ಕೊಲ್ಹಾರ: ಶಾಲಾ ಶೈಕ್ಷಣಿಕ ಪಠ್ಯಪುಸ್ತಕಗಳ ಓದು ಬರಹದ ಜೊತೆಗೆ ಶಾಲೆಯಲ್ಲಿ ಶಿಕ್ಷಕರು ಮನೆಯಲ್ಲಿ ಪಾಲಕರು ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಕೊಡುವದು ಇಂದಿನ ದಿನಮಾನಗಳಲ್ಲಿ ಅತ್ಯವಶ್ಯಕವಾಗಿದೆ ಎಂದು ಸಮಾಜಸೇವಕ ಹಾಗೂ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಕಾರ್ಯಕಾರಣಿ ಸದಸ್ಯ ಪರಶುರಾಮ ಬ ಗಣಿ ಹೇಳಿದರು.
ಗರಸಂಗಿ ರಸ್ತೆಗೆ ಹೊಂದಿಕೊಂಡಿರುವ ಪಟ್ಟಣದ ಬಸವೇಶ್ವರ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಬಹುಮಾನ ವಿತರಣಾ, ಸನ್ಮಾನ, ಹಾಗೂ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಅವರು ಮಾತನಾಡುತ್ತಿದ್ದರು.
ಪಾಲಕರಾದ ನಾವುಗಳು ಇಂದಿನ ಮಕ್ಕಳಿಗೆ ಕಷ್ಟಕರವಾದ ಜೀವನ ಪದ್ದತಿಯ ಬದಲಾಗಿ ಆಧುನಿಕ ವ್ಯಾಮೋಹಗಳ ಸಾಮಾಜಿಕ ಜಾಲತಾನದ ಅನುಕರಣೀಯ ವ್ಯಸನದ ಕಡೆ ವಾಲಿಸುತ್ತಿರುವದು ಮುಂದೊಂದು ದಿನ ಸಮಾಜದಲ್ಲಿ ಅವರ ಬದುಕು ದುಸ್ತರವಾಗಬಹುದು. ಆದ್ದರಿಂದ ನಾವುಗಳು ಮಕ್ಕಳ ಬದುಕನ್ನು ಹಸನಾಗಿಸಲು ಶ್ರಮಿಸಬೇಕು ಎಂದರು.
ನಿವೃತ್ತ ಮುಖ್ಯಗುರು ಕೆ.ಯು.ಗಿಡ್ಡಪ್ಪಗೋಳ ಮಾತನಾಡಿದರು.
ಗರಸಂಗಿ ಗ್ರಾಮದ ಶಾಲಾ ಶಿಕ್ಷಕ ಪರಶುರಾಮ ವಾಲಗದ ಅವರನ್ನು ಇದೇ ಸಂದರ್ಬದಲ್ಲಿ ಸನ್ಮಾನಿಸಲಾಯಿತು, ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ, ಶಾಲೆಯ ೧೭ನೇ ವಾರ್ಷಿಕ ಉತ್ಸವ ಜರುಗಿತು.
ಅಧ್ಯಕ್ಷತೆಯನ್ನು ರಾಚಪ್ಪ ಕುಂಬಾರ ವಹಿಸಿದ್ದರು, ಅತಿಥಿಗಳಾಗಿ ಪಟ್ಟಣ ಪಂಚಾಯತ ಸದಸ್ಯೆ ಶ್ರೀಮತಿ ಆಶಾ ಬನಪ್ಪ ಬಾಲಗೊಂಡ, ಸಿದ್ದಪ್ಪ ಕಂಕಣವಾಡಿ, ಸಿದ್ದು ಮಾವಿನಭಾವಿ, ಪರಶುರಾಮ ವಾಲಗದ, ಶಾಲಾ ಶಿಕ್ಷಕ ಬಳಗದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

