ಮತ್ತೀತರರು ಇದ್ದರು
ಆಲಮಟ್ಟಿ: ಕ್ರಿಸ್ತಪೂರ್ವದಿಂದಲೂ ಅಸ್ತಿತ್ವದಲ್ಲಿದ್ದ ಸನಾತನ ಧರ್ಮದಲ್ಲಿ “ಮೇಲು-ಕೀಳು’ ಎಂಬ ಕೆಟ್ಟ ವ್ಯವಸ್ಥೆ ಇತ್ತು, ಮುಂದೆ ರಾಜರ ಕಾಲದಲ್ಲಿಯೂ ಒಂದೇ ಧರ್ಮ ಪೋಷಿಸಲ್ಪಟ್ಟಿತು, ಒಟ್ಟಾರೇ ಹಿಂದಿನ ಕಾಲದಲ್ಲಿ ದಲಿತ ಜನಾಂಗಕ್ಕೆ ಅತಿ ಹೆಚ್ಚಿನ ಅನ್ಯಾಯವಾಗಿದೆ, ಪ್ರಾಣಿಗಳಿಗಿಂತಲೂ ಕಡೆಯಾಗಿದ್ದು ಸುಳ್ಳಲ್ಲ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಎಸ್.ಕೆ. ಬೆಳ್ಳುಬ್ಬಿ ಅಭಿಪ್ರಾಯಪಟ್ಟರು.ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ ಸೈನ್ಯ ಜಿಲ್ಲಾ ಸಮಿತಿ ಗುರುವಾರ ಆಲಮಟ್ಟಿಯಲ್ಲಿ ಏರ್ಪಡಿಸಿದ್ದ ಸಂವಿಧಾನ ದಿನಾಚರಣೆ ಹಾಗೂ ಸಂವಿಧಾನ ಜಾಗೃತಿ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಬಿಜೆಪಿ ಎಂದೂ ಸಂವಿಧಾನದ ಬದಲಾವಣೆಯ ಚಿಂತನೆಯೂ ಮಾಡಿಲ್ಲ, ಯಾರೋ ಹೇಳಿದ್ದು, ಅದು ಅವರ ವೈಯಕ್ತಿಕ ಹೇಳಿಕೆ, ಅದು ಪಕ್ಷ, ಸರ್ಕಾರದ ಹೇಳಿಕೆಯೂ ಅಲ್ಲ ಎಂದರು.ಭಾರತದಲ್ಲಿ ಏಕರೂಪ ಕಾನೂನು ವ್ಯವಸ್ಥೆ, ಅಖಂಡ ಭಾರತ ಎಂಬುದು ಮಾತ್ರ ಬಿಜೆಪಿ, ಆರ್.ಎಸ್.ಎಸ್. ಸಿದ್ಧಾಂತ, ಅದಕ್ಕೂ ಸಂವಿಧಾನ ಬದಲಾವಣೆಗೂ ಯಾವುದೇ ಸಂಬಂಧವೂ ಇಲ್ಲ ಎಂದರು.ಕಾರ್ಯಕ್ರಮದ ನೇತೃತ್ವ ವಹಿಸಿದ್ದ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ಮರೆಪ್ಪ ಹೆಬ್ಬಾಳ ಮಾತನಾಡಿದರು.ಬೀದರನ ಶ್ರೀ…
ಆಲಮಟ್ಟಿ: ಅಂಚೆ ಕಚೇರಿಯು ಗ್ರಾಮೀಣ ಜನರ ಜೀವನಾಡಿಯಾಗಿದ್ದು, ಶತಮಾನಗಳಿಂದ ಗ್ರಾಮೀಣರ ಬದುಕಿನಲ್ಲಿ ಸ್ನೇಹ ಸೇತುವಾಗಿ ಕಾರ್ಯನಿರ್ವಹಿಸುತ್ತದೆ ಎಂದು ವಿಜಯಪುರ ಜಿಲ್ಲಾ ಅಂಚೆ ಅಧೀಕ್ಷಕ ಜಿ.ಬಿ.ನಾಯಕ ಹೇಳಿದರು.ಸಮೀಪದ ಬೇನಾಳ ಆರ್.ಎಸ್. ಗ್ರಾಮದಲ್ಲಿ ಜರುಗಿದ ‘ ಅಂಚೆ ಜನ ಸಂಪರ್ಕ ಅಭಿಯಾನ ‘ ವನ್ನು ಉದ್ಘಾಟಿಸಿ ಮಾತನಾಡಿದರು.ಭಾರತ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ, ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆ, ಸುಕನ್ಯಾ ಸಮೃದ್ಧಿ ಯೋಜನೆ, ಅಟಲ್ ಪೆನ್ ಶಿನ್ ಯೋಜನೆ, ಸಿ.ಎಸ್.ಸಿ.ಡಿಜಿಟಲ್ ಇಂಡಿಯಾ, ಆಧಾರ್, ಪಾಸ್ ಪೋರ್ಟ್ ಸೇವಾ, ಆರ್.ಪಿ.ಎಲ್.ಐ, ಪೋಸ್ಟಲ್ ಲೈಫ್ ಇನ್ಸೂರೆನ್ಸ್ ಸೇರಿದಂತೆ ಹಲವಾರು ಯೋಜನೆಗಳ ಕುರಿತು ಸಮಗ್ರವಾಗಿ ಮಾಹಿತಿ ನೀಡಿದರು.ಮುದ್ದೇಬಿಹಾಳ ಉಪ ವಿಭಾಗದ ಅಂಚೆ ನಿರೀಕ್ಷಕಿ ಸರೋಜಾ ಇಳಕಲ್, ಅಂಚೆ ಇಲಾಖೆಯಲ್ಲಿರುವ ಯೋಜನೆಗಳ ಕುರಿತು ಸಾರ್ವಜನಿಕರಿಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು.ಬಿ.ಎಚ್. ಗಣಿ, ಆರ್.ಎಂ.ಜಿ.ಎಫ್. ಅಧ್ಯಕ್ಷ ನೇತಾಜಿಗಾಂಧಿ ಮಾತನಾಡಿದರು.ಗ್ರಾಮ ಪಂಚಾಯ್ತಿ ಅಧ್ಯಕ್ಷ ರಮೇಶ್ ವಂದಾಲ ಅಧ್ಯಕ್ಷತೆ ವಹಿಸಿದ್ದರು.ಬಿ.ಬಿ.ಚಂದ್ರಗಿರಿ, ಟಿ.ಎಸ್.ಬಿರಾದಾರ, ಮಹಾದೇವಪ್ಪ ಐಹೊಳೆ, ದಾನಪ್ಪ ಕುಂಬಾರ, ಸೋಮಲಿಂಗಪ್ಪ ಗಣಿ,…
ಯಡ್ರಾಮಿ: ಕಲಬುರಗಿಯ ಡಾ.ಬಿ.ಡಿ.ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂತೋಷ ನವಲಗುಂದ ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ. ” ಸಗರ ಕೃಷ್ಣಾಚಾರ್ಯರ ಸಾಹಿತ್ಯ – ಸ್ವರೂಪ ಮತ್ತು ವಿಶ್ಲೇಷಣೆ ” ಎಂಬ ವಿಷಯದ ಮೇಲೆ ಪಿಎಚ್.ಡಿ. ಮಹಾಪ್ರಬಂಧ ಮಂಡಿಸಿದ್ದಕ್ಕೆ ಕನ್ನಡ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಲಭಿಸಿದೆ. ಡಾ.ಪಾಟೀಲ ಶ್ರೀಕಾಂತ ಮಾರ್ಗದರ್ಶಕರಾಗಿದ್ದರು.
