ತಿಕೋಟಾ: ವಿಶ್ವ ಶಾಂತಿಗಾಗಿ ಹಾಗೂ ವಿಶ್ವದ ಉದ್ದಾರಕ್ಕಾಗಿ ವೀರಶೈವ ಧರ್ಮ ಸ್ಥಾಪನೆಯಾಗಿದೆ ಎಂದು ಬಸವನ ಬಾಗೇವಾಡಿಯ ಪದ್ಮರಾಜ ಒಡೆಯರ ಸಂಸ್ಥಾನ ಹಿರೇಮಠದ ಷ.ಬ್ರ. ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ಕನಮಡಿ ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದ ರೇಣುಕಾಚಾರ್ಯ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದ ಅವರು ವೀರಶೈವ ಧರ್ಮದ ಮೂಲ ಸಂಸ್ಥಾಪಕರು ರೇಣುಕಾಚಾರ್ಯ ಭಗವತ್ಪಾದಕರಾಗಿದ್ದಾರೆ. ಆದಿ ಜಗದ್ಗುರು ಶಂಕರಾಚಾರ್ಯರಿಗೆ ಚಂದ್ರಮೌಳಿ ಲಿಂಗ ಕೊಟ್ಟು ಆಶಿರ್ವಾದ ಮಾಡಿದವರು ಇವರೇ ಆಗಿದ್ದು, ಪ್ರತಿಯೊಬ್ಬರು ಮನೆಯಲ್ಲಿ ಅವರ ಭಾವಚಿತ್ರ ಇಟ್ಟು ಪೂಜಿಸಿ ನೆನಪಿಸಿಕೊಳ್ಳಬೇಕು ಎಂದರು.
ಪ್ರವಚನಕಾರ ಬಾಬುರಾವ ಮಹಾರಾಜ ಮಾತನಾಡಿ ಆತ್ಮಸಾಕ್ಷಿಯಾಗಿ ಇದ್ದವರಿಗೆ, ತತ್ವಜ್ಞಾನಿಗೆ ತುತ್ತು ಅನ್ನ ನೀಡಿದವನಿಗೆ ಶಾಂತಿ ಆನಂದ ಸಿಗುತ್ತದೆ. ಎಲ್ಲರ ರೂಪದಲ್ಲಿ ಮಹಾನ ವ್ಯಕ್ತಿಗಳು ಇದ್ದಾರೆ.
ವಿಜಯಕುಮಾರ ಸ್ವಾಮೀಜಿ ಮಾತನಾಡಿ ರೇಣುಕಾಚಾರ್ಯರ ಕೀರ್ತಿ, ವಿಚಾರ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ ಅಪಾರವಾಗಿದೆ. ಅವರು ರಚಿಸಿದ ಸಿದ್ದಾಮನತ ಶಿಖಾಮಣಿ ಗ್ರಂಥ ಧರ್ಮವನ್ನು ಸಂರಕ್ಷಿಸುತ್ತದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮದ ಸುಭಾಸಗೌಡ ಪಾಟೀಲ, ಎಂ.ಆರ್.ತುಂಗಳ, ಶಿವಪುತ್ರ ಅವಟಿ, ಶಂಕರಗೌಡ ಬಿರಾದಾರ, ಅಶೋಕ ಶಿರಡೋಣ, ಧರೇಪ್ಪ ಬಿರಾದಾರ, ಭೀಮರಾವ ಕೊಂಡಿ, ಮಲ್ಲಯ್ಯ ಹಿರೇಮಠ, ಸಂತೋಷ ಮಠಪತಿ, ಈರಯ್ಯ ಮಠಪತಿ, ಶರಣು ಅವಟಿ, ಆನಂದಪ್ಪ ಬಸರಗಿ ಇದ್ದರು.
ಕಾರ್ಯಕ್ರಮವನ್ನು ಚನ್ನಯ್ಯ ಮಠಪತಿ ನಿರ್ವಹಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

