ಬ್ರಹ್ಮದೇವನಮಡು: ಸಿಂದಗಿ ತಾಲೂಕಿನ ಸುಕ್ಷೇತ್ರ ಗೋಲಗೇರಿ ಗೊಲ್ಲಾಳೇಶ್ವರ ಜಾತ್ರೆ ನಿಮಿತ್ಶ ಏ.೨೧ರಿಂದ ೨೭ರವರೆಗೆ ನಾನಾ ಧಾಮಿ೯ಕ ಕಾಯ೯ಕ್ರಮಗಳು ಜರುಗಲಿವೆ. ಏ.೨೩ರಂದು ಸಂಜೆ ೫.೩೦ಕ್ಕೆ ಧಮ೯ದಶಿ೯ಗಳಾದ ವರಪುತ್ರ ಹೊಳೆಪ್ಪನವರು ದೇವರಮನಿ ಹಾಗೂ ನಿಜಪ್ಪ ಶರಣರು ದೇವರಮನಿ ನೇತೃತ್ವದಲ್ಲಿ ಪಂಚಲೋಹದ ಕಲಶಾರೋಹಣ, ಭೂಚಕ್ರ ಕೊಡೆ ಏರಿಸಿದ ನಂತರ ಮಹಾರಥೋತ್ಸವ ನಡೆಯಲಿದೆ. ಏ.೨೧ರಂದು ರಾತ್ರಿ ೧೦ಕ್ಕೆ ಡೊಳ್ಳಿನ ವಾಲಗ ಉತ್ಸವ, ಏ.೨೨ರಂದು ಸಂಜೆ ಗೊಲ್ಲಾಳೇಶ್ವರ ಮಹಾ ಪುರಾಣ ಮಂಗಲ ನಂತರ ೭ಕ್ಕೆ ಬಿಂದಗಿ ಉತ್ಸವ, ರಾತ್ರಿ ೧೦ಕ್ಕೆ ಕಡೆ ಉಚ್ಚಾಯಿ ಕಾಯ೯ಕ್ರಮ ನಡೆಯಲಿದೆ. ಏ.೨೫ರಂದು ಕಡಬಿನ ಕಾಳಗ, ಏ.೨೭ರಂದು ಕಲಶ ಇಳಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಗೊಲ್ಲಾಳೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಕಾರ್ಯಾಧ್ಶಕ್ಷ ರವಿರಾಜ ದೇವರಮನಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment