ದೇವರಹಿಪ್ಪರಗಿ: ಕೋರವಾರ ಗ್ರಾಮದ ರೈತಸಂಘ ಹಾಗೂ ಹಸಿರುಸೇನೆ ಘಟಕಕ್ಕೆ ಕಾರ್ಯಾಲಯ ಒದಗಿಸುವಂತೆ ಆಗ್ರಹಿಸಿ ಪದಾಧಿಕಾರಿಗಳು ಪಿಡಿಓ ಕೆ.ಎಸ್.ಕಡಕಭಾವಿ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕಿನ ಕೋರವಾರ ಗ್ರಾಮದ ಪಂಚಾಯಿತಿ ಆವರಣಕ್ಕೆ ಬುಧವಾರ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಪದಾಧಿಕಾರಿಗಳು ತೆರಳಿ ಕಚೇರಿ ಒದಗಿಸಲು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷ ಐ.ಎಸ್.ಕುಳೇಕುಮಟಗಿ ಮಾತನಾಡಿ, ಗ್ರಾಮದ ರೈತಸಂಘದ ಘಟಕ ಸುಮಾರು ೧೫೦೦ ರಿಂದ ೨೦೦೦ವರೆಗೆ ಸದಸ್ಯರನ್ನು ಹೊಂದಿದೆ. ಆದರೆ ಈ ಎಲ್ಲ ಸದಸ್ಯರು ಹಾಗೂ ಪದಾಧಿಕಾರಿಗಳ ಸಭೆ ನಡೆಸಲು ಸ್ಥಳಾವಕಾಶ ಇಲ್ಲದಂತಾಗಿದೆ.
ರೈತರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಈ ಸಮಸ್ಯೆಗಳಿಗೆ ಪರಿಹಾರವಾಗಿ ಗ್ರಾಮ ಘಟಕದಲ್ಲಿ ಆಗಾಗ್ಗೆ ಸಭೆ ಕೈಗೊಳ್ಳುವುದು ಅನಿವಾರ್ಯವಾಗಿದೆ. ಆದ್ದರಿಂದ ತಾವು ಸರ್ಕಾರದ ಮೂಲಕ ರೈತ ಸಮುದಾಯದ ಸಭೆಗಳಿಗಾಗಿ ವ್ಯವಸ್ಥಿತ ಕಟ್ಟಡವನ್ನು ಒದಗಿಸಿಕೊಡಬೇಕು. ಇಲ್ಲವೆ ರೈತಸಂಪರ್ಕ ಕೇಂದ್ರದಲ್ಲಿ ಸಭೆ ಜರುಗಿಸಲು ಅನುಕೂಲ ಮಾಡಕೊಡಬೇಕೆಂದು ಆಗ್ರಹಿಸಿದರು.
ಗೌರವಾಧ್ಯಕ್ಷ ಶಿವಾನಂದಯ್ಯ ಹಿರೇಮಠ(ವರ್ಕಾನಳ್ಳಿ), ಸಂಘಟನಾ ಕಾರ್ಯದರ್ಶಿ ಸುಭಾಸ ಸಜ್ಜನ, ಯುವ ಘಟಕದ ಅಧ್ಯಕ್ಷ ಸಂಗಮೇಶ ಹುಣಸಗಿ, ಗ್ರಾಮ ಘಟಕದ ಅಧ್ಯಕ್ಷ ಮಲ್ಲಪ್ಪ ಸುಂಬಡ, ನಾನಾಗೌಡ ಬೊರಾವತ್, ಚಿದಾನಂದ ಮೋಪಗಾರ, ಶಾಂತಗೌಡ ಸಿದರಡ್ಡಿ, ತುಳಜಾರಾಮ ಜಾಧವ, ಗುರಪ್ಪ ಹಂಗರಗಿ ಸೇರಿದಂತೆ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

