Author: editor.udayarashmi@gmail.com

ವಿಜಯಪುರ: ಇತಿಹಾಸವನ್ನು ಮರೆತವರು ಎಂದಿಗೂ ಇತಿಹಾಸ ನಿರ್ಮಿಸಲಾರರು ಅದರಂತೆ ಐತಿಹಾಸಿಕ ಪಾರಂಪರಿಕ ತಾಣಗಳ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಅದಕ್ಕೆ ಇತಿಹಾಸದ ಅಧ್ಯಯನ ಮಾಡಬೇಕು. ಅದರ ಆಳ-ಅಗಲ ಅರಿವಾಗುತ್ತದೆ ಎಂದು ನಗರದ ಜಿ ಎಫ್ ಜಿ ಸಿ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ಬಿ.ಜಿ.ಪತ್ತಾರ ಹೇಳಿದರು.ನಗರದ ಬಿ.ಎಲ್.ಡಿ.ಇ ಸಂಸ್ಥೆಯ ಎಸ್ ಬಿ ಕಲಾ ಮತ್ತು ಕೆಸಿಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ ಮತ್ತು ಹೆರಿಟೇಜ್ ಕ್ಲಬ್ ಸಂಯೋಜನೆಯಡಿಯಲ್ಲಿ ಐತಿಹಾಸಿಕ ಪಾರಂಪರಿಕ ತಾಣಗಳ ಮಹತ್ವ ಮತ್ತು ಅವುಗಳ ಸಂರಕ್ಷಣೆ ಕುರಿತು ವಿಶೇಷ ಉಪನ್ಯಾಸದಲ್ಲಿ ಮಾತನಾಡಿದ ಅವರು, ದೇಶವು ಅತ್ಯಂತ ಭವ್ಯವದಾದ ಸಂಸ್ಕೃತಿಕ, ಐತಿಹಾಸಿಕ ಪಾರಂಪರಿಕ ನೆಲೆ ಬೀಡಾಗಿದೆ. ಹಲವಾರು ಇತಿಹಾಸದ ಕುರುಹುಗಳನ್ನು ಹೊಂದಿದೆ. ಅದರ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮೆ ಮೇಲಿದೆ. ವಿದ್ಯಾರ್ಥಿಗಳು ಇಂತಹ ಪಾರಂಪರಿಕ ತಾಣಗಳ ಬಗ್ಗೆ ಆದ್ಯಯನ ಮಾಡಬೇಕು ಎಂದರು.ಈ ವೇಳೆಯಲ್ಲಿ ಐಕ್ಯುಎಸಿ ಸಂಯೋಜಕ ಡಾ.ಪಿ.ಎಸ್.ಪಾಟೀಲ ಮಾತನಾಡಿ, ವಿದ್ಯಾರ್ಥಿಗಳು ನಿರಂತರ ಅಧ್ಯಯನಶೀಲರಾಗಬೇಕು. ಐತಿಹಾಸಿಕ ಪಾರಂಪರಿಕ ತಾಣಗಳು ಅಧ್ಯಯನ ಮತ್ತು ಅದರ ಸಂರಕ್ಷಣೆಗೆ ಮುಂದಾಗಬೇಕು ಎಂದರು.ಇತಿಹಾಸಕ್ಕೆ…

Read More

ಕೆಂಭಾವಿ: ಪ್ರಸ್ತುತದಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರ ಬಹು ಮುಖ್ಯ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಮೀನರೆಡ್ಡಿ ಪಾಟೀಲ ಯಾಳಗಿ ಹೇಳಿದರು.ಶುಕ್ರವಾರ ಪಟ್ಟಣದ ಹೋಲಿಫೇತ್ ಪಬ್ಲಿಕ್ ಶಾಲೆಯ ೨೦ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ‌ ಮಾತನಾಡಿದ ಅವರು ಪಾಲಕರು ತಮ್ಮ ಮಕ್ಕಳ ಉಜ್ವಲ ಭವಿಷ್ಯದ ಕನಸನ್ನು ಕಟ್ಟಿಕೊಂಡಿರುತ್ತಾರೆ. ಪಾಲಕರ ಕನಸು‌ ನನಸಾಗಲು ಮಕ್ಕಳಿಗೆ ಸಂಸ್ಕಾರ ಮೊದಲ ಪಾಠವಾಗಬೇಕು ಎಂದ ಅವರು ಹೋಲಿಫೇತ್ ಶಿಕ್ಷಣ ಸಂಸ್ಥೆ ಇವತ್ತು‌ ಅದ್ದೂರಿಯಾಗಿ ತನ್ನ ಇಪ್ಪತ್ತನೆ ವರ್ಷಾಚರಣೆ ಮಾಡಿಕೊಳ್ಳುತ್ತಿರುವುದು ಸಂಸ್ಥೆಯ ಸಾಧನೆಯ ಪಥಕ್ಕೆ ಸಾಕ್ಷಿಯಾಗಿದೆ ಎಂದರು.ಜಿಪಂ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ ಮಾತನಾಡಿ, ಪಟ್ಟಣದಲ್ಲಿ ಒಳ್ಳೆಯ ಶಿಕ್ಷಣನೀಡುತ್ತಿರುವ ಹೋಲಿಫೇತ್ ಶಾಲೆ ಯಶಸ್ವಿ ಶತ ಸಂವತ್ಸರ ಕಾಣುವಂತಾಗಲಿ ಎಂದು ಶುಭಹಾರೈಸಿದರು.ಸುಮಿತ್ರಪ್ಪ ಅಂಗಡಿ ಪ್ರಾಸ್ತಾವಿಕ ಮಾತನಾಡಿದರು. ಪವಿತ್ರ ವಡ್ಡೆ ಶಾಲಾ ವರದಿ ವಾಚನ ಮಾಡಿದರು.ಹಿರೇಮಠದ ಪೀಠಾಧಿಪತಿ ಚನ್ನಬಸವ ಶಿವಾಚಾರ್ಯರು, ಮಳಖೇಡದ ಸೈಯ್ಯದ್ ಶಾ ಮುಸ್ತಾಫಾ ಖಾದ್ರಿ, ಕೂಡಲಗಿ ಬಾಬಾ ಮಠದ ಉಮಾಕಾಂತ ಸಿದ್ಧರಾಜ ಮಹಾರಾಜರು ಸಾನಿಧ್ಯ ವಹಿಸಿ ಆಶಿರ್ವಚನ ನೀಡಿದರು.ನಂತರ ಮಕ್ಕಳಿಂದ…

Read More

ಚಡಚಣ: ನಾನು, ನೀನು, ಆನು, ತಾನು ಎಂಬ ನಾಲ್ಕೇ ನಾಲ್ಕು ಅದ್ವೈತ ಸಿದ್ದಾಂತದ ಆಧ್ಯಾತ್ಮಿಕ ಪದಗಳನ್ನೊಳಗೊಂಡತೆ ಸರಳ ಹಾಗೂ ಸರ್ವಕಾಲಕ್ಕೂ ಬಾಳುವಂತಹ ಕವನಗಳನ್ನು ಬರೆದು ಶಬ್ದಗಾರುಡಿಗ ಎಂದು ಪ್ರಖ್ಯಾತಿ ಪಡೆದವರು ನಾಕುತಂತಿ ಖ್ಯಾತಿಯ ವರಕವಿ ದ.ರಾ.ಬೇಂದ್ರೆಯವರು ಬೆಂದು ಕವಿಯಾದರು ಎಂದು ಪಿಡಿಜೆ ಪದವಿ ಪೂರ್ವ ಕಾಲೇಜಿನ ಕನ್ನಡ ಉಪಾನ್ಯಾಸಕ ಸಂತೋಷ ಕುಲಕರ್ಣಿ ಹೇಳಿದರು.ಪಟ್ಟಣದ ಶ್ರೀ ಸಂಗಮೇಶ್ವರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗ ಆಯೋಜಿಸಿದ ವರಕವಿ ಬೇಂದ್ರೆ ಅವರ ಜನ್ಮದಿನದ ಅಂಗವಾಗಿ ಏರ್ಪಡಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ಅವರು, ಅಂಬಿಕಾತನಯ ದತ್ತ ಎಂಬ ಕಾವ್ಯ ನಾಮದಿಂದ ಕವನಗಳನ್ನು ಬರೆದು ಜನಸಾಮಾನ್ಯರಿಗೂ ತಿಳಿಯುವಂತೆ ಮಾಡಿದರು. ಗರಿ, ನಾದಲೀಲೆ, ನಾಕುತಂತಿ, ಅರಳು ಮರಳು, ಉಯ್ಯಾಲೆ, ಸಖೀಗೀತ ಮುಂತಾದ ಪ್ರಸಿದ್ಧ ಕವನ ಸಂಕಲಗಳನ್ನು ಬರೆದಿದ್ದಾರೆ. ಅವರ ನರಬಲಿ ಕವನ ಬ್ರಿಟಿಷ್ ಆಡಳಿತವನ್ನು ಪ್ರಶ್ನಿಸುವಂತೆ ಇದ್ದುದರಿಂದ ಅವರನ್ನು ಸೆರೆಮನೆಗೆ ಹಾಕಲಾಯಿತು ಎಂದರು.ಪ್ರಾಸ್ಥಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಎಂ.…

Read More

ವಾರಣಾಸಿ ಜಿಲ್ಲಾ ನ್ಯಾಯಾಲಯದ ಐತಿಹಾಸಿಕ ತೀರ್ಪು | ಒಂದು ವಾರದೊಳಗಾಗಿ ಅಗತ್ಯ ವ್ಯವಸ್ಥೆಗೆ ಸೂಚನೆ ಲಖನೌ: ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಹಿಂದೂ ಭಕ್ತರು ಪೂಜೆ-ಪ್ರಾರ್ಥನೆ ಸಲ್ಲಿಸಬಹುದು ಎಂದು ವಾರಣಾಸಿ ಜಿಲ್ಲಾ ನ್ಯಾಯಾಲಯ ಬುಧವಾರ ಆದೇಶ ನೀಡಿದೆ.ವಾರಣಾಸಿ ಮಸೀದಿಯ ಬೀಗ ಮುದ್ರೆ ಹಾಕಿರುವ ನೆಲ ಮಹಡಿ ‘ವ್ಯಾಸ್ ಕಾ ಠಿಕಾಣಾ’ದಲ್ಲಿ ಹಿಂದೂ ಭಕ್ತರು ಪೂಜೆ ಸಲ್ಲಿಸಬಹುದಾಗಿದೆ. ಹಿಂದೂಗಳಿಗೆ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸುವುದಕ್ಕಾಗಿ ಇನ್ನು ಒಂದು ವಾರದೊಳಗಾಗಿ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ನ್ಯಾಯಾಲಯವು ತನ್ನ ವಿಚಾರಣೆಯ ಸಂದರ್ಭದಲ್ಲಿ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಬ್ಯಾರಿಕೇಡ್‌ಗಳನ್ನು ತೆಗೆಯುವುದು ಸೇರಿದಂತೆ ವ್ಯವಸ್ಥೆಗಳನ್ನು ಒಂದು ವಾರದಲ್ಲಿ ಪೂರ್ಣಗೊಳಿಸಬೇಕು ಎಂದು ನ್ಯಾಯಾಧೀಶರು ಹೇಳಿದ್ದಾರೆ. ಕಾಶಿ ವಿಶ್ವನಾಥ ದೇಗುಲದ ಅರ್ಚಕರಿಂದ ಪ್ರಾರ್ಥನೆ ನಡೆಸಬೇಕು ಎಂದು ನ್ಯಾಯಾಲಯ ಹೇಳಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ಹಿಂದೂ ಮಹಿಳಾ ಅರ್ಜಿದಾರರ ಪರ ವಕೀಲ ವಿಷ್ಣು ಶಂಕರ್ ಜೈನ್, ಎಲ್ಲರಿಗೂ ಅಲ್ಲಿ ಪ್ರಾರ್ಥನೆ ಮಾಡುವ ಹಕ್ಕು ಇದೆ, ಇದೊಂದು ಮಹತ್ವದ ಆದೇಶವಾಗಿದೆ. ಆದೇಶದಂತೆಯೇ ವಾರದೊಳಗೆ ಅಲ್ಲಿ ನಾವು…

Read More

ತಿಕೋಟಾ: ತಾಲೂಕಿನ ಹೊನವಾಡ ಗ್ರಾಮದಲ್ಲಿ ಶಬ್ದ ಗಾರುಡಿಗ ದ.ರಾ.ಬೇಂದ್ರೆಯವರ ಜನ್ಮ ದಿನಾಚರಣೆಯನ್ನು ಬುಧವಾರ ಕನ್ನಡ ಸಾಹಿತ್ಯ ಪರಿಷತ್ತು ತಿಕೋಟಾ ಹಾಗು ಶ್ರೀ ಬಸವಂತರಾಯ ಪ .ಪೂ ಕಾಲೇಜ್ ಹೊನ್ವಾ ಡ ಸಹಯೋಗದಲ್ಲಿ ಆಚರಿಸಲಾಯಿತು.ಮುಖ್ಯ ಅತಿಥಿಗಳಾಗಿ ವಿಶ್ರಾಂತ ಪ್ರಾಚಾರ್ಯ ರೇ.ಸಿ.ಪಾಟೀಲ ಪಾಟೀಲ, ನಿವೃತ್ತ ಉಪನ್ಯಾಸಕ ಎಮ್.ಎಸ್. ಯಚ್ಚಿ ಆಗಮಿಸಿದ್ದರು. ಪ್ರಾಚಾರ್ಯ ಎಂ.ಎ. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ನಳಿನಿಕಾಂತ ಸಾವಂತ ಉಪಸ್ಥಿತರಿದ್ದರು.ಕಸಾಪ ತಿಕೋಟಾ ಅಧ್ಯಕ್ಷ ಸಿದ್ರಾಮಯ್ಯ ಜಿ ಲಕ್ಕುಂಡಿಮಠ ವಂದಿಸಿದರು. ಜಗದೀಶ ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು. ಕುಮಾರಿ ಮಠಪತಿ ನಿರ್ವಹಿಸಿದರು.ಕಾರ್ಯಕ್ರಮದಲ್ಲಿ ಎಮ್.ಜಿ. ಕುಲಕರ್ಣಿ,ಆರ್.ಬಿ. ಶೇಡ್ಯಾಳ, ವಾಲಿಕಾರ, ಮಂಜುನಾಥ್ ಎಸ್.ಪಿ, ಶ್ರೀಮತಿ ಮಮತಾ ಹಿರೇಮಠ, ಕು.ನಿವೇದಿತಾ ಹಿರೇಮಠ, ಇಂದಿರಾಬಾಯಿ ಪಾತ್ರೋಟ ಉಪಸ್ಥಿತರಿದ್ದರು.

Read More

ವಿಜಯಪುರ: ಜಿಲ್ಲೆಯ ತಿಕೋಟಾ ತಾಲೂಕಿನ ತುಬಚಿ- ಬಬಲೇಶ್ವರ ಏತ ನೀರಾವರಿ ಯೋಜನೆಯಡಿ ವಿತರಣಾ ತೊಟ್ಟಿ-೧ ಎ ರ ಕಾಜಿಬೀಳಗಿ ಪಶ್ಚಿಮ ಕಾಲುವೆಯ ವಿತರಣಾ ಕಾಲುವೆ-೧೦ ರ ಮೇನ್ ಮತ್ತು ವಿತರಣಾ ಕಾಲುವೆ ೧೧ ರ ನಿರ್ಮಾಣಕ್ಕಾಗಿ ಅನೇಕ ರೈತರ ಜಮೀನುಗಳನ್ನು ೨೦೨೦ ರಲ್ಲಿ ಕೇವಲ ಭೂಸ್ವಾಧಿನ ನೋಟಿಸ್ ಕೊಟ್ಟು ಕೆಲಸ ಮುಗಿಸಿ ಇಲ್ಲಿಯವರೆಗೆ ಬೂಮಿ ಕಳೆದುಕೊಂಡ ರೈತರಿಗೆ ಯಾವುದೇ ಪರಿಹಾರ ನೀಡಿರುವುದಿಲ್ಲ, ಬೇಗ ಕೊಡಿಸಿ ಎಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಬುಧವಾರ ಮನವಿ ಸಲ್ಲಿಸಲಾಯಿತು.ಕಾಮಗಾರಿ ಪ್ರಾರಂಭಕ್ಕೂ ಮೊದಲೇ ರೈತರಿಗೆ ಹಣ ಬಿಡುಗಡೆ ಮಾಡಿ ನಂತರ ಕಾಮಗಾರಿ ಪ್ರಾರಂಭಿಸಬೇಕು ಎಂಬ ನಿಯಮವಿದ್ದರೂ, ಅದನ್ನು ಗಾಳಿಗೆ ತೂರಿ ಗುತ್ತಿಗೆದಾರರು ತಮ್ಮ ಕೆಲಸ ಬೇಗ ಮುಗಿಸಿ ಬಿಲ್ ಪಡೆದುಕೊಳ್ಳುವ ತರಾತುರಿಯಲ್ಲಿ ರೈತರಿಗೆ ಅನ್ಯಾಯವೆಸಗಿದ್ದಾರೆ. ಭೂಮಿ ಕಳೆದುಕೊಂಡ ರೈತರು ಅನೇಕ ಬಾರಿ ಜಿಲ್ಲಾಧಿಕಾರಿಗಳಿಗೆ ಹಾಗೂ ಸಂಬಂಧಿಸಿದ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿದರು ಇಲ್ಲಿಯವರಿಗೂ…

Read More

ವಿಜಯಪುರ: ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿ ೪-೫ ತಿಂಗಳು ಕಳೆದರೂ ಇನ್ನುವರೆಗೂ ಯಾವ ರೈತರಿಗೂ ಪರಿಹಾರ ಬಂದಿರುವುದಿಲ್ಲ, ಫಸಲ್ ಭೀಮಾ ಯೋಜನೆಯಲ್ಲಿ ಭಾರಿ ಪ್ರಮಾಣದ ಅನ್ಯಾಯವಾಗುತ್ತಿದೆ, ಅದೇರೀತಿ ರೈತ ಸಂಪರ್ಕ ಕೇಂದ್ರಗಳಲ್ಲಿ ಹಲವಾರು ಸಮಸ್ಯೆಗಳಿವೆ ಅಧಿಕಾರಿಗಳು ಸರಿಯಾಗಿ ಸ್ಪಂದಿಸುವುದಿಲ್ಲ, ಸ್ಪಿಂಕಲರ್ ಪೈಪಗಳ ಸಮಸ್ಯೆ ದೊಡ್ಡದಾಗಿದೆ, ಕಳೆದ ೨-೩ ವರ್ಷಗಳ ಹಿಂದೆ ಡಿ.ಡಿ ತುಂಬಿದ ಹಣವನ್ನು ಮರಳಿ ಹಾಕಲಾಗಿದೆ, ಈಗ ಮತ್ತೆ ಡಿ.ಡಿ ತುಂಬುವಂತೆ ಹೇಳುತ್ತಿದ್ದಾರೆ, ಅದು ನಿಮ್ಮ ಸರದಿ ಬಂದಾಗ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಂಗಳವಾರ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.ಈ ವೇಳೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ ಕುಬಕಡ್ಡಿ, ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡುತ್ತಾ, ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಯೋಜನೆಗಳ ಬಗ್ಗೆ ಸರಿಯಾದ ಮಾಹಿತಿ ನೀಡಿ, ಜೊತೆಗೆ ವಿಮೆಯಲ್ಲಿ ದೊಡ್ಡಪ್ರಮಾಣದ ಅವ್ಯವಹಾರ ನಡೆಯುತ್ತಿದೆ, ನಷ್ಟಗೊಂಡ ರೈತರಿಗೆ ಪರಿಹಾರ ಸಿಗುವ ಲಕ್ಷಣಗಳು ಕಾಣುತ್ತಿಲ್ಲ, ಅದರ…

Read More

ವಿಜಯಪುರ: ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಮಂಗಳವಾರದಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಪದಾಧಿಕಾರಿಗಳಿಗೆ ರಾಜ್ಯಾಧ್ಯಕ್ಷ ಚುನ್ನಪ್ಪಾ ಪೂಜೇರಿ ಅವರ ಮಾರ್ಗದರ್ಶನದಂತೆ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಹುಲ್ ಕುಬಕಡ್ಡಿ ಹಾಗೂ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಅವರು ಸಂಘದ ತತ್ವ ಹಾಗೂ ಸಿದ್ದಾಂತಗಳನ್ನು ಹೇಳಿ ಆದೇಶಪ್ರತಿ ಹಾಗೂ ಶಾಲು ದೀಕ್ಷೆಯನ್ನು ಮಾಡಿದರು.ರೈತಸಂಘದಲ್ಲಿ ಯಾರು ದೊಡ್ಡವರು ಸಣ್ಣವರು, ಬಡವ, ಬಲ್ಲಿದ, ಮೇಲ್ಜಾತಿ, ಕೇಳಜಾತಿ ಎಂಬುದಿಲ್ಲ ಜಾತ್ಯಾತೀತವಾಗಿ ಹಾಗೂ ಪಕ್ಷಾತೀತವಾಗಿ ಇರುವ ಏಕೈಕ ಸಂಘಟನೆ ಇದಾಗಿದೆ, ಜಿಲ್ಲೆಯ ಯಾವುದೇ ರೈತರಿಗೆ ಅನ್ಯಾಯವಾಗದಂತೆ, ಸರಕಾರದ ಎಲ್ಲಾ ಯೋಜನೆಗಳ ಮಾಹಿತಿ ಕೊಡುತ್ತಾ ರೈತರ ಏಳ್ಗೆಗಾಗಿ, ರೈತರ ಆದಾಯವನ್ನು ದ್ವೀಗುಣ ಮಾಡುವಲ್ಲಿ, ರೈತರನ್ನು ಸ್ವಾವಲಂಭಿಗಳಾಗಿ ಬದುಕುವಂತೆ ಮಾಡುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.ನೂತನವಾಗಿ ಜಿಲ್ಲಾ ಉಪಾಧ್ಯಕ್ಷರಾಗಿ ಸಂಪತ್ತ ಜಮಾದಾರ, ಜಿಲ್ಲಾ ಸಂ.ಕಾರ್ಯದರ್ಶಿಗಳಾಗಿ ನಜೀರ ನಂದರಗಿ, ವಿಜಯಪುರ ತಾಲೂಕಾ ಅಧ್ಯಕ್ಷರಾಗಿ ಅರುಣಗೌಡ ತೇರದಾಳ ಹಾಗೂ ತಾಲೂಕಾ ಉಪಾಧ್ಯಕ್ಷರಾಗಿ ಮಹಾದೇವಪ್ಪ ತೇಲಿ ಅವರಿಗೆ ಆದೇಶ ಪ್ರತಿ ನೀಡಿ ಶಾಲು ಹೊದಿಸಲಾಯಿತು.ಈ…

Read More

೬೨೦ ಕಿ.ಮೀ ದೂರದ ಹೊಸ ರೈಲ್ವೆ ಮಾರ್ಗ | ಫಲಿಸದ ನೂತನ ರೈಲ್ವೆ ಮಾರ್ಗ ನಿರ್ಮಾಣ ಹೋರಾಟ ಸಮೀತಿ ಮನವಿ ಕೊಲ್ಹಾರ: ಎರಡು ದಶಕಗಳ ಕಾಲದಿಂದ ಕೇಂದ್ರ ಸರಕಾರದ ಗಮನ ಸೆಳೆಯುತ್ತಿರುವ ಬಹುನಿರೀಕ್ಷಿತ ಶೇಡಬಾಳ, ಕೂಡಗಿ, ಯಾದಗಿರಿ, ಶ್ರೀಶೈಲ ಪುಣ್ಯಕ್ಷೇತ್ರಕ್ಕೆ ತಲುಪುವ ಹೊಸ ರೈಲ್ವೆ ಮಾರ್ಗದ ಸಮೀಕ್ಷೆ ಕಾರ್ಯ (ಸರ್ವೇ) ಕನಸು ನನಸಾಗದೇ ಇರುವದು ಈ ಭಾಗದ ಜನರ ಪಾಲಿನ ದೌರ್ಭಾಗ್ಯವಾಗಿದೆ.ಕೇಂದ್ರ ಸರಕಾರವು ಉಡಾನ್ ಯೋಜನೆಯ ಮೂಲಕ ಮೂಲೆ ಮೂಲೆಗೆ ವಿಮಾನ ಸೇವೆ ಸಾಗರಮಾಲಾ ಯೋಜನೆಯ ಮೂಲಕ ನೌಕಾ ಸಂಪರ್ಕ (ಹಡಗು), ಪರ್ವತಮಾಲಾ ಯೋಜನೆ ಅಡಿಯಲ್ಲಿ ನಾಲ್ಕು ದಿಕ್ಕಿನಿಂದ ಭೂ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಿ ಸಾರ್ವಜನಿಕ ಕ್ಷೇತ್ರಕ್ಕೆ ಅನುಕೂಲಮಾಡಿರುವದು ಮುಂದೆ ಮಾಡುವುದು ಕೂಡ ಸ್ವಾಗತಾರ್ಹ ವಿಷಯವಾಗಿದೆ.ಆದರೆ ದಕ್ಷಿಣ ಭಾರತದ ಮಧ್ಯ ಭಾಗದಲ್ಲಿ ರೈಲ್ವೆ ಯೋಜನೆಗಳು ಅಷ್ಟಾಗಿ ಸಂಪರ್ಕದ ಕೊಂಡಿಯಾಗಿ ಜನರಿಗೆ ಹತ್ತಿರವಾಗುವಲ್ಲಿ ಕೇಂದ್ರ ಸರಕಾರದ ಆಡಳಿತ ವ್ಯವಸ್ಥೆಯ ಅಧಿಕಾರಿಗಳ ಜವಾಬ್ದಾರಿ ಕೊರತೆಯೋ, ಅಥವಾ ನಮ್ಮನ್ನಾಳುವ ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಅಭಿವೃದ್ದಿ ದಿಸೆಯತ್ತ ಸೌಲಭ್ಯ…

Read More