ವಿಜಯಪುರ: ಬಿ.ಎಲ್.ಡಿ.ಇ ಸಂಸ್ಥೆಯ ಎ.ವಿ.ಎಸ್. ಅಯುರ್ವೆದ ಮಹಾವಿದ್ಯಾಲಯಲ್ಲಿ ಕಿಡ್ನಿ ವೈಪಲ್ಯ ಮತ್ತು ಕಿಡ್ನಿ ಸಂಬಂದಿತ ಸಮಸ್ಯೆಗಳು ಕುರಿತು ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಪ್ರಾರಂಭವಾಗಿದ್ದು ಮಾ. 20ರ ವರೆಗೆ ನಡೆಯಲಿದೆ.
ಮೂತ್ರ ಕಡಿಮೆ ವಿಸರ್ಜನೆ, ರಕ್ತ ಹೀನತೆ, ರಕ್ತ ಒತ್ತಡ(ಹೈ ಬಿಪಿ), ಧಿರ್ಘ ಕಾಲಿನ ಕಿಡ್ನಿ ವೈಫಲ್ಯ , ಹೈ ಕ್ರೀಯಾಟಿನಿನ್ ಲೆವೆಲ್ಸ, ವಾಂತಿ, ಪಾದ ಉಜ್ಜುವಿಕೆ, ಸಕ್ಕರೆ ಕಾಯಿಲೆಯಿಂದ ಕಿಡ್ನಿ ವೈಪಲ್ಯ , ಈ ರೀತಿಯ ಲಕ್ಷಣಗಳು, ತೊಂದರೆಗಳು ಹೊಂದಿರುವವರು ಶಿಬಿರದಲ್ಲಿ ತಪಾಸಣೆ ಮತ್ತು ಉಚಿತ ಚಿಕಿತ್ಸೆಯ ಸದುಪಯೊಗ ಪಡೆದುಕೊಳ್ಳಬೇಕೆಂದು ಕಾಲೇಜಿನ ಪ್ರಾಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಸರು ನೊಂದಾಯಿಸಲು ಮತ್ತು ಹೆಚ್ಚಿನ ಮಾಹಿತಿಗಾಗಿ ಮೋಬೈಲ್.ನಂ.7406737888 7483278348, ಸಂಪರ್ಕಿಸಬಹುದಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment
