ವಿಜಯಪುರ: ಪಾಲಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡದೆ ಶಿಕ್ಷಣ ನೀಡುವದರ ಮೂಲಕ ಮಕ್ಕಳನ್ನೆ ಆಸ್ತಿಯಾಗಿ ಮಾಡುವದರ ಮೂಲಕ ಮಕ್ಕಳನ್ನು ಸಂಪನ್ಮೂಲ ವ್ಯಕ್ತಿಯಾಗಿ ಮಾಡಬೇಕಾಗಿದೆ ಎಂದು ಸಮಾಜ ಸೇವಕ ಈರಣ್ಣ ಪಟ್ಟಣಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಕ್ಕಳಿಗೆ ಅಂಕ ಗಳಿಸುವ ಮಾನಸಿಕೊತ್ತಡವನ್ನು ಹಾಕಬಾರದು. ಅವರಿಗೆ ಕಲಿಕಾ ಅವಕಾಶವನ್ನು ನೀಡಬೇಕು ಸ್ಪರ್ಧಾತ್ಮಕ ಯುಗದಲ್ಲಿ ಮಕ್ಕಳನ್ನು ರೋಬೋಟ್ ಗಳಾಗಿ ರೂಪಿಸದೆ ಸೃಜನಾತ್ಮಕವ್ಯಕ್ತಿತ್ವವನ್ನು ರೂಪಿಸಬೇಕು ಎಂದರು.
ಶನಿವಾರ ನಗರದ ಜ್ಯೋತ್ಸ್ನಾ ಪ್ರಾಥಮಿಕ ಹಾಗು ಪ್ರೌಢ ಶಾಲೆಯ ಮಕ್ಕಳ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಮಕ್ಕಳು ಪಠ್ಯಕ್ರಮದ ಅನುಸಾರ ಪರಿಪೂರ್ಣ ಶಿಕ್ಷಣ ಪಡೆಯಬೇಕು. ವ್ಯಕ್ತಿಯ ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಲು ಶಿಕ್ಷಣ ಒಂದೇ ಮಾರ್ಗ ಎಂಬುದನ್ನು ವಿದ್ಯಾರ್ಥಿಗಳು ಅರಿಯಬೇಕು. ವಿದ್ಯಾರ್ಥಿಗಳಿಗೆ ಪಠ್ಯತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅವಕಾಶ ನೀಡಬೇಕು ಎಂದರು.
ಬಳಿಕ ಮಕ್ಕಳಿಂದ ಮನರಂಜನ ಕಾರ್ಯಕ್ರಮಗಳು ಹಮ್ಮಿಕೊಳ್ಳಲಾಗಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

