Author: editor.udayarashmi@gmail.com

ಲೇಖನ- ಜಯಶ್ರೀ.ಜೆ. ಅಬ್ಬಿಗೇರಿಇಂಗ್ಲೀಷ್ ಉಪನ್ಯಾಸಕರುಬೆಳಗಾವಿಮೊ: ೯೪೪೯೨೩೪೧೪೨ ಉದಯರಶ್ಮಿ ದಿನಪತ್ರಿಕೆ ಹಲೋ ಅವನಿ,ಮುಗಿಲೆತ್ತರಕ್ಕೆ ನಿಂತಿದ್ದ ಕಾಲೇಜಿನ ಕಟ್ಟಡದ ಮುಂದೆ ಎಲ್ಲೆಲ್ಲೂ ವಿದ್ಯಾರ್ಥಿಗಳ ಸಡಗರದ ಓಡಾಟ. ಅಂದು ಕೊನೆ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುವ ಹಾಗೂ ವಾರ್ಷಿಕೋತ್ಸವದ ಆಚರಣೆ ಇತ್ತು. ಹಬ್ಬದ ವಾತಾವರಣದಲ್ಲಿ ನೂರಾರು ಹುಡುಗಿಯರ ನಡುವೆ ತಿದ್ದಿ ತೀಡಿದ ಬೊಂಬೆಯಂತಿರುವ ನೀನು ಚಂದದ ಮುಗುಳ್ನಗೆ ಹೊತ್ತು ಓಡಾಡುತ್ತಿದ್ದೆ. ನಿನ್ನ ಕಂಡು ಪಡ್ಡೆ ಹುಡುಗರ ಕಣ್ಣುಗಳು ಅರಳಿದವು. ಆದರೆ ಛೇಡಿಸುವ ಸಾಹಸ ಯಾರೂ ಮಾಡಲಿಲ್ಲ. ಹುಡುಗಿಯರು ಸಹ ಕಣ್ಮಿಟುಕಿಸದೇ ನೋಡತೊಡಗಿದ್ದರು. ಉಳಿದ ಹುಡುಗಿಯರ ನಡುವೆ ನೀನು ವಿಭಿನ್ನವಾಗಿ ಎದ್ದು ಕಾಣುತ್ತಿದ್ದೆ. ಬೆರಳಣಿಕೆಯಷ್ಟು ಪ್ರತಿಭಾವಂತ ಹುಡುಗಿಯರಲ್ಲಿ ಮಿಂಚುತ್ತಿದ್ದೆ. ನಿನ್ನ ಭಾಷಣ ಕಲೆ ಪ್ರಬಂಧ ಬರಹ ಕಾವ್ಯಗಾಯನದ ಪ್ರಶಸ್ತಿಗಳು ಎಲ್ಲರ ಚಿತ್ತವನ್ನು ಹಿಡಿದಿಟ್ಟುಕೊಂಡವು. ಅದಲ್ಲದೇ ಕಾರ್ಯಕ್ರಮದ ಕೊನೆಯಲ್ಲಿ ನಿನ್ನ ಮುಡಿಗೇರಿದ ಬೆಸ್ಟ್ ಸ್ಟುಡೆಂಟ್ ಅವಾರ್ಡ್ ನಿನ್ನ ಖುಷಿಯ ಮೇರೆಯನ್ನು ಮೀರಿಸಿತ್ತು.ದಿನಪತ್ರಿಕೆಗಳಲ್ಲಿ ಮ್ಯಾಗಜಿನ್‌ಗಳಲ್ಲಿ ನೀ ಬರೆಯುತ್ತಿದ್ದ ಕವಿತೆಗಳು ಓದುಗರ ಮನ ಗೆದ್ದಿದ್ದವು. ಆ ದಿನ ನಡೆದ ಅಂತರ್ ಕಾಲೇಜು ಸ್ಪರ್ಧೆಗಳಿಗೆ…

Read More

ಜೂನ್ ೧೭ ರಿಂದ ೧೯ ರವರೆಗೆ ವಿಜಯಪುರ ಜಿಲ್ಲೆಯ ಕೋಟಾದಲ್ಲಿ ಹಜರತ ಹಾಜಿಮಸ್ತಾನ ಜಾತ್ರೆ ಪ್ರಯುಕ್ತ ಈ ವಿಶೇಷ ಲೇಖನ ಲೇಖನ- ಮಲ್ಲಪ್ಪ. ಸಿ. ಖೊದ್ನಾಪೂರ (ತಿಕೋಟಾ)ವಿಜಯಪುರ ಉದಯರಶ್ಮಿ ದಿನಪತ್ರಿಕೆ ಇಡೀ ಜಗತ್ತಿಗೆ ಅನೇಕತೆಯಲ್ಲಿ ಏಕತೆಯನ್ನು ಎತ್ತಿ ತೋರಿಸಿದ ರಾಷ್ಟ್ರ ನಮ್ಮದು. ಹಿಂದೂ, ಮುಸ್ಲಿಂ, ಬೌದ್ಧ, ಜೈನ್, ಪಾರಸಿ ಹೀಗೆ ವಿವಿಧ ಧರ್ಮೀಯರು ಭಾವೈಕ್ಯತೆಯಿಂದ ನೆಲೆಸಿರುವ ಭರತ ಭೂಮಿ ನಮ್ಮದು. ವಿಜಯಪುರ ಜಿಲ್ಲಾ ಕೇಂದ್ರ ಸ್ಥಾನದಿಂದ ೨೦ ಕಿ.ಮೀ. ಪಶ್ಚಿಮಕ್ಕೆ ಇರುವ ತಿಕೋಟಾ ಪಟ್ಟಣವಿದೆ. ಆಗಿನ ಮಹಾರಾಷ್ಟ್ರದ ಕುರುಂದವಾಡ ಸಂಸ್ಥಾನದಲ್ಲಿ ಕೇಂದ್ರ ಸ್ಥಾನವಾಗಿದ್ದ ಈ ಪಟ್ಟಣವು ಈಗ ತಾಲೂಕ ಕೇಂದ್ರವಾಗಿದೆ. ೧೬ ನೇಯ ಶತಮಾನದಲ್ಲಿ ನಿರ್ಮಾಣಗೊಂಡ ಎರಡನೇಯ ತಾಜಮಹಲ್ ಎಂದೇ ಕರೆಯಲಾಗುವ ಇಬ್ರಾಹಿಂ ರೋಜಾ ವಾಸ್ತುಶಿಲ್ಪಿ ಸಂದಲ್ ಮಲೀಕನ ಸಮಾಧಿ ಈ ನಗರದಲ್ಲಿರುವದು ಒಂದು ವಿಶೇಷ. ದೇಶದಲ್ಲಿಯೇ ಮೊಟ್ಟಮೊದಲ ಸರ್ಕಸ್ ಕಂಪನಿ ಪ್ರಾರಂಭಿಸಿದ ಗಣಪತರಾವ್ ಛತ್ರೆ, ಖ್ಯಾತ್ ಪ್ರವಚನಕಾರ ದಾನಪ್ಪ ಜತ್ತಿ ಹಾಗೂ ಜಾನಪದ ಕಲೆಗಳಲ್ಲೊಂದಾದ ಚೌಡಕಿ ಪದ ಗಾಯಕಿ ಗೌರವ್ವ…

Read More

ದೇಶ ರಕ್ಷಕರ ಪಡೆ ಸಂಚಾಲಿತ ಅನ್ನ ಸ್ನೇಹಿ ಸೇವಾ ಬಳಗದಿಂದ 100ನೇ ವಾರ ಪೂರೈಸಿದ ಹಸಿವು ಮುಕ್ತ ಸೇವೆ | ನೂರಾರು ನಿರ್ಗತಿಕರಿಗೆ ಅನ್ನದಾನ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶ ರಕ್ಷಕರ ಪಡೆ ಸಂಚಾಲಿತ ಅನ್ನ ಸ್ನೇಹಿ ಸೇವಾ ಬಳಗ ವತಿಯಿಂದ ಹಮ್ಮಿಕೊಳ್ಳಲಾಗುತ್ತಿರುವ “ಹಸಿವು ಮುಕ್ತ ಸೇವಾ ಕಾರ್ಯಕ್ರಮ”ದ 100ನೇ ವಾರವನ್ನು ಶುಕ್ರವಾರ ಯಶಸ್ವಿಯಾಗಿ ಆಚರಿಸಲಾಯಿತು.ನಗರದ ವಿವಿಧ ಭಾಗಗಳಲ್ಲಿ ಬೇರೆ ಊರಿಗೆ ತೆರಳುವ ಪ್ರಯಾಣಿಕರು, ನಿರ್ಗತಿಕರು ಹಾಗೂ ಆಶ್ರಯಹೀನರಿಗೆ ಉಚಿತವಾಗಿ ಬಿಸಿ ಊಟ ವಿತರಿಸಲಾಯಿತು.ಈ ಉದಾತ್ತ ಅನ್ನದಾನ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಸರ್ಕಾರಿ ಆಸ್ಪತ್ರೆ ಆವರಣ, ಕೇಂದ್ರ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಹಾಗೂ ನಗರದ ಪ್ರಮುಖ ವೃತ್ತಗಳ ರಸ್ತೆ ಬದಿಯಲ್ಲಿ ವಾಸಿಸುವ ನೂರಾರು ಜನರನ್ನು ದೇಶ ರಕ್ಷಕರ ಪಡೆ ಸ್ವಯಂಸೇವಕರು ಖುದ್ದಾಗಿ ಭೇಟಿ ಮಾಡಿ ಗೌರವಪೂರ್ವಕವಾಗಿ ಸಿದ್ಧಪಡಿಸಿದ ಆಹಾರವನ್ನು ವಿತರಿಸಿದರು.ಕಾರ್ಯಕ್ರಮಕ್ಕೆ ಮಹಾನಗರ ಪಾಲಿಕೆ ಉಪ ಆಯುಕ್ತ ಮಹಾವೀರ ಬೋರಣ್ಣವರ, ಖ್ಯಾತ ಮಧುಮೇಹ ತಜ್ಞ ಡಾ. ಬಾಬು ರಾಜೇಂದ್ರ ನಾಯಿಕ, ಮಹಾನಗರ…

Read More

ಶಿರಹಟ್ಟಿ ಯುಕೆಪಿ ಪುನರ್ವಸತಿ ಕೇಂದ್ರದ ಸ್ಥಳದಲ್ಲಿ 40 ವರ್ಷಗಳಿಂದ ವಾಸವಾಗಿರುವ 500ಕ್ಕೂ ಹೆಚ್ಚು ಕುಟುಂಬಗಳನ್ನು ನೋಟಿಸ್ ನೀಡದೆ ತೆರವುಗೊಳಿಸಲು ಮುಂದಾದ ಅಧಿಕಾರಿಗಳ ಕ್ರಮಕ್ಕೆ ವಿರೋಧ | ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಉದಯರಶ್ಮಿ ದಿನಪತ್ರಿಕೆ ಅಥಣಿ: ತಾಲೂಕಿ ಶಿರಹಟ್ಟಿ ಗ್ರಾಮದ ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಕೇಂದ್ರದ ಸ್ವಾಧೀನದಲ್ಲಿರುವ ಜಾಗದಲ್ಲಿ ಕಳೆದ 40 ವರ್ಷಗಳಿಂದ ವಾಸವಾಗಿರುವ 500ಕ್ಕೂ ಹೆಚ್ಚು ಕುಟುಂಬಗಳನ್ನು ಯಾವುದೇ ನೋಟಿಸ್ ನೀಡದೆ ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಹಾಗೂ ಶಿರಹಟ್ಟಿ ಗ್ರಾಮಸ್ಥರು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ವೇಳೆ ಬಹುಜನ ಸಮಾಜ ಪಕ್ಷಕ ಬೆಳಗಾವಿ ವಲಯ ಉಸ್ತುವಾರಿ ಹಾಗೂ ನ್ಯಾಯವಾದಿ ಬಾಹುಸಾಹೇಬ ಕಾಂಬಳೆ ಮಾತನಾಡಿ, ಆರ್, ಸಿ, ನಂ.1 ರ ನಿವಾಸಿಗಳು ಕಳೆದ 40 ವರ್ಷಗಳಿಂದ ಇಲ್ಲಿ ನೆಲೆಸಿದ್ದಾರೆ. ಮನೆ ಕಟ್ಟಿಕೊಂಡು ಮಕ್ಕಳನ್ನು ಬೆಳೆಸಿ ಮತದಾರರ ಪಟ್ಟಿ ರೇಷನ್ ಕಾರ್ಡ್ ವಿದ್ಯುತ್ ಬಿಲ್ ಎಲ್ಲವನ್ನೂ ಇಲ್ಲಿಯೇ ಹೊಂದಿದ್ದಾರೆ. ಇಷ್ಟೆಲ್ಲ…

Read More

ಲೇಖನ- ವೀಣಾ ಹೇಮಂತ್ ಗೌಡ ಪಾಟೀಲ್,ಮುಂಡರಗಿಗದಗ ಜಿಲ್ಲೆ ಉದಯರಶ್ಮಿ ದಿನಪತ್ರಿಕೆ ಪ್ರಪಂಚದ ಯಾವುದೇ ಮೂಲೆಯಲ್ಲಿ ನೋಡಿದರೂ ನಾವು ಕಿವಿ ಕೇಳಿಸದ, ಕಣ್ಣು ಕಾಣದ, ಮಾತನಾಡಲು ಬಾರದ ಜನರನ್ನು ಅಲ್ಲಲ್ಲಿ ಕಾಣಬಹುದು. ಇವರಲ್ಲಿ ಈ ನ್ಯೂನತೆಗಳು ಹುಟ್ಟಿನಿಂದಲೂ ಬಂದಿರಬಹುದು, ಇಲ್ಲವೇ ಹುಟ್ಟಿದ ಕೆಲವು ವರ್ಷಗಳ ನಂತರ, ಇಲ್ಲವೇ ಯಾವುದೋ ಆಕಸ್ಮಿಕಗಳಲ್ಲಿ ಜೊತೆಗೂಡಿದಂತಹ ತೊಂದರೆಗಳಾಗಿರಬಹುದು. ಆದರೆ ಜಗತ್ತಿನ ಯಾವುದೇ ಭಾಗದಲ್ಲಿ ರುಚಿಯನ್ನು ಕಳೆದುಕೊಂಡ ನಾಲಿಗೆಯ ಕುರಿತು ಎಲ್ಲಾದರೂ ಕೇಳಿರುವಿರಾ? ಹುಟ್ಟಿದ ಮಗುವಿನ ನಾಲಿಗೆಗೆ ಗೊತ್ತಾಗುವಷ್ಟೇ ರುಚಿ ವಯಸ್ಸಾದ ವೃದ್ಧನಿಗೂ ಇರುತ್ತದೆ. ಪಂಚೇಂದ್ರಿಯಗಳಲ್ಲಿ ಉಳಿದೆಲ್ಲ ಅಂಗಗಳು ಮಗುವಿನ ಶೈಶವಾವಸ್ಥೆಯಿಂದ ಕ್ರಿಯಾಶೀಲವಾಗಿದ್ದು ವಯಸ್ಸಾದಂತೆ ತಮ್ಮ ಕಾರ್ಯ ನಿರ್ವಹಣೆಯ ಸಾಮರ್ಥ್ಯದಲ್ಲಿ ಕುಂಠಿತತೆಯನ್ನು ಹೊಂದಿದರೆ, ನಾಲಿಗೆ ಮಾತ್ರ ಆಬಾಲ ವೃದ್ಧರಾದಿಯಾಗಿ ಎಲ್ಲರಲ್ಲೂ ಅಷ್ಟೇ ಚುರುಕಾಗಿ ಕಾರ್ಯನಿರ್ವಹಿಸುತ್ತದೆ. ಇದಕ್ಕೆ ಕಾರಣ ನಾಲಿಗೆ ನಮ್ಮ ಮೆದುಳಿಗೆ ಅತ್ಯಂತ ಹತ್ತಿರದಲ್ಲಿ ಇದೆ ಎಂದು ಪ್ರಾಜ್ಞರು ಹೇಳುತ್ತಾರೆ. ನಮ್ಮ ಮೆದುಳಿನಲ್ಲಿರುವ ಸೆನ್ಸಾರ್ ನರ್ವಗಳ ( ಅರಿವಿನ ನರವ್ಯೂಹ) ಮೂಲಕ ನಾವು ಕೇಳುವ, ನೋಡುವ, ಸ್ಪರ್ಶಿಸುವ, ವಾಸನೆಯನ್ನು…

Read More

ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಭಿಮತ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ದೇಶ ಸಮೃದ್ಧಿಯತ್ತ ಸಾಗಬೇಕಾದರೆ ರಾಮರಾಜ್ಯದ ಕನಸು ನನಸಾಗಬೇಕು ಎಂದು ಪೇಜಾವರ ಅಧೋಕ್ಷಜ ಮಠದ ಪೀಠಾಧಿಪತಿ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಅಭಿಪ್ರಾಯಪಟ್ಟರು.ಅವರು ಶುಕ್ರವಾರ ಇಲ್ಲಿಯ ಶ್ರೀಕೃಷ್ಣ ವಾದಿರಾಜ ಮಠದ ಆವರಣದಲ್ಲಿ ಅಂದಾಜು ರೂ.೭ ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ವಿದ್ಯಾರ್ಥಿ ನಿಲಯದ ದಾನಿಗಳನ್ನು ಉದ್ಧೇಶಿಸಿ ಮಾತನಾಡುತ್ತಿದ್ದರು.ಬಡ ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಅನಕೂಲ ಕಲ್ಪಿಸಲು ಹಿರಿಯ ಸ್ವಾಮಿಗಳು ಆರು ದಶಕದ ಹಿಂದೆ ನಿರ್ಮಿಸಿದ ವಿದ್ಯಾರ್ಥಿ ನಿಲಯ ಶಿಥಿಲಾವಸ್ಥೆಯಲ್ಲಿತ್ತು. ಅದನ್ನು ಆಧುನಿಕರಣಗೊಳಿಸಿ ಇಂದಿನ ತಂತ್ರಜ್ಞಾನಯುಗದಲ್ಲಿ ಸಮಸ್ತ ಬಡವರಿಗೂ ನೂತನ ಕಟ್ಟಡ ನಿರ್ಮಿಸಿಕೊಡುವ ಯೋಜನೆಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಾಕಷ್ಟು ದೊಡ್ಡ ಪ್ರಮಾಣದಲ್ಲಿ ಅನುದಾನ ನೀಡಿದ್ದಾರೆ. ರೂ.ಒಂದು ಕೋಟಿಯಷ್ಟು ಹಣ ಸಂಗ್ರಹಿಸಿ ಕೊಡುವ ಭರವಸೆ ಕೊಟ್ಟಿದ್ದಾರೆಂದು ಪ್ರಶಂಸಿಸಿದ ಅವರು ಸಂಸದ ರಮೇಶ ಜಿಗಜಿಣಗಿ ಅವರೂ ಅನುದಾನ ಬಿಡುಗಡೆ ಮಾಡಿದ್ದಾರೆಂದು ಶ್ಲ್ಯಾಘಿಸಿದರು.ಅನೇಕ ಜನ ಹಿರಿಯರು ಒಂದು ಕೋಣೆ ನಿರ್ಮಾಣಕ್ಕೆ ರೂ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನದ ಅಂಗವಾಗಿ ಜಮಖಂಡಿಯ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯ (ಬಿ.ಎಡ್)ದಲ್ಲಿ ಶುಕ್ರವಾರ ಜಾಗೃತಿ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.ಕಾರ್ಯಕ್ರಮದ ಅಂಗವಾಗಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆಗೊಳಿಸುವ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು. ಯಾವುದೇ ಮಗುವನ್ನು ದುಡಿಮೆಗೆ ಬಳಸದೇ, ಶಿಕ್ಷಣದ ಹಕ್ಕನ್ನು ಗೌರವಿಸಿ, ಬಾಲಕಾರ್ಮಿಕತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸುವ ಸಂಕಲ್ಪದೊಂದಿಗೆ ಪ್ರಮಾಣವಚನ ಸ್ವೀಕರಿಸಲಾಯಿತು.ಕಾಲೇಜಿನ ದೈಹಿಕ ನಿರ್ದೇಶಕರಾದ ಪ್ರೊ. ಮಹಾದೇವ ಗಲಬಿ ಅವರು ಪ್ರತಿಜ್ಞಾ ವಿಧಿ ಬೋಧಿಸಿ, ಬಾಲಕಾರ್ಮಿಕ ಪದ್ಧತಿಯು ಮಕ್ಕಳ ಭವಿಷ್ಯವನ್ನು ಕಸಿದುಕೊಳ್ಳುವ ಸಾಮಾಜಿಕ ಪಿಡುಗಾಗಿದ್ದು, ಪ್ರತಿಯೊಬ್ಬ ನಾಗರಿಕನು ಇದರ ವಿರುದ್ಧ ಜಾಗೃತನಾಗಿರಬೇಕೆಂದು ತಿಳಿಸಿದರು.ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಸುರಕ್ಷಿತ ಬಾಲ್ಯ ದೊರಕುವುದು ಮೂಲಭೂತ ಹಕ್ಕಾಗಿದ್ದು, ಬಾಲಕಾರ್ಮಿಕತೆಯ ನಿರ್ಮೂಲನೆಗೆ ಸಮಾಜದ ಎಲ್ಲ ವರ್ಗಗಳ ಸಹಕಾರ ಅಗತ್ಯವೆಂದರು.ಈ ಸಂದರ್ಭದಲ್ಲಿ ಉಪನ್ಯಾಸಕರಾದ ಪ್ರೊ. ಅಶ್ವಿನಿ ಅನಂತಪೂರ ಹಾಗೂ ಪ್ರೊ. ಪ್ರೇಮಾನಂದ ಹಿರೇಮಠ ಅವರು ಮಾತನಾಡಿ, ಮಕ್ಕಳನ್ನು ದುಡಿಮೆಗೆ ತಳ್ಳುವ ಬದಲಿಗೆ…

Read More

ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ಕಲಿಯುವ ವಯಸ್ಸಿನಲ್ಲಿ ಸರಿಯಾಗಿ ಕಲಿಯದೆ ಬೇರೆಯವರ ಕೈ ಕೆಳಗೆ ದುಡಿಯಲು ಹೋಗಿ ಶಿಕ್ಷಣದಿಂದ ವಂಚಿತರಾಗುವ ಅವಕಾಶವನ್ನು ಕಳೆದುಕೊಳ್ಳದೆ ಶಿಕ್ಷಣವನ್ನು ಪಡೆದು ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಶಿಕ್ಷಕ ಸಂಗನಬಸವ ಉಟಗಿ ಹೇಳಿದರು.ಅವರು ಸಮೀಪದ ಕುಂಬಾರಹಳ್ಳ ಪಿಎಂ ಶ್ರೀ ಕರ್ನಾಟಕ ಪಬ್ಲಿಕ್ ಸ್ಕೂಲ್ ನಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ಜೀವನವನ್ನು ಸಂತಸದ ಕಲಿಕೆಯೊಂದಿಗೆ ಜೀವನ ರೂಪಿಸಿಕೊಳ್ಳಲು ಶ್ರಮಿಸಬೇಕು, ಇದರೊಂದಿಗೆ ತಂದೆ ತಾಯಿಯ ಋಣ ತೀರಿಸಬೇಕೆಂದು ಹೇಳಿದರು.ಕು. ಚೈತ್ರ ತೇರದಾಳ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಪ್ರಯುಕ್ತ ಪ್ರತಿಜ್ಞಾವಿಧಿ ಬೋಧಿಸಿದರು.ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕ ನಾರಾಯಣ ಶಾಸ್ತ್ರಿ, ಶಿಕ್ಷಕರಾದ ಶಾರದಾ ಮಠ, ಆಸಿಪಾ ಭಾನು ಮೋಮಿನ್, ಸವಿತಾ ಬೆನಕಟ್ಟಿ, ಮಂಜುಳಾ ಕಡಕೋಳ, ಚಂದ್ರಕಾಂತ್ ಪೊಲೀಸ್, ಶಕುಂತಲಾ ಬಿರಾದಾರ್ ಹಾಗೂ ಮಕ್ಕಳು ಉಪಸ್ಥಿತರಿದ್ದರು.

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಜೆರಿಯಾಟ್ರಿಕ್ಸ್ ವಿಭಾಗ ಮತ್ತು ಶ್ರೀ ಸಂಗನಬಸವ ಮಹಾಸ್ವಾಮೀಜಿ ಕಾಲೇಜ್ ಆಫ್ ಫಾರ್ಮಸಿ ಅಂಡ್ ರಿಸರ್ಚ್ ಸೆಂಟರ್‌ನ ಫಾರ್ಮ್-ಡಿ ವಿಭಾಗದ ಪ್ರಕಟಿಸಿದ ಅಡ್ವಾನ್ಸ್ ಕೇರ್ ಪ್ಲ್ಯಾನಿಂಗ್ ಫಾರ್ ಅಲಝೈಮರ್ಸ್ ಡಿಸೀಸ್ ಆ್ಯಂಡ್ ಡೆಮೆನ್ಶಿಯಾ(Advance Care Planning for Alzheimer’s Disease and Dementia) ಕೃತಿಯನ್ನು ಬಿ.ಎಲ್.ಡಿ.ಇ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ್ ಗುರುವಾರ ಬಿಡುಗಡೆ ಮಾಡಿದರು.ವಿವಿಯಲ್ಲಿ ನಡೆದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಈ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಅಲಝೈಮರ್ಸ್ ಕಾಯಿಲೆ ಮತ್ತು ಡಿಮೆನ್ಶಿಯಾ ಪೀಡಿತರ ಆರೈಕೆಯಲ್ಲಿ ತೊಡಗಿರುವ ವೈದ್ಯಕೀಯ, ನರ್ಸಿಂಗ್, ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ರೋಗಿಗಳ ಆರೈಕೆದಾರರಿಗೆ ಈ ಪುಸ್ತಕ ಅತ್ಯಂತ ಉಪಯುಕ್ತವಾಗಲಿದೆ. ಡಿಮೆನ್ಶಿಯಾ ಆರೈಕೆಯಲ್ಲಿ ಬಳಸಲಾಗುವ ಮೂಲಭೂತ ಮಾಹಿತಿಯಿಂದ ಹಿಡಿದು ಆಧುನಿಕ ತಂತ್ರಜ್ಞಾನ ಮತ್ತು ಸಾಧನಗಳವರೆಗೆ ಸಮಗ್ರ ಮಾಹಿತಿಯನ್ನು ಈ ಪುಸ್ತಕ ಒಳಗೊಂಡಿದೆ ಎಂದು ಅವರು ಹೇಳಿದರು.ಇದೇ ವೇಳೆ ಕೃತಿಯ ಲೇಖಕ ಮತ್ತು ಜೆರಿಯಾಟ್ರಿಕ್ಸ್…

Read More