Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಮುದ್ದೇಬಿಹಾಳ: ಪಟ್ಟಣದ ೩೩/೧ಕೆವಿ ಉಪಕೇಂದ್ರ ನಾಲತವಾಡ ಹಾಗೂ ತಂಗಡಗಿಯ ಉಪಕೇಂದ್ರಗಳಲ್ಲಿ ತುರ್ತು ನಿರ್ವಹಣಾ ಕಾಮಗಾರಿ ಇರುವದರಿಂದ ಈ ಉಪಕೇಂದ್ರಗಳ ಮೇಲೆ ಬರುವ ಎಲ್ಲ ಐಪಿ, ಕುಡಿಯುವ ನೀರು ಸರಬರಾಜು, ಎನ್.ಜೆ.ವಾಯ್ ಫೀಡರ್‌ಗಳಲ್ಲಿ ಮತ್ತು ಟೌನ್ ಫೀಡರ್‌ಗಳಿಗೆ ಮಾ.೨೨ ರಂದು ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಪ್ರಕಟಣೆ ತಿಳಿಸಿದೆ.
“ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ”- ವಿವೇಕಾನಂದ. ಎಚ್.ಕೆ, ಬೆಂಗಳೂರು ಕ್ರಿಕೆಟ್ ಆಟ – ಬೆಟ್ಟಿಂಗ್ ದಂಧೆ – ಜೂಜಿನ ಮಜಾ ಇನ್ನು ಪ್ರಾರಂಭ..ಕ್ರಿಕೆಟ್ ಆಟಗಾರರು – ಫ್ರಾಂಚೈಸಿಗಳು – ಕ್ಲಬ್ ಬಾರ್ ಗಳು – ಜಾಹೀರಾತುದಾರರು – ಅದರ ಪ್ರಚಾರ ರಾಯಭಾರಿಗಳು – ಎಲೆಕ್ಟ್ರಾನಿಕ್ ಟಿವಿ ವಾಹಿನಿಗಳು – ಬೆಟ್ಟಿಂಗ್ ಏಜೆಂಟುಗಳು ಮುಂತಾದ ಎಲ್ಲರಿಗೂ ಹಬ್ಬ..ಬೆಟ್ಟಿಂಗ್ ಹುಚ್ಚಿನ ಮನೆಯವರಿಗೆ ಶಾಪ, ಇನ್ನೂ ನತದೃಷ್ಟರಿಗೆ ತಿಥಿ..ಈ ಆಟ ಒಂದು ದೊಡ್ಡ ಆರ್ಥಿಕ ಚಟುವಟಿಕೆಗಳನ್ನು ಹೊಂದಿದೆ ಎಂಬುದು ನಿಜ. ಆದರೆ ಅಷ್ಟೇ ಸಮಾಜ ಘಾತಕವೂ ಆಗಿದೆ.ಸಮಾಜದಲ್ಲಿ ಒಳ್ಳೆಯದು ಕೆಟ್ಟದ್ದು ಎರಡೂ ಇರುತ್ತದೆ. ಆಯ್ಕೆ ಜನರಿಗೆ ಬಿಟ್ಟಿದ್ದು ಎಂದು ಸಮಾಧಾನಕರ ಉತ್ತರ ಹೇಳಬಹುದು. ಆದರೆ ಈ ಕೊಳ್ಳುಬಾಕ ಸಂಸ್ಕೃತಿ – ಕಾರ್ಪೊರೇಟ್ ವ್ಯವಸ್ಥೆ, ಜನರ ದುರಾಸೆಯ ಪ್ರವೃತ್ತಿ, ಸುಲಭವಾಗಿ ಹಣ ಮಾಡಬೇಕು ಎಂಬ ಮನೋಭಾವ ಎಲ್ಲವೂ ಇರುವಾಗ ಅವರಿಗೆ ಇದೇ ಲಾಭದ ಮಾರ್ಗಗಳು. ಇದನ್ನು ಕೇವಲ ಹಣದ ದೃಷ್ಟಿಯಿಂದ ಮಾತ್ರ ನೋಡದೆ ವ್ಯವಸ್ಥೆಯ ಅಧಃಪತನದ ಹಾದಿಯಾಗಿ…
ಆರ್‌ಸಿಬಿ ಮಹಿಳಾ ತಂಡದಲ್ಲಿ ಕಮಾಲ್ ಮಾಡಿದ ಕಲಬುರಗಿ ಜಿಲ್ಲೆಯ ಬೆಡಗಿ – ಇಲಿಯಾಸ್ ಪಟೇಲ್, ಬಳಗಾನೂರಯಾದಗಿರಿ: ಕಲಬುರಗಿ ಜಿಲ್ಲೆಯ ಪ್ರತಿಭೆ ಶ್ರೇಯಾಂಕ ಪಾಟೀಲ್ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಮಿಂಚುವ ಮೂಲಕ ಕನ್ನಡಿಗರ ನೆಚ್ಚಿನ ಆಟಗಾರ್ತಿಯಾಗಿ ಹೊರಹೊಮ್ಮುತ್ತಿದ್ದಾರೆ.ಸದ್ಯ ದೇಶದಲ್ಲಿ ಮಹಿಳಾ ಐಪಿಎಲ್ ನದ್ದೇ ಹವಾ ನಡೆಯುತ್ತಿದೆ. ಅದರಲ್ಲೂ ಆರ್.ಸಿ.ಬಿ ಫೈನಲ್‌ಗೆ ಎಂಟ್ರಿ ಕೊಟ್ಟು ಇನ್ನಷ್ಟು ಕ್ರೇಜ್ ದ್ವಿಗುಣವಾಗಿದೆ. ಇದರ ಬೆನ್ನಲೇ ಕಲಬುರಗಿಯ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಕೊಡುವ ವಿಚಾರವೊಂದು ತಿಳಿದು ಎಲ್ಲರಲ್ಲೂ ಸಂತಸ ಮೂಡಿದೆ.ಹೌದು, ಕಲ್ಯಾಣ ಕರ್ನಾಟಕದ ಕಲಬುರಗಿ ಜಿಲ್ಲೆಯ ಪ್ರತಿಭೆಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟು ಆಗೊಮ್ಮೆ ಈಗೊಮ್ಮೆ ಈ ಭಾಗದ ಹೆಸರನ್ನು ಹೆಸರು ಪ್ರಜ್ವಲಿಸುವಂತೆ ಮಾಡುತ್ತಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಟೀಮ್ ಇಂಡಿಯಾ ಮಹಿಳಾ ತಂಡವನ್ನು ಪ್ರತಿನಿಧಿರುವ ಆಲ್‌ರೌಂಡರ್ ಆಟಗಾರ್ತಿ, ಕನ್ನಡತಿ ಶ್ರೀಯಾಂಕ ಪಾಟೀಲ್ ಅವರ ಮೂಲ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಕೋಳಕೂರು ಗ್ರಾಮ ಎನ್ನುವುದು ಜಿಲ್ಲೆಯಲ್ಲಿ ಭಾರಿ ಸದ್ದು ಮಾಡುತ್ತಿದೆ.ಅವರ ತಾತ ಅಮೃತಗೌಡ ಹಾಗೂ ತಂದೆ ರಾಜೇಶ್…
ವಿಜಯಪುರ: ಇತ್ತೀಚೆಗೆ ಸರಕಾರದಿಂದ ಜಿಲ್ಲಾ ಮಟ್ಟದ ಕೆಡಿಪಿ ಸದಸ್ಯರಾಗಿ ನೇಮಕಗೊಂಡ ಶಿವಣ್ಣ ಕೋಟಾರಗಸ್ತಿ ಅವರನ್ನು ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ಸನ್ಮಾನಿಸಿ ಅಭಿನಂದಿಸಲಾಯಿತು.ಶಾಸಕ ಅಶೋಕ ಮನಗೂಳಿ ಅವರ ಶಿಫಾರಸಿನ ಮೇರೆಗೆ ವಿಜಯಪುರ ಜಿಲ್ಲಾ ಮಟ್ಟದ ತ್ರೈಮಾಸಿಕ ಪರಶೀಲನಾ ಕೆಡಿಪಿ ಸಮಿತಿಗೆ ಅಧಿಕಾರೇತರ ಸದಸ್ಯರಾಗಿ ನೇಮಕರಾದ ಶಿವಣ್ಣ ಕೋಟಾರಗಸ್ತಿ ಅವರನ್ನು ಗೋಲಗೇರಿ ಗ್ರಾಮದಲ್ಲಿ ತಳವಾರ ಸಮಾಜದ ವತಿಯಿಂದ ಸನ್ಮಾನಿಸಲಾಯಿತುಈ ಸಂದರ್ಭದಲ್ಲಿ ತಳವಾರ ಸಮಾಜದ ಮುಖಂಡರಾದ ಹಿರಿಯ ಕಲಾವಿದ ಕಲ್ಯಾಣಿ ಯಂಕಂಚಿ, ಮಡಿವಾಳ ನಾಯ್ಕೋಡಿ, ಶಿವಶಂಕರ ಪೂಜಾರಿ, ಕಲಾವಿದ ಸಂಜೀವಕುಮಾರ ಯಂಕಂಚಿ ಇದ್ದರು.
“ವಿದ್ಯಾರ್ಥಿ ನಿಧಿ” ಮಕ್ಕಳ ಕಥೆ ಅದೊಂದು ಸರೋವರ . ಸರೋವರದಲ್ಲಿ ಹಲವು ವಿಧವಾದ ಕಪ್ಪೆಗಳಿದ್ದವು. ಆ ಕಪ್ಪೆಗಳಲ್ಲಿ ಹಲವಾರು ಗುಂಪುಗಳಿದ್ದವು. ಅವುಗಳ ನಡುವೆ ಪ್ರತಿ ದಿನ ಸಣ್ಣ ಪುಟ್ಟ ಗಲಾಟೆಗಳು ಕಿರಿಕಿರಿಗಳು ಆಗುತ್ತಿದ್ದರೂ ಅವೆಲ್ಲ ಒಂದೇ ಗುಂಪಿನೊಳಗೆ ಅನುಸರಿಸಿಕೊಂಡು ಹೋಗುತ್ತಿದ್ದವು.ಅದೊಂದು ದಿನ ಆ ಕೊಳಕ್ಕೆ ಒಂದು ಹಾವು ಬಂದು ಸೇರಿಕೊಂಡಿತು. ಒಂದು ಗುಂಪಿನ ಕಪ್ಪೆಗಳು ಹಾವಿನ ಜತೆ ಸೇರಿಕೊಂಡು ಅದರ ಸ್ನೇಹ ಬೆಳೆಸಿದವು. ಉಳಿದ ಗುಂಪುಗಳ ಕಪ್ಪೆಗಳ ವಿಚಾರವನ್ನು ಹಾವಿಗೆ ತಿಳಿಸಕೊಡತೊಡಗಿತು. ಕಪ್ಪೆಗಳ ವಾಸಸ್ಥಾನ ಕಪ್ಪೆಗಳು ರಕ್ಷಣೆ ವಿಧಾನ ಹೀಗೆ ಕಪ್ಪೆಗಳ ಎಲ್ಲ ವಿಚಾರಗಳನ್ನು ಹಾವಿಗೆ ವರದಿ ಮಾಡತೊಡಗಿದ್ದು ಹೀಗಾಗಿ ಹಾವಿಗೆ ಅನಾಯಾಸವಾಗಿ ಕಪ್ಪೆ ಸಿಗತೊಡಗಿತು. ವಿರೋಧಿ ಬಣದ ಕಪ್ಪೆಗಳನ್ನು ತಿನ್ನುತ್ತಾ ಹಾವು ಕಾಲಕಳೆಯ ತೊಡಗಿತ್ತು. ಹಾಗೆ ಕಾಲಕ್ರಮೇಣ ವಿರೋಧಿ ಬಣದ ಕಪ್ಪೆಗಳೆಲ್ಲವೂ ಖಾಲಿಯಾದಾಗ ಹಾವು ತನ್ನ ಸ್ನೇಹಿತ ಬಣದ ಕಪ್ಪೆಗಳನ್ನು ತಿನ್ನತೊಡಗಿತು. ಎಷ್ಟೇ ಆದರೂ ಹಾವು ತನ್ನ ಮೂಲ ಗುಣವನ್ನು ಬಿಟ್ಟಿತೇ .. ಪ್ರಸ್ತುತ ಸನ್ನಿವೇಶವೂ ಹೀಗೆ. ನಮ್ಮ ಧರ್ಮದ…
’ಕೆಫೆ ಸ್ಪೋಟದ ಹಿಂದೆ ತಮಿಳರು’ ಹೇಳಿಕೆ | ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘನೆ | ಡಿಎಂಕೆ ದೂರು ತಮಿಳರ ವಿರುದ್ದ ದ್ವೇಷಪೂರಿತ ಹೇಳಿಕೆ ನೀಡಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವಂತೆ ರಾಜ್ಯ ಚುನಾವಣಾ ಆಯೋಗಕ್ಕೆ ಕೇಂದ್ರ ಚುನಾವಣಾ ಆಯೋಗ ಸೂಚಿಸಿದೆ.ತಮಿಳರ ವಿರುದ್ದ ದ್ವೇಷ ಭಾಷಣ ಮಾಡುವ ಮೂಲಕ ಶೋಭಾ ಕರಂದ್ಲಾಜೆ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ತಮಿಳುನಾಡಿನ ಆಡಳಿತರೂಢ ದ್ರಾವಿಡ ಮುನ್ನೇತ್ರ ಕಳಗಂ(ಡಿಎಂಕೆ) ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್.ಎಸ್ ಭಾರತಿ ಅವರು ಬುಧವಾರ (ಮಾ.20) ಚುನಾವಣಾ ಆಯೋಗಕ್ಕೆ ದೂರು ನೀಡಿದ್ದರು.ಈ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿರುವ ಕೇಂದ್ರ ಚುನಾವಣಾ ಆಯೋಗ, ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಪಟ್ಟಂತೆ ಶೋಭಾ ಕರಂದ್ಲಾಜೆ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಮತ್ತು 48 ಗಂಟೆಗಳ ಒಳಗೆ ವರದಿ ನೀಡಬೇಕು ಎಂದು ಆದೇಶಿಸಿದೆ.ಮಂಗಳವಾರ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯೊಂದರ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಶೋಭಾ ಕರಂದ್ಲಾಜೆ, “ತರಬೇತಿ ಪಡೆದು…
ಇಂಡಿ: ಪರಿಸರ ಹಾಗೂ ಪಕ್ಷಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಇಂದು ಪ್ರಕೃತಿಯ ಅಸಮತೋಲನ, ಮಾನವ ನಿರ್ಮಿತ ಕೆಲವು ತಪ್ಪುಗಳಿಂದ ಪಕ್ಷಿ ಸಂಕುಲ ನಾಶದ ಅಂಚಿನಲ್ಲಿದೆ. ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳು ನೀರಿಲ್ಲದೆ ಕಂಗೆಡುವ ಸ್ಥಿತಿ ಇದ್ದು, ಅವುಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.ಬುಧವಾರ ತಾಲೂಕಿನ ಹಿರೇರೂಗಿ ಗ್ರಾಮದ ಯುಬಿಎಸ್ ಶಾಲೆಯಲ್ಲಿ ವಿಶ್ವ ಗುಬ್ಬಚ್ಚಿ ದಿನದ ಪ್ರಯುಕ್ತ ಪಕ್ಷಿ ಸಂಕುಲ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತ ಸಂವಾದ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.ಗುಬ್ಬಿಗಳು ಮಾನವರ ನಿಕಟ ಸಂಬಂಧಿ. ಅವುಗಳ ಉಳಿವಿಗಾಗಿ ಮನೆಯ ಸುತ್ತಮುತ್ತ ಮರಗಳನ್ನು ಬೆಳೆಸಿ, ಸಾರ್ವಜನಿಕ ಸ್ಥಳಗಳಲ್ಲಿ ಬೆಳೆದಿರುವ ಗಿಡಗಳ ರೆಂಬೆಗಳಿಗೆ ಮತ್ತು ಮೇಲ್ಛಾವಣಿ ಮೇಲೆ ನೀರು ತುಂಬಿದ ತಟ್ಟೆಗಳನ್ನು ಇಟ್ಟು ಪಕ್ಷಿ ಸಂಕುಲದ ಸಂರಕ್ಷಣೆಗೆ ಇಂದಿನ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ತಿಳಿಸಿದರು.ಶಿಕ್ಷಕ ಎಸ್.ಎಸ್. ಅರಬ ಮಾತನಾಡಿ, ಮನುಷ್ಯನ ಜೀವನ ಪ್ರಕೃತಿಯಲ್ಲಿಯೇ ಅಡಗಿದೆ. ಆದರೆ, ನಾವಿಂದು ಅಭಿವೃದ್ಧಿಯ ನೆಪದಲ್ಲಿ ಮರಗಿಡಗಳನ್ನು ಕಡಿದು, ಪ್ರಕೃತಿ ವಿನಾಶ ಮಾಡುತ್ತಿದ್ದೇವೆ. ಇಂದಿನ ಮಕ್ಕಳಲ್ಲಿ…
ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸಲು ಆಗ್ರಹಿಸಿ ಪ್ರತಿಭಟನೆ ಇಂಡಿ: ಬೀದಿ ನಾಯಿಗಳು ಕಚ್ಚಿ ಸಾವನಪ್ಪಿದ ಕುರಿಗಳ ಮಾಲೀಕರಿಗೆ ಪರಿಹಾರ ನೀಡಬೇಕು. ಬೀದಿ ನಾಯಿಗಳನ್ನು ಬೇರೆಡೆಗೆ ಸಾಗಿಸಬೇಕು ಎಂದು ಆಗ್ರಹಿಸಿ, ಬುಧವಾರ ಪುರಸಭೆ ವ್ಯಾಪ್ತಿಯಲ್ಲಿ ಬರುವ ಚವಡಿಹಾಳ ರಸ್ತೆಯಲ್ಲಿರುವ ವಸತಿ ಪ್ರದೇಶದ ಸಾರ್ವಜನಿಕರು ಯುವ ಮುಖಂಡ ಪ್ರಶಾಂತ ಲಾಳಸಂಗಿ ನೇತೃತ್ವದಲ್ಲಿ ಪಟ್ಟಣದ ಪುರಸಭೆಯ ಮುಂದೆ ನಾಯಿಗಳು ಕಚ್ಚಿ ಸಾವನಪ್ಪಿದ ಕುರಿಗಳನ್ನು ಪುರಸಭೆ ಆವರಣದ ಮುಂದೆ ಇಟ್ಟು ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಯುವ ಮುಖಂಡ ಪ್ರಶಾಂತ ಲಾಳಸಂಗಿ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ, ಬಿಜೆಪಿ ಮುಖಂಡ ಅಶೋಕ ಅಕಲಾದಿ, ಪುರಸಭೆಯ ಘನತ್ಯಾಜ್ಯ ವಸ್ತುಗಳ ಸಂಗ್ರಹದ ಸುತ್ತಮುತ್ತಲು ಇರುವ ಜನವಸತಿ ಪ್ರದೇಶಗಳಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಕಳೆದ ವಾರ ಬೀದಿ ನಾಯಿಗಳು ಕಚ್ಚಿ ೫ ರಿಂದ ೬ ಕುರಿಗಳು ಮೃತಪಟ್ಟಿವೆ. ಮಂಗಳವಾರ ಸಂಜೆ ಮತ್ತೆ ಎರಡು ಕುರಿಗಳಿಗೆ ಬೀದಿನಾಯಿಗಳು ಕಚ್ಚಿದ್ದರಿಂದ ಸಾವನಪ್ಪಿವೆ. ಬೀದಿ ನಾಯಿಗಳಿಂದ ಸಾರ್ವಜನಿಕರು ಭಯ ಭೀತರಾಗಿದ್ದಾರೆ. ಕೂಡಲೇ ಬೀದಿ ನಾಯಿಗಳು…
ಬಸವನಬಾಗೇವಾಡಿ: ತಾಲೂಕಿನ ಹುಣಶ್ಯಾಳ ಪಿಬಿ ಗ್ರಾಮದ ಹಿರೇಮಠದಲ್ಲಿ ಐದನೇ ವರ್ಷದ ನವರಾತ್ರಿ ಉತ್ಸವ ಆಚರಣೆ ಹಿನ್ನೆಲೆಯಲ್ಲಿ ಸದೃಢ ಸಮಾಜ ನಿರ್ಮಾಣಕ್ಕಾಗಿ ಮಾ.23 ರಿಂದ ನವರಾತ್ರಿ ಉತ್ಸವದ ವರೆಗೆ ತಾಲೂಕಿನಲ್ಲಿ ಜನಜಾಗೃತಿ ಸೇವಾ ಯಾತ್ರೆ ಹಮ್ಮಿಕೊಳ್ಳಲಾಗಿದೆ.ತಾಲೂಕಿನ ನಾಗೂರ, ಇವಣಗಿ, ಟಕ್ಕಳಕಿ, ಹಂಗರಗಿ, ಕೊಡಗಾನೂರ, ಕಾನ್ನಾಳ ಸೇರಿದಂತೆ 30 ಗ್ರಾಮಗಳಲ್ಲಿ ಜನಜಾಗೃತಿ ಸೇವಾ ಯಾತ್ರೆ ನಡೆಯಲಿದೆ. ಪ್ರತಿ ಗ್ರಾಮದಲ್ಲಿ ಐದು ದಿನಗಳವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.ಯಾತ್ರೆ ತೆರಳುವ ಗ್ರಾಮದಲ್ಲಿ ಬೆಳಗ್ಗೆ ಪ್ರತಿ ಮನೆಗಳಿಗೆ ತೆರಳಿ “ದುಶ್ಚಟಗಳ ಭಿಕ್ಷೆ ಸದ್ಗುಣಗಳ ಧೀಕ್ಷೆ” ಸಂದೇಶದೊಂದಿಗೆ ಸದ್ಬಾವನಾ ಯಾತ್ರೆ ಕೈಗೊಂಡು ಮನೆಯ ಎಲ್ಲ ಸದಸ್ಯರಿಗೆ ರುದ್ರಾಕ್ಷಿ ಧಾರಣೆ ಮಾಡಲಾಗುವುದು. ಸಮಾಜ ಸೇವಾ ಕಾರ್ಯಕರ್ತರೊಂದಿಗೆ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಲಿದೆ. ಗಿಡ ನೆಡಿ, ಮರ ಬೆಳೆಸಿ, ಪರಿಸರ ಉಳಿಸಿ ಅಭಿಯಾನದ ಮೂಲಕ ಪರಿಸರದ ಮಹತ್ವ ತಿಳಿಸಿಕೊಡಲಾಗುವುದು. ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯುವುದು. ಪ್ರತಿದಿನ ಸಂಜೆ ಶ್ರೇಷ್ಠ ಗವಾಯಿಗಳಿಂದ ಸಂಗೀತ ಗಾಯನ ಕಾರ್ಯಕ್ರಮ ಹಾಗೂ ಶಿವಪ್ರಸಾದ ದೇವರಿಂದ ಶಿವಶರಣರ ಜೀವನ…
ಕಲ್ಲಂಗಡಿ ಹಣ್ಣಿನ ಬೆಲೆಯಲ್ಲಿ ಹೆಚ್ಚಳ | ಎಲ್ಲೆಡೆ ತಲೆಎತ್ತಿರುವ ಲಸ್ಸಿ, ಶರಬತ್ತು, ಜ್ಯೂಸ್ & ಎಳೆನೀರು ಅಂಗಡಿಗಳು – ಬಸವರಾಜ ನಂದಿಹಾಳಬಸವನಬಾಗೇವಾಡಿ: ದೇಶದಲ್ಲಿ ಲೋಕಸಭೆ ಚುನಾವಣೆ ಕಾವು ದಿನದಿಂದ ದಿನಕ್ಕೆ ಕಾವು ಏರುತ್ತಿದ್ದರೆ ಇನ್ನೊಂದೆಡೆ ಬೇಸಿಗೆ ಬಿಸಿಲಿನ ಪ್ರಖರತೆಯಿಂದಾಗಿ ಜನರು ತಂಪು ಪಾನೀಯ ಕಡೆಗೆ ಹೋಗುತ್ತಿರುವುದು ಕಂಡುಬರುತ್ತಿದೆ. ಬಸವನಬಾಗೇವಾಡಿ ಪಟ್ಟಣದಲ್ಲಿ ಬುಧವಾರ ೩೩ ಡಿಗ್ರಿ ಸೆಲ್ಸಿಯಸ್ ಬಿಸಿಲು ಇತ್ತು.ಶಿವರಾತ್ರಿ ಅಮವಾಸ್ಯೆ ಕಳೆದ ನಂತರ ಬಿಸಿಲು ಆರಂಭವಾಗುತ್ತದೆ. ಇನ್ನೂ ಏಪ್ರೀಲ್ ತಿಂಗಳು ಬಂದಿಲ್ಲ. ಈಗ ಬಿಸಿಲಿನ ಪ್ರಖರತೆ ಜೋರಾಗಿದೆ. ಏಪ್ರೀಲ್-ಮೇ ತಿಂಗಳಲ್ಲಿ ಬಿಸಿಲಿನ ಪ್ರಖರತೆ ಇನ್ನೂ ಹೆಚ್ಚಾಗುತ್ತದೆ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. ಈ ವರ್ಷ ಮುಂಗಾರು-ಹಿಂಗಾರು ಮಳೆ ಪ್ರಮಾಣ ಕಡಿಮೆಯಾಗಿದೆ. ಈಗಾಗಲೇ ಬಿರು ಬಿಸಿಲಿನಿಂದ ಕೆರೆ-ಕಟ್ಟೆಗಳು ಖಾಲಿಯಾಗಿ ಹೋಗಿರುತ್ತಿದ್ದವು. ಆದರೆ ಅಖಂಡ ತಾಲೂಕಿನಲ್ಲಿ ಕಾಲುವೆ ಮೂಲಕ ನೀರು ಬಿಟ್ಟಿದ್ದರಿಂದಾಗಿ ಕೆರೆಯಲ್ಲಿ ನೀರು ಕಾಣುತ್ತಿವೆ. ಇದೇ ರೀತಿಯಲ್ಲಿ ಬಿರು ಬಿಸಿಲು ಮುಂದುವರಿದರೆ ಮುಂಬರುವ ದಿನಗಳಲ್ಲಿ ಈ ನೀರು ಖಾಲಿಯಾಗುವ ಸಾಧ್ಯತೆ. ಈ ಸಲ ಸಾಮಾನ್ಯಕ್ಕಿಂತಲೂ…
