“ವಿದ್ಯಾರ್ಥಿ ನಿಧಿ” ಮಕ್ಕಳ ಕಥೆ
ಅದೊಂದು ಸರೋವರ . ಸರೋವರದಲ್ಲಿ ಹಲವು ವಿಧವಾದ ಕಪ್ಪೆಗಳಿದ್ದವು. ಆ ಕಪ್ಪೆಗಳಲ್ಲಿ ಹಲವಾರು ಗುಂಪುಗಳಿದ್ದವು. ಅವುಗಳ ನಡುವೆ ಪ್ರತಿ ದಿನ ಸಣ್ಣ ಪುಟ್ಟ ಗಲಾಟೆಗಳು ಕಿರಿಕಿರಿಗಳು ಆಗುತ್ತಿದ್ದರೂ ಅವೆಲ್ಲ ಒಂದೇ ಗುಂಪಿನೊಳಗೆ ಅನುಸರಿಸಿಕೊಂಡು ಹೋಗುತ್ತಿದ್ದವು.
ಅದೊಂದು ದಿನ ಆ ಕೊಳಕ್ಕೆ ಒಂದು ಹಾವು ಬಂದು ಸೇರಿಕೊಂಡಿತು. ಒಂದು ಗುಂಪಿನ ಕಪ್ಪೆಗಳು ಹಾವಿನ ಜತೆ ಸೇರಿಕೊಂಡು ಅದರ ಸ್ನೇಹ ಬೆಳೆಸಿದವು. ಉಳಿದ ಗುಂಪುಗಳ ಕಪ್ಪೆಗಳ ವಿಚಾರವನ್ನು ಹಾವಿಗೆ ತಿಳಿಸಕೊಡತೊಡಗಿತು. ಕಪ್ಪೆಗಳ ವಾಸಸ್ಥಾನ ಕಪ್ಪೆಗಳು ರಕ್ಷಣೆ ವಿಧಾನ ಹೀಗೆ ಕಪ್ಪೆಗಳ ಎಲ್ಲ ವಿಚಾರಗಳನ್ನು ಹಾವಿಗೆ ವರದಿ ಮಾಡತೊಡಗಿದ್ದು ಹೀಗಾಗಿ ಹಾವಿಗೆ ಅನಾಯಾಸವಾಗಿ ಕಪ್ಪೆ ಸಿಗತೊಡಗಿತು. ವಿರೋಧಿ ಬಣದ ಕಪ್ಪೆಗಳನ್ನು ತಿನ್ನುತ್ತಾ ಹಾವು ಕಾಲಕಳೆಯ ತೊಡಗಿತ್ತು. ಹಾಗೆ ಕಾಲಕ್ರಮೇಣ ವಿರೋಧಿ ಬಣದ ಕಪ್ಪೆಗಳೆಲ್ಲವೂ ಖಾಲಿಯಾದಾಗ ಹಾವು ತನ್ನ ಸ್ನೇಹಿತ ಬಣದ ಕಪ್ಪೆಗಳನ್ನು ತಿನ್ನತೊಡಗಿತು. ಎಷ್ಟೇ ಆದರೂ ಹಾವು ತನ್ನ ಮೂಲ ಗುಣವನ್ನು ಬಿಟ್ಟಿತೇ ..
ಪ್ರಸ್ತುತ ಸನ್ನಿವೇಶವೂ ಹೀಗೆ. ನಮ್ಮ ಧರ್ಮದ ಬಣ ಬಣಗಳು ವಿರೋಧಿ ಬಣದವರ ತಾಳಕ್ಕೆ ತಕ್ಕಂತೆ ಕುಣಿದು ನಮ್ಮ ಧರ್ಮದ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಹೀಗೆ ಬೇರೆ ಹೋದವರು ಒಂದು ದಿನ ಸರ್ವನಾಶವಾಗಿ ಹೋಗುತ್ತಾರೆನ್ನುವ ಸಾಮಾನ್ಯ ಜ್ಞಾನವೂ ಅವರಿಗಿಲ್ಲದೇ ಇತರರು ಹಾಕಿದ ತಾಳಕ್ಕೆ ಕುಣಿದು ತಾವು ನಾಶವಾಗಿ ತಮ್ಮ ಬಣದ ಇತರರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದ್ದಾರೆ .
– ಮಂಡ್ಯ ಮ.ನಾ.ಉಡುಪ