Author: editor.udayarashmi@gmail.com

ವಿಜಯಪುರ: ಯುವಕನೊಬ್ಬ ತನ್ನ ಜೊತೆಗಾರನನ್ನು ಚಾಕುವಿಂದ ಹತ್ಯೆ ಮಾಡಿ, ನಂತರ ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ನಗರದ ಲಕ್ಷ್ಮಿ ಚಿತ್ರಮಂದಿರ ಎದುರಿನ ರಾಜಧಾನಿ ಲಾಡ್ಜ್ ನಲ್ಲಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.‌ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ಕೃಷ್ಣಪುರ ತಾಂಡಾ ನಿವಾಸಿ ಸಿ.ಇಂದ್ರಕುಮಾರ ಕೊಲೆಯಾದ ವ್ಯಕ್ತಿ.ಈತನನ್ನು ಕೊಲೆ ಮಾಡಿದ ಇನ್ನೊಬ್ಬ ವ್ಯಕ್ತಿಯ ಹೆಸರು ತಿಳಿದುಬಂದಿಲ್ಲ. ಆತನೂ ಸಹ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ರಾಜಧಾನಿ ಲಾಡ್ಜ್ ರೂಮ್ ನಂಬರ್ 114 ನಲ್ಲಿ ಎರಡೂ ಶವಗಳು ಹತ್ತಿರ ಹತ್ತಿರವಾಗಿ ಬಿದ್ದಿರುವುದು ಪತ್ತೆಯಾಗಿದೆ.ಇಂದ್ರಕುಮಾರ ಎಂಬವನು ಇದೇ ಮಾರ್ಚ್ 22ರಂದು ಲಾಡ್ಜ್ ಗೆ ಆಗಮಿಸಿ ತನ್ನ ಆಧಾರ ಕಾರ್ಡ್ ತೋರಿಸಿ ರೂಮ್ ನಂ 114 ಪಡೆದು ಕೊಂಡಿದ್ದನು. ನಂತರ ಇತನ ರೂಮ್ ಗೆ ಇನ್ನೊಬ್ಬ ವ್ಯಕ್ತಿ ಯಾವಾಗ ಬಂದಿದ್ದಾನೆ ಎನ್ನುವುದು ಸ್ವತಃ ಲಾಡ್ಜ್ ಸಿಬ್ಬಂದಿ ಹಾಗೂ ಮಾಲೀಕರಿಗೂ ಗೊತ್ತಾಗಿಲ್ಲ. ಎರಡು ದಿನ ರೂಮ್ ಬಾಗಿಲೂ ಸಹ ತೆರೆದಿರಲಿಲ್ಲ. ಶುಕ್ರವಾರ ಬೆಳಗ್ಗೆ 10ಗಂಟೆ ಸುಮಾರಿಗೆ…

Read More

ಆಲಮಟ್ಟಿ: ಇಲ್ಲಿಯ ರಾಷ್ಟ್ರೀಯ ಹೆದ್ದಾರಿ 50 ರ ಯಲಗೂರ ಕ್ರಾಸ್ ಬಳಿ ಇರುವ ಚೆಕ್ ಪೋಸ್ಟ್ ಹತ್ತಿರ ದಾಖಲೆಯಿಲ್ಲದೆ ಸಾಗಿಸುತ್ತಿದ್ದ 1.5 ಲಕ್ಷ ರೂಗಳನ್ನು ನಿಡಗುಂದಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.ಶುಕ್ರವಾರ ಇಲಕಲ್ಲನಿಂದ ವಿಜಯಪುರಕ್ಕೆ ಕಾರು‌ ಮೂಲಕ ಸಾಗುತ್ತಿದ್ದ ಶಂಕರಪ್ಪ ಕಡಮಾನೂರ ಅವರ ಕಾರನ್ನು ಚೆಕ್ ಪೋಸ್ಟ್ ನಲ್ಲಿ ಪರಿಶೀಲಿಸುವಾಗ 4.5 ಲಕ್ಷ ರೂ ಹಣ ಪತ್ತೆಯಾಯಿತು. ಅದರಲ್ಲಿ 3 ಲಕ್ಷ ರೂ ಹಣಕ್ಕೆ ಅವರು ದಾಖಲೆ ಒದಗಿಸಿದರು. ಹೀಗಾಗಿ ಉಳಿದ 1.5 ಲಕ್ಷ ರೂ ದಾಖಲೆಯಿಲ್ಲದೇ ಹಣ ಸಾಗಾಣಿಕೆಗಾಗಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ನಿಡಗುಂದಿ ಪಿಎಸ್ ಐ ಹಾಲಪ್ಪ ಬಾಲದಂಡಿ ಹಾಗೂ ಕಂದಾಯ ನಿರೀಕ್ಷಕ ವೆಂಕಟೇಶ ಅಂಬಿಗೇರ ತಿಳಿಸಿದ್ದಾರೆ.

Read More

ಸಹೋದರಗೆ ಸವಾಲೆಸೆದ ಶಾಂತಗೌಡ | ತೀವ್ರ ವಾಗ್ದಾಳಿ | ದಾಖಲೆ ಬಿಡುಗಡೆಯ ಎಚ್ಚರಿಕೆ ಮುದ್ದೇಬಿಹಾಳ: ಮುಂಬರುವ ದಿನಗಳಲ್ಲಿ ನಾನು ಗೆದ್ದುಬಂದರೆ ಸುಮಾರು ೧೦ ಸಾವಿರ ಉದ್ಯೋಗ ಸೃಷ್ಠಿ ಮಾಡುತ್ತೇವೆ. ಪ್ರತಿ ಕುಟುಂಬದ ಮಹಿಳೆಗೆ ಒಂದು ಹಸು ಕೊಡುವುದರ ಮೂಲಕ ತಿಂಗಳಿಗೆ ೩೦ ಸಾವಿರ ಸಂಪಾದನೆ ಮಾಡುವಂತೆ ಮಾಡುತ್ತೇನೆ ಎಂದು ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ)ಯವರು ಹೇಳಿಕೆ ನೀಡುವ ಮೂಲಕ ಜನರ ದಾರಿ ತಪ್ಪಿಸುವ ಕಾರ್ಯ ಮಾಡುತ್ತಿದ್ದಾರೆ. ನಾವೇ ಶಾಸಕರಿಗೊಂದು ಹಸು ಕೊಡಿಸುತ್ತೇವೆ. ತಿಂಗಳಿಗೆ ೩೦ ಸಾವಿರ ದುಡಿದು ತೋರಿಸಲಿ ಎಂದು ಸಮಾಜ ಸೇವಕ ಶಾಂತಗೌಡ ಪಾಟೀಲ ಸವಾಲೆಸೆದರು.ಗುರುವಾರ ಪಟ್ಟಣದ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.ಶಾಸಕ ಎ.ಎಸ್.ಪಾಟೀಲ (ನಡಹಳ್ಳಿ)ಯವರು ಕೇವಲ ಸಿಸಿ ರಸ್ತೆಗಳನ್ನು ಮಾಡಿ ಅವುಗಳಿಗೆ ವಿದ್ಯುತ್ ದೀಪಗಳನ್ನು ಹಾಕಿದರೆ ನಿಜವಾದ ಅಭಿವೃದ್ಧಿಯಾಗುವುದಿಲ್ಲ ಎಂದು ಕುಟುಕಿದರು.ಮುಖ್ಯಮಂತ್ರಿ ಸಿದ್ರಾಮಯ್ಯನವರ ಆಡಳಿತದಲ್ಲಿ ಮುದ್ದೇಬಿಹಾಳ ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರೂಗಳ ಅನುದಾನ ತರುವ ಮೂಲಕ ಹಿಂದುಳಿದ ಜನಾಂಗದ ಎಸ್‌ಸಿ, ಎಸ್ಟಿ ವಸತಿ ಕಾಲೇಜು, ಸರಕಾರಿ ಶಾಲೆಗಳನ್ನು,…

Read More

ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಗೇಟ್ ಬಳಿ ಮೊಮ್ಮಗನನ್ನು ಸ್ಕೂಟರಿನಲ್ಲಿ ಕೂರಿಸಿಕೊಂಡು ಜಾತ್ರೆಗೆ ಹೊರಟಿದ್ದ ವ್ಯಕ್ತಿಯೊಬ್ಬನಿಗೆ, ಯಮನ ರೂಪದಲ್ಲಿ ಬಂದ ಸಾರಿಗೆ ಸಂಸ್ಥೆಯ ಬಸ್ಸು ಹಿಂದಿನಿAದ ಹಾಯ್ದ ಪರಿಣಾಮ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ ಘಟನೆ ಗುರುವಾರ ಸಂಭವಿಸಿದೆ.ದುರ್ಘಟನೆಯಲ್ಲಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಸಂಜೆ ಸಾವನ್ನಪ್ಪಿದ್ದಾರೆ.ಅದೃಷ್ಟವಶಾತ್ ಅಜ್ಜನ ಮುಂದೆ ಕುಳಿತಿದ್ದ ಮೊಮ್ಮಗ ಹೆಚ್ಚಿನ ಗಾಯಗಳಿಲ್ಲದೇ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪಿಎಸ್ಸೈ ಆಗಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿ ಪಟ್ಟಣದ ಹುಡ್ಕೋ ಬಡಾವಣೆಯಲ್ಲಿ ನೆಲೆಸಿದ್ದ ಮಹಾದೇವಪ್ಪ ಬಸಪ್ಪ ಶಿವಪೂಜಿ ಅವರೇ ಅಪಘಾತದಲ್ಲಿ ಸಾವನ್ನಪ್ಪಿದ ನತದೃಷ್ಟ. ಅಪಘಾತವಾಗುತ್ತಿದ್ದಂತೆಯೇ ತೀವ್ರ ಗಾಯಗೊಂಡು ಪ್ರಜ್ಞಾಹೀನರಾದ ಮಹಾದೇವಪ್ಪ ಅವರನ್ನು ಕೂಡಲೇ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ನೀಡಲಾಯಿತು. ಆದರೆ ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಸೂಚಿಸಿದ್ದರಿಂದ ಅವರನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ. ಅವರೊಂದಿಗೆ ಪ್ರಯಾಣಿಸುತ್ತಿದ್ದ ಮೊಮ್ಮಗ ಗೌರವ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪ್ರಕರಣ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಹಲವು…

Read More

ಚಂದಿರನೂರಿಗೆ ಹೋಗುವ ಬಯಕೆಕಾಡಿತೆ ನಿನಗೇ ಹೇಳೆ ಸಖಿಚಂದ್ರಿಕೆ ಮೀರಿಸೋ ಚಂದವು ನಿನ್ನಲೇಇರುವುದ ಕಾಣೆಯಾ ಚಂದ್ರಮುಖಿ// // ಚಂದ್ರಿಕೆ ಚೆಲುವದು ಇರುಳಿಗೆ ಸೀಮಿತಎಲ್ಲರು ಬಲ್ಲರು ಜಗದೊಳಗೆಹಗಲಿರುಳಲ್ಲೂ ಬೆಳದಿಂಗಳ ಸವಿಕಂಡೆನು ನಿನ್ನಯ ನಗೆಯೊಳಗೆ// // ಶರಧಿಯ ಅಲೆಗಳು ನರ್ತನ ಮಾಡಲುಹುಣ್ಣಿಮೆ ಕಾರಣ ಕೇಳೇ ಸಖಿಸಂತಸದಲೆಗಳು ಬಾಳಲಿ ಮೂಡಲುಒಲವೇ ಕಾರಣ ಹೃದಯಸಖಿ// // ತಾರೆಗಳ ತೋಟದ ಹೂಗಳ.ನಡುವೆಚಂದಿರನಾಟವು ಇಂದುಮುಖಿಮನಸಿನ ತೋಟದ ಹೂವುಗಳೆಲ್ಲನಿನಗೇ ಸಮರ್ಪಣೆ ಆತ್ಮಸಖಿ// // ಪ್ರೇಮದ ಚಂದಿರ ಮನದಲಿ ಹೊಳೆದಿರೆಬಾಳಲಿ ನೀನೇ ಪರಮಸುಖಿಸುಖದುಃಖದಲಿ ಸಹಚಾರಿಣಿ ನೀಆಗಿರೆ ನಾನೇ ನಿತ್ಯಸುಖಿ// //

Read More

ಬದುಕಿನ ಪಯಣದಲ್ಲಿ ಅನೇಕರು ನಮ್ಮೊಂದಿಗೆ ಬರುತ್ತಾರೆ- ಹೋಗುತ್ತಾರೆ. ಹೆತ್ತ ತಾಯಿಯ ಮಡಿಲಿನಿಂದ ಭೂಮಿತಾಯಿಯ ಒಡಲು ಸೇರುವವರೆಗೂ ಇರುವ ನಾಲ್ಕು ದಿನಗಳಲ್ಲಿ ನಮ್ಮ ಕುಟುಂಬದವರೂ ಸೇರಿದಂತೆ ನಾನಾ ತರಹದವರು‌ ನಮ್ಮ‌ ಲೈಫ಼ಲ್ಲಿ ಎಂಟ್ರಿ ಕೊಡುತ್ತಾರೆ ಹಾಗೂ ನಾವೂ ಅನೇಕರ ಜ಼ಿಂದಗಿಯಲ್ಲಿ ಜೀಕುತ್ತೇವೆ. ಇದುವರೆಗಿನ ನಿಮ್ಮ ನಿಮ್ಮ ಬಾಳಿನ ಫ಼್ಲಾಶ್ ಬ್ಯಾಕಿಗೆ ಹೋಗಿ ಸ್ವಲ್ಪ ನೆನಪು ಮಾಡಿಕೊಂಡಾಗ , ಉಸಿರಾರಂಭದಿಂದ ಉಸಿರಾರುವವರೆಗಿನ ನಿಮ್ಮ ದುನಿಯಾದಲ್ಲಿ ಎಷ್ಟು ಮಂದಿ ಜೊತೆಜೊತೆಯಾಗಿ ಬಂದಿದ್ದಾರೆ, ಹೆಜ್ಜೆ ಹೆಜ್ಜೆಗೂ ಸಾಥ್ ಕೊಟ್ಟಿದ್ದಾರೆ, ಕೈ ಹಿಡಿದು ನೆಡೆಸಿದ್ದಾರೆ, ಕೈಕೊಟ್ಟು ಹೋಗಿದ್ದಾರೆ ಎನ್ನುವ ಅರಿಥ್ ಮೆಟಿಕ್ ಕಣ್ಮುಂದೆ ಲೆಕ್ಕಾಚಾರ ಹಾಕಿ ತಕಧಿಮಿ ಹಾಡುತ್ತದೆಯಲ್ಲವೇ..! ಪ್ರತಿಯೊಬ್ಬರ ಬಾಳಲ್ಲೂ ಬರೋರು ಹೋಗೋರು ಕಾಮನ್ ಬಿಡಿ. ಆದರೆ ನನ್ನ ಈ ಬರಹದ ಮೂಲ ಸೆಲೆ…. ; ನಮ್ಮ ಸ್ನೇಹ‌ ಬಂಧನ, ಬಂದು-ಬಾಂಧವ್ಯಗಳಿಂದ ಕೆಲವರು ದೂರ ಹೋಗುವಾಗ ಏನನ್ನೂ ಹೇಳದೇ, ಯಾಕೆ ಎಂದು ತಿಳಿಸದೇ ಕಾರಣ ಕೊಡದೇ…. ಧಿಡೀರನೇ ಅಂತರ್ಧಾನವಾಗಿ ಬಿಡುವ‌ ಬಗ್ಗೆ…! . ಅವರು ನಮ್ಮೊಂದಿಗೆ ಬಂದಿದ್ದಕ್ಕೆ…

Read More

ಅವಳಿ ಜಿಲ್ಲೆಯ ಪೊಲೀಸರಿಗೆ ಐಜಿಪಿ ಎನ್.ಸತೀಶಕುಮಾರ ಸೂಚನೆ ಆಲಮಟ್ಟಿ: ಈಗ ವಿಧಾನಸಬಾ ಚುನಾವಣೆಯ ಹಿನ್ನೆಲೆಯಲ್ಲಿ ರಾಜಕೀಯ ವ್ಯಕ್ತಿಗಳು, ಪಕ್ಷಗಳು ಮತದಾರರ ಆಮಿಷಕ್ಕಾಗಿ ತಂದಿರುವ ವಸ್ತುಗಳನ್ನು ಅನಧಿಕೃತವಾಗಿ ಸಂಗ್ರಹಿಸಿದ್ದರೆ ಅವಳಿ ಜಿಲ್ಲೆಯ ಪೋಲಿಸರು ಪಾರದರ್ಶಕವಾಗಿ ಕಾರ್ಯ ನಿರ್ವಹಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಲಾಗಿದೆ ಎಂದು ಬೆಳಗಾವಿ ವಲಯ ಐಜಿಪಿ ಎನ್.ಸತೀಶಕುಮಾರ ಹೇಳಿದರು.ಗುರುವಾರ ಆಲಮಟ್ಟಿಯ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಕಚೇರಿ ಸಬಾಂಗಣದಲ್ಲಿ ವಿಜಯಪುರ-ಬಾಗಲಕೋಟ ಜಿಲ್ಲೆಗಳ ಪೊಲೀಸ್ ಅಧಿಕಾರಿಗಳ ಸಭೆಯ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.ವಿಜಯಪುರ ಹಾಗೂ ಬಾಗಲಕೋಟ ಜಿಲ್ಲೆಗಳಲ್ಲಿ 46 ಅಂತರಾಜ್ಯ ಮತ್ತು ಅಂತರ್ಜಿಲ್ಲಾ ಚೆಕ್‌ಪೋಸ್ಟಗಳನ್ನು ಆರಂಭಿಸಲಾಗುವುದು. ಅಷ್ಟೇ ಅಲ್ಲದೇ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಸಿಬ್ಬಂದಿಗಳು ದಿನದ ೨೪ಗಂ. ಕಾರ್ಯನಿರ್ವಹಿಸುತ್ತಾರೆ, ಆ ವೇಳೆಯಲ್ಲಿ ಕಾಲಕಾಲಕ್ಕೆ ಸಿಪಿಐ, ಡಿವೈಎಸ್ಪಿ, ಆಡಿಷನಲ್ ಎಸ್ಪಿ ಮತ್ತು ಎಸ್ಪಿಯವರು ಕಡ್ಡಾಯವಾಗಿ ಪರಿಶೀಲಿಸಲಿ ಸೂಚಿಸಲಾಗಿದೆ ಎಂದರು. ಪ್ರತಿಯೊಬ್ಬ ಪೊಲೀಸ್ ಪಕ್ಷಾತೀತವಾಗಿ ಕಾರ್ಯನಿರ್ವಹಿಸುವ ಬಗ್ಗೆ, ಪೊಲೀಸ್ ಮಾದರಿ ನಡತೆಯ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದ್ದು, ಅದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು…

Read More

ಸೆಕ್ಟರ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ದಾನಮ್ಮನವರ ಸೂಚನೆ ವಿಜಯಪುರ: ಮುಂಬರುವ ಚುನಾವಣೆಗೆ ನಿಯೋಜಿತ ಸೆಕ್ಟರ್ ಅಧಿಕಾರಿಗಳು ಯಾವುದೇ ಗೊಂದಲಕ್ಕೆ ಒಳಗಾಗದೇ ಕ್ಲೀಷ್ಟಕರ ಹಾಗೂ ಕಷ್ಟಕರ ಪರಿಸ್ಥಿತಿಯನ್ನು ನಿಭಾಯಿಸುವ ಕೌಶಲ್ಯ ರೂಢಿಸಿಕೊಳ್ಳಬೇಕು. ಚುನಾವಣಾ ಪ್ರಕ್ರಿಯೆ ಬಗ್ಗೆ ಸಮಗ್ರ ಜ್ಞಾನ ಹೊಂದುವ ಮೂಲಕ ಪಾರದರ್ಶಕ ಚುನಾವಣೆಗೆ ಸನ್ನದ್ಧರಾಗುವಂತೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹೇಳಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಮುಂಬರುವ ವಿಧಾನಸಭಾ ಸಾರ್ವತ್ರಿಕ ಚುನಾವಣೆ-೨೦೨೩ರ ಮತದಾನ ಪೂರ್ವಸಿದ್ಧತೆ ಹಾಗೂ ಚುನಾವಣೆಗೆ ನಿಯೋಜಿತ ೨೯-ಬಬಲೇಶ್ವ್ವರ, ೩೦-ಬಿಜಾಪುರ ನಗರ, ೩೧-ನಾಗಠಾಣ ಮತಕ್ಷೇತ್ರದ ಸೆಕ್ಟರ್ ಅಧಿಕಾರಿಗಳಿಗೆ ಹಮ್ಮಿಕೊಂಡ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿಯೋಜಿತ ಅಧಿಕಾರಿಗಳು ಆಯೋಗದ ಮಾರ್ಗಸೂಚಿಯಂತೆ ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಬೇಕು. ಆಯೋಜಿಸಲಾದ ತರಬೇತಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಮತಗಟ್ಟೆ ವ್ಯಾಪ್ತಿ ಸೇರಿದಂತೆ ಸಿಬ್ಬಂದಿ ಮತಗಟ್ಟೆಯಲ್ಲಿನ ಮೂಲ ಸೌಕರ್ಯಗಳ ನಿಖರ ಮಾಹಿತಿ ಹೊಂದಿರಬೇಕು. ಗೊಂದಲವಿದ್ದರೆ ತರಬೇತಿಯಲ್ಲಿ ಪರಿಹರಿಸಿಕೊಳ್ಳಬೇಕು. ಸೆಕ್ಟರ್ ಅಧಿಕಾರಿಗಳು ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಹೇಳಿದರು.ಚುನಾವಣಾ ಕಾರ್ಯಕ್ಕೆ ನಿಯೋಜಿತ ಸೆಕ್ಟರ್ ಅಧಿಕಾರಿಗಳಿಗೆ ಪಿಪಿಟಿ ಮೂಲಕ ತರಬೇತಿ ನೀಡಲಾಯಿತು.ಈ ಸಂದರ್ಭದಲ್ಲಿ…

Read More

ಮಾ.31ರಿಂದ ಏ.15 ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ | 147 ಪರೀಕ್ಷಾ ಕೇಂದ್ರಗಳು | 40446 ಪರೀಕ್ಷಾರ್ಥಿಗಳು ವಿಜಯಪುರ: ಜಿಲ್ಲೆಯಲ್ಲಿ ಇದೇ ಮಾ.31 ರಿಂದ ಏಪ್ರಿಲ್ 15ರವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ಜರುಗಲಿದ್ದು, ಪರೀಕ್ಷೆ ಪಾರದರ್ಶಕ ಹಾಗೂ ಸುಸೂತ್ರವಾಗಿ ನಡೆಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಸೂಚನೆ ನೀಡಿದರು.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ಜರುಗಿದ ಎಸ್.ಎಸ್.ಎಲ್.ಸಿ. ಪರೀಕ್ಷಾ ಪೂರ್ವಸಿದ್ಧತೆ ಕುರಿತ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು, ಜಿಲ್ಲೆಯ ಒಟ್ಟು 147 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗಳು ಜರುಗಲಿದ್ದು, ಯಾವುದೇ ರೀತಿಯ ಅನಾನೂಕೂಲವಾಗದಂತೆ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡು ಪಾರದರ್ಶಕ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮಹತ್ವದ ಘಟ್ಟವಾಗಿದೆ. ಅವರ ಜೀವನ ಅಭ್ಯುದಯ, ಏಳಿಗೆಗೆ ಹೆಜ್ಜೆಯಾಗಿದೆ. ನಕಲುಮುಕ್ತವಾಗಿ ಪರೀಕ್ಷೆಗಳನ್ನು ನಡೆಸಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಈ ಪರೀಕ್ಷೆಗಳು ಅತ್ಯಂತ ಮಹತ್ವವಾಗಿರುವುದರಿಂದ ಯಾವುದೇ ರೀತಿಯ ಲೋಪಗಳಿಗೆ ಅವಕಾಶ ನೀಡಬಾರದು. ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳನ್ನು ಪ್ರತ್ಯೇಕವಾಗಿ ವ್ಯವಸ್ಥಿತವಾಗಿ ವಿತರಣೆಯಾಗಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದAತೆ ನೋಡಿಕೊಳ್ಳಬೇಕು.…

Read More