ಪ್ರಧಾನಿ ನರೇಂದ್ರ ಮೋದಿ ಅವಹೇಳನ | ವಿಜಯಪುರದಲ್ಲಿ ಜಿಲ್ಲಾ ಯುವ ಮೋರ್ಚಾ ಪ್ರತಿಭಟನೆ
ವಿಜಯಪುರ: ದೇಶದ ಪ್ರಧಾನಿ ನರೇಂದ್ರ ಮೋದಿಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಸಚಿವ ಶಿವರಾಜ್ ತಂಗಡಗಿ ಅವರನ್ನು ಸಚಿವ ಸ್ಥಾನದಿಂದ ವಜಾ ಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಯುವ ಮೋರ್ಚಾ ವತಿಯಿಂದ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು.
ಮೋದಿ ಮೋದಿ ಎಂದು ಕೂಗುವ ಯುವಕರ ಕೆನ್ನೆಗೆ ಬಾರಿಸಿ ಎಂಬ ಅವಹೇಳನಕಾರಿ ಹೇಳಿಕೆ ಕೊಟ್ಟಿರುವ ತಂಗಡಗಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು
ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಬಸವರಾಜ ಹೂಗಾರ ಮಾತನಾಡಿ, ಸಚಿವ ಶಿವರಾಜ್ ತಂಗಡಗಿ ಅವರ ಈ ಹೇಳಿಕೆ ದೇಶದ ಕೋಟ್ಯಂತರ ಯುವಕರ ಭಾವನೆಗೆ ಧಕ್ಕೆ ತಂದಿದೆ ನರೇಂದ್ರ ಮೋದಿಜಿ ಅವರ ಬೆಂಬಲಿತ ವಿವಿಧ ಸಂಘಟನೆಗಳು ಅವರ ಅಭಿಮಾನಿಗಳಿಗೆ ತೀವ್ರ ನೋವು ಉಂಟು ಮಾಡಿದೆ ಜಗತ್ತೇ ಭಾರತದ ಕಡೆ ನೋಡುವಂತೆ ಮಾಡಿದೆ ಜಗಮೆಚ್ಚಿದ ಜನನಾಯಕ ದೇಶದ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಮತ್ತು ಜಗದ್ಗುರು ಭಾರತಕ್ಕಾಗಿ ಶ್ರಮಿಸುತ್ತಿರುವ ಯುವ ಸಮೂಹದ ವಿರುದ್ಧ ರಾಜ್ಯದ ಸಚಿವರು ಶಿವರಾಜ ತಂಗಡಗಿ ಅವರ ನೀಡಿದ ಅವಹೇಳನಕಾರಿ ಹೇಳಿಕೆಯನ್ನು ಖಂಡಿಸುತ್ತೇವೆ. ಹಾಗೂ ಶಿವರಾಜ್ ತಂಗಡಿ ಅವರಿಗೆ ತಾಕತ್ತಿದ್ದರೆ ದೇಶದ ಒಬ್ಬನೇ ಒಬ್ಬ ಮೋದಿ ಅಭಿಮಾನಿಗೆ ಮುಟ್ಟಿ ನೋಡಲಿ ಅವರ ಪರಿಸ್ಥಿತಿ ಏನಾಗುವುದು ಎಂಬುದು ದೇಶದ ಯುವಕರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಂದು ವೇಳೆ ಶಿವರಾಜ ತಂಗಡಗಿ ಅವರ ಮೇಲೇ ಸೂಕ್ತ ಕ್ರಮ ಕೈಗೊಳ್ಳುಲು ಸರ್ಕಾರ ಹಿಂಜರದರೆ ಇನ್ನು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲನಗೌಡ ಬಿರಾದಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಾಕತ್ತು ಇದ್ದರೆ ಪ್ರಧಾನಿ ಮೋದಿ ಅವರ ವಿರುದ್ಧ ಹಗುರವಾಗಿ ನಾಲಿಗೆ ಹರಿಬಿಟ್ಟ ಶಿವರಾಜ ತಂಗಡಗಿ ಅವರಿಗೇ ತಕ್ಷಣಕ್ಕ ಸಚಿವಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿದರು .
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಈರಣ್ಣ ರೇವೂರ ಮಾತನಾಡಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಳನಗೌಡ ಪಾಟೀಲ್ ಹಾಗೂ ಈರಣ್ಣ ರಾವುರ, ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಅಶೋಕ ರಾಠೋಡ ಹಾಗೂ ರಾಘವೇಂದ್ರ ಕಾಪಸೆ, ರಾಜಕುಮಾರ್ ಸಗಾಯಿ, ಶಂಕರ ಹೂಗಾರ, ರವಿಚಂದ್ರ ಉಪ್ಪಲದಿನ್ನಿ, ರವಿ ಬಿರಾದಾರ, ಅರುಣ ನಾಯಕ, ಪ್ರೇಮ ಬಿರಾದಾರ, ಜಗದೀಶ ಸುಣಗದ, ರೋಹನ ಆಪ್ಟೆ, ಜ್ಯೋತಿ ಚವಾಣ, ನಗರ ಮಂಡಳಿ ಯುವ ಮೋರ್ಚಾ ಅಧ್ಯಕ್ಷರಾದ ಪ್ರವೀಣ ವಂದಾಲಮಠ್ ಜಿಲ್ಲೆಯ ಎಲ್ಲಾ ಮಂಡಲ ಯುವಮೋರ್ಚಾ ಅಧ್ಯಕ್ಷರು ಪ್ರಧಾನ ಕಾರ್ಯದರ್ಶಿಗಳು ಜಿಲ್ಲೆಯ ಯುವ ಮೋರ್ಚ ಪದಾಧಿಕಾರಿಗಳು ಕಾರ್ಯಕರ್ತ ಬಂಧು ಮಿತ್ರರು ಉಪಸ್ಥಿತರಿದ್ದರು.

