Author: editor.udayarashmi@gmail.com

ವಿಜಯಪುರ: ಭಾರತ ಸರ್ಕಾರದ ನೆಹರು ಯುವ ಕೇಂದ್ರ ಸಂಘಟನೆಯ (ಎನ್‌ವೈಕೆಎಸ್) ವಿಜಯಪುರ ಜಿಲ್ಲಾ ಸಲಹಾ ಸಮಿತಿ ನಾಮನಿರ್ದೇಶಿತ ಸದಸ್ಯರಾಗಿ ಇಲ್ಲಿನ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಚವ್ಹಾಣ ಇವರನ್ನು ಕೇಂದ್ರದ ಯುವ ಜನ ಸೇವೆ ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ ಅವರ ಶಿಫಾರಸ್ಸಿನ ಮೇರೆಗೆ ನೇಮಕಗೊಳಿಸಿ ಎನ್‌ವೈಕೆಎಸ್‌ನ ಡೈರಕ್ಷರ್ ಜನರಲ್ ನಿತೀಶ್‌ಕುಮಾರ ಮಿಶ್ರಾ ಆದೇಶ ಹೊರಡಿಸಿದ್ದಾರೆ.

Read More

ಮುದ್ದೇಬಿಹಾಳ: ಫೆ.೧ ರಂದು ಬೆ.೧೦-೩೦ ಕ್ಕೆ ಪಟ್ಟಣದ ಬಾಲಕಿಯರ ಪ್ರೌಢ ಶಾಲೆಯ ಸಾಂಸೃತಿಕ ವೇದಿಕೆಯಲ್ಲಿ ಮಾಜಿ ಶಾಸಕರಾದ ಲಿಂ. ಎಂ.ಎಂ.ಸಜ್ಜನ ಅವರ ದ್ವಿತೀಯ ಪುಣ್ಯ ಸ್ಮರಣೆ ಹಾಗೂ ದತ್ತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.ತಾಲೂಕು ಶರಣ ಸಾಹಿತ್ಯ ಪರಿಷತ್ತು, ಲಿಂಗೈಕ್ಯರ ಅಭಿಮಾನಿ ಬಳಗ ಹಾಗೂ ಸಜ್ಜನ ಪರಿವಾರದ ಸಹಯೋಗದೊಂದಿಗೆ ನಡೆಯುವ ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕೊಲ್ಹಾರದ ದಿಗಂಬರೇಶ್ವರ ಸಂಸ್ಥಾನಮಠದ ಪರಮ ಪೂಜ್ಯ ಯೋಗಿ ಕಲ್ಲಿನಾಥ ದೇವರು ವಹಿಸಲಿದ್ದು ಶಾಸಕ ಸಿ.ಎಸ್.ನಾಡಗೌಡರು ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಬಾಗಲಕೋಟದ ಮಾಜಿ ಶಾಸಕ ಎಸ್.ಜಿ.ನಂಜಯ್ಯನಮಠ, ಮುತ್ತಗಿಯ ರಮೇಶ ಸೂಳಿಭಾವಿ, ಗಣ್ಯ ವ್ಯಾಪಾರಿ ಬಸವರಾಜ ಮೋಟಗಿ ಆಗಮಿಸಲಿದ್ದು, ವೀರಶೈವ ವಿದ್ಯಾ ವರ್ಧಕ ಸಂಘದ ಅಧ್ಯಕ್ಷ ವಿ.ಎಂ.ನಾಗಠಾಣ, ಚೇರಮನ್ ಎಂ.ಎಸ್.ನಾವದಗಿ, ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ ಗೌರವ ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

Read More

ಬಸವನಬಾಗೇವಾಡಿ: ಕ್ರೀಡೆಯಲ್ಲಿ ಭಾಗವಹಿಸುವಿಕೆಯು ಮನೋಭಾವ ಬೆಳೆಸಿಕೊಂಡರೆ ಜೀವನದಲ್ಲಿ ಗೆಲುವು ಸಿಗಲು ಸಹಕಾರಿಯಾಗುತ್ತದೆ ಎಂದು ವ್ಹಿಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತ ಪಾಟೀಲ ಹೇಳಿದರು.ಪಟ್ಟಣದ ಬಸವೇಶ್ವರ ಪಪೂ. ಕಾಲೇಜು ಆವರಣದಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಕಂದಾಯ ಇಲಾಖೆ ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿವಿಧ ಇಲಾಖೆಗಳ ಕ್ರಿಕೆಟ್ ಪಂದ್ಯಾವಳಿಗೆ ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಕ್ರೀಡೆ ಮನುಷ್ಯನನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಡಗೊಳಿಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ತಮ್ಮ ದೈನಂದಿನ ಕೆಲಸದೊಂದಿಗೆ ಕ್ರೀಡಾ ಚಟುವಟಿಕೆಯಲ್ಲಿ ಭಾಗಹಿಸುವಂತಾಗಬೇಕು. ಸರ್ಕಾರಿ ನೌಕರ ಬಾಂಧವರು ತಮ್ಮ ಕೆಲಸದ ಒತ್ತಡದ ನಡುವೆಯೂ ಸಾಮಾಜಿಕ ಮನೋಭಾವವನ್ನು ಮೈಗೂಡಿಸಿಕೊಂಡು ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದು ಮತ್ತು ಭಾಗಬಹಿಸುವದು ಅಭಿನಂದನೀಯ ಎಂದರು.ಬಸವನಬಾಗೇವಾಡಿ ಮತಕ್ಷೇತ್ರವು ಸಾಕಷ್ಟು ಅಭಿವೃದ್ದಿ ಹೊಂದುವ ಮೂಲಕ ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿದೆ . ಕ್ಷೇತ್ರದ ಅಭಿವೃದ್ದಿಯಲ್ಲಿ ನನ್ನ ತಂದೆ ಸಚಿವ ಶಿವಾನಂದ ಪಾಟೀಲ ಅವರೊಂದಿಗೆ ಕ್ಷೇತ್ರದ ಎಲ್ಲ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರ ಬಾಂಧವರು ತಮ್ಮ ಸಹಕಾರ ನೀಡುವ ಮೂಲಕ ಕ್ಷೇತ್ರದ ಅಭಿವೃದ್ದಿಗೆ ಕೈ…

Read More

ಚಡಚಣ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ಎನ್ಇಪಿ ಹಾಗೂ ಎಸ್‌ಇಪಿ ಗಳ ನಿಲುವು ಮಕ್ಕಳ ಮೇಲೆ ಯಾವುದೇ ದುಷ್ಪರಿಣಾಮ ಬೀರದಂತೆ ಮಕ್ಕಳ ಆಧಾರಿತ ಶಿಕ್ಷಣಕ್ಕೆ ಒತ್ತು ನೀಡಬೇಕೆಂದು ಶಿಕ್ಷಣ ಪ್ರೇಮಿ ಮಹೇಶ ಗುಮಾಸ್ತೆ ಅಭಿಪ್ರಾಯ ವ್ಯಕ್ತಪಡಿಸಿದರು.ಪಟ್ಟಣದ ಓಂ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಲಾದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದ್ವಜಾರೋಹಣ ನೆರವೇರಿಸಿದ ಸಿಪಿಐ ಸುರೇಶ ಬೆಂಡಗುಂಬಳ ಮಾತನಾಡಿ, ಶಾಲಾ-ಕಾಲೇಜುಗಳಲ್ಲಿ ಗಣರಾಜ್ಯೋತ್ಸವ ದಿನವನ್ನು ಅತ್ಯಂತ ಉತ್ಸಾಹ ಮತ್ತು ದೇಶಭಕ್ತಿಯ ಭಾವನೆಗಳಿಂದ ಆಚರಿಸಲಾಗುತ್ತದೆ. ಧ್ವಜಾರೋಹಣ, ಸಾಂಸ್ಕೃತಿಕ ಕಾರ್ಯಕ್ರಮಗಳು, ಭಾಷಣಗಳು, ಪ್ರಬಂಧ ಸ್ಪರ್ಧೆ, ಇತರೆ ಚಟುವಟಿಕೆಗಳೊಂದಿಗೆ ಈ ದಿನವನ್ನು ಸ್ಮರಣೀಯವಾಗಿಸಲಾಗುತ್ತದೆ ಎಂದರು.ಈ ಕಾರ್ಯಕ್ರಮದಲ್ಲಿ ವಕೀಲ ನಾನಾಗೌಡ ಸೂರಗೊಂಡ, ಡಾ. ಮಹೇಶ ಮುರಗೊಂಡೆ, ಓಂ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಸ್ ಎಸ್ ಹಾವಿನಾಳ, ಮುಖ್ಯ ಶಿಕ್ಷಕ ಸುರೇಶ ಜಂತಿ, ಶಿಕ್ಷಕರಾದ ಪಿ ಎಚ್ ಪೂಜಾರಿ, ಎಮ್‌ ಎನ್ ಚೌವ್ಹಾಣ, ಸಂಗೀತಾ ಬಣಗಾರ, ಅರ್ಪಿತಾ ಭಂಡರಕವಟೆ, ಪ್ರಿಯಾಂಕಾ ಅಂಜುಟಗಿ, ಆರಿಫ ಕೋತ್ವಾಲ, ಭೀಮವ್ವಾ ಮಡ್ಡಿ, ಲಕ್ಷ್ಮೀ…

Read More

ದೇವರಹಿಪ್ಪರಗಿ: ಪಟ್ಟಣದ ಸಂಘ ಸಂಸ್ಥೆಗಳು, ಅಂಚೆಕಚೇರಿ ಸೇರಿದಂತೆ ವಿವಿಧೆಡೆ ೭೫ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.ಸಮೃದ್ಧಿ ಸಹಕಾರ ಸಂಘ:ಸ್ಥಳೀಯ ಸಮೃದ್ಧಿ ಸಹಕಾರ ಸಂಘದಲ್ಲಿ ಅಧ್ಯಕ್ಷೆ ಸಂಗೀತಾ ನಾಯಿಕ್ ರಾಷ್ಟ್ರನಾಯಕರ ಭಾವಚಿತ್ರಕ್ಕೆ ಪೂಜೆ ಹಾಗೂ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿದರು.ಈ ಸಂದರ್ಭದಲ್ಲಿ ಹಿರಿಯವೈದ್ಯ ಆರ್.ಆರ್.ನಾಯಿಕ್, ಉಪಾಧ್ಯಕ್ಷ ರಿಯಾಜ್ ಯಲಗಾರ, ನಿರ್ದೇಶಕರುಗಳಾದ ವೆಂಕಟೇಶ ಕುಲಕರ್ಣಿ, ಬಸವರಾಜ ಬಬಲೇಶ್ವರ, ಕೆ.ಎಸ್.ಕೋರಿ, ಉಮೇಶ ಹಳಪಾಣಿ, ಎ.ಕೆ.ಹಿರೇಮಠ, ಸಿಬ್ಬಂದಿ ಬಸವರಾಜ ಸಜ್ಜನ, ಲತಾ ತಡಪಟ್ಟಿ, ಅಕ್ಷಯ ರಾಠೋಡ, ಬಸವರಾಜ ಹಿರೇಮಠ ಹಾಜರಿದ್ದರು.ಅಂಚೆ ಕಚೇರಿ: ಪಟ್ಟಣದ ಪೋಸ್ಟ ಮಾಸ್ಟರ್ ಪಿ.ಆರ್.ದೊಡಮನಿ ಧ್ವಜಾರೋಹಣ ನೆರವೇರಿಸಿದರು. ವಿಶ್ರಾಂತ ಪ್ರಾಂಶುಪಾಲ ರುದ್ರಪ್ಪ ದೊಡಮನಿ ಮಾತನಾಡಿದರು.ಅಂಚೆ ಉಪಪಾಲಕ ಪೂಜಾರಿ, ವೆಂಕಟೇಶ ಕುಲಕರ್ಣಿ, ರಾಮನಗೌಡ ಬಿರಾದಾರ, ಪ್ರವೀಣ ಕುಲಕರ್ಣಿ, ಎಸ್.ಡಿ.ತಳವಾರ, ಎಲ್.ಎಚ್.ನದಾಫ್, ಪ್ರವೀಣ ಮಾಳೇಗಾರ, ಪಿ.ಎಸ್.ಕೆಂಭಾವಿ. ಮಲ್ಲಿಕಾರ್ಜುನ ಪಾಟೀಲ, ರಂಜೀತ ತಳಕೇರಿ, ಸಂಜಯ, ನಯನ ಯಡಹಳ್ಳಿ, ಎಸ್.ಆರ್.ಬಿರಾದಾರ, ಭಾಗ್ಯ ಪುರವಂತಮಠ ಇದ್ದರು.ನಿವೃತ್ತ ನೌಕರರ ಸಂಘ: ಪಟ್ಟಣದ ಸದಯ್ಯನಮಠದಲ್ಲಿ ನಿವೃತ್ತ ನೌಕರರ ಸಂಘದ ಧ್ವಜಾರೋಹಣವನ್ನು ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ ನೆರವೇರಿಸಿದರು.ಪಿ.ಜಿ.ಹಿರೇಮಠ, ಪಿ.ಎಸ್.ಮಿಂಚನಾಳ, ಎಸ್.ಎಮ್.ಯರನಾಳ,…

Read More

ದೇವರಹಿಪ್ಪರಗಿ: ತನು,ಮನ, ಧನಗಳಿಂದ ತ್ಯಾಗ ಬಲಿದಾನ ಮಾಡಿದ ಮಹಾನ ನಾಯಕರು ಹಾಗೂ ದೇಶಾಭಿಮಾನಿಗಳ ಆಶಯದಂತೆ ನಮ್ಮ ರಾಷ್ಟ್ರವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ನಿವೃತ್ತ ಅಭಿಯಂತರ ಸಿ.ಡಿ.ರಾಠೋಡ ಹೇಳಿದರು.ತಾಲ್ಲೂಕಿನ ಹಿಟ್ನಳ್ಳಿ ತಾಂಡಾದ ಶಾಸಕರ ಮಾದರಿ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ ೭೫ ನೇ ಗಣರಾಜ್ಯೋತ್ಸವದ ಅಂಗವಾಗಿ ‘ವಿಶ್ರಾಂತ ನೌಕರರಿಗೊಂದು ವಿನಮೃತೆಯ ಗೌರವ’ ಸಮಾರಂಭದ ಅತಿಥಿಯಾಗಿ ಮಾತನಾಡಿದರು.ವೇದಿಕೆಯಲ್ಲಿ ನಿವೃತ್ತರಾದ ಜಗದಂಬಾ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಜಿ.ಬಿ.ಅಂಗಡಿ, ಡಿ.ಜಿ. ದೊಡಮನಿ, ಡಿ.ಪಿ.ದೊಡಮನಿ, ಡಿ.ಕೆ.ನಾಯಿಕ, ಎಲ್.ಬಿ.ಮಂಜಿ, ವ್ಹಿ.ಟಿ.ರಾಠೋಡ, ವಾಯ್. ಎಮ್.ಹಿರೇಕುರುಬರ, ಎ.ಆಯ್.ಮುಲ್ಲಾ, ಎಮ್.ಬಿ.ಅಂಗಡಿ, ಎ.ಆರ್.ನಾಯಿಕ, ಕಸ್ತೂರಿಬಾಯಿ ದೊಡಮನಿ, ವ್ಹಿ.ಆರ್.ಅಂಗಡಿ, ಎನ್.ಎಲ್.ಅಂಗಡಿ, ಎಮ್.ಬಿ.ದೊಡಮನಿ, ಬಿ.ಜಿ.ನಾಯಕ, ಪಿ.ಟಿ.ನಾಯಿಕ, ಡಿ.ಎಚ್.ಚವ್ಹಾಣ ಸೇರಿದಂತೆ ೬೦ ಕ್ಕೂ ಹೆಚ್ಚು ನಿವೃತ್ತ ನೌಕರರು, ಶಾಲೆಗೆ ದೇಣಿಗೆ ನೀಡಿದವರು ಹಾಗೂ ಗ್ರಾಮ ಪಂಚಾಯತಿ ಸದಸ್ಯರನ್ನು ಸನ್ಮಾನಿಸಲಾಯಿತು.ಶಾಲೆಯ ಮುಖ್ಯಗುರು ಡಿ.ಸಿ.ಲಮಾಣಿ, ಸಿಆರ್‌ಸಿ ಕಸ್ತೂರಿ ಬಡದಾಳ, ಶಿಕ್ಷಕ ಸಿಬ್ಬಂದಿ ಆಶಾ ರಾಠೋಡ ಆರ್.ಆರ್.ಚವ್ಹಾಣ ಸಿಬ್ಬಂದಿ ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಬಾಗವಹಿಸಿದ್ದರು.

Read More

ಆಲಮೇಲ: ಪಟ್ಟಣದಶ್ರೀ ವಿಶ್ವೇಶ್ವರ ಬಾಲಭಾರತಿ ಅನುದಾನಿತ ಕನ್ನಡ ಹಿರಿಯ ಪ್ರಾಥಮಿಕ ಶಾಲೆ, ಆಲಮೇಲ ದಲ್ಲಿ ಸಂಭ್ರಮದ ಗಣರಾಜ್ಯೋತ್ಸವ ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ಪಟ್ಟಣದ ಹಿರಿಯ ಸಾಹಿತಿ ಸಿದ್ದಾರಾಮ ಉಪ್ಪಿನ ಅವರು ಧ್ವಜಾರೋಹಣ ನೆರವೇರಿಸಿದರು.ಅಧ್ಯಕ್ಷತೆಯನ್ನು ಸಂಸ್ಥೆಯ ಅದ್ಯಕ್ಷ ಎಸ್.ಆಯ್.ಜೋಗೂರ, ಅತಿಥಿಗಳಾಗಿ ಆಡಳಿತ ಮಂಡಳಿಯ ಕೋಶಾಧ್ಯಕ್ಷ ಎ.ಜಿ.ಕುಲಕರ್ಣಿ, ಸದಸ್ಯರಾದ ಶಿವಾನಂದ ಮಾರ್ಸನಳ್ಳಿ ಉಪಸ್ಥಿತರಿದ್ದರು.ಈ ವೇಳೆ ಸಂಸ್ಥೆಯ ವತಿಯಿಂದ ಸಾಹಿತಿ ಸಿದ್ದಾರಾಮ ಉಪ್ಪಿನ ರವರಿಗೆ ಇತ್ತೀಚೆಗೆ ರಾಷ್ಟ್ರೀಯ ಪ್ರಶಸ್ತಿ ಲಭಿಸಿದಕ್ಕಾಗಿ ಹಾಗೂ ಶಾಲೆಯ ಮುಖ್ಯ ಗುರು ಲಕ್ಷ್ಮೀಪುತ್ರ ಕಿರನಳ್ಳಿ ರವರಿಗೆ ಜ್ಯೋತಿಬಾ ಫುಲೆ ಜಿಲ್ಲಾ ಮಟ್ಟದ ಆದರ್ಶ ಶಿಕ್ಷಕ ಪ್ರಶಸ್ತಿ ಪಡೆದಿದಕ್ಕಾಗಿ ಸನ್ಮಾನಿಸಲಾಯಿತು.ಸನ್ಮಾನಕ್ಕೆ ಪ್ರತಿಯಾಗಿ ಮಾತನಾಡಿದ ಸಿದ್ದಾರಾಮ ಉಪ್ಪಿನ ರವರು, ಆಲಮೇಲ ಪಟ್ಟಣದಲ್ಲಿಯೇ ಬಡಮಕ್ಕಳ ಶಿಕ್ಷಣಕ್ಕಾಗಿ ಶಿಕ್ಷಣ ಸಂಸ್ಥೆಯು ಕಳೆದ ನಾಲ್ಕು ದಶಕಗಳಿಂದ ತನ್ನ ಕಾರ್ಯವನ್ನು ಯಾವುದೇ ಪ್ರಚಾರವಿಲ್ಲದೆ ಮಾಡುತ್ತ ಬಂದಿದೆ. ಇಲ್ಲಿಯ ಮಕ್ಕಳು ಶೈಕ್ಷಣಿಕ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದ್ದು, ಉತ್ತಮ ಸಂಸ್ಕಾರಯುತವಾದ ಶಿಕ್ಷಣ ನೀಡುವಲ್ಲಿ ಸಂಸ್ಥೆಯ ಹಾಗೂ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು…

Read More

ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ. ಬಿ. ಪಾಟೀಲ ಮಾಹಿತಿ ವಿಜಯಪುರ: ಮುಳವಾಡ ಏತನೀರಾವರಿ ಯೋಜನೆ 3ನೇ ಹಂತದ 15ನೇ ವಿತರಣೆ ಕಾಲುವೆ, 5ಎ ಮತ್ತು 5ಬಿ ಹೆಡ್ ವರ್ಕ್ ಕಾಮಗಾರಿಗಳಿಗೆ ಕೆಬಿಜೆಎನ್ಎಲ್ ಬೋರ್ಡ್ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ತಿಳಿಸಿದ್ದಾರೆ.ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಅರ್ಜುಣಗಿಯಲ್ಲಿ ಶುಕ್ರವಾರ ಮೌನೇಶ್ವರ ಮನುಕ ಕಲರ ಶಾರ್ಟಿಂಗ್ ಮಶೀನ್ ಉದ್ಘಾಟಿಸಿ ಅವರು ಮಾತನಾಡಿದರು.ಜಲಸಂಪನ್ಮೂಲ ಸಚಿವನಾಗಿದ್ದಾಗ ನೀರಾವರಿ ಯೋಜನೆಗಳಿಗಾಗಿ ಒಂಬತ್ತು ಸ್ಥಾವರ ಮತ್ತು 1000 ಕಿ. ಮೀ. ಮುಖ್ಯ ಕಾಲುವೆ ನಿರ್ಮಾಣ ಮಾಡಿದ್ದೇನೆ. ರೂ. 14000 ಕೋ. ಖರ್ಚು ಮಾಡಿ ಕಾಲುವೆಗಳ ಮೂಲಕ ರೈತರ ಹೊಲಗಳಿಗೆ, ಕೆರೆಗಳಿಗೆ ಹಾಗೂ ಹಳ್ಳಗಳಿಗೆ ನೀರು ಹರಿಸಲಾಗಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಅಂತರ್ಜಲ ಕೂಡ ಗಣನೀಯವಾಗಿ ಹೆಚ್ಚಿದೆ. ಇದರ ಪರಿಣಾಮ ಈ ಬಾರಿ…

Read More

ಢವಳಗಿ: ಗ್ರಾಮದ ಗ್ರಾಮ ಪಂಚಾಯತಿಯಲ್ಲಿ ೭೫ನೇ ಗಣರಾಜೋತ್ಸವವನ್ನು ಆಚರಿಸಿದರು.ಅಧ್ಯಕ್ಷೆ ಶ್ರೀಮತಿ ದ್ರಾಕ್ಷಾಯಿಣಿ ಮೇಲಿನಮನಿ ಧ್ವಜಾರೋಹಣ ನೇರವೇರಿಸಿದರು. ನಿವೃತ್ತ ಶಿಕ್ಷಕ ಎಸ್ ಎಸ್ ಪಾಟೀಲ ಹಾಗೂ ಗ್ರಾಮ ಪಂಚಾಯತಿ ಸದಸ್ಯ ಸುಭಾಷ ಗುಡಿಮನಿ ಮಾತನಾಡಿದರು.ಇದೇ ವೇಳೆಯಲ್ಲಿ ಗ್ರಾಮದ ವತಿಯಿಂದ ನಿವೃತ್ತಿ ಸೈನಿಕ ಬಾಪೂಗೌಡ ಬಿರಾದಾರ ಮತ್ತು ಅಂತರಾಷ್ಟ್ರೀಯ ಕಬ್ಬಡ್ಡಿ ಕ್ರೀಡಾಪಟು ಎಮ್ ಕೆ ಗುಡಿಮನಿ ಅವರಿಗೆ ಸನ್ಮಾನಿಸಿ ಗೌರವಿಸಿದರು.ಗ್ರಾಮದ ಕಸ್ತೂರಬಾ ಗಾಂಧಿ ಶಾಲೆಯಲ್ಲಿ ಶಾಲೆಯ ಭೂದಾನಿ ಬಸವಂತ್ರಾಯ ಬಿರಾದಾರ ಧ್ವಜಾರೋಹಣ ನೇರವೆರಿಸಿದರು.ಗ್ರಾಮದ ಪ್ರಾಥಮಿಕ ಸಹಕಾರಿ ಸಂಘದ ಕಛೇರಿ ಮುಂದೆ ಅದ್ಯಕ್ಷ ರುದ್ರಗೌಡ ಪಾಟೀಲ ಧ್ವಜಾರೋಹಣ ನೇರವೇರಿಸಿದರು.ಗ್ರಾಮದ ಮ ಬ ಪಾಟೀಲ ಪ್ರೌಡಶಾಲೆಯಲ್ಲಿ ಶಾಲೆಯ ಅಧ್ಯಕ್ಷ ಎಸ್ ಎಸ್ ಪಾಟೀಲ, ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಸುರೇಶ ಪಾಟೀಲ ಹಾಗೂ ವೀರ ಮರಣಹೊಂದಿದ ಮಡಿವಾಳಪ್ಪ ನಾಯನೇಗಿಲಿ ಅವರ ಮೂರ್ತಿಯ ಮುಂದೆ ನಿವೃತ್ತ ಸೈನಿಕರಾದ ಬಾಪೂಗೌಡ ಬಿರಾದಾರ ಅವರು ಹಾಗೂ ಶ್ರೀ ಮಡಿವಾಳೇಶ್ವರ ಉಚಿತ ಪ್ರಸಾದ ನಿಲಯದಲ್ಲಿ ಎಮ್ ಜಿ ಬಿರಾದಾರ ಅವರು…

Read More