Author: editor.udayarashmi@gmail.com

ಝಳಕಿ: ಸಮೀಪದ ಸುಕ್ಷೇತ್ರ ಜೇವೂರದ ಹಠಯೋಗಿ ರೇವಣಸಿದ್ಧೇಶ್ವರರ 38 ನೇ ಪುಣ್ಯಾರಾಧನೆ.ಮಾ.29 ರಿಂದ ಏ.2 ರ ವರೆಗೆ ನಡೆಯಲಿದೆ.ಮಾ.29 ಕ್ಕೆ ಶ್ರೀ ಗುರು ಗುರುಪಾದೇಶ್ವರ ಶಿವಾಚಾರ್ಯರ ಮಾರ್ಗದರ್ಶನದಲ್ಲಿ ಕೋಟಿ ಜಪಯಜ್ಞ, ಧರ್ಮಸಭೆ ರಾತ್ರಿ ವೀರ ಅಭಿಮನ್ಯು ನಾಟಕ ಪ್ರದರ್ಶನಗೊಳ್ಳಲಿದೆ.ಮಾ.30 ರಂದು ಕಾಶಿ ಪೀಠದ ಜಗದ್ಗರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಭಗವತ್ ಪಾದಂಗಳವರ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.ಮಾ.31 ರಂದು ಗೀ ಗೀ ಪದಗಳು, ಭಜನೆ, ಧರ್ಮಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳು.ಏ.1 ಲಿಂಗ ದೀಕ್ಷೆ ಮತ್ತು ಅಯ್ಯಾಚಾರ ಚೌಡಕಿ ಪದಗಳ ಕಾರ್ಯಕ್ರಮ.ಏ.2 ರಂದು ಬೆಳಗ್ಗೆ ಬೆಳ್ಳಿ ಮೂರ್ತಿ ಮೆರವಣಿಗೆ ಶ್ರೀಗಳ ಕತೃ ಗದ್ದುಗೆಗೆ ಪುಷ್ಪವೃಷ್ಟಿ,3 ಗಂಟೆಗೆ ರಥೋತ್ಸವ 4 ಗಂಟೆಗೆ ಜಂಗೀ ನಿಕಾಲಿ ಗದಾ ಕುಸ್ತಿ ರಾತ್ರಿ ಚಿತ್ರ-ವಿಚಿತ್ರ ಮದ್ದು ಸುಡುವುದು,ರಾತ್ರಿ ಗೌರಿ ಗೆದ್ದಳು ನಾಟಕ ಪ್ರದರ್ಶನ ನಡೆಯಲಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆ ತಿಳಿಸಿದೆ.

Read More

ವಿಜಯಪುರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಚೂನಪ್ಪಾ ಪೂಜೇರಿ ನೇತೃತ್ವದ ಸಂಘಟನೇಯ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಾ ಅಧ್ಯಕ್ಷರಾಗಿ ಮಕಬುಲಸಾಬ ಕೀಜಿ ಹಾಗೂ ಉಪಾಧ್ಯಕ್ಷರಾಗಿ ವೀರನಗೌಡ ಚಂ ಬಿರಾದಾರ ಅವರನ್ನು ಆಯ್ಕೆ ಮಾಡಿ ರೈತ ಸಂಘದ ಜಿಲ್ಲಾಧ್ಯಕ್ಷರಾದ ಸಂಗಮೆಶ ಸಗರ ಅವರು ಜಿಲ್ಲಾ ಕಛೇರಿಯಲ್ಲಿ ಆದೇಶ ನೀಡಿ ಸಂಘಟನೆ ಬಗ್ಗೆ ತಿಳಿಸಿದರು.ಈ ವೇಳೆ ಜಿಲ್ಲಾಧ್ಯಕ್ಷ ಸಂಗಮೆಶ ಸಗರ ಅವರು ಆದೇಶ ಪ್ರತಿ ನೀಡಿ ಸಂಘದ ತತ್ವ ಹಾಗೂ ಸಿದ್ಧಾಂತಗಳಿಗೆ ಬದ್ದವಾಗಿ ಯಾವುದೇ ರಾಜಕೀಯ ಪಕ್ಷದೊಂದಿಗೆ ಪ್ರತ್ಯಕ್ಷ್ಯ ಹಾಗೂ ಪರೋಕ್ಷವಾಗಿ ಜೊತು ಬೀಳದೇ ಯಾವ ರೈತರಿಗಾದರೂ ಅನ್ಯಾಯವಾದರೆ ಅವರ ನೆರವಿಗೆ ತಕ್ಷಣದಲ್ಲಿ ಬಂದು ಪರಿಹಾರ ಕಂಡುಕೊಳ್ಳಬೇಕು, ನಾಡಿನ ಎಲ್ಲಾ ರೈತರಿಗೆ ಸರಕಾರದಿಂದ ಸಿಗುವಂತಹ ಯೋಜನೆಗಳ ಕುರಿತು ತಿಳಿ ಹೇಳಿ ರೈತರ ಆದಾಯವನ್ನು ದ್ವೀಗುಣ ಮಾಡಿಕೊಳ್ಳುವಂತೆ ಆಗಾಗ ರೈತರನ್ನು ಸೇರಿಸಿ ತರಬೇತಿ, ಕಾರ್ಯಾಗಾರಗಳನ್ನು ಮಾಡುತ್ತಾ ರೈತರ ಏಳಿಗೆಗೆ ಶ್ರಮವಹಿಸಲು ಬದ್ಧವಾಗಿರಬೇಕು, ರೈತ ಆತ್ಮಹತೈಯಂತಹ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ಪಣ ತೊಡಬೇಕು…

Read More

ಮೋರಟಗಿ ಚೆಕ್ ಪೋಸ್ಟ್ ಗೆ ಡಿಸಿ, ಎಸ್ ಪಿ ಭೇಟಿ | ಸಿಬ್ಬಂದಿಗೆ ಸೂಚನೆ ಮೋರಟಗಿ: ಈ ಭಾಗದಲ್ಲಿ ಸಂಚರಿಸುವ ಎಲ್ಲ ವಾಹನಗಳನ್ನು ಮುಲಾಜಿಲ್ಲದೆ ಪರಿಶೀಲಿಸಿ ಎಂದು ಜಿಲ್ಲಾಧಿಕಾರಿ ಟಿ ಭೂಬಾಲನ್ ಹೇಳಿದರು.ಲೋಕಸಭೆ ಚುನಾವಣೆ ಹಿನ್ನೆಲೆ ಗ್ರಾಮದ ಬಳಿ ಗಡಿಭಾಗದಲ್ಲಿ ನಿರ್ಮಿಸಲಾದ ಚೆಕ್ ಪೋಸ್ಟ್ ಗೆ ಗುರುವಾರ ಸಂಜೆ ಭೇಟಿ ನೀಡಿ ದಾಖಲಾತಿ ಪರಿಶೀಲಿಸಿ ಅವರು ಮಾತನಾಡಿದರು.ಜಿಲ್ಲೆಯ ಗಡಿ ಭಾಗದಲ್ಲಿ ಕಟ್ಟ ಕಡೆಯ ಚೆಕ್ ಪೋಸ್ಟ್ ಇದಾಗಿದೆ. ಸಿಬ್ಬಂದಿ ಕಟ್ಟೆಚ್ಚರ ವಹಿಸಿ ವಾಹನಗಳನ್ನು ಪರಿಶೀಸಬೇಕು.ಚುನಾವಣೆ ಸಮೀಪಿಸಿದಾಗ ದಾಖಲೆ ರಹಿತ ಹಣ, ಮದ್ಯ ಮತ್ತಿತರ ವಸ್ತುಗಳ ಸಾಗಣೆ ಹೆಚ್ಚಾಗುವ ಸಾಧ್ಯತೆಗಳಿರುತ್ತವೆ. ಚಾಲಕರು ನೆಪ ಹೇಳಿ ಅಥವಾ ದೊಡ್ಡ ದೊಡ್ಡ ವ್ಯಕ್ತಿಗಳ ಹೆಸರು ಹೇಳಿ ಪಾರಾಗಲು ಯತ್ನಿಸುತ್ತಾರೆ. ರಾತ್ರಿ ವೇಳೆ ಸಿಬ್ಬಂದಿ ಎಚ್ಚರಿಕೆಯಿಂದ ಇರಬೇಕು. ಪ್ರತಿ ವಾಹನದ ನಂಬರ್ ಪ್ಲೇಟ್ ಪರಿಶೀಲಿಸಿ, ವಾಹನ ಎಲ್ಲಿಂದ ಬಂತು ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಕಡ್ಡಾಯವಾಗಿ ಬರೆದುಕೊಳ್ಳಬೇಕು. ಕರ್ತವ್ಯದಲ್ಲಿ ಲೋಪ ಕಂಡು ಬಂದರೆ ಕ್ರಮ ಜರುಗಿಸುವುದು ಅನಿವಾರ್ಯವಾಗುತ್ತದೆ. ದಾಖಲೆ…

Read More

ತಿಕೋಟಾ: ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಕೆಲಸ ನಿರ್ವಹಿಸುವ ಕೂಲಿಕಾರರ ಕೂಲಿಮೊತ್ತವನ್ನು ರೂ.೩೧೬ರಿಂದ ರೂ.೩೪೯ಕ್ಕೆ ಹೆಚ್ಚಳ ಮಾಡಲಾಗಿದೆ, ಇದರ ಲಾಭವನ್ನು ಎಲ್ಲ ಗ್ರಾಮೀಣ ಭಾಗದ ಜನರು ಪಡೆಯಬೇಕೆಂದು ತಿಕೋಟಾ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರವೀಣಕುಮಾರ ಸಾಲಿ ಹೇಳಿದರು.ಈಗಾಗಲೇ ಗ್ರಾಮೀಣ ಭಾಗದ ಜನರಿಗೆ ೧೦೦ ದಿನಗಳ ಅಕುಶಲ ಕೆಲಸ ನೀಡಲಾಗುತ್ತಿದೆ. ಬೇಸಿಗೆ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಯಾವದೇ ಉದ್ಯೋಗ ದೊರೆಯದೇ ಇರುವ ಪ್ರಯುಕ್ತ ಈ ಅವಧಿಯಲ್ಲಿ ಅವರಿಗೆ ನಿರಂತರವಾಗಿ ಕೆಲಸ ನೀಡುವ ಉದ್ದೇಶದಿಂದ ಗ್ರಾಮೀಣ ಪ್ರದೇಶದಲ್ಲಿ ಮನೆ-ಮನೆಗೆ ಭೇಟಿ ನೀಡಿ ನರೇಗಾ ಮಾಹಿತಿ ನೀಡುವದರ ಜೊತೆಗೆ ನಮೂನೆ-೦೬ರಲ್ಲಿ ಕೆಲಸಕ್ಕೆ ಬೇಡಿಕೆ ಪಡೆಯಲಾಗುತ್ತಿದೆ. ಹಾಗೂ ಏಪ್ರೀಲ್ ಒಂದರಿಂದ ಎಲ್ಲ ಗ್ರಾಮಗಳಲ್ಲಿ ಬೇಡಿಕೆ ಸಲ್ಲಿಸುವ ಪ್ರತಿಯೊಬ್ಬರಿಗೂ ಮನರೇಗಾ ಯೋಜನೆಯಡಿ ಕೆಲಸ ನಿರ್ವಹಿಸಲು ಬೇಕಾದ ಸಿದ್ಧತೆ ಮಾಡಿಕೊಳ್ಳಲು ಎಲ್ಲಾ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಹಾಗೂ ಮಹಾತ್ಮ ಗಾಂಧಿ ನರೇಗಾ ಸಿಬ್ಬಂದಿಗಳಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ತಿಳಿಸಿದರು. ತಾಲೂಕಿನ ಪ್ರತಿ ಗ್ರಾಮದಲ್ಲಿ ಕೂಲಿ…

Read More

ಇಂಡಿ: ಲೋಕಸಭಾ ಚುನಾವಣೆಯಲ್ಲಿ ಇಂಡಿ ಕ್ಷೇತ್ರದಲ್ಲಿ ಯಾವದೇ ಅಕ್ರಮಗಳು ನಡೆಯದಂತೆ ಚುನಾವಣೆ ಆಯೋಗದ ನಿಯಮಗಳನ್ನು ಜಾರಿಗೆ ಗೊಳಿಸಿ ಅಧಿಕಾರಿಗಳು ಮತ್ತು ನೌಕರರು ಕಟ್ಟುನಿಟಾಗಿ ಕೆಲಸ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ಭೂಬಾಲನ ಹೇಳಿದರು.ಅವರು ತಾಲೂಕಿನ ಚಿಕ್ಕ ಮಣೂರ ಅಗರಖೇಡ ಚೆಕ್ ಪೋಸ್ಟ, ಹಿಂಗಣಿ ಬ್ಯಾರೇಜು ಮತ್ತು ಪಟ್ಟಣದ ಆದರ್ಶ ಶಾಲೆಯ ಚುನಾವಣೆ ಭದ್ರತಾ ಕೋಣೆ ಮತ್ತು ಮಿನಿ ವಿಧಾನಸೌಧ ಭೇಟಿ ನೀಡಿ ಅಲ್ಲಿ ಸಿ ವಿಜಲ್ ಸೇರಿದಂತೆ ಚುನಾವಣೆ ಕುರಿತು ಪರೀಶಿಲಿಸಿ ಮಾತನಾಡುತ್ತಿದ್ದರು.ತಾಲೂಕಿನಲ್ಲಿ ಚೆಕ್ ಪೋಸ್ಟಗಳನ್ನು ತೆರೆಯಲಾಗಿದೆ. ಧೂಳಖೇಡ, ಚಿಕ್ಕಮಣೂರ ಸೇರಿದಂತೆ ಇನ್ನಿತರ ಕಡೆ ಚೆಕ್ ಪೋಸ್ಟ ತೆರೆದಿದ್ದು ಈ ಭಾಗದಲ್ಲಿ ಸಂಚರಿಸುವ ವಾಹನಗಳನ್ನು ನಿರಂತರವಾಗಿ ತಪಾಸಣೆ ಮಾಡಲಾಗುತ್ತದೆ. ನಿಗದಿತ ಹಣಕ್ಕಿಂತ ಹೆಚ್ಚು ಕೊಂಡೆಯ್ಯುವದು ಕಂಡು ಬಂದಲ್ಲಿ ಸೀಜ್ ಮಾಡಲು ಸೂಚಿಸಲಾಗಿದೆ ಎಂದರು.ಒಬ್ಬ ವ್ಯಕ್ತಿಯು ೫೦ ಸಾವಿರ ರೂ ಗಳಿಗಿಂತ ಹೆಚ್ಚು ಹಣ ಕೊಂಡೆಯ್ಯುವಂತಿಲ್ಲ. ಕೊಂಡೆಯುವದಿದ್ದರೆ ಅದಕ್ಕೆ ಪೂರಕ ದಾಖಲೆಗಳನ್ನು ಹೊಂದಿರಬೇಕು. ದಾಖಲೆಗಳಿಲ್ಲದೆ ಇದ್ದಲ್ಲಿ ಸೀಜ್ ಮಾಡಲಾಗುತ್ತದೆ. ನಂತರ ಸೂಕ್ತ ದಾಖಲೆಗಳನ್ನು ಒದಗಿಸಿ…

Read More

ಪ್ರಧಾನಿ ನರೇಂದ್ರ ಮೋದಿ ಅವಹೇಳನ | ವಿಜಯಪುರದಲ್ಲಿ ಜಿಲ್ಲಾ ಯುವ ಮೋರ್ಚಾ ಪ್ರತಿಭಟನೆ ವಿಜಯಪುರ: ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಶಿವರಾಜ್ ತಂಗಡಗಿ ಅವರನ್ನು ಸಚಿವ ಸ್ಥಾನದಿಂದ ವಜಾ ಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.ಮೋದಿ ಮೋದಿ ಎಂದು ಕೂಗುವ ಯುವಕರ ಕೆನ್ನೆಗೆ ಬಾರಿಸಿ ಎಂಬ ಅವಹೇಳನಕಾರಿ ಹೇಳಿಕೆ ಕೊಟ್ಟಿರುವ ತಂಗಡಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರುಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ಸಚಿವ ಶಿವರಾಜ್ ತಂಗಡಗಿ ಅವರ ಈ ಹೇಳಿಕೆ ದೇಶದ ಕೋಟ್ಯಂತರ ಯುವಕರ ಭಾವನೆಗೆ ಧಕ್ಕೆ ತಂದಿದೆ ನರೇಂದ್ರ ಮೋದಿಜಿ ಅವರ ಬೆಂಬಲಿತ ವಿವಿಧ ಸಂಘಟನೆಗಳು ಅವರ ಅಭಿಮಾನಿಗಳಿಗೆ ತೀವ್ರ ನೋವು ಉಂಟು ಮಾಡಿದೆ ಜಗತ್ತೇ ಭಾರತದ ಕಡೆ ನೋಡುವಂತೆ ಮಾಡಿದೆ ಜಗಮೆಚ್ಚಿದ ಜನನಾಯಕ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಮತ್ತು ಜಗದ್ಗುರು…

Read More

ವಿಜಯಪುರ: ಕೆಪಿಟಿಸಿಎಲ್ ವತಿಯಿಂದ ೧೧೦/೧೧ಕೆವಿ ಭೂತನಾಳ ವಿದ್ಯುತ್ ವಿತರಣಾ ಕೇಂದ್ರದಲ್ಲಿ ೨೦ಎಂವಿ, ೧೧೦/೩೩ ಕೆವಿ ಶಕ್ತಿ ಪರಿವರ್ತಕ ಛೇಧಕ ದುರಸ್ತಿ ಕಾಮಗಾರಿ ಕೈಗೊಳ್ಳುವುದರಿಂದ ಮಾ.೨೯ ರಂದು ಬೆಳಗ್ಗೆ ೮ ಗಂಟೆಯಿಂದ ಮದ್ಯಾಹ್ನ ೧ರವರೆಗೆ ಭೂತನಾಳ ವಿದ್ಯುತ್ ವಿತರಣಾ ಕೇಂದ್ರದಿಂದ ಹೋರಹೋಗುವ ೩೩ಕೆವಿ ತಿಡಗುಂದಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಲ್ಲಾ ೧೧ಕೆವಿ ವಿದ್ಯುತ್ ಮಾರ್ಗಗಳು ಹಾಗು ೩೩ಕೆವಿ ಅರಕೇರಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಆದ ಕಾರಣ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ವಿಜಯಪುರ ಹೆಸ್ಕಾಂ ಕಾರ್ಯ ಮತ್ತು ಪಾಲನ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ವಿಜಯಪುರ: ಜಿಲ್ಲಾಡಳಿತ ವತಿಯಿಂದ ಗುರುವಾರ ಜಿಲ್ಲಾಧಿಕಾರಿಗಳ ಸಭಾಭವನದಲ್ಲಿ ಶ್ರೀ ಅಗ್ನಿಬನ್ನಿರಾಯ ಜಯಂತಿಯನ್ನು ಚುನಾವಣಾ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಸರಳ ಹಾಗೂ ಸಾಂಕೇತಿಕವಾಗಿ ಆಚರಿಸಲಾಯಿತು.ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಶ್ರೀ ಅಗ್ನಿಬನ್ನಿರಾಯ ರವರ ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಚನೆ ಮಾಡಿದರು. ಈ ವೇಳೆ ತಹಶೀಲ್ದಾರ ಕವಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಬ್ಯುಬ್ ದ್ರಾಕ್ಷಿ ಸೇರಿದಂತೆ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.

Read More

ವಿಜಯಪುರ: ದೇವಣಗಾಂವ ಬಳಿ ನಿರ್ಮಿಸಲಾಗಿರುವ ಅಂತರ ಜಿಲ್ಲಾ ಚೆಕ್ ಪೋಸ್ಟ್ ಗೆ ಡಿಸಿ ಹಾಗೂ ಎಸ್ಪಿ ಗುರುವಾರ ಭೇಟಿ ನೀಡಿದರು.ಈ ವೇಳೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿ ಋಷಿಕೇಶ್ ಸೋನಾವಣೆ, ಅನುಮಾನಾಸ್ಪದ ವಾಹನಗಳು ಅಥವಾ, ವ್ಯಕ್ತಿ ಕಂಡು ಬಂದರೇ ಕೂಲಂಕುಶವಾಗಿ ಪರಿಶೀಲನೆ ನಡೆಸಬೇಕು. ಅಕ್ರಮವಾಗಿ ಹಣ ಹಾಗೂ ಮದ್ಯ ಸಾಗಾಟ ಮಾಡುತ್ತಿರುವುದು ಕಂಡು ಬಂದಲ್ಲಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ, ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಎಂದು ತಿಳಿಸಿದರು.

Read More

ವಿಜಯಪುರ: ಲೋಕಸಭಾ ಸಾರ್ವತ್ರಿಕ ಚುನಾವಣೆ-೨೦೨೪ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಗುರುವಾರದಂದು ಇಂಡಿ ತಾಲೂಕಿನ ಅಗರಖೇಡ ಹತ್ತಿರದ ಚಿಕ್ಕಮಣೂರು ಕ್ರಾಸ್ ಹಾಗೂ ಹಿಂಗಾಣಿ ಬಳಿ ನಿರ್ಮಿಸಲಾಗಿರುವ ಚೆಕ್ ಪೋಸ್ಟ್ ಮತ್ತು ಇಂಡಿ ಪಟ್ಟಣದಲ್ಲಿ ಸ್ಥಾಪಿಸಿರುವ ಭದ್ರತಾ ಕೊಠಡಿಗೆ ಭೇಟಿ ನೀಡಿ ಕಾರ್ಯ ವೈಖರಿಯನ್ನು ಪರಿಶೀಲಿಸಿದರು.ಈ ವೇಳೆ ಭದ್ರತಾ ಕೊಠಡಿಯಲ್ಲಿ ಇರಿಸಲಾಗಿರುವ ಇ ವಿ ಎಂ ಭದ್ರತೆಯನ್ನು ಕೂಲಂಕುಸವಾಗಿ ಪರಿಶೀಲಿಸಿದರು. ಚೆಕ್‌ಪೋಸ್ಟ್ಗಳಲ್ಲಿನ ಅಧಿಕಾರಿ ಮತ್ತು ಸಿಬ್ಬಂದಿಯ ಹಾಜರಾತಿ, ಶಾಮಿಯಾನ, ಕುಡಿಯುವ ನೀರು ಸೇರಿದಂತೆ ಚೆಕ್ ಪೋಸ್ಟ್ ಗಳ ವ್ಯವಸ್ಥೆಯ ಬಗ್ಗೆ ಮಾಹಿತಿ ಪಡೆದರು.ಚೆಕ್‌ಪೋಸ್ಟ್ಗಳು ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಚೆಕ್‌ಪೋಸ್ಟ್ಗಳಿಗೆ ನಿಯೋಜನೆಗೊಂಡ ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿ ಸರಿಯಾದ ಸಮಯಕ್ಕೆ ಪಾಳಿ ಅನುಸಾರ ಹಾಜರಾಗಿ ಕಾರ್ಯ ನಿರ್ವಹಿಸಬೇಕು. ಪ್ರತಿಯೊಂದು ವಾಹನವನ್ನು ತಪಾಸಣೆಗೆ ಒಳಪಡಿಸಬೇಕು ಎಂದು ಜಿಲ್ಲಾಧಿಕಾರಿಗಳು ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿ ಋಷಿಕೇಶ್ ಸೋನಾವಣೆ, ಇಂಡಿ ಉಪವಿಭಾಗಾಧಿಕಾರಿ ಅಭೀದ್ ಗದ್ಯಾಳ ತಹಶೀಲ್ದಾರ ಮಂಜುಳಾ ನಾಯಕ…

Read More