ಉದಯರಶ್ಮಿ ದಿನಪತ್ರಿಕೆ
ವಿಜಯಪುರ: ಕೆಪಿಟಿಸಿಎಲ್ ಇವರ ಮೂಲಕ ೧೧೦ ಕೆ.ವ್ಹಿ ಬೇ ಗಳ ನಾಲ್ಕನೇ ತ್ರೈಮಾಸಿಕ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ, ೧೧೦/೩೩/೧೧ ಕೆವಿ ವಿದ್ಯುತ್ ವಿತರಣಾ ಕೇಂದ್ರ ಮಮದಾಪುರ, ಬೆಳ್ಳುಬ್ಬಿ, ದೇವರಗೆಣ್ಣೂರ, ಶಿರಬೂರ, ಬಬಲೇಶ್ವರ, ಕಂಬಾಗಿ, ಕಾಖಂಡಕಿ ಹಾಗೂ ನಿಡೋಣಿ ೧೧೦ ಕೆ.ವ್ಹಿ ಸ್ವೀಕರಣಾ ಕೇಂದ್ರದಿಂದ ೩೩ಕೆವ್ಹಿ ಹಾಗೂ ೧೧ ಕೆವ್ಹಿ ವಿದ್ಯುತ್ ಮಾರ್ಗಗಳಿಗೆ ಮಾರ್ಚ್ ೧೫ರ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೩ ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಕಾರಣ ಗ್ರಾಹಕರು ಸಹಕರಿಸಬೇಕೆಂದು ಹೆಸ್ಕಾಂನ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
