Author: editor.udayarashmi@gmail.com

ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಅಯುರ್ವೆದ ಮಹಾವಿದ್ಯಾಲಯಲ್ಲಿ ಕಿಡ್ನಿ ವೈಪಲ್ಯ ಮತ್ತು ಕಿಡ್ನಿ ಸಂಬಂದಿತ ಸಮಸ್ಯೆಗಳು ಕುರಿತು ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಪ್ರಾರಂಭವಾಗಿದ್ದು ಮಾ. 20ರ ವರೆಗೆ ನಡೆಯಲಿದೆ.ಮೂತ್ರ ಕಡಿಮೆ ವಿಸರ್ಜನೆ, ರಕ್ತ ಹೀನತೆ, ರಕ್ತ ಒತ್ತಡ(ಹೈ ಬಿಪಿ), ಧಿರ್ಘ ಕಾಲಿನ ಕಿಡ್ನಿ ವೈಫಲ್ಯ , ಹೈ ಕ್ರೀಯಾಟಿನಿನ್ ಲೆವೆಲ್ಸ, ವಾಂತಿ, ಪಾದ ಉಜ್ಜುವಿಕೆ, ಸಕ್ಕರೆ ಕಾಯಿಲೆಯಿಂದ ಕಿಡ್ನಿ ವೈಪಲ್ಯ , ಈ ರೀತಿಯ ಲಕ್ಷಣಗಳು, ತೊಂದರೆಗಳು ಹೊಂದಿರುವವರು ಶಿಬಿರದಲ್ಲಿ ತಪಾಸಣೆ ಮತ್ತು ಉಚಿತ ಚಿಕಿತ್ಸೆಯ ಸದುಪಯೊಗ ಪಡೆದುಕೊಳ್ಳಬೇಕೆಂದು ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಹೆಸರು ನೊಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಮೋಬೈಲ್.ನಂ.7406737888 7483278348, ಸಂಪರ್ಕಿಸಬಹುದಾಗಿದೆ.

Read More

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ. ಭೂ ಬಾಲನ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ರಿಶಿ ಆನಂದ ಹಾಗೂ ಪೊಲೀಸ್ ವರಿಷ್ಟಾಧಿಕಾರಿ ಋಷಿಕೇಶ್ ಸೋನಾವಣೆ ಅವರು ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ಗಳಿಗೆ ದಿಡೀರ್ ಭೇಟಿ ನೀಡಿ ಚೆಕ್ ಪೋಸ್ಟಗಳ ಕಾರ್ಯವೈಖರಿ ಪರಿಶೀಲನೆ ನಡೆಸಿದರು.ಕೊಂಕಣಗಾವ, ಶಿರಡೋಣ. ಕನಕನಾಳ ಹಾಗೂ ಧೂಳಖೆಡ್ ಚೆಕ್ ಪೋಸ್ಟಗಳಿಗೆ ಡಿ ಸಿ ಹಾಗೂ ತಂಡ ತೆರಳಿ ಕಾರು, ಟ್ರಕ್ ಸೇರಿದಂತೆ ವಿವಿಧ ವಾಹನಗಳನ್ನು ತಪಾಸಣೆ ಮಾಡಿದರು.

Read More

ವಿಜಯಪುರ: ನಮ್ಮ ಜಿಲ್ಲೆಯ ಹೆಸರಾಂತ ಸಾಹಿತಿಗಳಾದ ಡಾ.ವ್ಹಿ ಡಿ ಐಹೊಳ್ಳಿ ಅವರು ನಾಡಿನ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ನಮ್ಮ ನಾಡು, ಭಾಷೆಯ ಕೀರ್ತಿಯನ್ನು ಎಲ್ಲೆಡೆ ಪಸರಿಸುವಂತೆ ಮಾಡಿದ್ದಾರೆ. ನಮ್ಮ ಭಾಷೆಯ ಶ್ರೀಮಂತಿಕೆ ಹೆಚ್ಚಲು ಅವರ ಸಾಹಿತ್ಯಿಕ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಯುವ ಘಟಕದ ಅಧ್ಯಕ್ಷ ಅಮರೇಶ ಸಾಲಕ್ಕಿ ಹೇಳಿದರು.ಅವರು ಡಾ.ವ್ಹಿ ಡಿ ಐಹೊಳ್ಳಿ ಅವರ ಮನೆಯಲ್ಲಿ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.ಯುವ ಘಟಕದ ಗೌರವ ಸಲಹೆಗಾರ ಸಂತೋಷ ಬಂಡೆ ಮಾತನಾಡಿ, ಅನೇಕ ಕೃತಿಗಳನ್ನು ಸಂಪಾದಿಸಿ,ರಚಿಸಿದ ಅನುಭವ ಡಾ.ಐಹೊಳ್ಳಿ ಅವರದು. ಶರಣ ಸಾಹಿತ್ಯ, ಕಥೆ, ಕಾವ್ಯಗಳನ್ನು ಕೂಡ ರಚಿಸಿದ ಅವರು ಪ್ರಸ್ತುತ ವಚನಪಿತಾಮಹ ಡಾ. ಫ.ಗು ಹಳಕಟ್ಟಿ ಸಂಶೋಧನಾ ಕೇಂದ್ರದ ಸಹ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರನ್ನು 19ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ನಮಗೆಲ್ಲ ಸಂತಸ ತಂದಿದೆ ಎಂದು ಅಭಿಪ್ರಾಯಪಟ್ಟರು.ಈ ಸಂದರ್ಭದಲ್ಲಿ ವಿಜಯಪುರ ಜಿಲ್ಲಾ…

Read More

ವಿಜಯಪುರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸನ್ನಿ ಗವಿಮಠ (ತ್ರಿಲೋಚನ) ಅವರನ್ನು ಆಯ್ಕೆ ಮಾಡಿ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಆರ್.ಆಲಗೂರ (ರಾಜು) ಆದೇಶ ಹೊರಡಿಸಿದ್ದಾರೆ.ಪಕ್ಷದ ಮುಖಂಡರ ಮಾರ್ಗದರ್ಶನದಲ್ಲಿ ಹಾಗೂ ಸ್ಥಳೀಯ ನಾಯಕರ ಸಹಕಾರದೊಂದಿಗೆ ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ ಪಕ್ಷದ ಸಂಘಟನೆಗೆ ಶ್ರಮಿಸುವಂತೆ ಆದೇಶ ಪತ್ರದಲ್ಲಿ ಗವಿಮಠ ಅವರಿಗೆ ಸೂಚಿಸಲಾಗಿದೆ.

Read More

ಬಬಲೇಶ್ವರ ಶಾಖಾ ಕಾಲುವೆಯ ೧ ಹಾಗೂ ೨ರ ವಿತರಣಾ ಕಾಲುವೆಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ಕೊಲ್ಹಾರ: ಬಸವನ ಬಾಗೇವಾಡಿ ಮತಕ್ಷೇತ್ರದ ಹಾಗೂ ಅವಳಿ ಜಿಲ್ಲೆಯ ಕೃಷಿ ಚಟುವಟಿಕೆಯನ್ನು ಮಾಡುವ ರೈತಾಪಿ ವರ್ಗದವರು ನೀರಿನ ಮಹತ್ವವನ್ನು ಅರಿತು ಯಥೇಚ್ಚವಾಗಿ ಬಳಸದೇ ಸದ್ವಿನಿಯೋಗದ ಮೂಲಕ ಯಾವುದೇ ಮೂಲಗಳಿಂದ ಹರಿದು ಬರುವ ನೀರನ್ನು ಸದುಪಯೋಗ ಪಡಿಸಿಕೊಳ್ಳಲು ಮುಂದಾಗಬೇಕು ಎಂದು ರೈತರಿಗೆ ಸಚಿವ ಶಿವಾನಂದ ಎಸ್ ಪಾಟೀಲ ಕರೆಕೊಟ್ಟರು.ತಾಲೂಕಿನ ಮುಳವಾಡ ಗ್ರಾಮದಲ್ಲಿ ಕೃಷ್ಣಾ ಭಾಗ್ಯ ಜಲನಿಗಮದ ಮುಳವಾಡ ಏತ ನೀರಾವರಿ ಹಂತ-೩ ರ ಅಡಿಯಲ್ಲಿ ಬಬಲೇಶ್ವರ ಶಾಖಾ ಕಾಲುವೆಯ ೧ ಹಾಗೂ ೨ರ ಮೂಲಕ ೧೭೦೪.೧೨ ಹೆಕ್ಟರ್ ಭೂಪ್ರದೇಶ ನೀರಾವರಿ ಕ್ಷೇತ್ರವಾಗಲು ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಿತರಣಾ ಕಾಲುವೆಗಳ ನಿರ್ಮಾಣ ಕಾಮಗಾರಿಯ ಭೂಮಿ ಪೂಜಾ ಸಮಾರಂಭವನ್ನು ಶುಕ್ರವಾರ ಸಾಯಂಕಾಲ ನೆರವೇರಿಸಿ ಮಾತನಾಡುತ್ತಿದ್ದರು.ಪ್ರತಿ ಮೂರು ವರ್ಷದ ನಂತರ ಬರಗಾಲ ಬರುವದು ನೈಸರ್ಗಿಕವಾದ ಸಹಜ ವಾತಾವರಣವಾಗಿದ್ದು ಬರಗಾಲದಂಥಹ ಇಂಥಹ ಪರಿಸ್ಥಿತಿಯಲ್ಲೂ ರೈತರ ಬದುಕು ದುಸ್ತರವಾದರೂ ಬದುಕುವದು ಅನಿವಾರ್ಯವಾಗಿದೆ ಆದ್ದರಿಂದ…

Read More

ಕೊಲ್ಹಾರ: ಶಾಲಾ ಶೈಕ್ಷಣಿಕ ಪಠ್ಯಪುಸ್ತಕಗಳ ಓದು ಬರಹದ ಜೊತೆಗೆ ಶಾಲೆಯಲ್ಲಿ ಶಿಕ್ಷಕರು ಮನೆಯಲ್ಲಿ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಕೊಡುವದು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯಕವಾಗಿದೆ ಎಂದು ಸಮಾಜಸೇವಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಣಿ ಸದಸ್ಯ ಪರಶುರಾಮ ಬ ಗಣಿ ಹೇಳಿದರು.ಗರಸಂಗಿ ರಸ್ತೆಗೆ ಹೊಂದಿಕೊಂಡಿರುವ ಪಟ್ಟಣದ ಬಸವೇಶ್ವರ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಬಹುಮಾನ ವಿತರಣಾ, ಸನ್ಮಾನ, ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.ಪಾಲಕರಾದ ನಾವುಗಳು ಇಂದಿನ ಮಕ್ಕಳಿಗೆ ಕಷ್ಟಕರವಾದ ಜೀವನ ಪದ್ದತಿಯ ಬದಲಾಗಿ ಆಧುನಿಕ ವ್ಯಾಮೋಹಗಳ ಸಾಮಾಜಿಕ ಜಾಲತಾನದ ಅನುಕರಣೀಯ ವ್ಯಸನದ ಕಡೆ ವಾಲಿಸುತ್ತಿರುವದು ಮುಂದೊಂದು ದಿನ ಸಮಾಜದಲ್ಲಿ ಅವರ ಬದುಕು ದುಸ್ತರವಾಗಬಹುದು. ಆದ್ದರಿಂದ ನಾವುಗಳು ಮಕ್ಕಳ ಬದುಕನ್ನು ಹಸನಾಗಿಸಲು ಶ್ರಮಿಸಬೇಕು ಎಂದರು.ನಿವೃತ್ತ ಮುಖ್ಯಗುರು ಕೆ.ಯು.ಗಿಡ್ಡಪ್ಪಗೋಳ ಮಾತನಾಡಿದರು.ಗರಸಂಗಿ ಗ್ರಾಮದ ಶಾಲಾ ಶಿಕ್ಷಕ ಪರಶುರಾಮ ವಾಲಗದ ಅವರನ್ನು ಇದೇ ಸಂದರ್ಬದಲ್ಲಿ ಸನ್ಮಾನಿಸಲಾಯಿತು, ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ, ಶಾಲೆಯ ೧೭ನೇ ವಾರ್ಷಿಕ ಉತ್ಸವ ಜರುಗಿತು.ಅಧ್ಯಕ್ಷತೆಯನ್ನು…

Read More

ಕರ್ನಾಟಕದಲ್ಲಿ 2 ಹಂತಗಳಲ್ಲಿ ಮತದಾನ | ಜೂ.4ರಂದು ಫಲಿತಾಂಶ | ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಮಾಹಿತಿ ನವದೆಹಲಿ: ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗಿದ್ದು, ಏಪ್ರಿಲ್‌ 19ರಿಂದ 7 ಹಂತಗಳಲ್ಲಿ ದೇಶದಾದ್ಯಂತ ಮತದಾನ ನಡೆಯಲಿದೆ. ಕರ್ನಾಟಕದಲ್ಲಿ ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು, ಜೂನ್‌4 ರಂದು ಫಲಿತಾಂಶ ಪ್ರಕಟವಾಗಲಿದೆ.ಮಾ.16ರಿಂದ ದೇಶದಾದ್ಯಂತ ನೀತಿ ಸಂಹಿತೆ ಜಾರಿಯಾಗಲಿದ್ದು, ಏಪ್ರಿಲ್ 26ರಂದು ಮೊದಲ ಹಂತದ ಮತದಾನ ಮತ್ತು ಮೇ 7ರಂದು ಎರಡನೇ ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ. 14 ಕ್ಷೇತ್ರಗಳಿಗೆ ಮೊದಲ ಹಂತದಲ್ಲಿ ಮತ್ತು ಇನ್ನುಳಿದ 14 ಕ್ಷೇತ್ರಗಳಿಗೆ 2ನೇ ಹಂತದಲ್ಲಿ ಮತದಾನ ನಡೆಯಲಿದೆ.ಮುಖ್ಯ ಚುನಾವಣಾ ಆಯುಕ್ತರಾದ ರಾಜೀವ್‌ ಕುಮಾರ್‌ ಅವರು ಪತ್ರಿಕಾಗೋಷ್ಟಿಯನ್ನು ನಡೆಸಿದ್ದು, ಪತ್ರಿಕಾಗೋಷ್ಟಿಯಲ್ಲಿ ಚುನಾವಣಾ ಆಯುಕ್ತರಾದ ಜ್ಞಾನೇಶ್‌ ಕುಮಾರ್‌ ಮತ್ತು ಸುಖಬೀರ್‌ ಸಂಧು ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.ದೆಹಲಿಯ ವಿಜ್ಞಾನ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಜೀವ್‌ ಕುಮಾರ್‌, ಪ್ರತಿಯೊಂದು ಚುನಾವಣೆ ನಮಗೆ ಪರೀಕ್ಷೆ ಇದ್ದಂತೆ, ನ್ಯಾಯ ಸಮ್ಮತ, ಮುಕ್ತ ಪಾರದರ್ಶಕ ಚುನಾವಣೆ ನಮ್ಮ ಉದ್ದೇಶವಾಗಿದೆ ಎಂದು…

Read More

ಕೊಲ್ಹಾರ: ವಿಜಯಪೂರ ಜಿಲ್ಲಾ ಭಾರತೀಯ ಜನತಾಪಕ್ಷದ ಯುವಮೋರ್ಚಾ ಜಿಲ್ಲಾ ಉಪಾಧ್ಯಕ್ಷರನ್ನಾಗಿ ರಾಜ್ಯ ಅಧ್ಯಕ್ಷರ ಸೂಚನೆ ಮೇರೆಗೆ ಕೊಲ್ಹಾರ ತಾಲೂಕಿನ ಬಳೂತಿ ಗ್ರಾಮದ ಜಗದೀಶ ಸುಣಗದ ನೇಮಕ ಮಾಡಿ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ ಆದೇಶ ಹೊರಡಿಸಿದ್ದಾರೆ.

Read More

ವಿಜಯಪುರ: ಪಾಲಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ ಶಿಕ್ಷಣ ನೀಡುವದರ ಮೂಲಕ ಮಕ್ಕಳನ್ನೆ ಆಸ್ತಿಯಾಗಿ ಮಾಡುವದರ ಮೂಲಕ ಮಕ್ಕಳನ್ನು ಸಂಪನ್ಮೂಲ ವ್ಯಕ್ತಿಯಾಗಿ ಮಾಡಬೇಕಾಗಿದೆ ಎಂದು ಸಮಾಜ ಸೇವಕ ಈರಣ್ಣ ಪಟ್ಟಣಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.ಮಕ್ಕಳಿಗೆ ಅಂಕ ಗಳಿಸುವ ಮಾನಸಿಕೊತ್ತಡವನ್ನು ಹಾಕಬಾರದು. ಅವರಿಗೆ ಕಲಿಕಾ ಅವಕಾಶವನ್ನು ನೀಡಬೇಕು ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ರೋಬೋಟ್ ಗಳಾಗಿ ರೂಪಿಸದೆ ಸೃಜನಾತ್ಮಕವ್ಯಕ್ತಿತ್ವವನ್ನು ರೂಪಿಸಬೇಕು ಎಂದರು.ಶನಿವಾರ ನಗರದ ಜ್ಯೋತ್ಸ್ನಾ ಪ್ರಾಥಮಿಕ ಹಾಗು ಪ್ರೌಢ ಶಾಲೆಯ ಮಕ್ಕಳ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಮಕ್ಕಳು ಪಠ್ಯಕ್ರಮದ ಅನುಸಾರ ಪರಿಪೂರ್ಣ ಶಿಕ್ಷಣ ಪಡೆಯಬೇಕು. ವ್ಯಕ್ತಿಯ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಶಿಕ್ಷಣ ಒಂದೇ ಮಾರ್ಗ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು. ವಿದ್ಯಾರ್ಥಿಗಳಿಗೆ ಪಠ್ಯತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಬೇಕು ಎಂದರು.ಬಳಿಕ ಮಕ್ಕಳಿಂದ ಮನರಂಜನ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು.

Read More