ಬಸವನಬಾಗೇವಾಡಿ: ತಾಲೂಕಿನ ಕಣಕಾಲ ಗ್ರಾಮದಲ್ಲಿ ಸ್ಥಳೀಯ ಅಗ್ನಿಶಾಮಕ ಠಾಣೆಯಿಂದ ಸೋಮವಾರ ಅಗ್ನಿ ಶಾಮಕ ಸೇವಾ ದಿನಾಚರಣೆ ಸಪ್ತಾಹ ಆಚರಣೆ ಅಂಗವಾಗಿ ಅಗ್ನಿ ಸುರಕ್ಷತೆ ಮತ್ತು ಅಗ್ನಿ ಅವಘಡ ಮುಂಜಾಗ್ರತೆ ಬಗ್ಗೆ ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ನಂತರ ಬೆಂಕಿ ಆಕಸ್ಮಿಕ ಬಗ್ಗೆ ನಾಗರಿಕರಿಗೆ ತಿಳುವಳಿಕೆ ಕುರಿತಾದ ಕರಪತ್ರಗಳನ್ನು ವಿತರಿಸಲಾಯಿತು.
ಅಗ್ನಿಶಾಮಕ ಠಾಣಾಧಿಕಾರಿ ಸಂಗಮೇಶ ಶಿವಪೂಜಿ, ಅಗ್ನಿಶಾಮಕ ಠಾಣೆಯ ಸಹಾಯಕ ಠಾಣಾಧಿಕಾರಿ ಭೀಮಾಶಂಕರ ಮಾದರ, ಸಿಬ್ಬಂದಿಗಳಾದ ನಾರಾಯಣ ರಾಠೋಡ, ಲಿಂಗಪ್ಪ ಲಮಾಣಿ, ಸಂಗಪ್ಪ ಹಳಕಟ್ಟಿ, ಶ್ರೀಶೈಲ ಬಿರಾದಾರ, ಗ್ರಾಮ ಪಂಚಾಯತ ಅಧ್ಯಕ್ಷರು ಮತ್ತು ಪಿಡಿಓ ಇತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

