ಉದಯರಶ್ಮಿ ದಿನಪತ್ರಿಕೆ
ತಿಕೋಟಾ: ಪಟ್ಟಣದ ಬಸವೇಶ್ವರ ವೃತ್ತದಲ್ಲಿ ರೈತರು ಬೆಳಿಗ್ಗೆ ೧೦ಘಂಟೆಗೆ ಕಾರ್ಯಕ್ರಮ ಆಯೋಜಿಸಿದ್ದು ತುಬಚಿ-ಬಬಲೇಶ್ವರ ಏತ ನೀರಾವರಿಯಿಂದ ಬಾಬಾನಗರ ಹತ್ತಿರ ೫೩೦ ಎಕರೆ ಜಾಗದಲ್ಲಿ ಡ್ಯಾಂ ನಿರ್ಮಾಣ ಮಾಡಿ ೦.೮ಟಿಎಂಸಿ ನೀರನ್ನು ಸಂಗ್ರಹ ಮಾಡಲು ಬಜೆಟ್ ಮಂಡನೆಯಲ್ಲಿ ಮುಖ್ಯಮಂತ್ರಿಗಳಿಂದ ಅನುಮೋದನೆ ಪಡೆದು ರೂ.೬೦೨ಕೋಟಿ ವೆಚ್ಚದಲ್ಲಿ ಬೃಹತ್ ಕಾಮಗಾರಿ ಮುಂದಿನ ದಿನಗಳಲ್ಲಿ ನಿರ್ಮಾಣಗೊಳ್ಳಲು ಕಾರ್ಣಿಕರ್ತರಾದ ಕೈಗಾರಿಕೆ ಸಚಿವರು ಮತ್ತು ಬಬಲೇಶ್ವರ ಮತಕ್ಷೇತ್ರದ ಶಾಸಕರಿಗೆ ರೈತರು ಬೆಳ್ಳಿ ವಸ್ತುವಿನಿಂದ ಮತ್ತು ದ್ರಾಕ್ಷಿ ಮನುಕಿನಿಂದ ಬೃಹತ್ ಹಾರದಲ್ಲಿ ಸನ್ಮಾನಿಸಿ ಗೌರವಿಸಲು ರೈತ ಮುಖಂಡರು ತಯಾರಿ ಮಾಡಿಕೊಂಡಿದ್ದಾರೆ.
ಪೂರ್ವಭಾವಿ ಸಭೆ ನಡೆಸಿದ ಮುಖಂಡರು ನಮ್ಮ ಭಾಗದ ರೈತರು ಮರೆಯಲಾಗದಂತ ಕೆಲಸ ಸಚಿವರು ಮಾಡುತ್ತದ್ದಾರೆ, ಮುಂಬರುವ ದಿನಗಳ ಬೆಸಿಗೆಯಲ್ಲಿ ಇಡಿ ತಿಕೋಟಾ ತಾಲೂಕಿನಾದ್ಯಂತ ನೀರಿನ ಕೊರತೆ ಆಗದಂತೆ ದಿಟ್ಟ ಹೆಜ್ಜೆಯನ್ನು ಇಟ್ಟು ನೀರಾವರಿಗೆ ಒತ್ತುಕೋಡುತ್ತಿರುವುದು ವಿಶೇಷವಾಗಿದೆ ಎಂದರು. ನಾವು ಅವರಿಗೆ ಯಾವತ್ತು ಚಿರಋಣಿಯಾಗೋನ ಎಂದು ಸೋಮನಾಥ ಬಾಗಲಕೋಟ ಹೇಳಿದರು.
ಈ ವೇಳೆ ಬಸಯ್ಯಾ ವಿಭೂತಿ, ಜೆ ಎಂ ಪಾಟೀಲ, ವಿ ಎಂ ಪಾಟೀಲ, ಭಾಗೀರತಿ ತೇಲಿ ಆರ ಬಿ ದೇಸಾಯಿ, ಮಾಳು ಕವಿ, ಸಿದ್ದು ಗೌಡ್ನವರ, ರಾಜುಗೌಡ ಪಾಟೀಲ, ಅಲ್ತಾಪ-ರ‍್ಪಾನ ಭಾಗವಾನ, ಮಮ್ಮು ಮುಜಾವರ, ಸಂತೋಷ ಕೋಲ್ಹಾರ, ಹಾಗು ಮತ್ತಿತರರು ಇದ್ದರು.

