Author: editor.udayarashmi@gmail.com

ಸಿಂದಗಿ: ಹೋಳಿ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪಟ್ಟಣದ ಹಿರಿಯರು ನೋಡಿಕೊಳ್ಳಬೇಕು. ಹೋಳಿ ಹಬ್ಬದ ಸಮಯದಲ್ಲಿಯೇ ಪರೀಕ್ಷೆಗಳಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಬೇಕು ಎಂದು ಪಿಎಸ್‌ಐ ಭೀಮಪ್ಪ ರಬಕವಿ ಹೇಳಿದರು.ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಶನಿವಾರ ಸಾಯಂಕಾಲ ಹೋಳಿ ಹಬ್ಬ ಆಚರಣೆಯ ನಿಮಿತ್ಯವಾಗಿ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಸಂಪ್ರದಾಯಗಳಿಗೆ ಚ್ಯುತಿ ಬರದಂತೆ ಶಾಂತಿ ಸುವ್ಯವಸ್ಥೆಗಳನ್ನು ಕಾಯ್ದುಕೊಂಡು ಸಹಬಾಳ್ವೆಯಿಂದ ಹಬ್ಬಗಳನ್ನು ಯುವಕರು ಪ್ರತಿ ವರ್ಷದಂತೆ ಶಾಂತ ರೀತಿಯಿಂದ ಆಚರಣೆ ಮಾಡಬೇಕು.ಈ ವೇಳೆ ಅಪರಾಧ ವಿಭಾಗ ಪಿಎಸ್‌ಐ ಎ.ಬಿ.ಅಂಗಡಿ ಮಾತನಾಡಿ, ಶಾಂತಿ ಸುವ್ಯವಸ್ಥೆ ಕಾಪುಡುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಆಸಕ್ತಿಯಿಲ್ಲದವರಿಗೆ ಬಣ್ಣ ಹಾಕಬೇಡಿ. ಈ ರೀತಿಯ ಘಟನೆ ನಡೆದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.ಈ ವೇಳೆ ಪೊಲೀಸ್ ಸಿಬ್ಬಂದಿಗಳಾದ ಪರಶುರಾಮ ಹಂಡರಗಲ್, ಸಿದ್ದಪ್ಪ ಕೋರೆ, ಗೊಲ್ಲಾಳ ಇಜೇರಿ, ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ, ರಾಕೇಶ ಕಾಂಬಳೆ, ಇರ್ಫಾನ್ ಭಾಗವಾನ್, ರವಿ ನಾಟೀಕಾರ, ಸಂತೋಷ ನಾಟೀಕಾರ, ಭೀಮು ಕೂಚಬಾಳ, ವಿಠ್ಠಲ…

Read More

ಮುದ್ದೇಬಿಹಾಳ: ಇಲ್ಲಿನ ನ್ಯಾಯಾಲಯದ ಹಿರಿಯ ಶ್ರೇಣಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ಅಧಿಕಾರ ವಹಿಸಿದ ನಾಗರಾಜ ಪೂಜಾರ್ ಅವರನ್ನು ನ್ಯಾಯಾಲಯದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.ಈ ವೇಳೆ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶೆ ಲಕ್ಷ್ಮೀ ನಿಂಗಪ್ಪ ಗರಗ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ಅಪರ ಸರ್ಕಾರಿ ವಕೀಲ ಎಚ್.ಎಲ್.ಸರೂರ ಸೇರಿದಂತೆ ನ್ಯಾಯವಾದಿಗಳು, ನ್ಯಾಯಾಲಯದ ಸಿಬ್ಬಂದಿ ಇದ್ದರು.

Read More

ನಿವಾಳಖೇಡ, ಮುಳಸಾವಳಗಿ ಗ್ರಾಮಗಳ ರೈತರು | ಕಾಲುವೆಯ ಮೇಲೆ ನಿಂತು ಒತ್ತಾಯ | ಚುನಾವಣೆ ಬಹಿಷ್ಕರಿಸುವ ಎಚ್ಚರಿಕೆ ದೇವರಹಿಪ್ಪರಗಿ: ಜನತೆ ಹಾಗೂ ಜಾನುವಾರುಗಳ ಕುಡಿಯುವ ನೀರಿನ ಅನುಕೂಲಕ್ಕಾಗಿ ಚಿಮ್ಮಲಗಿ ಮುಖ್ಯಕಾಲುವೆಯ ನಾಗಠಾಣ ಉಪಕಾಲುವೆಗೆ ಕನಿಷ್ಠ ಹತ್ತು ದಿನಗಳ ಕಾಲ ನೀರು ಹರಿಸಬೇಕೆಂದು ಒತ್ತಾಯಿಸಿ ರೈತರು, ಗ್ರಾಮಸ್ಥರು ಕಾಲುವೆಯ ಮೇಲೆ ನಿಂತು ಸರಕಾರವನ್ನು ಆಗ್ರಹಿಸಿದ್ದಾರೆ.ತಾಲ್ಲೂಕಿನ ಗಂಗನಳ್ಳಿ ಗ್ರಾಮದವರೆಗೆ ನೀರು ಸಂಪರ್ಕಿಸುವ ನಾಗಠಾಣ ಉಪಕಾಲುವೆಯಲ್ಲಿ ಕೇವಲ ಮೂರು ದಿನ ನೀರು ಹರಿದು ಈಗ ಭಣಗುಡುತ್ತಿದೆ. ಜೊತೆಗೆ ಬೇಸಿಗೆ ಬಿಸಿಲು ಬೆಂಬತ್ತಿ ಕಾಡುತ್ತಿದೆ. ಕಾಲುವೆಯ ನೀರಿನ ಮೇಲೆ ಅವಲಂಬಿತವಾದ ಜನತೆ ಹಾಗೂ ಜಾನುವಾರು ನೀರಿಗಾಗಿ ಪರಿತಪ್ಪಿಸುವಂತಾಗಿದೆ.ಈ ಬಗ್ಗೆ ರೈತಪ್ರಮುಖರಾದ ಚನ್ನಪ್ಪ ಕಾರಜೋಳ ಹಾಗೂ ಬಸವರಾಜ ಕಲ್ಲೂರ ಮಾತನಾಡಿ, ನಮ್ಮ ಭಾಗದ ಚಿಮ್ಮಲಗಿ ಏತ ನೀರಾವರಿಯ ನಾಗಠಾಣ ಉಪಕಾಲುವೆಗೆ ಕನಿಷ್ಟ ೧೫ ದಿನವಾದರೂ ನೀರು ಹರಿಸಬೇಕಾಗಿತ್ತು. ಆದರೆ ಕೇವಲ ೩ ದಿನ ಹರಿಸಿ ನಂತರ ನೀರು ನಿಲ್ಲಿಸಿಬಿಟ್ಟರು. ಇದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಆದರೆ ಅದೇ ಮುಳವಾಡ ಕಾಲುವೆಯಲ್ಲಿ…

Read More

ಬ್ರಹ್ಮದೇವನಮಡು: ಕನಾ೯ಟಕ ಸಕಾ೯ರದ ಆರಾಧನಾ ಯೋಜನೆಯ ಅನುಷ್ಠಾನಕ್ಕಾಗಿ ಆರಾಧನಾ ಸಮಿತಿಗೆ ಅಧಿಕಾರೇತರ ಸದಸ್ಶರನ್ನಾಗಿ ಸಿಂದಗಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಹಣಮಂತ ಯಂಟಮಾನ ಅವರನ್ನು ಸಕಾ೯ರ ನಾಮನಿದೇ೯ಶನಗೊಳಿಸಿ ಆದೇಶ ಹೊರಡಿಸಿದೆ ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.

Read More

ಇಂಡಿ: ಸಮಾಜದಲ್ಲಿ ಸ್ವಾಸ್ತ್ಯ ಕಾಪಾಡುವದು ಎಲ್ಲರ ಕರ್ತವ್ಯ. ಸಂತೋಷ ಹಂಚಿಕೊಳ್ಳಲಿಕ್ಕೆ ಶಾಂತಿ ಸಾರಲಿಕ್ಕೆ ಹಬ್ಬಗಳು ಆಚರಿಸುತ್ತೇವೆ ಎಂದು ಡಿ.ವೈ.ಎಸ್.ಪಿ ಎಚ್.ಎಸ್.ಜಗದೀಶ ಹೇಳಿದರು.ಪಟ್ಟಣದ ಡಿಎಎಸ್‌ಪಿ ಕಚೇರಿಯ ಸಬಾಭವನದಲ್ಲಿ ನಡೆದ ಹೋಳಿ ಮತ್ತು ರಮಜಾನ ಪ್ರಯಕ್ತ ಶಾಂತಿ ಸಭೆಯಲ್ಲಿ ಮಾತನಾಡಿದರು.ಪಟ್ಟಣದ ಪೋಲಿಸ್ ಠಾಣಾ ಸಿಪಿಐ ರತನಕುಮಾರ ಜಿರಗಿಹಾಳ ಮಾತನಾಡಿ ಚುನಾವಣೆ ನಿಮಿತ್ಯ ನೀತಿ ಸಂಹಿತೆ ಜಾರಿಗೆಯಲ್ಲಿ ಇರುವದರಿಂದ ರಾಜಕೀಯ ಧುರೀಣರ ಬ್ಯಾರ‍್ಸ, ಬಂಟಿಗ್ಸ ಮತ್ತು ಪ್ಲಕ್ಸ ಅಳವಡಿಸಬಾರದು. ಹಚ್ಚಿದರೆ ಕ್ಷಣಾರ್ಧದಲ್ಲೇ ತೆರವುಗೊಳಿಸಲಾಗುವದು ಎಂದರು.ಭೀಮಾಶಂಕರ ಸಕ್ಕರೆ ಕಾರ್ಖಾನೆ ನಿರ್ದೇಶಕ ಜಟ್ಟೆಪ್ಪ ರವಳಿ, ಪುರಸಭೆ ಸದಸ್ಯರಾದ ಅನೀಲಗೌಡ ಬಿರಾದಾರ, ಭೀಮನಗೌಡ ಪಾಟೀಲ, ಅಯೂಬ ನಾಟಿಕಾರ, ರೈಸ್ ಅಷ್ಟೇಕರ ಮಾತನಾಡಿ ಹಿಂದು ಮುಸ್ಲಿಂ ಬಾಂಧವರು ಒಗ್ಗಟ್ಟಿನಿಂದ ಹಬ್ಬ ಆಚರಿಸುತ್ತ ಬಂದಿದ್ದಾರೆ. ಯಾವದೇ ಸಮಸ್ಯೆ ಎಂದೂ ಉದ್ಭವಿಸಿಲ್ಲ. ರಂಗಪಂಚಮಿ ಎಂದು ಇದೆ ಡಂಗುರ ಸಾರಲಾಗುವದು. ೨೪ ರಂದು ಕಾಮದಹನ ಇದೆ. ಇಂಡಿಯಲ್ಲಿ ಸುಮಾರು ೫೦ ಕಡೆ ಕಾಮದಹನ ಮಾಡುತ್ತಾರೆ. ಅಣ್ಣ ತಮ್ಮಂದಿರಂತೆ ಮುಸ್ಲಿಂ ಬಾಂಧವರು ಸಹಕರಿಸುತ್ತಾರೆ ಎಂದರು.ಸಭೆಯಲ್ಲಿ ಪುರಸಭೆ ಮಾಜಿ…

Read More

ಇಂಡಿ: ವಿಶ್ವ ಬಂಧುತ್ವವನ್ನು ಸಾರಿದ ಶ್ರೀ ರೇಣುಕಾಚಾರ್ಯರರು ಭೋದಿಸಿದ ಮಾನವೀಯತೆಯ ಧರ್ಮದ ಸೂತ್ರಗಳು ಸರ್ವಕಾಲಕ್ಕೂ ಸರ್ವರಿಗೂ ಅರ್ಥಪೂರ್ಣವಾಗಿ ಬದುಕುವ ದಾರಿ ತೋರಿಸಿವೆ ಎಂದು ಶಿರಸ್ತೆದಾರ ಎಸ್.ಆರ್.ಮುಜಗೊಂಡ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದಲ್ಲಿ ಜಗದ್ಗುರು ರೇಣುಕಾಚಾರ್ಯರರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಗದ್ಗುರು ರೇಣುಕಾಚಾರ್ಯರರು ವೀರಶೈವ ಧರ್ಮವನ್ನು ಸಂಸ್ಥಾಪಿಸಿದರು. ಅವರು ಸಮಾಜದ ಬದಲಾವಣೆಗೆ ಸಂದೇಶಗಳನ್ನು ನೀಡಿದ್ದಾರೆ. ಅವರ ಸಂದೇಶ ಪಾಲಿಸುತ್ತ ಸಮಾಜದಲ್ಲಿ ಮೇಲು ಕೀಳು ಎನ್ನದೆ ಸಮಾನತೆಯಿಂದ ಬದುಕಬೇಕು ಎಂದರು.ಎಚ್.ಎಚ್.ಗುನ್ನಾಪುರ, ರೇಷ್ಮೆ ಇಲಾಖೆಯ ಅಶೋಕ ತೇಲಿ, ಎಂ.ಪಿ.ಕೊಡತೆ, ಇಂಡಿ ಗ್ರಾಮಲೆಕ್ಕಾಧಿಕಾರಿ ಪಿ.ಎಸ್.ಚವಡಿಹಾಳ, ಸಂಕೇತ ಪಾಟೀಲ, ಶೈಲಜಾ ಒಡೆಯರ, ಉಮಾ ಕಟ್ಟಿಮನಿ ಮತ್ತಿತರಿದ್ದರು.

Read More

ಇಂಡಿ: ತಾಲೂಕಿನ ೩೬ ಗ್ರಾಮಗಳ ೭೩೫ ವಸ್ತಿ ಪ್ರದೇಶಗಳು ಮತ್ತು ೩೪ ತಾಂಡಾಗಳಿಗೆ ೯೩ ಟ್ಯಾಂಕರಗಳ ಮೂಲಕ ೨೨೬ ಟ್ರೀಪ್ ನೀರನ್ನು ಪೂರೈಸಲಾಗುತ್ತಿದೆ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ಹೇಳಿದರು.ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ ಕಚೇರಿಯ ಸಭಾಭವನದಲ್ಲಿ ಪಿಡಿಒ, ಗ್ರಾಮ ಆಡಳಿತ ಅಧಿಕಾರಿ ಮತ್ತು ತಾಲೂಕಾ ಮಟ್ಟದ ಎಲ್ಲ ಇಲಾಖೆಯ ಅಧಿಕಾರಿಗಳು ಮತ್ತು ನೋಡಲ್ ಅಧಿಕಾರಿಗಳ ಕುಡಿಯುವ ನೀರಿನ ಕುರಿತು ನಡೆದ ಟಾಸ್ಕ ಫೋರ್ಸ ಸಭೆಯಲ್ಲಿ ಮಾತನಾಡುತ್ತಿದ್ದರು.ಈಗಾಗಲೇ ತಾಲೂಕಿನ ಹರಿಯುವ ಕೃಷ್ಣಾ ಕಾಲುವೆಯಿಂದ ಎಲ್ಲ ಕೆರೆಗಳನ್ನು ಮತ್ತು ಹಳ್ಳ ಗಳಲ್ಲಿ ನೀರು ತುಂಬಿದ್ದು ಬಹು ಹಳ್ಳಿ ಕುಡಿಯುವ ನೀರಿನ ಯೋಜನೆ ಅಡಿ ಎಲ್ಲ ಗ್ರಾಮಗಳಲ್ಲಿ ಪೂರೈಸಲಾಗುತ್ತಿದೆ. ಹೀಗಾಗಿ ಮುಂದಿನ ಒಂದು ತಿಂಗಳು ಕುಡಿಯುವ ನೀರಿನ ತೊಂದರೆಯಾಗುವದಿಲ್ಲ ಎಂದರು.ಅದಲ್ಲದೆ ಇನ್ನು ಅನೇಕ ವಸ್ತಿ ಪ್ರದೇಶಗಳಲ್ಲಿ ಟ್ಯಾಂಕರ ಮೂಲಕ ನೀರು ಪೂರೈಸಲು ಕೇಳಿಕೊಂಡಿದ್ದು ಸಧ್ಯದಲ್ಲಿಯೇ ಟ್ಯಾಂಕರ ಮೂಲಕ ನೀರು ಪೂರೈಸಲಾಗುವದು ಎಂದರು.ನೀರಿನ ಕುರಿತು ತಾಲೂಕಾ ಮಟ್ಟದ ಅಧಿಕಾರಿಗಳು ವಾಚ್ ವಾರ್ಡ ಸರಿಯಾಗಿ ಕೆಲಸ…

Read More

ತಿಕೋಟಾ: ವಿಶ್ವ ಶಾಂತಿಗಾಗಿ ಹಾಗೂ ವಿಶ್ವದ ಉದ್ದಾರಕ್ಕಾಗಿ ವೀರಶೈವ ಧರ್ಮ ಸ್ಥಾಪನೆಯಾಗಿದೆ ಎಂದು ಬಸವನ ಬಾಗೇವಾಡಿಯ ಪದ್ಮರಾಜ ಒಡೆಯರ ಸಂಸ್ಥಾನ ಹಿರೇಮಠದ ಷ.ಬ್ರ. ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ತಾಲ್ಲೂಕಿನ ಕನಮಡಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ವೀರಶೈವ ಧರ್ಮದ ಮೂಲ ಸಂಸ್ಥಾಪಕರು ರೇಣುಕಾಚಾರ್ಯ ಭಗವತ್ಪಾದಕರಾಗಿದ್ದಾರೆ. ಆದಿ ಜಗದ್ಗುರು ಶಂಕರಾಚಾರ್ಯರಿಗೆ ಚಂದ್ರಮೌಳಿ ಲಿಂಗ ಕೊಟ್ಟು ಆಶಿರ್ವಾದ ಮಾಡಿದವರು ಇವರೇ ಆಗಿದ್ದು, ಪ್ರತಿಯೊಬ್ಬರು ಮನೆಯಲ್ಲಿ ಅವರ ಭಾವಚಿತ್ರ ಇಟ್ಟು ಪೂಜಿಸಿ ನೆನಪಿಸಿಕೊಳ್ಳಬೇಕು ಎಂದರು.ಪ್ರವಚನಕಾರ ಬಾಬುರಾವ ಮಹಾರಾಜ ಮಾತನಾಡಿ ಆತ್ಮಸಾಕ್ಷಿಯಾಗಿ ಇದ್ದವರಿಗೆ, ತತ್ವಜ್ಞಾನಿಗೆ ತುತ್ತು ಅನ್ನ ನೀಡಿದವನಿಗೆ ಶಾಂತಿ ಆನಂದ ಸಿಗುತ್ತದೆ. ಎಲ್ಲರ ರೂಪದಲ್ಲಿ ಮಹಾನ ವ್ಯಕ್ತಿಗಳು ಇದ್ದಾರೆ.ವಿಜಯಕುಮಾರ ಸ್ವಾಮೀಜಿ ಮಾತನಾಡಿ ರೇಣುಕಾಚಾರ್ಯರ ಕೀರ್ತಿ, ವಿಚಾರ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ. ಅವರು ರಚಿಸಿದ ಸಿದ್ದಾಮನತ ಶಿಖಾಮಣಿ ಗ್ರಂಥ ಧರ್ಮವನ್ನು ಸಂರಕ್ಷಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಗ್ರಾಮದ ಸುಭಾಸಗೌಡ ಪಾಟೀಲ, ಎಂ.ಆರ್.ತುಂಗಳ, ಶಿವಪುತ್ರ ಅವಟಿ, ಶಂಕರಗೌಡ…

Read More

ವಿಜಯಪುರ: ನಗರದ ದರಬಾರ ಪಿಯು ಕಾಲೇಜಿನ ನಿವೃತ್ತ ಪ್ರಾಚಾರ್ಯರು ಮತ್ತು ಹಿರಿಯ ಪತ್ರಕರ್ತರಾಗಿದ್ದ ಮೋಹನ ತಿಳಗೂಳ(81) ಅವರ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಸಂತಾಪ ಸೂಚಿಸಿದ್ದಾರೆ.ಮೋಹನ ತಿಳಗೂಳ ಅವರ ನಿಧನರಾದ ಸುದ್ದಿ ತಿಳಿದು ಅತೀವ ದುಃಖವಾಗಿದೆ. ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ. ಅವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬ ವರ್ಗಕ್ಕೆ ನೀಡಲಿ ಎಂದು ಕಂಬನಿ ಮಿಡಿದಿದ್ದಾರೆ.ಶಿಕ್ಷಕರಾಗಿ ಮತ್ತು ಪ್ರಾಚಾರ್ಯರಾಗಿ ಉತ್ತಮ ಸೇವೆ ಸಲ್ಲಿಸಿದ್ದರು. ಅವರ ಕೈಯಲ್ಲಿ ಕಲಿತ ಸಾವಿರಾರು ವಿದ್ಯಾರ್ಥಿಗಳು ಈಗ ನಾನಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲ, ಅವರು ಇಂಡಿಯನ್ ಎಕ್ಸಪ್ರೆಸ್ ವರದಿಗಾರಾಗಿಯೂ ಉತ್ತಮ ಸೇವೆ ಸಲ್ಲಿಸಿದ್ದಾರೆ. ಜನಪರ ವರದಿಗಳ ಮೂಲಕ ಗಮನ ಸೆಳೆದಿದ್ದರು. ಅವರ ಅಗಲಿಕೆಯಿಂದ ಹಿರಿಯ ಪತ್ರಕರ್ತರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ಸಚಿವ ಎಂ. ಪಿ. ಪಾಟೀಲ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.ಆಶಾ ಎಂ. ಪಾಟೀಲ ಸಂತಾಪ: ಮೋಹನ ತಿಳಗೂಳ…

Read More

ಸಿಂದಗಿ: ಕಿಂಡರ್ ಗಾರ್ಟನ್ ಮಕ್ಕಳ ಭವಿತವ್ಯದ ಬುನಾದಿಗೆ ಅತ್ಯವಶ್ಯವಾಗಿದ್ದು ಹೊಸ ಶಿಕ್ಷಣ ನೀತಿಯಲ್ಲಿ ಸರ್ಕಾರ ಹೆಚ್ಚಿನ ಮಹತ್ವ ನೀಡಿದೆ ಎಂದು ಎಚ್.ಜಿ. ಕಾಲೇಜಿನ ಪ್ರಾಚಾರ್ಯ ಎ. ಆರ್.ಹೆಗ್ಗಣದೊಡ್ಡಿ ಹೇಳಿದರು.ಅವರು ನಗರದ ಬಂದಾಳ ರಸ್ತೆಯಲ್ಲಿರುವ ವಿವೇಕ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲಿನ ಪೂರ್ವ ಪ್ರಾಥಮಿಕ ಶಾಲಾ ಮಕ್ಕಳ ಪದವಿ ಪ್ರಧಾನ ಸಮಾರಂಭದ ಹಾಗೂ ಕಿಂಡರ್ ಗಾರ್ಟನ್ ಡೇ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಪ್ರೊಬೆಲರ ಕಿಂಡರ್ ಗಾರ್ಟನ್ ಪದ್ಧತಿ ನಮ್ಮ ನರ್ಸರಿ ಶಾಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಶಾಲೆ ಶ್ರಮಿಸುತ್ತಿದೆ ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯ ಶಾ ನಿಮೋಲ್ ರಾಬಿನ್ ರವರು, ನಮ್ಮ ಶಾಲೆಯಲ್ಲಿ ಬುನಾದಿ ಹಂತದಿಂದಲೇ ಗುಣಾತ್ಮಕ ಶಿಕ್ಷಣ ನೀಡುತ್ತಿದ್ದು, ಪಾಲಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದರು.ಸಂಸ್ಥೆಯ ಅಧ್ಯಕ್ಷ ನೀಲಮ್ಮ ಹೆಗ್ಗಣದೊಡ್ಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು.ಪ್ರಿಯದರ್ಶಿನಿ ಕಾರ್ಯಕ್ರಮ ನಿರೂಪಿಸಿದರು. ಟೆನಿ ರಾಬಿನ್ ಸ್ವಾಗತಿಸಿದರು. ನೀತು ಮೇಡಂ ವಂದಿಸಿದರು.

Read More