Subscribe to Updates
Get the latest creative news from FooBar about art, design and business.
Author: editor.udayarashmi@gmail.com
ವಿಜಯಪುರ ವಕೀಲರ ಸಂಘದಿಂದ ಅಂತರಾಷ್ಠ್ರೀಯ ಮಹಿಳಾ ದಿನಾಚರಣೆ ವಿಜಯಪುರ: ನಗರದ ನ್ಯಾಯವಾದಿ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅದ್ಧೂರಿಯಾಗಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಶಿವಾಜಿ ನಲವಡೆ ಅವರು ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮೊದಲು ನ್ಯೂಯಾರ್ಕ್ ನಲ್ಲಿ ಆರಂಭವಾಗಿ ತದನಂತರ ವಿಶ್ವದಾದ್ಯಂತ ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿ ಆಚರಿಸುತ್ತ ಬರಲಾಗುತ್ತಿದೆ. ಮಹಿಳೆಯರ ಹಕ್ಕು ಮತ್ತು ಸಮಾನತೆ ಬಗ್ಗೆ ಅರಿತುಕೊಳ್ಳಲು ಈ ದಿನ ಬಹಳ ಪ್ರಮುಖವಾಗಿದೆ ಎಂದು ಹೇಳಿದರು.ನಿವೃತ್ತ ನ್ಯಾಯಾಧೀಶೆ ಶ್ರೀಮತಿ ಪ್ರೇಮಾವತಿ ಮನಗೂಳಿ ಮಾತನಾಡಿ, ಮಹಿಳೆಯರು ವಕೀಲರಾಗಿ, ನ್ಯಾಯಾಧೀಶರಾಗಿ ಪ್ರತಿಯೊಂದು ಹುದ್ದೆ ಹಾಗೂ ಎಲ್ಲ ರಂಗದಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಗಂಡು ಹೆಣ್ಣು ಭೇದವಿಲ್ಲದೆ ಜೀವನ ಮಾಡಿದರೆ ಸಾರ್ಥಕವಾಗುತ್ತದೆ ಎಂದು ಹೇಳಿದರು.ಮಹಿಳಾ ಪ್ರತಿನಿಧಿ ನ್ಯಾಯವಾದಿ ಬಿ.ಎಮ್.ಅಲಗೊಂಡ ಮಾತನಾಡಿ, “ಯತ್ರನಾರ್ಯಸ್ಸು ಪೂಜಿತ ತತ್ರ ರಮoತ ದೇವತೆ” ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ. ಮಹಿಳೆಯರಿಗೆ ಗೌರವ ಸಿಗಲು ಪುರುಷರು-ಮಹಿಳೆಯರು ಎಂಬ ಬೇಧ-ಭಾವವಿಲ್ಲದೆ ಸರ್ವರೂ ಜೀವನ ನಡೆಸಿದರೆ…
Udayarashmi kannada daily newspaper
ನಿಡಗುಂದಿ: ಸರ್ಕಾರದ ಪಂಚ ಯೋಜನೆಗಳಾದ ಅನ್ನಭಾಗ್ಯ, ನಾರಿಶಕ್ತಿ, ಗೃಹಜ್ಯೋತಿ, ಗೃಹಲಕ್ಷ್ಮೀ, ಯುವನಿಧಿ ಯೋಜನೆಗಳು ಜನರ ಮನೆಬಾಗಿಲಿಗೆ ತಲುಪಿಸುವಲ್ಲಿ ಜಿಲ್ಲಾ ಮಟ್ಟ ಹಾಗೂ ತಾಲೂಕು ಮಟ್ಟದಲ್ಲಿ ಸಮಿತಿಯನ್ನು ರಚಿಸಲಾಗಿದೆ. ಪಂಚ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅಧಿಕಾರಿಗಳು ಮನೆ ಬಾಗಿಲಿಗೆ ಬರುತ್ತಾರೆ. ಸರ್ಕಾರದ ಯೋಜನೆಗಳಿಂದ ಯಾರೂ ವಂಚಿತರಾಗಬಾರದು. ಇದನ್ನು ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸುವ ಗುರಿ ಸರ್ಕಾರಕ್ಕೆ ಇದೆ ಎಂದು ಬಸವನ ಬಾಗೇವಾಡಿ ಮತಕ್ಷೇತ್ರದ ಶಾಸಕರು ಹಾಗೂ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ ಹೇಳಿದರು.ಬುಧವಾರ ನಿಡಗುಂದಿ ಗ್ರಾಮೀಣ ವಿದ್ಯಾವರ್ಧಕ ಸಂಘದ ಪ್ರೌಡಶಾಲೆಯ ಆವರಣದಲ್ಲಿ ನಡೆದ ಬಸವನ ಬಾಗೇವಾಡಿ, ಕೊಲ್ಹಾರ, ನಿಡಗುಂದಿ, ತಾಲೂಕುಗಳ ವ್ಯಾಪ್ತಿಯ ಬಸವನ ಬಾಗೇವಾಡಿ ವಿಧಾನಸಭಾ ಮತಕ್ಷೇತ್ರದ ಪಂಚ ಗ್ಯಾರಂಟಿ ಯೋಜನೆಗಳ ಫಲಾನುಭವಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಅನ್ನಭಾಗ್ಯ ಯೋಜನೆಯಡಿ 5 ಕೆಜೆ ಅಕ್ಕಿ ವಿತರಿಸಲಾಗುತ್ತಿದೆ. ಹಾಗೂ ಉಳಿದ ಅಕ್ಕಿಯ ಮೊತ್ತ 175 ರೂಪಾಯಿಗಳನ್ನು ಡಿಬಿಟಿ ಮೂಲಕ ಫಲಾನುಭವಿಯ ಖಾತೆಗೆ ಹಾಕಲಾಗುತ್ತಿದೆ. ಶಾಲಾ…
ಆಲಮಟ್ಟಿ: ಇಲ್ಲಿಯ ಕೃಷ್ಣೆಯ ತಟದ ಚಂದ್ರಗಿರಿ ಚಂದ್ರಮ್ಮಾ ದೇವಿ ಜಾತ್ರೆ ಮಾ.14 ರಿಂದ ಮೂರು ದಿನಗಳ ಕಾಲ ಜರುಗಲಿದೆ.ಈ ಭಾಗದ ಅಸಂಖ್ಯಾತ ಭಕ್ತರ ಆರಾಧ್ಯ ದೇವಿ, ಚಂದ್ರಮ್ಮಳ ಪ್ರಭಾವ, ಶಕ್ತಿ ಅಪಾರ. ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶದಿಂದ ಹೆಚ್ಚಿನ ಸಂಖ್ಯೆಯ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ.ಜಾತ್ರೆಯಂಗವಾಗಿ ಮಾ.14 ರ ಬೆಳಿಗ್ಗೆಯಿಂದ ನಾನಾ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತವೆ. ಬೆಳಿಗ್ಗೆಯಿಂದಲೇ ಕೃಷ್ಣೆಯ ದಡದಿಂದ ದೇವಸ್ಥಾನದವರೆಗೆ ಸಹಸ್ರಾರು ಭಕ್ತರು ದೀಡ ನಮಸ್ಕಾರ ಹಾಕುತ್ತಾರೆ. ದೂರದಿಂದ ಬರುವ ಭಕ್ತರು ಒಂದೆರೆಡು ದಿನ ಮುಂಚಿತವೇ ಆಗಮಿಸಿ, ಇಲ್ಲಿಯೇ ವಸತಿಯಿದ್ದು, ನೇವೇದ್ಯೆ ಅರ್ಪಿಸಿ ಹೋಗುವ ಸಂಪ್ರದಾಯ ಹೆಚ್ಚು. ಹೀಗಾಗಿ ಈಗ ಆಲಮಟ್ಟಿಯ ಕೃಷ್ಣೆಯ ತಟದ ಸುತ್ತಲೂ ಜನ ತಂಡೋಪತಂಡವಾಗಿ ಠಿಕಾಣಿ ಹೂಡಿದ್ದಾರೆ. ಮೂರು ದಿನದ ಜಾತ್ರೆಯಲ್ಲಿ 50 ಸಾವಿರಕ್ಕೂ ಅಧಿಕ ಭಕ್ತರು ಭೇಟಿ ನೀಡುತ್ತಾರೆ. ನೂರಾರು ಸಂಖ್ಯೆಯ ಜೋಗಮ್ಮಗಳು ಇದ್ದು, ಜೋಗತಿ ಪದ ಹಾಡುತ್ತಾರೆ. ಅವಳಿ ಜಿಲ್ಲೆಯಲ್ಲಿ ನಾನಾ ಕಡೆ ಚಂದ್ರಮ್ಮ ದೇವಸ್ಥಾನಗಳಿದ್ದು, ಅವುಗಳಿಗೆಲ್ಲಾ ಆಲಮಟ್ಟಿ ಮೂಲಸ್ಥಾನ. ಪ್ರತಿ ಮಂಗಳವಾರ, ಗುರುವಾರ ಸಹಸ್ರಾರು…
ಮಾಜಿ ಸಿಎಂ ಡಿವಿ ಸದಾನಂದಗೌಡ, ಪ್ರತಾಪ್ ಸಿಂಹಗೆ ಕೊಕ್ | ಜಿಗಜಿಣಗಿಗೆ ಟಿಕೆಟ್ ನವದೆಹಲಿ: ಲೋಕಸಭೆ ಚುನಾವಣೆಗೆ ಬಿಜೆಪಿ ರಾಜ್ಯದ 20 ಕ್ಷೇತ್ರಗಳಿಗೆ ಸೇರಿದಂತೆ 72 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬುಧವಾರ ಪ್ರಕಟಿಸಿದ್ದು, ಮೈಸೂರು ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಸಿಎಂ ಡಿವಿ ಸದಾನಂದಗೌಡ ಸೇರಿದಂತೆ ಹಲವು ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಲಾಗಿದೆ.ರಾಜ್ಯದ 28 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಯನ್ನು ಘೋಷಣೆ ಮಾಡಲಾಗಿದೆ.ಈ ಬಾರಿ ಬಿಜೆಪಿ ಒಟ್ಟು 8 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದೆ. ಮೈಸೂರು ಸಂಸದ, ಪ್ರತಾಪ್ ಸಿಂಹ, ಬೆಂಗಳೂರು ಉತ್ತರ ಸಂಸದ ಡಿವಿ ಸದಾನಂದ ಗೌಡ, ಕೊಪ್ಪಳ ಸಂಸದ ಕರಡಿ ಸಂಗಣ್ಣ, ಹಾವೇರಿ ಸಂಸದ ಶಿವಕುಮಾರ್ ಉದಾಸಿ, ತುಮಕೂರು ಸಂಸದ ಜಿಎಸ್ ಬಸವರಾಜು(ನಿವೃತ್ತಿ ಘೋಷಿಸಿದ್ದರು) ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್, ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್(ನಿವೃತ್ತಿ ಘೋಷಿಸಿದ್ದರು), ಬಳ್ಳಾರಿ ಸಂಸದ ದೇವೇಂದ್ರಪ್ಪ ಅವರಿಗೆ ಬಿಜೆಪಿ ಟಿಕೆಟ್ ಕೈತಪ್ಪಿದೆಬಿಜೆಪಿ ಅಭ್ಯರ್ಥಿಗಳುಚಿಕ್ಕೋಡಿ ಲೋಕಸಭಾ ಕ್ಷೇತ್ರ-ಅಣ್ಣಾ…
ವಿಜಯಪುರದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ರೈತರಿಗೆ ಕರೆ ವಿಜಯಪುರ: ರೈತರು ಬೆಳೆದ ಬೆಳೆಗಳನ್ನು ಸಂಸ್ಕರಿಸಿ ಮೌಲ್ಯವರ್ಧನೆಗೊಳಿಸಿ ವಿವಿಧ ಆಹಾರ ಉತ್ಪನ್ನಗಳನ್ನು ತಯಾರಿಸಿ ವ್ಯಾಪಾರಕ್ಕೆ ಉತ್ತೇಜನ ನೀಡಿದರೆ ಆದಾಯ ದ್ವಿಗುಣವಾಗುವಾದರೊಂದಿಗೆ ರೈತರ ಬದುಕು ಹಸನಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ರೈತರಿಗಾಗಿ ಮೀಸಲಿಟ್ಟಿದೆ ಇದರ ಸದುಪಯೋಗ ರೈತರು ಪಡೆದುಕೊಳ್ಳಬೇಕು ಎಂದು ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.ಬುಧವಾರ ವಿಜಯಪುರ ಹೊರವಲಯ ಹಿಟ್ಟಿನಹಳ್ಳಿಯಲ್ಲಿರುವ ಕೃಷಿ ಮಹಾವಿದ್ಯಾಲಯ ಆವರಣದಲ್ಲಿ ೮೫ ಲಕ್ಷ ರೂಪಾಯಿ ಅನುದಾನದ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ರೈತರ ವಸತಿ ನಿಲಯ ಕಟ್ಟಡದ ಉದ್ಘಾಟನೆಯನ್ನು ನೇರವೇರಿಸಿ ಅವರು ಮಾತನಾಡಿದರು.ಕೃಷಿ ವಿಜ್ಞಾನ ಕೇಂದ್ರಗಳು ರೈತರಿಗೆ ದೇವಸ್ಥಾನವಿದ್ದಂತೆ. ಇಲ್ಲಿ ಅನೇಕ ಮಾಹಿತಿಗಳು ದೊರೆಯುತ್ತವೆ. ಸರ್ಕಾರ ರೈತರಿಗೆ ನೀಡುವ ಸಹಾಯಧನ, ಬೆಳೆಗಳ ಬಗ್ಗೆ ಮಾಹಿತಿ, ರೋಗ ನಿರ್ವಹಣೆಗಳ ಕುರಿತು ಅನುಸರಿಸಬೇಕಾದ ವೈಜ್ಞಾನಿಕ ನಿರ್ವಹಣೆ, ಆಹಾರ ಸಂಸ್ಕರಣೆಯ ಮಾಹಿತಿ, ಹೊಸ ತಂತ್ರಜ್ಞಾನಗಳ ಬಗ್ಗೆ…
ದೇವರಹಿಪ್ಪರಗಿ: ಕೋರವಾರ ಗ್ರಾಮದ ರೈತಸಂಘ ಹಾಗೂ ಹಸಿರುಸೇನೆ ಘಟಕಕ್ಕೆ ಕಾರ್ಯಾಲಯ ಒದಗಿಸುವಂತೆ ಆಗ್ರಹಿಸಿ ಪದಾಧಿಕಾರಿಗಳು ಪಿಡಿಓ ಕೆ.ಎಸ್.ಕಡಕಭಾವಿ ಅವರಿಗೆ ಮನವಿ ಸಲ್ಲಿಸಿದರು.ತಾಲ್ಲೂಕಿನ ಕೋರವಾರ ಗ್ರಾಮದ ಪಂಚಾಯಿತಿ ಆವರಣಕ್ಕೆ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ತೆರಳಿ ಕಚೇರಿ ಒದಗಿಸಲು ಆಗ್ರಹಿಸಿದರು.ಈ ಸಂದರ್ಭದಲ್ಲಿ ಅಧ್ಯಕ್ಷ ಐ.ಎಸ್.ಕುಳೇಕುಮಟಗಿ ಮಾತನಾಡಿ, ಗ್ರಾಮದ ರೈತಸಂಘದ ಘಟಕ ಸುಮಾರು ೧೫೦೦ ರಿಂದ ೨೦೦೦ವರೆಗೆ ಸದಸ್ಯರನ್ನು ಹೊಂದಿದೆ. ಆದರೆ ಈ ಎಲ್ಲ ಸದಸ್ಯರು ಹಾಗೂ ಪದಾಧಿಕಾರಿಗಳ ಸಭೆ ನಡೆಸಲು ಸ್ಥಳಾವಕಾಶ ಇಲ್ಲದಂತಾಗಿದೆ.ರೈತರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಮಸ್ಯೆಗಳಿಗೆ ಪರಿಹಾರವಾಗಿ ಗ್ರಾಮ ಘಟಕದಲ್ಲಿ ಆಗಾಗ್ಗೆ ಸಭೆ ಕೈಗೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ ತಾವು ಸರ್ಕಾರದ ಮೂಲಕ ರೈತ ಸಮುದಾಯದ ಸಭೆಗಳಿಗಾಗಿ ವ್ಯವಸ್ಥಿತ ಕಟ್ಟಡವನ್ನು ಒದಗಿಸಿಕೊಡಬೇಕು. ಇಲ್ಲವೆ ರೈತಸಂಪರ್ಕ ಕೇಂದ್ರದಲ್ಲಿ ಸಭೆ ಜರುಗಿಸಲು ಅನುಕೂಲ ಮಾಡಕೊಡಬೇಕೆಂದು ಆಗ್ರಹಿಸಿದರು.ಗೌರವಾಧ್ಯಕ್ಷ ಶಿವಾನಂದಯ್ಯ ಹಿರೇಮಠ(ವರ್ಕಾನಳ್ಳಿ), ಸಂಘಟನಾ ಕಾರ್ಯದರ್ಶಿ ಸುಭಾಸ ಸಜ್ಜನ, ಯುವ ಘಟಕದ ಅಧ್ಯಕ್ಷ ಸಂಗಮೇಶ ಹುಣಸಗಿ, ಗ್ರಾಮ ಘಟಕದ ಅಧ್ಯಕ್ಷ…
ಆಲಮೇಲ: ಪಟ್ಟಣದಲ್ಲಿನ ಮನೆಗಳ ಹಂಚಿಕೆಯಲ್ಲಿ ಅಕ್ರಮ ಹಾಗೂ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿಯ (ಅಂಬೇಡ್ಕರವಾದ) ಪಧಾದಿಕಾರಿಗಳು ಮಂಗಳವಾರ ಪಟ್ಟಣ ಪಂಚಾಯತಿ ಎದುರು ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡು ಬುಧವಾರ ಎರಡು ದಿನ ಪೂರ್ಣಗೊಂಡರೂ ಇಲ್ಲಿವರೆಗೂ ಯಾವುದೆ ಅಧಿಕಾರಿಗಳು ಸಮಸ್ಯೆ ಆಲಿಸಲು ಬಾರದ್ದರಿಂದ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಡಾ| ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ತಾಲೂಕ ಸಂಚಾಲಕ ಶಿವು ಮೇಲಿನಮನಿ, ಹರಿಷ ಎಂಟಮಾನ ಮಾತನಾಡಿ, ಪಟ್ಟಣಲ್ಲಿನ ಅನೇಕ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಅದರಿಂದ ಬೆಸತ್ತು ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದೇವೆ. ಧರಣಿ ಸತ್ಯಾಗ್ರಹ ಸ್ಥಳಕ್ಕೆ ಜಿಲ್ಲಾ ಅಧಿಕಾರಿಗಳು ಆಗಮಿಸಿ ಇಲ್ಲಿನ ಸಮಸ್ಯೆಗಳು ಆಲಿಸಿ ನಮ್ಮೆಲ್ಲ ಬೇಡಿಕೆಗಳಿಗೆ ಲಿಖಿತ ಭರವಸೆ ನೀಡುವವರೆಗೂ ಧರಣಿ ಸತ್ಯಾಗ್ರಹ ಮುಂದುವರೆಯಲಿದೆ ಎಂದರು.
ದೇವರಹಿಪ್ಪರಗಿ: ಬೊಲೆರೊ ಪಿಕ್‌ಅಪ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟು, ಇಬ್ಬರು ಶಾಲಾ ವಿದ್ಯಾರ್ಥಿಗಳು ಗಾಯಗೊಂಡ ಘಟನೆ ಇಂಗಳಗಿ ಕ್ರಾಸ್ ಹತ್ತಿರ ಸಂಭವಿಸಿದೆ.ತಾಲ್ಲೂಕಿನ ಇಂಗಳಗಿ ಕ್ರಾಸ್ ಬಳಿ ಬುಧವಾರ ಈ ಘಟನೆ ಸಂಭವಿಸಿದ್ದು, ನಿವಾಳಖೇಡ ಗ್ರಾಮದಿಂದ ಬೈಕ್ ಸವಾರ ಇಬ್ಬರು ಶಾಲಾ ವಿದ್ಯಾರ್ಥಿಗಳೊಂದಿಗೆ ಬರುತ್ತಿರುವ ಸಮಯದಲ್ಲಿ ದೇವರ ಹಿಪ್ಪರಗಿಯಿಂದ ಇಂಡಿ ಕಡೆಗೆ ತೆರಳುತ್ತಿದ್ದ ಬೊಲೆರೊ ವಾಹನ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ.ಅಪಘಾತದಲ್ಲಿ ಬೈಕ್ ಸವಾರ ನಿವಾಳಖೇಡ ಗ್ರಾಮದ ನಿವಾಸಿ ಈರಣ್ಣ ಬಾಬು ಇಂಡಿ (೨೩) ಸ್ಥಳದಲ್ಲಿಯೇ ಮೃತಪಟ್ಟರೇ, ವಿದ್ಯಾರ್ಥಿಗಳಾದ ಸಚೀನ ಬಸವರಾಜ ಹಡಗಲಿ(೧೫) ಹಾಗೂ ಚಂದ್ರಕಾಂತ ರಾಘವೇಂದ್ರ ತಳವಾರ (೧೫) ಇವರಿಗೆ ತೀವ್ರವಾದ ಗಾಯಗಳಾಗಿದ್ದು ವಿಜಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತ ಸ್ಥಳಕ್ಕೆ ದೇವರಹಿಪ್ಪರಗಿ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಜಯಪುರ: ನಗರದ ವಿವಿಧೆಡೆ ಅಭಿವೃದ್ಧಿ ಕಾಮಗಾರಿಗಳಿಗೆ ನಗರ ಶಾಸಕರಾದ ಬಸನಗೌಡ ರಾ.ಪಾಟೀಲ ಯತ್ನಾಳ ಅವರು ಭೂಮಿಪೂಜೆ ನೆರವೇರಿಸಿದರು.ಮಹಾನಗರ ಪಾಲಿಕೆ ವಾರ್ಡ ನಂ.೨೨ ರಲ್ಲಿ ಬರುವ ಜಿಲ್ಲಾ ಪಂಚಾಯಿತಿ ಮುಖ್ಯ ದ್ವಾರದಿಂದ ಡಿ.ದೇವರಾಜು ಅರಸು ಭವನ ವರೆಗೆ ರೂ.೪.೯೦ ಕೋಟಿ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ ಹಾಗೂ ಸ್ಟ್ರೀಟ್ ಲೈಟ್ ಅಳವಡಿಕೆ ಕಾಮಗಾರಿಗೆ ಗಾಂಧಿ ಭವನದ ಎದುರು ಭೂಮಿಪೂಜೆ ನೆರವೇರಿಸಿದರು.ನಂತರ ಕನಕದಾಸ ಬಡಾವಣೆಯ ಡಿ.ದೇವರಾಜ ಅರಸ ಭವನದಿಂದ ಬಿ.ಎಸ್.ಎನ್.ಎಲ್ ಕ್ವಾಟರ್ಸ ವರೆಗೆ ರೂ.೩.೧೦ ಕೋಟಿ ಅನುದಾನದಲ್ಲಿ ಸಿಸಿ ರಸ್ತೆ ಹಾಗೂ ಡಾಂಬರ ರಸ್ತೆ ಸುಧಾರಣೆ ಕಾಮಗಾರಿಗೆ ಕನಕದಾಸ ಬಡಾವಣೆಯ ಬಸ್ ಸ್ಟಾಪ್ ಬಳಿ ಭೂಮಿಪೂಜೆ ನೆರವೇರಿಸಿದರು.ಭೂಮಿಪೂಜೆ ಬಳಿಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.ಇದೇ ವೇಳೆ ಸ್ಥಳೀಯ ನಿವಾಸಿಗಳು ಶಾಸಕರಿಗೆ ಆತ್ಮೀಯವಾಗಿ ಸನ್ಮಾನಿಸಿದರು.ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ, ಮುಖಂಡರಾದ ಪಾಂಡು ಸಾಹುಕಾರ ದೊಡಮನಿ, ಶಂಕರ ಹೂಗಾರ, ಚಂದ್ರು ಚೌದರಿ, ಶರಣು ಕಾಖಂಡಕಿ, ರಾಚು ಬಿರಾದಾರ ಸೇರಿದಂತೆ ಮುಖಂಡರು, ಸ್ಥಳೀಯ ನಿವಾಸಿಗಳು ಹಾಗೂ ಅಧಿಕಾರಿಗಳು ಇದ್ದರು.
