ಝಳಕಿ: ಸಮೀಪದ ಸುಕ್ಷೇತ್ರ ಜೇವೂರದ ಹಠಯೋಗಿ ರೇವಣಸಿದ್ಧೇಶ್ವರರ 38 ನೇ ಪುಣ್ಯಾರಾಧನೆ.
ಮಾ.29 ರಿಂದ ಏ.2 ರ ವರೆಗೆ ನಡೆಯಲಿದೆ.
ಮಾ.29 ಕ್ಕೆ ಶ್ರೀ ಗುರು ಗುರುಪಾದೇಶ್ವರ ಶಿವಾಚಾರ್ಯರ ಮಾರ್ಗದರ್ಶನದಲ್ಲಿ ಕೋಟಿ ಜಪಯಜ್ಞ, ಧರ್ಮಸಭೆ ರಾತ್ರಿ ವೀರ ಅಭಿಮನ್ಯು ನಾಟಕ ಪ್ರದರ್ಶನಗೊಳ್ಳಲಿದೆ.
ಮಾ.30 ರಂದು ಕಾಶಿ ಪೀಠದ ಜಗದ್ಗರು ಡಾ.ಮಲ್ಲಿಕಾರ್ಜುನ ವಿಶ್ವರಾಧ್ಯ ಭಗವತ್ ಪಾದಂಗಳವರ ಸಾನಿಧ್ಯದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಯಲಿದೆ.
ಮಾ.31 ರಂದು ಗೀ ಗೀ ಪದಗಳು, ಭಜನೆ, ಧರ್ಮಸಭೆ ಸೇರಿದಂತೆ ಹಲವು ಕಾರ್ಯಕ್ರಮಗಳು.
ಏ.1 ಲಿಂಗ ದೀಕ್ಷೆ ಮತ್ತು ಅಯ್ಯಾಚಾರ ಚೌಡಕಿ ಪದಗಳ ಕಾರ್ಯಕ್ರಮ.
ಏ.2 ರಂದು ಬೆಳಗ್ಗೆ ಬೆಳ್ಳಿ ಮೂರ್ತಿ ಮೆರವಣಿಗೆ ಶ್ರೀಗಳ ಕತೃ ಗದ್ದುಗೆಗೆ ಪುಷ್ಪವೃಷ್ಟಿ,3 ಗಂಟೆಗೆ ರಥೋತ್ಸವ 4 ಗಂಟೆಗೆ ಜಂಗೀ ನಿಕಾಲಿ ಗದಾ ಕುಸ್ತಿ ರಾತ್ರಿ ಚಿತ್ರ-ವಿಚಿತ್ರ ಮದ್ದು ಸುಡುವುದು,ರಾತ್ರಿ ಗೌರಿ ಗೆದ್ದಳು ನಾಟಕ ಪ್ರದರ್ಶನ ನಡೆಯಲಿದೆ ಎಂದು ಜಾತ್ರಾ ಕಮೀಟಿ ಪ್ರಕಟಣೆ ತಿಳಿಸಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

