ಕಾರ್ಖಾನೆಯಿಂದ ದುಷ್ಷಪರಿಣಾಮಗಳ ಹಿನ್ನಲೆ ಮಧಬಾವಿ ತಾಂಡಾ ನಂ.೧ ನಿವಾಸಿಗಳ ಎಚ್ಚರಿಕೆ
ವಿಜಯಪುರ: ಮಧಬಾವಿ ತಾಂಡಾ ನಂಬರ-೧ (ರಾಜಾಜೀ ನಗರ) ಹೊರ ವಲಯದ ಟೈಯರ್ ಕಾರ್ಖಾನೆಯಿಂದ ಅನೇಕ ದುಷ್ಷಪರಿಣಾಮಗಳು ಸಂಭವಿಸಿರುವ ಹಿನ್ನಲೆಯಲ್ಲಿ ಕಾರ್ಖಾನೆ ಬಂದ್ ಮಾಡಬೇಕು, ಇಲ್ಲವಾದಲ್ಲಿ ಲೋಕಸಭಾ ಚುನಾವಣೆ ಬಹಿಷ್ಠಾರ ಮಾಡುತ್ತೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಕಾಶ ಶ್ರೀಮಂತ ರಾಠೋಡ ಮನವಿ ಸಲ್ಲಿಸಿ ಮಾತನಾಡುತ್ತಾ, ವಿಜಯಪುರ ಜಿಲ್ಲೆ ಹಾಗೂ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಮಧಬಾವಿ ತಾಂಡಾ ನಂಬರ ೧ರ ( ರಾಜಾಜೀ ನಗರ) ಹತ್ತಿರದಲ್ಲಿ ಕಳೆದ ೫-೬ ವರ್ಷಗಳಿಂದ ಅಕ್ರಮವಾಗಿ ನಡೆಯುತ್ತಿರುವ ಟಾಯರ್ ಕಾರ್ಖಾನೆಯಿಂದಾಗಿ ಅಪಾರ ಪ್ರಮಾಣದ ವಿಷಯುಕ್ತ ಹೊಗೆ ಮುಗಿಲೆತ್ತರಕ್ಕೆ ಹೊರಸೂಸುತ್ತಿದ್ದು ಇದರಿಂದಾಗಿ ಸುತ್ತಮುತ್ತಲಿನ ಸುಮಾರು ೧೦ ಹಳ್ಳಿಗಳ ಜನರ ಆರೋಗ್ಯದಲ್ಲಿ ಅನೇಕ ರೀತಿಯ ಸಮಸ್ಯೆಗಳು ಕಂಡುಬಂದಿದ್ದು ಸಾವುನೋವುಗಳು ಉಂಟಾಗಿವೆ. ಇದರಿಂದಾಗಿ ಮಕ್ಕಳಿಗೆ, ಮಯಸ್ಕರಿಗೆ, ವಯೋವೃದ್ಧರಿಗೆ ಅಸ್ತಮಾ, ಬಿ.ಪಿ, ಲಕ್ವಾ, ಹೃದಯ ಸಂಬಂಧಿ, ಪಾರ್ಶ್ವ ವಾಯು, ಚರ್ಮರೋಗ ಮತ್ತು ಉಸಿರಾಟದ ತೊಂದರೆಗಳಾಗಿವೆ ಜೊತೆಗೆ ಬಾಣಂತಿಯರಿಗೆ ಅನೇಕ ಸಮಸ್ಯೆಗಳಾಗಿ ಹೊಟ್ಟೆ ಬಿದ್ದಿರುವ ಘಟನೆಗಳು ನಡೆದಿವೆ,
ಇನ್ನೊರ್ವ ಗ್ರಾ ಪಂ ಸದಸ್ಯ ಪಾಂಡುರಂಗ ಖೇಮು ರಾಠೋಡ ಮಾತನಾಡುತ್ತಾ, ಕಾರ್ಖಾನೆಯ ಅಕ್ಕಪಕ್ಕದಲ್ಲಿ ಸರಕಾರಿ ಶಾಲೆ ಇದ್ದು ಆ ಮಕ್ಕಳಿಗೂ ಸಹ ಇದರ ಬಿಸಿ ತಟ್ಟಿದಂತಾಗಿದೆ, ಸುತ್ತಲೂ ರೈತರ ಬೆಲೆ ಬಾಳುವ ಜಮೀನಿದ್ದು ಬೆಳೆಗಳ ಮೇಲೆ ಈ ವಿಷಯುಕ್ತ ಹೊಗೆ ದೂಳಿನ ಕಣಗಳು ಕುಂತು ರೈತರಿಗೂ ಅಪಾರ ಪ್ರಮಾಣದ ನಷ್ಟ ಉಂಟಾಗಿವೆ, ಅದೇರೀತಿ ಕಾರ್ಖಾನೆಗೆ ಬಳಸಿರುವ ತ್ಯಾಜ್ಯವನ್ನು ಸಹ ಪಕ್ಕದಲ್ಲಿರುವ ಮಧಬಾವಿ(ಹುಣಶ್ಯಾಳ) ಕೆರೆಯಲ್ಲಿ ಹರಿಸುವುದರಿಂದ ಸಾರ್ವಜನಿಕರಿಗೂ ಹಾಗೂ ಪಶು ಪಕ್ಷೀಗಳಿಗೂ ಸಮಸ್ಯೆಯಾಗಿರುತ್ತದೆ. (ಕುಡಿಯುವ ನೀರಗೆ ಕೆರೆಯೇ ಮೂಲವಾಗಿದೇ)
ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಕೂಡಲೇ ಪರಿಸರಕ್ಕೆ ಹಾಗೂ ಸಾರ್ವಜನಿಕರಿಗೆ ಮಾರಕವಾಗಿರುವ ಈ ಟಾಯರ ಕಾರ್ಖಾನೆಯನ್ನು ಬಂದ್ ಮಾಡಬೇಕು, ಇಲ್ಲವಾದಲ್ಲಿ ಬರುವ ಲೋಕಸಭಾ ಚುನಾವಣೆಯನ್ನು ಬಹಿಷ್ಠಾರ ಮಾಡಿ ಹೋರಾಟ ಮಾಡಲಾಗುವುದು. ಈ ಗ್ರಾಮಕ್ಕೆ ಯಾವುದೇ ಚುನಾವಣಾ ಅಧಿಕಾರಿ ಅಥವಾ ಚುನಾವಣಾ ಪಕ್ಷದವರು ಬಂದರೆ ಅವರನ್ನು ಗ್ರಾಮದೊಳಗೆ ಬಿಡದೇ ಉಗ್ರ ಹೋರಾಟ ಮಾಡಲಾಗುವುದು, ಇದು ಈ ಭಾಗದ ಜನಸಾಮನ್ಯರ ಬದುಕಿನ ಪ್ರಶ್ನೆಯಾಗಿದೆ, ಕೂಡಲೇ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳೊಡನೆ ಸ್ಥಳಕ್ಕೆ ಆಗಮಿಸಿ ಸದರಿ ಕಾರ್ಖಾನೆಯನ್ನು ವೀಕ್ಷಿಸಿ ಬಂದ್ ಮಾಡಬೇಕು ಎಂದರು
ಈ ವೇಳೆ ಗ್ರಾ ಪಂ ಸದಸ್ಯರಾದ ಪ್ರಕಾಶ ಶ್ರೀಮಂತ ರಾಠೋಡ, ಪಾಂಡುರಂಗ ಖೇಮು ರಾಠೋಡ, ಮೇಘು ಲಕ್ಕು ರಾಠೋಡ ಹಾಗೂ ಗ್ರಾಮದ ಮುಖಂಡರಾದ, ಸಂಜು ಗಂಗಾರಾಮ ಚವ್ಹಾನ,
ಗೋಪಾಲ ಶಂಕರ ರಾಠೋಡ, ಪ್ರಕಾಶ ಮಾಧು ರಾಠೋಡ, ಪ್ರಕಾಶ ರಮೇಶ ರಾಠೋಡ(ಕಾರಭಾರಿ) , ಸತೀಶ ಬಾಸು ಜಾಧವ, ಮೋಹನ ಅಣದು ರಾಠೋಡ , ಅನೀಲ ಸೋಮಲು ರಾಠೋಡ , ಯುವರಾಜ ಮೇಘು ರಾಠೋಡ, ಮನೋಹರ ಕೃಷ್ಣಾ ಚವ್ಹಾಣ , ಪ್ರಕಾಶ ಮೋತಿರಾಮ ರಾಠೋಡ , ಫತ್ತು ಕೀರು ರಾಠೋಡ ಸೇರಿದಂತೆ ಅನೇಕರು ಇದ್ದರು.
