ಉದಯರಶ್ಮಿ ದಿನಪತ್ರಿಕೆ
ಕಲಕೇರಿ: ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿ ಕೇಂದ್ರಕ್ಕೆ ಇಂದು ಶುಕ್ರವಾರ ಕಲಕೇರಿ ಗ್ರಾಮದಲ್ಲಿ ಚಾಲನೆ ನೀಡಲಾಯಿತು.
ಸಹಕಾರಿ ಸಂಘಗಳ ಉಪನಿಬಂಧಕರಾದ ಕನಕರಾಜ ವಡ್ಡರ ಮಾತನಾಡಿ ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿಗೆ ಬೆಂಬಲ ಬೆಲೆ ಘೋಷಣೆ ಮಾಡಿ ರೈತರ ಅಭಿವೃದ್ದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶ್ರಮಿಸುತ್ತಿವೆ ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಬೇಕು, ಜೊತೆಗೆ ರೈತರು ತಮ್ಮ ಸರತಿಯಂತೆ ಬಂದು ಗುಣಮಟ್ಟದ ತೊಗರಿಯನ್ನು ಕೇಂದ್ರಕ್ಕೆ ನೀಡಬೇಕು ಎಂದು ಹೇಳಿದರು.
ಕಲಕೇರಿ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ಹಾಗೂ ಗದ್ದುಗೆಮಠದ ಗುರುಮಡಿವಾಳೇಶ್ವರ ಶಿವಾಚಾರ್ಯರು ಸಾನಿಧ್ಯವಹಿಸಿದ್ದರು. ಪಿಕೆಪಿಎಸ್ ಅಧ್ಯಕ್ಷ ರುದ್ರಪ್ಪ ಗುಮಶೆಟ್ಟಿ, ಸಂಗಾರೆಡ್ಡಿ ದೇಸಾಯಿ, ರೈತ ಹೋರಾಟಗಾರ ಹಣಮಂತ ವಡ್ಡರ್ ಮಾತನಾಡಿದರು.
ಈ ವೇಳೆ ಪಿಕೆಪಿಎಸ್ ಉಪಾಧ್ಯಕ್ಷ ಪ್ರೇಮು ಪವಾರ, ವಿದ್ಯಾನಂದ ಹಿರೇಮಠ, ಗುರು ಕಡಕೋಳ, ವೀರಪ್ಪ ಝಳಕಿ, ಬಸಲಿಂಗಯ್ಯ ಆಲಾಳಮಠ, ಮುತ್ತು ಹೆಗ್ಗಣದೊಡ್ಡಿ, ಈರಣ್ಣ ಗುಮಶೆಟ್ಟಿ, ಬಸು ಪೂಜಾರಿ, ನಿಂಗಪ್ಪ ದೊರೆಗೋಳ, sಸೋಮನಾಥ ಇಸಾಂಪೂರ, ವಾಗೀಷ ಹಿರೇಮಠ, ಸೇರಿದಂತೆ ಕಲಕೇರಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವ ಸದಸ್ಯರು ಇದ್ದರು.

