ಸಿಂದಗಿ: ಹೋಳಿ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಪಟ್ಟಣದ ಹಿರಿಯರು ನೋಡಿಕೊಳ್ಳಬೇಕು. ಹೋಳಿ ಹಬ್ಬದ ಸಮಯದಲ್ಲಿಯೇ ಪರೀಕ್ಷೆಗಳಿರುವ ಕಾರಣ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹಬ್ಬವನ್ನು ಆಚರಿಸಬೇಕು ಎಂದು ಪಿಎಸ್‌ಐ ಭೀಮಪ್ಪ ರಬಕವಿ ಹೇಳಿದರು.
ಪಟ್ಟಣದ ಪೊಲೀಸ್ ಠಾಣೆಯ ಆವರಣದಲ್ಲಿ ಶನಿವಾರ ಸಾಯಂಕಾಲ ಹೋಳಿ ಹಬ್ಬ ಆಚರಣೆಯ ನಿಮಿತ್ಯವಾಗಿ ಹಮ್ಮಿಕೊಂಡ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಸಂಪ್ರದಾಯಗಳಿಗೆ ಚ್ಯುತಿ ಬರದಂತೆ ಶಾಂತಿ ಸುವ್ಯವಸ್ಥೆಗಳನ್ನು ಕಾಯ್ದುಕೊಂಡು ಸಹಬಾಳ್ವೆಯಿಂದ ಹಬ್ಬಗಳನ್ನು ಯುವಕರು ಪ್ರತಿ ವರ್ಷದಂತೆ ಶಾಂತ ರೀತಿಯಿಂದ ಆಚರಣೆ ಮಾಡಬೇಕು.
ಈ ವೇಳೆ ಅಪರಾಧ ವಿಭಾಗ ಪಿಎಸ್‌ಐ ಎ.ಬಿ.ಅಂಗಡಿ ಮಾತನಾಡಿ, ಶಾಂತಿ ಸುವ್ಯವಸ್ಥೆ ಕಾಪುಡುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕು. ಆಸಕ್ತಿಯಿಲ್ಲದವರಿಗೆ ಬಣ್ಣ ಹಾಕಬೇಡಿ. ಈ ರೀತಿಯ ಘಟನೆ ನಡೆದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಈ ವೇಳೆ ಪೊಲೀಸ್ ಸಿಬ್ಬಂದಿಗಳಾದ ಪರಶುರಾಮ ಹಂಡರಗಲ್, ಸಿದ್ದಪ್ಪ ಕೋರೆ, ಗೊಲ್ಲಾಳ ಇಜೇರಿ, ಪುರಸಭೆ ಸದಸ್ಯ ರಾಜಣ್ಣ ನಾರಾಯಣಕರ, ರಾಕೇಶ ಕಾಂಬಳೆ, ಇರ್ಫಾನ್ ಭಾಗವಾನ್, ರವಿ ನಾಟೀಕಾರ, ಸಂತೋಷ ನಾಟೀಕಾರ, ಭೀಮು ಕೂಚಬಾಳ, ವಿಠ್ಠಲ ಬದ್ನಾಳ, ಸಾಗರ ಕೆ, ನವೀನ ಆಲಗೂರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಹೋಳಿ ಆಚರಿಸಿ :ಪಿಎಸೈ ರಬಕವಿ
Related Posts
Add A Comment

