Author: editor.udayarashmi@gmail.com

ಉದಯರಶ್ಮಿ ದಿನಪತ್ರಿಕೆ ಅಕ್ಕನ ಅರಿವು,ವಚನ ಅಧ್ಯಯನ ವೇದಿಕೆ ಪುಣೆಯ ಸದಸ್ಯರು ಸಾಹಿತಿ ವಾಗ್ಮಿಸಹಶಿಕ್ಷಕಿಯರು ಡಾ.ಕು.ಅನಿತಾ ಫಕೀರಪ್ಪಾ ಕಾರಾಜನಗಿ. ಜಿ.ಪ.ಪ್ರಾ.ಕನ್ನಡ ಶಾಲೆ ಮುಚ್ಚಂಡಿ ವಸ್ತಿ ಸೋನ್ಯಾಳ ತಾ- ಜತ್ತ; ಜಿ – ಸಾಂಗಲಿ ಇವರಿಗೆ ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳಕರ ಸೊಲ್ಲಾಪುರ ವಿಶ್ವವಿದ್ಯಾಲಯ ಕನ್ನಡ ವಿಷಯದಲ್ಲಿ ಪಿ ಏಚ್ ಡಿ ಪ್ರದಾನ ಮಾಡಿದೆ.ಇವರು ಡಾ. ಜಿ ಎಸ್ ಧಬಾಲೆ ಪ್ರಾಂಶುಪಾಲರು ಸಿ ಬಿ ಖೇಡಗಿ, ಬಸವೇಶ್ವರ ವಿಜ್ಞಾನ, ರಾಜಾ ವಿಜಯಸಿಂಹ ಕಾಮರ್ಸ & ರಾಜಾ ಜಯಸಿಂಗ ಆರ್ಟ್ಸ ಕಾಲೇಜ ಅಕ್ಕಲಕೋಟ ಜಿ: ಸೊಲ್ಲಾಪುರ ಇವರ ಮಾರ್ಗದರ್ಶನದ ಅಡಿಯಲ್ಲಿ “ಇಂಚಗೇರಿ ಸಂಪ್ರದಾಯದ ಮಹಾದೇವರು – ಒಂದು ಅಧ್ಯಯನ ಈ ಮಹಾಪ್ರಬಂಧವನ್ನು ಪುಣ್ಯಶ್ಲೋಕ ಅಹಿಲ್ಯಾದೇವಿ ಹೋಳಕರ ಸೊಲ್ಲಾಪುರ ವಿಶ್ವವಿದ್ಯಾಲಯಕ್ಕೆ ಸಾದರ ಪಡಿಸಿ Ph.D ಪದವಿಯನ್ನು ಪಡೆದಿದ್ದಾರೆ. ಈ ಮೂಲಕ ಮಹಾರಾಷ್ಟ್ರ ಮತ್ತು ಕರ್ನಾಟಕದ ಸಾಹಿತ್ಯ, ಸಂಶೋಧನ ಕ್ಷೇತ್ರಕ್ಕೆ ಅಮೂಲ್ಯವಾದ ಕೊಡುಗೆಯನ್ನು ನೀಡಿದ್ದಾರೆ.ಇವರ ಅನೇಕ ಲೇಖನಗಳು Journal ಮತ್ತು ISSN, ISBN ಕೃತಿಗಳಲ್ಲಿ ಪ್ರಕಟವಾಗಿವೆ. ಗಡಿ ಕನ್ನಡ ಸಾಹಿತ್ಯ…

Read More

ಚಿಕ್ಕಪಡಸಲಗಿಯಲ್ಲಿ ಭಾರಿ ಗಾಳಿ-ಮಳೆ ಅವಾಂತರ | ಜನಜೀವನ ಅಸ್ತವ್ಯಸ್ತ ಉದಯರಶ್ಮಿ ದಿನಪತ್ರಿಕೆ ಜಮಖಂಡಿ: ತಾಲ್ಲೂಕಿನ ಚಿಕ್ಕಪಡಸಲಗಿ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ರವಿವಾರ ಸಂಜೆ ಸುರಿದ ಭಾರಿ ಗಾಳಿ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡ ಘಟನೆ ನಡೆದಿದೆ. ಮಳೆಯೊಂದಿಗೆ ಬೀಸಿದ ಬಿರುಗಾಳಿಯ ಅಬ್ಬರಕ್ಕೆ ಹಲವು ಬೃಹತ್ ಗಿಡಮರಗಳು ಧರೆಗುರುಳಿದ್ದು, ವಿಜಯಪುರ–ಧಾರವಾಡ ರಾಜ್ಯ ಹೆದ್ದಾರಿ ಮೇಲೆ ಉರುಳಿಬಿದ್ದ ಪರಿಣಾಮ ಕೆಲಕಾಲ ವಾಹನ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು.ಹೆದ್ದಾರಿ ಮೇಲೆ ದೊಡ್ಡ ಮರಗಳು ಬಿದ್ದಿದ್ದರಿಂದ ರಸ್ತೆ ಎರಡೂ ಬದಿಗಳಲ್ಲಿ ವಾಹನಗಳ ಸಾಲು ನಿರ್ಮಾಣವಾಗಿದ್ದು, ಪ್ರಯಾಣಿಕರು ಹಾಗೂ ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸಿದರು. ಕೆಲ ಸಮಯ ವಾಹನಗಳು ರಸ್ತೆ ಮಧ್ಯದಲ್ಲೇ ನಿಂತುಕೊಂಡಿದ್ದವು. ಗಾಳಿ ಮತ್ತು ಮಳೆಯ ತೀವ್ರತೆಗೆ ಸಾರ್ವಜನಿಕರು ಸುರಕ್ಷಿತ ಸ್ಥಳಗಳಿಗೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡರು. ಸ್ಥಳೀಯ ಗ್ರಾಮಸ್ಥರು ಹಾಗೂ ಸಾರ್ವಜನಿಕರು ಸಹ ಪೊಲೀಸ್ ಇಲಾಖೆಯೊಂದಿಗೆ ಕೈಜೋಡಿಸಿ ರಸ್ತೆ ಮೇಲೆ ಉರುಳಿಬಿದ್ದಿದ್ದ…

Read More

ಉದಯರಶ್ಮಿ ದಿನಪತ್ರಿಕೆ ​ಬೆಂಗಳೂರು: ರಾಜ್ಯ ಸಾರ್ವಜನಿಕ ಆಡಳಿತದಲ್ಲಿ ಪಾರದರ್ಶಕತೆ, ಹೊಣೆಗಾರಿಕೆ ಮತ್ತು ದಕ್ಷತೆಯನ್ನು ಹೆಚ್ಚಿಸಲು ಕರ್ನಾಟಕ ಸರ್ಕಾರವು ‘ಕರ್ತವ್ಯ’ (ಏಂAಒS-ಏಚಿಡಿಟಿಚಿಣಚಿಞಚಿ ಂಜvಚಿಟಿಛಿeಜ ಂಣಣeಟಿಜಚಿಟಿಛಿe ಒಚಿಟಿಚಿgemeಟಿಣ Sಥಿsಣem) ಎಂಬ ನೂತನ ಮುಂದುವರಿದ ಹಾಜರಾತಿ ನಿರ್ವಹಣಾ ತಂತ್ರಜ್ಞಾನವನ್ನು ಜಾರಿಗೆ ತಂದಿದೆ.​ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಇಲಾಖಾ ಕಾರ್ಯದರ್ಶಿಗಳೊಂದಿಗೆ ನಡೆಸಿದ ಮೊದಲ ಸಭೆಯಲ್ಲೇ ಸರ್ಕಾರಿ ನೌಕರರು ಹಾಗೂ ಅಧಿಕಾರಿಗಳು ಕಚೇರಿ ವೇಳೆಯಲ್ಲಿ ಕಡ್ಡಾಯವಾಗಿ ೧೦೦% ಹಾಜರಿರಬೇಕು ಮತ್ತು ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಬೇಕು ಎಂದು ಖಡಕ್ ಸೂಚನೆ ನೀಡಿದ್ದರು.ಈ ಹಿಂದೆ ಜಾರಿಯಲ್ಲಿದ್ದ ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಉದ್ಯೋಗಿಗಳು ಕೇವಲ ಡಿಜಿಟಲ್ ಸಹಿ ಮಾಡಿ ಕಚೇರಿಯಿಂದ ಗೈರಾಗುವ ಸಾಧ್ಯತೆಗಳಿದ್ದವು. ಈ ದೋಷವನ್ನು ನಿವಾರಿಸಲು, ಉದ್ಯೋಗಿಗಳ ಭೌತಿಕ ಉಪಸ್ಥಿತಿ ಮತ್ತು ಕಚೇರಿಯ ಭೌಗೋಳಿಕ ಸ್ಥಳವನ್ನು (ಉeogಡಿಚಿಠಿhiಛಿಚಿಟ ಐoಛಿಚಿಣioಟಿ) ನಿಖರವಾಗಿ ಪತ್ತೆಹಚ್ಚುವ ಈ ಹೊಸ ವ್ಯವಸ್ಥೆಯನ್ನು ರೂಪಿಸಲಾಗಿದೆ.​ಸಂಪೂರ್ಣ”ಮೇಡ್-ಇನ್-ಕರ್ನಾಟಕ” ಆವಿಷ್ಕಾರಯಾವುದೇ ಬಾಹ್ಯ ಖಾಸಗಿ ತಂತ್ರಜ್ಞಾನ ಸಂಸ್ಥೆಗಳ ನೆರವಿಲ್ಲದೆ, ಸಂಪೂರ್ಣವಾಗಿ ಸರ್ಕಾರದ ಪರಿಸರ ವ್ಯವಸ್ಥೆಯಲ್ಲೇ “ಕರ್ತವ್ಯ” ಸಾಫ್ಟ್ವೇರ್ ಅನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಲಾಗಿದೆ. ಸಿಬ್ಬಂದಿ…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಗ್ರಾಮಸ್ಥರ ಬಹು ದಿನಗಳ ಬೇಡಿಕೆಯಾಗಿದ್ದ ವಿಜಯಪುರದಿಂದ ಬೇನಾಳ ರೈಲು ನಿಲ್ದಾಣಕ್ಕೆ ನೂತನ ಬಸ್ (ಸಂಚಾರ ) ಸೇವೆ ಇಂದು ಆರಂಭವಾಗಿದೆ.ವರುಷದ ಹಿಂದೆ ಸಾರಿಗೆಇಲಾಖೆಯ ಅಧಿಕಾರಿಗಳಿಗೆ ಬೇನಾಳ ಆರ್. ಎಸ್. ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದರು,ಮನವಿಗೆ ಸ್ಪಂದಿಸಿದ ಅಧಿಕಾರಿಗಳು ಬಸ್ ಸಂಚಾರವನ್ನು ಆರಂಭಿಸಿದ್ದಾರೆ.ಈ ನೂತನ ಬಸ್ಸು ಪ್ರತಿದಿನ ವಿಜಯಪುರ ಕೇಂದ್ರ ಬಸ್ ನಿಲ್ದಾಣದಿಂದ ಬೆಳಿಗ್ಗೆ ೭:೪೫ಕ್ಕೆ ಹೊರಟು ೦೯: ೩೦ಕ್ಕೆ ಆಲಮಟ್ಟಿ ಉದ್ಯಾನಕ್ಕೆ ತಲುಪುತ್ತದೆ.೦೯:೪೫ ನಿಮಿಷಕ್ಕೆ ಉದ್ಯಾನದಿಂದಹೊರಟು ೧೧: ೩೦ ನಿಮಿಷಕ್ಕೆ ವಿಜಯಪುರವನ್ನು ತಲುಪುತ್ತದೆ.ಅದೇ ಬಸ್ಸು ೧೧ : ೪೫ ನಿಮಿಷಕ್ಕೆ ವಿಜಯಪುರವನ್ನು ಬಿಟ್ಟು ೦೧: ೩೦ಕ್ಕೆ ಆಲಮಟ್ಟಿ ಉದ್ಯಾನಕ್ಕೆ ಬರುತ್ತದೆ.ನಂತರ ಮಧ್ಯಾಹ್ನ ೨ ಗಂಟೆಗೆ ಉದ್ಯಾನವನ್ನು ಬಿಟ್ಟು ೩:೩೦ಕ್ಕೆ ವಿಜಯಪುರವನ್ನು ತಲುಪುತ್ತದೆ.ಹೀಗೆ ಪ್ರತಿದಿನ ೪ ಸಲ ಬಸ್ಸು ಸೇವೆಯನ್ನು ಒದಗಿಸುತ್ತದೆ.ನೂತನ ಬಸ್ ಸಂಚಾರದಿಂದಈ ಭಾಗದ ವಿದ್ಯಾರ್ಥಿಗಳಿಗೆ, ರೈತರಿಗೆ, ಕೂಲಿಕಾರ್ಮಿಕರಿಗೆ, ಮಹಿಳಾ ಉದ್ಯೋಗಿಗಳಿಗೆಬಹಳ ಸಹಾಯವಾಗಿದೆ.ವಿಜಯಪುರ ಕೇಂದ್ರ ಬಸ್ ನಿಲ್ದಾಣ ದಿಂದ ಹೊರಟಬಸ್ಸು ಜುಮನಾಳ ಕ್ರಾಸ್, ಹೊನಗನಹಳ್ಳಿ, ತೊನಶ್ಯಾಳ ಕ್ರಾಸ್, ಮುಳವಾಡ…

Read More

ವಿಜಯಪುರದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಔದ್ರಾಮ ಅಧಿಕಾರಿಗಳಿಗೆ ಸೂಚನೆ ಉದಯರಶ್ಮಿ ದಿನಪತ್ರಿಕೆ ​ವಿಜಯಪುರ: ಜಿಲ್ಲೆಯಲ್ಲಿ ಮುಂಬರುವ ಜೂನ್ ೨೭-ನಾಡಪ್ರಭು ಕೆಂಪೇಗೌಡ ಜಯಂತಿ, ಜೂನ್ ೨೭ರಂದು ನಾಡಪ್ರಭು ಕೆಂಪೇಗೌಡ ಹಾಗೂ ಜುಲೈ ೦೨ರಂದು ಡಾ. ಫ.ಗು. ಹಳಕಟ್ಟಿ ಜನ್ಮದಿನ ಹಾಗೂ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಮಹನೀಯರ ಜಯಂತಿ ಕಾರ್ಯಕ್ರಮಗಳನ್ನು ಯಾವುದೇ ಲೋಪವಿಲ್ಲದೆ, ಅತ್ಯಂತ ಅರ್ಥಪೂರ್ಣ ಹಾಗೂ ಅಚ್ಚುಕಟ್ಟಾಗಿ ಆಯೋಜಿಸುವಂತೆ ಅಪರ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚನೆ ನೀಡಿದರು.​ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಜಯಂತಿ ಕಾರ್ಯಕ್ರಮಗಳ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಈ ಸೂಚನೆ ನೀಡಿದರು.​ಜಯಂತಿ ಕಾರ್ಯಕ್ರಮಗಳ ಯಶಸ್ವಿ ಆಯೋಜನೆಗಾಗಿ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಈಗಾಗಲೇ ವಹಿಸಲಾಗಿರುವ ಜವಾಬ್ದಾರಿಗಳನ್ನು ಎಲ್ಲರೂ ಸಮರ್ಪಕವಾಗಿ ನಿರ್ವಹಿಸಬೇಕು. ಕಾರ್ಯಕ್ರಮಗಳ ನಿಮಿತ್ತ ಅಗತ್ಯವಿರುವ ಎಲ್ಲಾ ಪೂರ್ವ ಸಿದ್ಧತೆಗಳನ್ನು ಮುಂಚಿತವಾಗಿಯೇ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.​ಜೂನ್ ೨೭-ನಾಡಪ್ರಭು ಕೆಂಪೇಗೌಡ ಜಯಂತಿ,ಜೂನ್ ೨೭ರಂದು ನಾಡಪ್ರಭು ಕೆಂಪೇಗೌಡ…

Read More

ಶಾಲೆಗೊಂದು ಸಸಿ ವಿತರಣಾ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಆರ್ ನಡುಗಡ್ಡಿ ಸಲಹೆ ಉದಯರಶ್ಮಿ ದಿನಪತ್ರಿಕೆ ಇಂಡಿ: ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಮನುಷ್ಯ ನಿಸರ್ಗ ನಾಶ ಮಾಡುತ್ತಿದ್ದಾನೆ ಸುಂದರ ಪರಿಸರ ನಿರ್ಮಾಣವಾಗಬೇಕಾದರೆ ಶಾಲೆಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗೆ ಒಂದು ಮರ ಪೋಷಣೆ ಮಾಡುವ ಅರಿವು ಮೂಡಿಸಿ ಒಂದು ಮರ ದತ್ತು ನೀಡಬೇಕೆಂದು ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್ ಆರ್ ನಡುಗಡ್ಡಿ ಹೇಳಿದರುನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಇಂಡಿ ಘಟಕ ಮತ್ತು ಸಹಕಾರಿ ನೌಕರರ ಬ್ಯಾಂಕಿನ ನಿರ್ದೇಶಕ ಅಲ್ಲಾಭಕ್ಷ ವಾಲಿಕಾರ ಮತ್ತು ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಶಾಲೆಗೊಂದು ಸಸಿ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಕಸಾಪ ನಿಕಟ ಪೂರ್ವ ಅಧ್ಯಕ್ಷ ಕಾಂತು ಇಂಡಿ, ತಾಲೂಕಿನ ಎಲ್ಲ ಶಾಲೆಗಳಿಗೆ ಸಸಿ ಕೊಟ್ಟಂತಹ ಅಲ್ಲಾಭಕ್ಷ್ ವಾಲಿಕಾರ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಜಯರಾಮ ಚವ್ಹಾಣ ಮಾತನಾಡಿ ಹಸಿರು…

Read More

ಉದಯರಶ್ಮಿ ದಿನಪತ್ರಿಕೆ ಆಲಮಟ್ಟಿ: ಇಲ್ಲಿಯ ಚಂದ್ರಮ್ಮ ದೇವಸ್ಥಾನದ ಬಳಿ ಕೃಷ್ಣಾ ನದಿಯ ತೀರದಲ್ಲಿ ತಾಳಿಕೋಟೆ, ಹುಲ್ಲೂರು ತಾಂಡಾದ ೧೬ ಜನ ಯುವಕರು ಸೇರಿ ೫ ಗಂಟೆಗಳ ಶ್ರಮದಾನ ಮಾಡಿ ಸುಮಾರು ೨ ಟನ್ ಕಸ ತೆಗೆದಿದ್ದಾರೆ.ತೆಗೆದ ಕಸದಲ್ಲಿ ಏನಿತ್ತು?

Read More

ಉದಯರಶ್ಮಿ ದಿನಪತ್ರಿಕೆ ವಿಜಯಪುರ: ಜೀವನದಲ್ಲಿ ಅತಿಯಾದ ಆಸೆಗಳನ್ನು ತ್ಯಜಿಸಿ, ಸಾತ್ವಿಕ ಚಿಂತನೆ, ಭಕ್ತಿ ಮತ್ತು ಧ್ಯಾನದ ಮೂಲಕ ನಮ್ಮ ಮನಸ್ಸನ್ನು ಹತೋಟಿಯಲ್ಲಿಡಬೇಕು. ಭಗವದ್ಗೀತೆ ಮತ್ತು ಶರಣರ ವಚನಗಳ ಸಾರ-ಸಂದೇಶವು ನಮಲ್ಲಿರುವ ಅರಿಷಡ್ವರ್ಗಗಳನ್ನು ತ್ಯಜಿಸುತ್ತಾ, ಅಂಧಕಾರವೆಂಬ ಅಜ್ಞಾನವನ್ನು ತೊಲಗಿಸಿ ಸುಜ್ಞಾನದ ಸುಧೆ ಬೆಳಗುವಂತೆ ಮತ್ತು ಸಮಚಿತ್ತತೆಯಿಂದ ಬದುಕಲು ಮಾರ್ಗದರ್ಶನ ನೀಡುತ್ತವೆ ಎಂದು ಸನಾತನ ಸಾಧಕರಾದ ದೃವ ಕುಲಕರ್ಣಿ ಅವರು ಅಭಿಪ್ರಾಯಪಟ್ಟರು.ಅವರು ನಗರದ ಅಲ್-ಅಮೀನ್ ಎದುರಿಗೆ ಇರುವ ಎನ್.ಜಿ.ಓ. ಕಾಲನಿಯ ಆಂಜನೇಯ ದೇವಸ್ಥಾನದಲ್ಲಿ ಜರುಗಿದ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.ಅವರು ಮಾತನಾಡುತ್ತಾ, ಲೌಕಿಕ ಜಂಜಾಟದಿಂದ ಮುಕ್ತಿ ಪಡೆದು ಜೀವನದ ಕೊನೆಯ ಉಸಿರಿರುವರೆಗೂ ಸದಾ ಸಹಾಯ, ಸಹಕಾರ, ಸಮತಾಭಾವ, ಸಮನ್ವಯತೆ ಮತ್ತು ಸಮಷ್ಠಿಭಾವಗಳೆಂಬ ಪಂಚ ಸದ್ಗುಣಗಳನ್ನು ಅನುಪಾಲಿಸಬೇಕು. ನಮ್ಮ ಬದುಕಿನ ನಿಜವಾದ ಅಸ್ತಿತ್ವನ್ನು ಅರಿತುಕೊಂಡು ಅಧ್ಯಾತ್ಮ, ಸತ್ಸಂಗ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸಮಾಜದ ಒಳಿತಿಗಾಗಿ ದುಡಿಯುವುದೇ ಜೀವನದ ಸಾರ್ಥಕ್ಯವನ್ನು ಮನಗಾಣಬೇಕು. ಸತ್ಸಂಗವು ವ್ಯಕ್ತಿಯ ಆಲೋಚನೆ, ನಡುವಳಿಕೆ ಮತ್ತು ಜೀವನದ ದೃಷ್ಟಿಕೋನವನ್ನು ಧನಾತ್ಮಕವಾಗಿ ಬದಲಿಸುವ…

Read More

ಕಬಿನಿ ಹಿನ್ನೀರಿನಲ್ಲಿ ಬಸವೇಶ್ವರ ದೇಗುಲದ ಅವಶೇಷಗಳು ಗೋಚರ ವಿಶೇಷ ವರದಿ: ಶ್ರೀಕಂಠ ಈಶ್ವರ್ಎಚ್ ಡಿ ಕೋಟೆ: ಮಳೆಗಾಲದಲ್ಲಿ ನೀರಿನಿಂದ ತುಂಬಿ ತುಳುಕುವ ಜಲಾಶಯ ನೋಡುವುದೇ ಚೆಂದ. ಜಲಾಶಯ ಭರ್ತಿಗೆ ಇನ್ನು ಎರಡು-ಮೂರು ಅಡಿ ಬಾಕಿ ಇದ್ದಾಗ ರೈತರು ಮತ್ತು ಸ್ಥಳೀಯರು ಸಂತಸ ಪಡುತ್ತಾರೆ, ಏಕೆಂದರೆ ಇದು ನೀರಾವರಿ ಮತ್ತು ಕುಡಿಯುವ ನೀರಿನ ಭರವಸೆ ನೀಡುತ್ತದೆ. ನಾಡಿನ ಸಮೃದ್ಧಿಯ ಸಂಕೇತ ಪ್ರತಿಬಿಂಬಿಸುತ್ತೆ. ಆದರೆ ಕೆಲವೊಮ್ಮೆ ಮಳೆಯ ಕೊರತೆಯಿಂದ ಹರಿದು ಬರುವ ನೀರಿನ ಪ್ರಮಾಣ ಕಡಿಮೆಯಾಗಿ ಜಲಾಶಯ ಖಾಲಿಯಾಗುತ್ತಾ ಹೋಗುತ್ತಿದ್ದಂತೆಯೇ ಜಲಾಶಯ ತನ್ನೊಡಲಲ್ಲಿ ಹುದುಗಿಟ್ಟ ರಹಸ್ಯವನ್ನು ಹೊರಹಾಕಿ ಬಿಡುತ್ತದೆ. ಈ ವೇಳೆ ಕಂಡು ಬರುವ ದೃಶ್ಯಗಳು ವಿಜ್ಞಾನ ಲೋಕವನ್ನೇ ವಿಸ್ಮಯಗೊಳಿಸುತ್ತೆ.ಕೆಆರ್ ಎಸ್ ಜಲಾಶಯದಲ್ಲಿ ನೀರು ಕಡಿಮೆಯಾಗುತ್ತಿದ್ದಂತೆಯೇ ವೇಣುಗೋಪಾಲ ಸ್ವಾಮಿ ದೇವಸ್ಥಾನ, ಇನ್ನಿತರ ಪಳೆಯುಳಿಕೆಗಳು ಪತ್ತೆಯಾಗುತ್ತೆ. ಅದೇ ರೀತಿ ಹೆಚ್ ಡಿ ಕೋಟೆ ತಾಲೂಕಿನ ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತ ಹೋದರೆ ಕಂಡು ಕೇಳರಿಯದ ಅಚ್ಚರಿಗಳು ಬೆಳಕಿಗೆ ಬರುತ್ತವೆ. 2013 ಮತ್ತು 2016ರಲ್ಲಿ ಮಳೆ…

Read More

ಉದಯರಶ್ಮಿ ದಿನಪತ್ರಿಕೆ ಇಂಡಿ: ನಗರಸಭೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರಿಗೆ ಕಳೆದ ೧೧ ತಿಂಗಳುಗಳಿಂದ ವೇತನ ಪಾವತಿ ಮಾಡದಿರುವುದು ಪೌರ ಕಾರ್ಮಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.ಸರ್, ನಮಗೂ ಸಂಸಾರವಿದೆ. ತಂದೆ-ತಾಯಿ, ಮಕ್ಕಳಿದ್ದಾರೆ. ವರ್ಷಗಟ್ಟಲೆ ನಾವು ದುಡಿದ ವೇತನ ನೀಡದಿದ್ದರೆ ನಾವು ಹೇಗೆ ಬದುಕಬೇಕು. ನೀವಾದರೂ ಸಂಬಂಧಿಸಿದ ಅಧಿಕಾರಿಗಳಿಗೆ, ಶಾಸಕರಿಗೆ ಹೇಳಿ ನಮ್ಮ ವೇತನ ಮಾಡಿಸಿ ಪುಣ್ಯ ಕಟ್ಟಿಕೊಳ್ಳಿ ಎಂದು ಪತ್ರಕರ್ತರ ಮುಂದೆ ಪೌರಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.ಅಲ್ಲದೆ ಪೌರಕರ್ಮಿಕರಿಗೆ ನಗರಸಭೆ ವತಿಯಿಂದ ಬೆಳಿಗ್ಗೆ ಉಪಹಾರದ ವ್ಯವಸ್ಥೆ ಮಾಡಿರುತ್ತಾರೆ. ಆದರೆ ಅವರಿಗೆ ಕೂರಲು ವಿಶ್ರಾಂತಿ ಗೃಹವಿಲ್ಲದ್ದರಿಂದ ರಸ್ತೆಯ ಪಕ್ಕದ ಫುಟ್‌ಪಾತ್ ಮೇಲೆಯೇ ಕುಳಿತು, ನಿಂತು ಪೌರಕರ್ಮಿಕರು ಉಪಹಾರ ಸೇವಿಸುತ್ತಾರೆ.ನಗರದ ಸ್ವಛ್ಛತೆಗೆ ನಸುಕಿನ ೪ ಘಂಟೆಯಿಂದಲೇ ಕಸಗುಡಿಸಲು ಆರಂಭಿಸುವ ಪೌರ ಕಾರ್ಮಿಕರು ಬೆಳಿಗ್ಗೆ ೯:೩೦ ರಿಂದ ೧೦:೩೦ ರವರೆಗೆ ಉಪಹಾರ ಸೇವಿಸಲು ನಗರಸಭೆ ಕಾರ್ಯಲಯದ ಪಕ್ಕದಲ್ಲಿ ಖಾಲಿ ಇರುವ ಕಸದ ಗಾಡಿಗಳನ್ನು ನಿಲ್ಲಿಸುವ ಜಾಗದಲ್ಲಿ, ಫುಟ್‌ಪಾತ್ ಮೇಲೆ ನಿಂತು ಗಬ್ಬು ವಾಸನೆಯ ನಡುವಲ್ಲೇ ಉಪಹಾರ ಸೇವಿಸಬೇಕಾದ ದುಸ್ಥಿತಿ…

Read More