ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿಯಾಗಿರುವ ಸಂಸದ ರಮೇಶ ಜಿಗಜಿಣಗಿ ಅವರ ಪರ ಬೂತ್ ಮಟ್ಟದಲ್ಲಿ ಬಿರುಸಿನ ಪ್ರಚಾರ ಕೈಗೊಳ್ಳುವ ನಿಟ್ಟಿನಲ್ಲಿ ಏ.19 ಮತ್ತು 20 ಶುಕ್ರವಾರ ಹಾಗೂ ಶನಿವಾರ ಎರಡು ದಿನಗಳ ಕಾಲ ವಿಜಯಪುರ ಜಿಲ್ಲೆಯ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳ ಒಟ್ಟು 428 ಶಕ್ತಿಕೇಂದ್ರಗಳಿಗೆ ಬಿಜೆಪಿಯ ಲೋಕಸಭಾ ಚುನಾವಣೆ ರಾಜ್ಯ ಸಂಚಾಲಕ ವಿ. ಸುನೀಲ್ ಕುಮಾರ್ ಅವರು ಜಿಲ್ಲೆಯ ನಾಯಕರುಗಳನ್ನು ನಿಯೋಜಿಸಿದ್ದಾರೆ.
ಮುದ್ದೇಬಿಹಾಳ ಮತಕ್ಷೇತ್ರದ 52 ಶಕ್ತಿಕೇಂದ್ರಗಳಿಗೆ ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ ಅವರನ್ನು , ದೇವರ ಹಿಪ್ಪರಗಿ ಮತಕ್ಷೇತ್ರದ 48 ಶಕ್ತಿಕೇಂದ್ರಗಳಿಗೆ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು, ಬಸನವ ಬಾಗೇವಾಡಿ ಮತಕ್ಷೇತ್ರದ 58 ಶಕ್ತಿಕೇಂದ್ರಗಳಿಗೆ ಮಾಜಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ ಅವರನ್ನು, ಬಬಲೇಶ್ವರ ಮತಕ್ಷೇತ್ರದ 48 ಶಕ್ತಿಕೇಂದ್ರಗಳಿಗೆ ಮುಖಂಡ ಸಂಜೀವ ಐಹೊಳೆ ಅವರನ್ನು, ವಿಜಯಪುರ ನಗರ ಮತಕ್ಷೇತ್ರದ 54 ಶಕ್ತಿಕೇಂದ್ರಗಳಿಗೆ ಮುಖಂಡ ಕಾಸೂಗೌಡ ಬಿರಾದಾರ ಅವರನ್ನು, ನಾಗಠಾಣ ಮತಕ್ಷೇತ್ರದ 47 ಶಕ್ತಿಕೇಂದ್ರಗಳಿಗೆ ಮಾಜಿ ಶಾಸಕ ರಮೇಶ ಭೂಸನೂರ ಅವರನ್ನು, ಇಂಡಿ ಮತಕ್ಷೇತ್ರದ 49 ಶಕ್ತಿ ಕೇಂದ್ರಗಳಿಗೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರನ್ನು ಹಾಗೂ ಸಿಂದಗಿ ಮತಕ್ಷೇತ್ರದ 71 ಶಕ್ತಿಕೇಂದ್ರಗಳಿಗೆ ಮಾಜಿ ಶಾಸಕರಾದ ರಾಜಶೇಖರ ಶೀಲವಂತ ಮತ್ತು ಮುಖಂಡ ವಿಜುಗೌಡ ಎಸ್. ಪಾಟೀಲ್ ಅವರುಗಳನ್ನು ನಿಯೋಜಿಸಲಾಗಿದೆ ಎಂದು ವಿ. ಸುನೀಲ್ ಕುಮಾರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Related Posts
Add A Comment