ಬಸವನಬಾಗೇವಾಡಿ: ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಬೇಕಾದರೆ ಕಾಂಗ್ರೆಸ್ ಪಕ್ಷದ ಲೋಕಸಭೆ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರನ್ನು ಲೋಕಸಭೆ ಚುನಾವಣೆಯಲ್ಲಿ ಮತಬಾಂಧವರು ಆಯ್ಕೆ ಮಾಡಬೇಕೆಂದು ಕಾಂಗ್ರೆಸ್ ಮುಖಂಡ ಶಂಕರಗೌಡ ಬಿರಾದಾರ ಹೇಳಿದರು.
ಪಟ್ಟಣದ ಲಕ್ಷ್ಮೀ ನಗರ, ಶಿವನಗುಡಿ, ಶಿವಾಜಿ ಗಲ್ಲಿಗಳಲ್ಲಿ ಲೋಕಸಭಾ ಚುನಾವಣೆಯ ಪ್ರಯುಕ್ತ ಭಾನುವಾರ ಸಂಜೆ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡು ನಂತರ ಮಾತನಾಡಿದ ಅವರು, ಕಳೆದ ಹತ್ತು ವರ್ಷಗಳಿಂದ ವಿಜಯಪುರ ಜಿಲ್ಲೆಯ ಸಂಸದ ಸದಸ್ಯ ರಮೇಶ ಜಿಗಜಿಣಗಿ ಅವರು ಸಂಸತ್ತಿನಲ್ಲಿ ವಿಜಯಪುರ ಜಿಲ್ಲೆಯ ಅಭಿವೃದ್ಧಿ ಕುರಿತು ಮಾತನಾಡಲು ವಿಫಲರಾಗಿದ್ದರೆ. ಸಂಸತ್ತ್ ಅಧಿವೇಶನದಲ್ಲಿ ಜಿಲ್ಲೆಯ ಅಭಿವೃದ್ಧಿ ಕುರಿತು ಹತ್ತು ವರ್ಷಗಳಲ್ಲಿ ಒಮ್ಮೆಯೂ ಕೂಡಾ ಮಾತನಾಡಿಲ್ಲ. ಅಂಥವರನ್ನು ಸಂಸತ್ತಿಗೆ ಕಳಿಸುವುದರಿಂದ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗುತ್ತದೆ.
ವಿಜಯಪುರ ಜಿಲ್ಲೆಯ ಜ್ವಲಂತ ಸಮಸ್ಯೆಗಳಾದ ಕೃಷ್ಣೆ ನದಿಯ ನೀರಾವರಿ ಯೋಜನೆಯನ್ನು ರಾಷ್ಟ್ರೀಯ ನೀರಾವರಿ ಯೋಜನೆಯನ್ನಾಗಿ ಮಾಡಬೇಕು. ವಿಜಯಪುರದಿಂದ ಬೆಂಗಳೂರಿಗೆ ವಿಜಯಪುರದಿಂದ ಮುಂಬೈ ಹಾಗೂ ಹೈದ್ರಾಬಾದಕ್ಕೆ ತೆರಳಲು ಸೂಕ್ತವಾದ ರೈಲಿನ ವ್ಯವಸ್ಥೆಗಳಿಲ್ಲ. ವಿಜಯಪುರ ನಗರದ ಹಿಟ್ಟನಹಳ್ಳಿ ಹತ್ತಿರ ಇರುವ ರಾಷ್ಟ್ರೀಯ ಹೆದ್ದಾರಿಯ ಟೋಲವು ವಿಜಯಪುರ ನಗರದ ಸಮೀಪದಲ್ಲಿ ಇರುವುದರಿಂದ ಜನಸಾಮಾನ್ಯರಿಗೆ ತುಂಬಾ ಹೊರೆಯಾಗಿದೆ. ಈ ಟೋಲ ಗೇಟ್ ವಿರುದ್ಧ ಸಾಕಷ್ಟು ಬಾರಿ ಹೋರಾಟ ಮಾಡಿದರೂ ಪ್ರಯೋಜನವಾಗಿಲ್ಲ. ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಕಾರ್ಯಗಳು ಕೂಡಾ ಪತ್ರಿಕೆ ಹೇಳಿಕೆಗಳಲ್ಲಿ ಮಾತ್ರ ಆಗಿವೆ. ಇಲ್ಲಿಯವರೆಗೆ ಮನಗೂಳಿ ಹಾಗೂ ನಿಡಗುಂದಿ ಹತ್ತಿರ ಪ್ಲೈಒವರ್ ಕಾಮಗಾರಿಗಳನ್ನು ಮಾಡಿಲ್ಲ. ವಿಜಯಪುರ ಹುಬ್ಬಳ್ಳಿ ರಾಷ್ಟ್ರೀಯ ಹೆದ್ದಾರಿ ಚತ್ಸುಭುಜ ರಸ್ತೆ ಆಗಬೇಕು. ವಿಜಯಪುರ ಕಲ್ಬುರ್ಗಿ ಮನಗೂಳಿ ದೇವಾಪುರ ಕ್ರಾಸ್ ಬಿಜ್ಜಳ ರಾಜ್ಯ ಹೆದ್ದಾರಿ ರಾಷ್ಟೀಯ ಹೆದ್ದಾರಿಯಾಗಿ ಪರಿವರ್ತನೆ ಆಗಬೇಕು. ವಿಮಾನ ನಿಲ್ದಾಣದ ಕಾಮಗಾರಿ ಕೂಡಾ ನಿಧಾನಗತಿಯಲ್ಲಿ ಸಾಗುತ್ತಿದೆ. ಆದ ಕಾರಣ ಸಂಸತ್ತಿನಲ್ಲಿ ವಿಜಯಪುರ ಜಿಲ್ಲೆಯ ಸಮಗ್ರ ಅಭಿವೃದ್ಧಿಯ ಬಗ್ಗೆ ಗಟ್ಟಿ ಧ್ವನಿಯಾಗಿ ನಿಲ್ಲಲು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರಿಗೆ ಮತವನ್ನು ನೀಡಿ ಗೆಲ್ಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಸುರೇಶ ಹಾರಿವಾಳ, ನಗರ ಘಟಕದ ಅಧ್ಯಕ್ಷ ಸುರೇಶಗೌಡ ಪಾಟೀಲ, ಪುರಸಭೆ ಸದಸ್ಯರಾದ ಪ್ರವೀಣ ಪೂಜಾರಿ, ಜಗದೇವಿ ಗುಂಡಳ್ಳಿ, ಮುಖಂಡರಾದ ಸಂಗಮೇಶ ಓಲೇಕಾರ, ಶೇಖರ ಗೊಳಸಂಗಿ, ರವಿ ರಾಠೋಡ, ಮುರುಗೇಶ ನಾಯ್ಕೋಡಿ, ಭದ್ರು ಮಣ್ಣೂರ, ರಮಜಾನ ಹೆಬ್ಬಾಳ, ಪರುಶುರಾಮ ಬೆಕಿನಾಳ, ಮಹಿಬೂಬ ನಾಯ್ಕೋಡಿ, ಮಹಾಂತೇಶ ಸಾಸಾಬಾಳ ,ಅಜೀಜ ಬಾಗವಾನ, ಜಟ್ಟಿಂಗರಾಯ ಮಾಲಗಾರ, ಕಮಲಸಾಬ ಕೊರಬು, ಸಂಗನಬಸು ಪೂಜಾರಿ, ಬಸವರಾಜ ಚೌರಿ, ಮಡಿವಾಳಪ್ಪ ವಾಲಿಕಾರ, ಪರುಶುರಾಮ ಜಮಖಂಡಿ, ಸಂಗಮೇಶ ಕಾಳಹಸ್ತೇಶ್ವರಮಠ, ಸಂತೋಷ ಬಿರಾದಾರ, ಬಾಬು ಬಂಗಾರಿ, ಹಣಮಂತ ಪಿರಂಗಿ, ಪರಶುರಾಮ ಮ್ಯಾಗೇರಿ, ಶಂಕರ ಮ್ಯಾಗೇರಿ ಕಾಂಗ್ರೆಸ್ ಕಾರ್ಯಕರ್ತರು ಬಾಗವಹಿಸಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

