Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಉದಯರಶ್ಮಿ ದಿನಪತ್ರಿಕೆ ಎಚ್ ಡಿ ಕೋಟೆ: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟದಲ್ಲಿ ಶಾಸಕ ಅನಿಲ್ ಚಿಕ್ಕಮಾದುಗೆ ಸಚಿವ ಸ್ಥಾನ ನೀಡಬೇಕು. ಇಲ್ಲವಾದರೆ ಮೈಸೂರಿನ ಪುರಭವನದ ಮುಂದೆ ಎಸ್ ಚಿಕ್ಕಮಾದು ಅಭಿಮಾನಿ ಬಳಗದ ನೇತೃತ್ವದಲ್ಲಿ ನಾಯಕ ಸಮುದಾಯ ಬೃಹತ್ ಪ್ರತಿಭಟನೆ ಮಾಡಲಿದೆ ಎಂದು ಮೈಸೂರು- ಚಾಮರಾಜನಗರ ಜಿಲ್ಲೆ ಎಸ್ ಚಿಕ್ಕಮಾದು ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ನಾಗರಾಜು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.ಪಟ್ಟಣದ ವಾಲ್ಮೀಕಿ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕ್ಯಾತನಹಳ್ಳಿ ನಾಗರಾಜು. ಅನಿಲ್ ಚಿಕ್ಕಮಾದು ಅವರು ಹಳೇ ಮೈಸೂರು ಭಾಗದಲ್ಲಿ ಎಸ್ಟಿ ಸಮುದಾಯದ ಪ್ರಭಾವಿ ಶಾಸಕರು. ತನ್ನದೇ ಆದ ವರ್ಚಸ್ಸು ಹೊಂದಿರುವ ಪ್ರಮುಖ ನಾಯಕರು. ಪ್ರತಿ ಚುನಾವಣೆಯಲ್ಲೂ ಶೇ. 70 ರಷ್ಟು ನಾಯಕ ಸಮುದಾಯ ಕಾಂಗ್ರೆಸ್ ಬೆಂಬಲಿಸುತ್ತಾ ಬರುತ್ತಿದೆ. ಮೈಸೂರು ಚಾಮರಾಜನಗರ, ಕೊಡಗು, ಮಂಡ್ಯ ಹಾಗೂ ಹಾಸನ ಜಿಲ್ಲೆಯಲ್ಲಿ 6 ಲಕ್ಷ ನಾಯಕ ಸಮುದಾಯದ ಜನಸಂಖ್ಯೆ ಇದ್ದು, 8 ಕ್ಷೇತ್ರಗಳಲ್ಲಿ ನಮ್ಮ ಸಮುದಾಯದ ಮತಗಳೇ ನಿರ್ಣಾಯಕವಾಗಿವೆ. ಕಳೆದ 30 ವರ್ಷಗಳಿಂದಲೂ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಮತಕ್ಷೇತ್ರದಲ್ಲಿ ಸಿಮೆಂಟ್ ಸಿಸಿ ರಸ್ತೆ ಹಾಗೂ ಡಾಂಬರೀಕರಣ ಮೂಲಕ ಉತ್ತಮ ಗುಣಮಟ್ಟದ ರಸ್ತೆ ನಿರ್ಮಾಣ ಮಾಡುವ ಮಹದಾಸೆಯನ್ನು ಹೊಂದಿದ್ದೇನೆ. ಇನ್ನು ಉಳಿದ ಅವಧಿಯಲ್ಲಿ ಇನ್ನಷ್ಟು ಅನುದಾನ ತಂದು ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದ ಸಾಲುಮರದ ತಿಮ್ಮಕ್ಕ ಟ್ರಿ ಪಾರ್ಕ್ ಬಳಿ ಲೋಕೋಪಯೋಗಿ ಇಲಾಖೆಯ ೨೦೨೫-೨೬ನೇ ಸಾಲಿನ ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿಯಲ್ಲಿ ಸಿಂದಗಿ-ವಿಜಯಪುರ ಮುಖ್ಯ ರಸ್ತೆಯಿಂದ ಸಾಲುಮರದ ತಿಮ್ಮಕ್ಕ ಟ್ರಿ ಪಾರ್ಕ್ ವರೆಗೆ ಡಾಂಬರ ರಸ್ತೆ ನಿರ್ಮಾಣಕ್ಕಾಗಿ ಮಂಜೂರಾದ ರೂ.೬೨ ಲಕ್ಷ ಮೊತ್ತದ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ರಸ್ತೆ ನಿರ್ಮಾಣದಿಂದ ಸ್ಥಳೀಯ ನಿವಾಸಿಗಳ ಸುಗಮ ಪ್ರಯಾಣಕ್ಕೆ ನೆರವಾಗಲಿದೆ. ಕಾಮಗಾರಿಯನ್ನು ಗುಣಮಟ್ಟದಿಂದ, ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು. ಮತಕ್ಷೇತ್ರದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಸಿಂದಗಿ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧನಾಗಿರುತ್ತೇನೆ ಎಂದರು.ಇದೇ ಸಂದರ್ಭದಲ್ಲಿ…
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ನಗರದ ಕೆರೆಯ ಸೌಂದರ್ಯೀಕರಣಕ ಮಾಡುವ ಉದ್ದೇಶದಿಂದ ಅಮೃತ ೨ ಯೋಜನೆ ಅಡಿಯಲ್ಲಿ ₹೩ ಕೋಟಿ ೪ಲಕ್ಷ ಅನುದಾನವು ರಾಜ್ಯ ಸರಕಾರದಿಂದ ಮಂಜೂರಾಗಿದೆ ಎಂದು ಶಾಸಕ ಅಶೋಕ ಮನಗೂಳಿ ಪತ್ರಿಕೆಗೆ ತಿಳಿಸಿದ್ದಾರೆ.ಈ ಅನುದಾನವನ್ನು ಸಾರ್ವಜನಿಕ ಮೂಲಸೌಕರ್ಯಗಳ ಉನ್ನತೀಕರಣ ಹಾಗೂ ನಾಗರಿಕರಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ವಿವಿಧ ಕಾಮಗಾರಿಗಳಿಗೆ ಬಳಸಲಾಗುವುದು. ಅಮೃತ ೨ ಯೋಜನೆಯಡಿ ಬಿಡುಗಡೆಯಾದ ಅನುದಾನದಿಂದ ನಗರದ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗಲಿದ್ದು, ಸಾರ್ವಜನಿಕರ ಬಹುಕಾಲದ ಬೇಡಿಕೆಗಳಿಗೆ ಸ್ಪಂದನೆ ದೊರೆಯಲಿದೆ. ಯೋಜನೆಯ ಕಾಮಗಾರಿಗಳನ್ನು ಶೀಘ್ರ ಆರಂಭಿಸಿ ಗುಣಮಟ್ಟದೊಂದಿಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಅಶೋಕ ಮನಗೂಳಿ ತಿಳಿಸಿದ್ದಾರೆ.
ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸ್ಥಳೀಯ ನಗರದ ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ ಸಿ.ಎಮ್.ಮನಗೂಳಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದಲ್ಲಿ ಶಿಕ್ಷಣಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿರುವ ಎಸ್.ಕೆ.ಹೂಗಾರ ಅವರಿಗೆ ಗುಲಬರ್ಗಾ ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.ಗುಲಬರ್ಗಾ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಡಾ.ಹೂವಿನಭಾವಿ ಬಿ.ಎಲ್ ಇವರ ಮಾರ್ಗದರ್ಶನದಲ್ಲಿ “ಎ ಸ್ಟಡಿ ಆನ್ ಇಂಪ್ಯಾಕ್ಟ್ ಆಫ್ ಆಯ್.ಸಿ.ಟಿ ಇನ್ ಎಂಫಾವರಮೆoಟ್ ಆಫ್ ಬಿ.ಇಡಿ ಕೋರ್ಸ ಇನ್ ಟಿಚರ್ ಎಜುಕೇಶನ್ ಇನ್ಸಿಟ್ಯೂಶನ್ಸ್” ಎಂಬ ವಿಷಯದ ಮೇಲೆ ಮಂಡಿಸಿದ ಪ್ರಬಂಧಕ್ಕೆ ಡಾಕ್ಟರೇಟ್ ನೀಡಿದೆ.ಡಾಕ್ಟರೇಟ್ ಪದವಿಗೆ ಭಾಜನರಾದ ಸಂಸ್ಥೆಯ ಚೇರಮನ್ನರು ಹಾಗೂ ಶಾಸಕ ಅಶೋಕ ಮನಗೂಳಿ, ಡಾ.ಅರವಿಂದ ಮನಗೂಳಿ ಸೇರಿದಂತೆ ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಭೋದಕ ಭೋದಕೇತರ ಸಿಬ್ಬಂದಿಗಳು ಶುಭಕೋರಿದ್ದಾರೆ.
ಸಿಂದಗಿಯಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಶಾಸಕ ಅಶೋಕ ಮನಗೂಳಿ ಅಭಿಮತ ಉದಯರಶ್ಮಿ ದಿನಪತ್ರಿಕೆ ಸಿಂದಗಿ: ಸಾಧನೆಯ ಹಾದಿ ಸುಗಮವಲ್ಲ. ಛಲವಿದ್ದವರು ಮಾತ್ರ ಆ ಹಾದಿಯಲ್ಲಿ ಸಾಗಲು ಸಾಧ್ಯ. ನಮ್ಮ ಕ್ರಿಯೆಗಳಿಗೆ ಪೂರಕವಾಗಿ ಪ್ರತಿಕ್ರಿಯೆ ಇರುತ್ತದೆ. ಅದೇ ರೀತಿ ನಾವು ಅಪೇಕ್ಷೆ ಪಟ್ಟಂತ ಫಲಿತಾಂಶವನ್ನು ಪಡೆಯಲು ಅತೀ ವೇಗವಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕಾಗಿದೆ. ಪ್ರತಿಭೆ ಎಲ್ಲರಲ್ಲೂ ಇದೆ. ಆದರೆ ಇಂದಿನ ಆಧುನಿಕ ಜಗತ್ತಿನಲ್ಲಿ ಸ್ಪರ್ಧೆ ಅನಿವಾರ್ಯ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.ಸಿಂದಗಿ ನಗರದ ಅಂಜುಮನ್ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ಶಿಕ್ಷಣ ಸಂಸ್ಥೆ ಹಾಗೂ ಅಂಜುಮನ್ ಇ-ಇಸ್ಲಾಂ ಶಿಕ್ಷಣ ಸಂಸ್ಥೆ, ನ್ಯೂ ಇರಾ ವಿಜ್ಞಾನ ಪಪೂ ಕಾಲೇಜು ಹಾಗೂ ಪ್ರಾಢಶಾಲೆ ಇವರುಗಳ ಸಹಯೋಗದಲ್ಲಿ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಹಾಗೂ ಸ್ವಾಗತ ಸಮಾರಂಭಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ನಗರದಲ್ಲಿ ಅಂಜುಮನ್ ಶಿಕ್ಷಣ ಸಂಸ್ಥೆಯೂ ಹೆಮ್ಮರವಾಗಿ ಬೆಳೆಯುತ್ತಿದ್ದು, ಸೌಹಾರ್ದತೆಗೆ ಹೆಸರು ವಾಸಿಯಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವ ಜೊತೆಗೆ…
ಉದಯರಶ್ಮಿ ದಿನಪತ್ರಿಕೆ ಮುದ್ದೇಬಿಹಾಳ: ಪಟ್ಟಣದ ಮಾರುತಿ ನಗರದಲ್ಲಿ ನಿರ್ಮಾಣ ಹಂತದಲ್ಲಿರುವ ಎಸ್‌ವಿವಿಎಂ ಇಂಗ್ಲೀಷ್ ಮೀಡಿಯಂ ಶಾಲೆಯ ಕಟ್ಟಡ ಪುರಸಭೆಯ ಅಗತ್ಯ ಅನುಮತಿ ಪಡೆಯದೆ ಹಾಗೂ ಸಂಬಂಧಿತ ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗುತ್ತಿದೆ ಎಂದು ಆರೋಪಿಸಿ ಕಟ್ಟಡ ಸಮೀಪದ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ.ಶರಣಗೌಡ ಬೂದಿಹಾಳ, ವಾಸು ಚಿತ್ರಗಾರ, ಸುಭಾಷ್ ಅಂಗಡಿ, ನಾಗೇಶ್ ಅಂಗಡಿ, ರೇಖಾ ಗುಡಿಹಾಳ, ನೀಲಕಂಠರಾಯ ಕಟ್ಟಿಮನಿ, ವಿಶ್ವನಾಥ, ದಾದಾಗೌಡ ಬಿರಾದಾರ, ನಾಗರಾಜ ಫಣೇದಕಟ್ಟಿ, ಎಸ್.ಎಸ್.ಹುನಗುಂದ, ಎಚ್.ಬಿ.ದಳವಾಯಿ, ಎಸ್.ಎಚ್.ಬೇನಕಟಗಿ, ಪ್ರದೀಪ ಕುಲಕರ್ಣಿ, ಡಿ.ಐ.ಗಡೇದ, ರೇವಣಸಿದ್ದಪ್ಪ ಮೂಲಿಮನಿ, ವಿರೇಶ ಢವಳಗಿ ಹಾಗೂ ಗುರುಸಂಗಪ್ಪ ಅಂಗಡಿ ಸೇರಿದಂತೆ ಮತ್ತೀತರ ನಿವಾಸಿಗಳು ಸಲ್ಲಿಸಿರುವ ಮನವಿಯಲ್ಲಿ, ರಿ.ಸ. ನಂ. ೨೬೨ರಲ್ಲಿ ಶಾಲಾ ಕಟ್ಟಡವನ್ನು ಅನಧಿಕೃತವಾಗಿ ನಿರ್ಮಿಸಲಾಗುತ್ತಿದ್ದು, ಈ ಕುರಿತು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದ್ದಾರೆ.ದೂರಿನಲ್ಲಿ, ಬಡಾವಣೆಯಲ್ಲಿ ವಸತಿ ಪ್ರದೇಶದ ಮಧ್ಯೆ ಶಾಲೆ ನಿರ್ಮಾಣವಾದರೆ ಸಾರ್ವಜನಿಕರಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ, ಅನುಮೋದಿತ ನಕ್ಷೆ (ಬ್ಲೂಪ್ರಿಂಟ್)…
ಧರ್ಮಸ್ಥಳಕ್ಕೆ ಕಳಂಕ ತರಲು 200 ಕೋಟಿ ಡೀಲ್ | ಬೆಳ್ತಂಗಡಿಯ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ದೂರು | ಚಿನ್ನಯ್ಯನಿಂದ ಜಾಮೀನು ಷರತ್ತುಗಳ ಉಲ್ಲಂಘನೆ ಆರೋಪ ಧರ್ಮಸ್ಥಳ: ಧರ್ಮಸ್ಥಳದಲ್ಲಿ ನಡಿದಿದೆ ಎಂದು ಆರೋಪಿಸಲಾಗುತ್ತಿರುವ ಯುವತಿಯರ ಸಾಮೂಹಿಕ ಅಂತ್ಯಕ್ರಿಯೆ ಕೇಸ್ ನ ಪ್ರಮುಖ ಸಾಕ್ಷಿದಾರ ಎಂದು ಹೇಳಿಕೊಳ್ಳುತ್ತಿರುವ ಚಿನ್ನಯ್ಯನನ್ನು ಬ್ರೈನ್ ಮ್ಯಾಪಿಂಗ್ ಗೆ ಒಳಪಡಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಗಿರೀಶ್ ಮಟ್ಟಣ್ಣವರ್ ಆಗ್ರಹಿಸಿದ್ದಾರೆ.ಗಿರೀಶ್ ಮಟ್ಟಣ್ಣವರ್ ಶನಿವಾರ ಬೆಳ್ತಂಗಡಿಯ ವಿಶೇಷ ತನಿಖಾ ತಂಡಕ್ಕೆ (ಎಸ್‌ಐಟಿ) ದೂರು ಸಲ್ಲಿಸಿದ್ದು, ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದಲ್ಲಿ ಆರೋಪಿ ಮತ್ತು ದೂರುದಾರ ಚಿನ್ನಯ್ಯ ಸಿಎನ್ ಅವರ ಇತ್ತೀಚಿನ 200 ಕೋಟಿ ರೂ.ಗಳ ಷಡ್ಯಂತ್ರದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.ಮಾಜಿ ನೈರ್ಮಲ್ಯ ಕಾರ್ಮಿಕ ಚಿನ್ನಯ್ಯ, ಧರ್ಮಸ್ಥಳದಲ್ಲಿ ಹಲವಾರು ಬಲಿಪಶುಗಳ ಶವಗಳನ್ನು ಹೂಳಿರುವುದಾಗಿ ಹೇಳಿಕೊಂಡಿದ್ದ. ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸಲು ಎಸ್‌ಐಟಿಗೆ ನಿರ್ದೇಶನ ನೀಡುವಂತೆ ಕೋರಿ ಮತ್ತು ಪ್ರಾಥಮಿಕ ತನಿಖಾ ವರದಿಯಲ್ಲಿ ಹೆಸರಿಸಲಾದ ಸಂಚುಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಆತ ಹೈಕೋರ್ಟ್‌ಗೆ…
ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(ಸಿ.ಬಿ.ಎಸ್.ಇ) ಶಾಲೆಯಲ್ಲಿ ಶಾಲಾ ಅಂತರ್ ಸದನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್(ಸಿ.ಬಿ.ಎಸ್.ಇ) ಶಾಲೆಯಲ್ಲಿ ಶನಿವಾರ ಶಾಲಾ ಅಂತರ್ ಸದನಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಕ್ರೀಡಾ ಸ್ಪರ್ಧೆಯ ಉದ್ಘಾಟನಾ ಸಮಾರಂಭ ನಡೆಯಿತು.ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಹೊರತರಲು ನಾನಾ ಹವ್ಯಾಸಗಳ ತರಬೇತಿ ತರಗತಿಗಳನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳು ತಮಗಿಷ್ಟವಾದ ಹವ್ಯಾಸವನ್ನು ಆಯ್ಕೆ ಮಾಡಿಕೊಂಡರು. ಇವರಿಗೆ ನಗರದ ನುರಿತ ತರಬೇತುದಾರರನ್ನು ನೇಮಿಸಿ, ಚೆಸ್, ಫುಟ್ಬಾಲ್, ವಾಲಿಬಾಲ್, ಬಾಸ್ಕೆಟ್ಬಾಲ್, ಕ್ರಿಕೆಟ್, ಸ್ಕೆಟಿಂಗ್, ನೃತ್ಯ, ಸಂಗೀತ, ಝುಂಬಾ, ಗಾರ್ಡನಿಂಗ್, ಅಗ್ನಿರಹಿತ ಆಹಾರ ತಯಾರಿಕೆ ಮುಂತಾದ ಚಟುವಟಿಕೆಗಳಿಗೆ ತರಬೇತಿಯನ್ನು ವಿದ್ಯಾರ್ಥಿಗಳ ಆಸಕ್ತಿಗನುಣವಾಗಿ ಪ್ರಾರಂಭಿಸಲಾಯಿತು.ಕಾರ್ಯಕ್ರಮ ಉದ್ಘಾಟಿಸಿದ ಶಾಲೆಯ ಉಪಪ್ರಾಚಾರ್ಯೆ ವಸುಧಾ ನಾರ್ವೇಕರ ಮಾತನಾಡಿ, ಸ್ಪರ್ಧೆಗಳು ಆರೋಗ್ಯಕರವಾಗಿರಬೇಕು. ಸೋಲೇ ಗೆಲುವಿನ ಸೋಪಾನ ಮತ್ತು ಗೆಲುವೆಂಬುದು ಸತತ ಪರಿಶ್ರಮದ ಫಲ ಎಂಬುದನ್ನು ಮಕ್ಕಳಿಗೆ…
ಉದಯರಶ್ಮಿ ದಿನಪತ್ರಿಕೆ ವಿಜಯಪುರ: ನಗರದ ಬಿ.ಎಲ್.ಡಿ.ಇ ಕೈಗಾರಿಕೆ ತರಬೇತಿ ಸಂಸ್ಥೆಯಲ್ಲಿ ಜೂನ್ 16 ಮತ್ತು 17 ರಂದು ಅಪ್ರೆಂಟಿಸ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ ನಡೆಯಲಿದೆ.ಧಾರವಾಡದಲ್ಲಿರುಬ ನಿಡೆಕ್ ಇಂಡಿಯಾ ಪ್ರೈ. ಲಿ. ಕಂಪನಿ ತರಬೇತುದಾರ(Production Trainee) ಮತ್ತು ಅಪ್ರಂಟಿಸ್ ತರಬೇತಿಗಾಗಿ ಈ ಕ್ಯಾಂಪಸ್ ಸಂದರ್ಶನ ನಡೆಸಲಿದೆ.ಐಟಿಐನ ನಾನಾ ಟ್ರೇಡುಗಳಲ್ಲಿ ಪಾಸಾದ ಮತ್ತು ದ್ವಿತೀಯ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ 18 ರಿಂದ 25 ವರ್ಷದೊಳಗಿನ ತರಬೇತುದಾರರಿಗೆ ಲಿಖಿತ ಪರೀಕ್ಷೆ ಹಾಗೂ ಮೌಖಿಕ ಸಂದರ್ಶನ ನಡೆಸಲಾಗುತ್ತದೆ. ಜಿಲ್ಲೆಯ ನಾನಾ ಐಟಿಐ ಕಾಲೇಜಿನ ತರಬೇತಿದಾರರು ಈ ಆವರಣ ಸಂದರ್ಶನದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕೇಂದ್ರದ ಪ್ರಭಾರ ಪ್ರಾಚಾರ್ಯ ಎಸ್. ಜೆ. ಕರಿಗಾರ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ 9880716694 ಮತ್ತು 9916853605 ಸಂಪರ್ಕಿಸಬಹುದಾಗಿದೆ.
ವಿಜಯಪುರದಲ್ಲಿ ಅಹಿಂದ ಮುಖಂಡ ಸೋಮನಾಥ ಕಳ್ಳೀಮನಿ ಹೇಳಿಕೆ ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಕರ್ನಾಟಕದಲ್ಲಿ ಎಸ್.ಐ.ಆರ್. ಪ್ರಕ್ರಿಯೆ ನಡೆದರೆ ೫೦ ವರ್ಷಗಳ ಕಾಲ ಬಿಜೆಪಿಯೇ ಅಧಿಕಾರದಲ್ಲಿರುತ್ತದೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನೀತಿನ್ ನಬೀನ್ ಹೇಳಿಕೆಯೇ ಎಸ್‌ಐಆರ್ ಕರಾಳತೆಗೆ ಒಂದು ದೊಡ್ಡ ನಿದರ್ಶನವಾಗಿದೆ ಎಂದು ಅಹಿಂದ ಮುಖಂಡ ಸೋಮನಾಥ ಕಳ್ಳೀಮನಿ ಹೇಳಿದರು.ಎಸ್‌ಐಆರ್ ಪ್ರಕ್ರಿಯೆ ವಿರೋಧಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಶನಿವಾರ ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಮ್ಮ ನಿಲುವು ವ್ಯಕ್ತಪಡಿಸಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರೇ ಈ ರೀತಿ ಹೇಳಿಕೆ ನೀಡಿದ್ದಾರೆ, ಆ ಮೂಲಕ ಎಸ್‌ಐಆರ್ ಎನ್ನುವುದು ಬಿಜೆಪಿ ಅನುಕೂಲಕರ ಎಂದು ಅವರೇ ಹೇಳಿದ್ದಾರೆ, ಈಗಲಾದರೂ ವಾಸ್ತವಿಕತೆಯನ್ನು ಚುನಾವಣಾ ಆಯೋಗ ಅರಿಯಬೇಕಿದೆ, ಈ ಬಗ್ಗೆ ಬಹಿರಂಗ ಸವಾಲಿಗೆ ಅನೇಕ ಬಾರಿ ಆಹ್ವಾನಿಸಿದರೂ ಸಹ ಚುನಾವಣಾ ಆಯೋಗ ಸವಾಲು ಏಕೆ ಸ್ವೀಕರಿಸುತ್ತಿಲ್ಲ ಎಂದರು.ಅಲ್ಪಸಂಖ್ಯಾತ ಮುಖಂಡ ಮೊಹ್ಮದ್‌ರಫೀಕ್ ಟಪಾಲ್ ಮಾತನಾಡಿ, ಪಶ್ಚಿಮ ಬಂಗಾಳದ ನಿಕಟಪೂರ್ವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕ್ಷೇತ್ರದಲ್ಲಿಯೇ ಲಕ್ಷಾಂತರ ಮತಗಳನ್ನು ಡಿಲೀಟ್ ಮಾಡಿರುವುದು…
