ವಿಜಯಪುರ ವಕೀಲರ ಸಂಘದಿಂದ ಅಂತರಾಷ್ಠ್ರೀಯ ಮಹಿಳಾ ದಿನಾಚರಣೆ
ವಿಜಯಪುರ: ನಗರದ ನ್ಯಾಯವಾದಿ ಭವನದಲ್ಲಿ ವಿಶ್ವ ಮಹಿಳಾ ದಿನಾಚರಣೆ ಅದ್ಧೂರಿಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಧೀಶರಾದ ಶಿವಾಜಿ ನಲವಡೆ ಅವರು ಮಾತನಾಡಿ, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮೊದಲು ನ್ಯೂಯಾರ್ಕ್ ನಲ್ಲಿ ಆರಂಭವಾಗಿ ತದನಂತರ ವಿಶ್ವದಾದ್ಯಂತ ಮಾರ್ಚ್ 8 ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿ ಆಚರಿಸುತ್ತ ಬರಲಾಗುತ್ತಿದೆ. ಮಹಿಳೆಯರ ಹಕ್ಕು ಮತ್ತು ಸಮಾನತೆ ಬಗ್ಗೆ ಅರಿತುಕೊಳ್ಳಲು ಈ ದಿನ ಬಹಳ ಪ್ರಮುಖವಾಗಿದೆ ಎಂದು ಹೇಳಿದರು.
ನಿವೃತ್ತ ನ್ಯಾಯಾಧೀಶೆ ಶ್ರೀಮತಿ ಪ್ರೇಮಾವತಿ ಮನಗೂಳಿ ಮಾತನಾಡಿ, ಮಹಿಳೆಯರು ವಕೀಲರಾಗಿ, ನ್ಯಾಯಾಧೀಶರಾಗಿ ಪ್ರತಿಯೊಂದು ಹುದ್ದೆ ಹಾಗೂ ಎಲ್ಲ ರಂಗದಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಗಂಡು ಹೆಣ್ಣು ಭೇದವಿಲ್ಲದೆ ಜೀವನ ಮಾಡಿದರೆ ಸಾರ್ಥಕವಾಗುತ್ತದೆ ಎಂದು ಹೇಳಿದರು.
ಮಹಿಳಾ ಪ್ರತಿನಿಧಿ ನ್ಯಾಯವಾದಿ ಬಿ.ಎಮ್.ಅಲಗೊಂಡ ಮಾತನಾಡಿ, “ಯತ್ರನಾರ್ಯಸ್ಸು ಪೂಜಿತ ತತ್ರ ರಮoತ ದೇವತೆ” ಎಲ್ಲಿ ನಾರಿಯರು ಪೂಜಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ವಾಸಿಸುತ್ತಾರೆ. ಮಹಿಳೆಯರಿಗೆ ಗೌರವ ಸಿಗಲು ಪುರುಷರು-ಮಹಿಳೆಯರು ಎಂಬ ಬೇಧ-ಭಾವವಿಲ್ಲದೆ ಸರ್ವರೂ ಜೀವನ ನಡೆಸಿದರೆ ಮಾತ್ರ ಸಿಗುತ್ತದೆ ಎಂದು ಹೇಳಿದರು.
ಹಿರಿಯ ನ್ಯಾಯವಾದಿಗಳಾದ ಎಸ್. ಎಸ್ ಛಾಯಾಗೋಳ, ಆರ್. ಎಮ್ ಕುಲಕರ್ಣಿ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಈರಣ್ಣ ಬಿ ಚಾಗಶೆಟ್ಟಿ, ಉಪಾಧ್ಯಕ್ಷ ಸಂಜೀವ ಬಿ ಜಾಗಿರದಾರ, ಕಾರ್ಯದರ್ಶಿ ಅಶೋಕ ಜೈನಾಪುರ, ಭಾಗವಹಿಸಿದ್ದರು.
ಕುಸುಮಾ ಪಾಟೀಲ ಸ್ವಾಗತಿಸಿದರು, ರಮಾ ದರಬಾರ್ ಪರಿಚಯಿಸಿದರು, ಸರ್ವಜ ಭಕ್ಷಿ ಮತ್ತು ಆರ್. ಎಸ್ ನಂದಿ ನಿರೂಪಿಸಿದರು.
ಮಂಜುಳಾ ಅರಕೇರಿ ವಂದಿಸಿದರು.
ನ್ಯಾಯವಾದಿಗಳ ಸಂಘದ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಅನೇಕರಿದ್ದರು.

