Author: editor.udayarashmi@gmail.com

ದಿ. ಡಾ. ಸಿ.ಆರ್.ಬಿದರಿ ಪುಣ್ಯಸ್ಮರಣೆ | ಉಚಿತ ಆರೋಗ್ಯ ತಪಾಸಣೆ & ಚಿಕಿತ್ಸಾ ಶಿಬಿರ ವಿಜಯಪುರ: ದಿವಂಗತ ಡಾ. ಸಿ.ಆರ್.ಬಿದರಿ ಅವರ ಪುಣ್ಯಸ್ಮರಣೆ ಅಂಗವಾಗಿ ವಿಜಯಪುರ ತಾಲೂಕಿನ ಹೊನಗನಹಳ್ಳಿ ಮತ್ತು ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ ಗ್ರಾಮಗಳಲ್ಲಿ ಮಹಿಳೆಯರು ಮತ್ತು ಚಿಕ್ಕಮಕ್ಕಳಿಗಾಗಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಶುಕ್ರವಾರ ನಡೆಯಿತು.ಹೊನಗನಹಳ್ಳಿ ಗ್ರಾಮದ ಶ್ರೀ ಮಂಗಮ್ಮದೇವಿ ಪ್ರೌಢಶಾಲೆಯಲ್ಲಿ ನಡೆದ ಶಿಬಿರವನ್ನು ಶಶಿ ಬಿದರಿ ಉದ್ಘಾಟಿಸಿದರು.ಈ ಶಿಬಿರದಲ್ಲಿ ಪ್ರಸೂತಿ ಮತ್ತು ಸ್ರೀ ರೋಗ ವಿಭಾಗದ ಡಾ. ಶೋಭಾ ಶಿರಗೂರ ಮತ್ತು ಚಿಕ್ಕ ಮಕ್ಕಳ ವೈದ್ಯಕೀಯ ವಿಭಾಗದ ಡಾ. ಎಚ್. ಆರ್. ಬಿಜಾಪುರೆ ಅವರು ಒಟ್ಟು 187 ಜನರ ಆರೋಗ್ಯ ತಪಾಸಣೆ ನಡೆಸಿದರು. ಅಲ್ಲದೇ, 13 ಜನರಿಗೆ ಹೆಚ್ಚಿನ ತಪಾಸಣೆಗೆ ವಿಜಯಪುರದ ಬಿ.ಎಲ್.ಡಿ.ಇ ಆಸ್ಪತ್ರೆಗೆ ಶಿಫಾರಸು ಮಾಡಿದರು.ದೇವರಗೆಣ್ಣೂರ ಗ್ರಾಮದ ಮಹಲಕ್ಷ್ಷಿ ದೇವಸ್ಥಾನದ ಬಳಿ ಇರುವ ಯಾತ್ರಿ ನಿವಾಸದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಪ್ರಸೂತಿ ಮತ್ತು ಸ್ರೀ ರೋಗ ವಿಭಾಗದ ಡಾ. ಶ್ರೀದೇವಿ ಕೋರಿ ಮತ್ತು…

Read More

ವಿಜಯಪುರ: ಅಂತಾರಾಷ್ಟ್ರೀಯ ಖ್ಯಾತಿಯ ಅಥ್ಲೀಟ್ ಮತ್ತು ಖ್ಯಾತ ವೈದ್ಯ ಡಾ. ಸಿ. ಆರ್. ಬಿದರಿ ಅವರ ಹೆಸರಿನಲ್ಲಿ ಚರ್ಮಕ್ಯಾನ್ಸರ್ ಕ್ಲಿನಿಕ್ ಪ್ರಾರಂಭಿಸಲಾಗುವುದು ಎಂದು ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್. ಎಸ್. ಮುಧೋಳ ತಿಳಿಸಿದ್ದಾರೆ.ಶುಕ್ರವಾರ ನಗರದ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಸ್ಕಿಲ್ಸ್ ಲ್ಯಾಬೊರೇಟರಿ ಕಟ್ಟಡದಲ್ಲಿರುವ ಸೆಂಟ್ ಫಾರ್ ಅಡ್ವಾನ್ಸಡ್ ಮೆಡಿಕಲ್ ಎಜುಕೇಶನ್ ಆಂಡ್ ರಿಸರ್ಚ್ ವಿಭಾಗದಲ್ಲಿ ಡಾ. ಸಿ. ಆರ್. ಬಿದರಿ ಅವರ ಪುಣ್ಯಸ್ಮರಣೆ ಅಂಗವಾಗಿ ಆಯೋಜಿಸಲಾದ ಕ್ಯಾನ್ಸರ್ ಕುರಿತು ರಾಜ್ಯ ಮಟ್ಟದ ಮುಂದುವರಿದ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಬಿ.ಎಲ್.ಡಿ.ಇ ಆಸ್ಪತ್ರೆಯ ಅಭಿವೃದ್ಧಿಗೆ ಮತ್ತು ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸುವಲ್ಲಿ ಡಾ. ಸಿ. ಆರ್. ಬಿದರಿ ಅವರ ಪಾತ್ರ ಅಮೂಲ್ಯವಾಗಿದೆ. ತಮ್ಮ ಸೇವೆ ಮೂಲಕ ಮಕ್ಕಳು ಮತ್ತು ಯುವಕರು ವೈದ್ಯಕೀಯ ಶಿಕ್ಷಣ ಪಡೆಯಲು ಅವರು ಸ್ಪೂರ್ತಿಯಾಗಿದ್ದರು. ವಿಜಯಪುರ ಜಿಲ್ಲೆಯ ಜನರ ಸೇವೆಗಾಗಿಯೇ ತಮ್ಮ ವೈದ್ಯವೃತ್ತಿ ಜೀವನವನ್ನು ಮುಡುಪಾಗಿಟ್ಟಿದ್ದರು. ಅಷ್ಟೇ ಅಲ್ಲ, ವೈದ್ಯವೃತ್ತಿಯಲ್ಲಿ ಬಿಡುವಿಲ್ಲದ ಸಮಯದ ಮಧ್ಯೆಯು ಕುಟುಂಬ…

Read More

ವಿಜಯಪುರ: ಅಂತಾರಾಷ್ಟ್ರೀಯ ಖ್ಯಾತಿಯ ಅಥ್ಲೀಟ್ ಮತ್ತು ಖ್ಯಾತ ವೈದ್ಯ ದಿ. ಡಾ. ಸಿ. ಆರ್. ಬಿದರಿಯವರ ಪುಣ್ಯಸ್ಮರಣೆ ಅಂಗವಾಗಿ ಫೆಬ್ರುವರಿ 4 ರಂದು ರವಿವಾರ ಬಿ. ಎಲ್. ಡಿ. ಇ ಸಂಸ್ಥೆಯ ಅಂತರ ಶಾಲಾ ಕಾಲೇಜುಗಳ ಅಥ್ಲೇಟಿಕ್ ಕ್ರೀಡಾಕೂಟ ಆಯೋಜಿಸಲಾಗಿದ್ದು, ಬಿ.ಎಲ್.ಡಿ. ಸಂಸ್ಥೆಯ ಬಂಗಾರಮ್ಮ ಸಜ್ಜನ ಮಹಿಳಾ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿನಿಯೂ ಆಗಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಹಿಳಾ ಆಟಗಾರ್ತಿ ರಾಜೇಶ್ವರ ಗಾಯಕವಾಡ ಉದ್ಘಾಟಿಸಲಿದ್ದಾರೆ.ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಬಿ.ಎಲ್.ಡಿ.ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ಬಿ. ಕೊಟ್ನಾಳ ಮತ್ತು ಕ್ರೀಡಾ ನಿರ್ದೇಶಕ ಪ್ರೊ. ಎಸ್. ಎಸ್. ಕೋರಿ, ಫೆಬ್ರವರಿ 4 ರಂದು ಬೆಳಿಗ್ಗೆ 9 ಗಂಟೆಗೆ ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯದ ಶ್ರೀ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜಿನ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದ ಆಶ್ರಯದಲ್ಲಿ ನಡೆಯಲಿರುವ ಈ ಕ್ರೀಡಾಕೂಟವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಹಿಳಾ…

Read More

ವಿಜಯಪುರ: ಜಿಲ್ಲೆಯಲ್ಲಿ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಪ್ರಕರಣಗಳ ಪತ್ತೆ ಕುರಿತಂತೆ ಪೊಲೀಸ್‌ ವರಿಷ್ಠಾಧಿಕಾರಿ ರಿಷಿಕೇಶ್‌ ಸೋನವಾಣೆ ಮಾಹಿತಿ ನೀಡಿದರು.ನಗರದಲ್ಲಿ ಗುರುವಾರ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರದ ಸಿಈಎನ್‌ ಪೊಲೀಸ್‌ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು 12 ಅಪರಾಧ ಪ್ರಕರಣಗಳು ದಾಖಲಾಗಿದ್ದವು. ಇವುಗಳ ಪತ್ತೆಗೆ ವಿಶೇಷ ತಂಡವನ್ನ ರಚಿಸಲಾಗಿತ್ತು. ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ರಚಿಸಲಾದ ತಂಡ ಯಶಸ್ವಿ ಪತ್ತೆ ಕಾರ್ಯಾಚರಣೆ ಮಾಡಿದ್ದು, ಒಟ್ಟು ದಾಖಲಾದ 12 ಅಪರಾಧ ಪ್ರಕರಣಗಳಲ್ಲಿ ಒಟ್ಟು ಎರಡು ಕೋಟಿ ಏಳು ಲಕ್ಷದಷ್ಟು ಆರ್ಥಿಕ ವಂಚನೆಯಲ್ಲಿ 1 ಕೋಟಿ 89 ಲಕ್ಷದಷ್ಟು ಮೊತ್ತವನ್ನ ಮರಳಿ ಜಮೆ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.ಇದಲ್ಲದೇ ಜಿಲ್ಲೆಯಲ್ಲಿ ವಿವಿಧ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ಆಗಿದ್ದ ಮೊಬೈಲ್‌ಗಳನ್ನು ಜಪ್ತಿ ಮಾಡಲಾಗಿದೆ ಎಂದು ಎಸ್ಪಿ ಋಷಿಕೇಸ್ ಸೋನವಾಣೆ ಮಾಹಿತಿ ನೀಡಿದರು.ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯಲ್ಲಿ 4,58,500 ರೂಪಾಯಿ ಮೌಲ್ಯದ 25 ವಿವಿಧ ಕಂಪನಿಯ ಮೊಬೈಲ್‌‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೇ, ಕಳ್ಳತನವಾದ ಮೊಬೈಲ್‌ಗಳನ್ನು ಸಿಇಐಆರ್ ವೈಬ್ ಸೈಟ್ ಮುಖಾಂತರ…

Read More

ದಾವಣಗೆರೆ ಸಮ್ಮೇಳನದಲ್ಲಿ ಘಟಕಕ್ಕೆ ಪ್ರಶಸ್ತಿ ಪ್ರದಾನ | ಸಂಭ್ರಮಿಸಿದ ಕಾನಿಪ ಸದಸ್ಯರು ವಿಜಯಪುರ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿಜಯಪುರ ಜಿಲ್ಲಾ ಘಟಕಕ್ಕೆ ರಾಜ್ಯ ಘಟಕ ಕೊಡಮಾಡುವ ಉತ್ತಮ ಸಾಧನೆಗೈದ ಸಂಘ ಪ್ರಶಸ್ತಿಗೆ ಪುರಸ್ಕೃತವಾಗಿದ್ದು, ಸಂಘದ ಸದಸ್ಯರ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.ರಾಜ್ಯದ ಮೂರು ಜಿಲ್ಲಾ ಘಟಕಗಳಿಗೆ ಈ ಪ್ರಶಸ್ತಿ ಲಭಿಸಿದ್ದು, ಅದರಲ್ಲಿ ವಿಜಯಪುರ ಕಾರ್ಯನಿರತ ಪತ್ರಕರ್ತರ ಸಂಘವೂ ಈ ಪ್ರಶಸ್ತಿಗೆ ಪಾತ್ರವಾಗಿದ್ದು, ಸಂಘದ ಸದಸ್ಯರು ಹಾಗೂ ಪದಾಧಿಕಾರಿಗಳ ಹರ್ಷದ ಹೊನಲಿಗೆ ಕಾರಣವಾಗಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಟಿ. ಚೂರಿ ಹಾಗೂ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ತಿಳಿಸಿದ್ದಾರೆ.ಕಳೆದ ವರ್ಷ ಫೆ. ೪ ಮತ್ತು ೫ ರಂದು ವಿಜಯಪುರ ಜಿಲ್ಲಾ ಘಟಕ ೩೭ನೇ ರಾಜ್ಯ ಪತ್ರಕರ್ತರ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿತ್ತು. ಈ ಸಮ್ಮೇಳನ ಯಶಸ್ಸಿಗೆ ಸಂಘದ ಸದಸ್ಯರು ಹಾಗೂ ಹಾಗೂ ಹಿತೈಷಿಗಳು ದಣಿವರಿಯದೇ ದುಡಿದಿದ್ದನ್ನು ಇಲ್ಲಿ ಸ್ಮರಿಸಬಹುದು.ದಾವಣಗೆರೆಯಲ್ಲಿ ಇದೇ ಫೆ. ೩ ಮತ್ತು ೪ ರಂದು ನಡೆಯಲಿರುವ ೩೮ನೇ ರಾಜ್ಯ ಪತ್ರಕರ್ತರ…

Read More

ಸಂಸದ ಡಿಕೆ ಸುರೇಶ್ ನೀಡಿದ ಹೇಳಿಕೆ | ಬಿಜೆಪಿ ನಾಯಕರ ಖಂಡನೆ | ತಮ್ಮನ ಅಭಿಪ್ರಾಯ ಒಪ್ಪದ ಡಿಕೆಶಿ ದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಿದ ಬೆನ್ನಲ್ಲೇ, ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿರುವ ಬೆಂಗಳೂರು ಗ್ರಾಮಾಂತರ ಲೋಕಸಭಾ ಸಂಸದ ಡಿ.ಕೆ.ಸುರೇಶ್, ಇದೇ ರೀತಿ ಮುಂದುವರಿದರೆ ಪ್ರತ್ಯೇಕ ದೇಶದ ಬೇಡಿಕೆ ಮುಂದಿಡುವುದಾಗಿ ಬೆದರಿಕೆ ಹಾಕಿದ್ದಾರೆ.ದೆಹಲಿಯಲ್ಲಿ ಸಂಸತ್ತಿನ ಹೊರಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಅನ್ನು ಟೀಕಿಸುವ ಸಂದರ್ಭದಲ್ಲಿ ಸುರೇಶ್ ಈ ಹೇಳಿಕೆ ನೀಡಿದ್ದಾರೆ. ಇದು ಸಕತ್ ಕಿಡಿ ಹಬ್ಬಿಸಿದ್ದು, ಬಿಜೆಪಿ ನಾಯಕರು ಟೀಕೆ ವ್ಯಕ್ತಪಡಿಸುತ್ತಿದ್ದಾರೆ. ಎಂಪಿ ರೇಣುಕಾಚಾರ್ಯ, ಆರ್. ಅಶೋಕ್, ಸುನೀಲ್ ಕುಮಾರ್ ಅವರಂತಹ ನಾಯಕರು ಭಾರಿ ಖಂಡನೆ ವ್ಯಕ್ತಪಡಿಸಿದ್ದಾರೆ.”ಅಖಂಡ ಭಾರತವನ್ನು ತುಂಡು ಮಾಡಿದ ಕಾಂಗ್ರೆಸ್ಸಿಗರ‌ ಮನಸ್ಥಿತಿ ‌ಇಂದು ಯಾವ ಮಟ್ಟಕ್ಕೆ ತಲುಪಿದೆ ಎಂದರೆ, ದೇಶವನ್ನು ಮತ್ತೊಮ್ಮೆ ವಿಭಜಿಸುವ ಬಹುದೊಡ್ಡ ಷಡ್ಯಂತ್ರ ಸಂಸದ ಡಿ. ಕೆ. ಸುರೇಶ್ ಅವರ…

Read More

ಬಸವನಬಾಗೇವಾಡಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿರುವ ಕೇಂದ್ರ ಸರಕಾರ ಮಧ್ಯಂತರ ಬಜೆಟ್ ಪ್ರಧಾನಮಂತ್ರಿ ಮೋದಿಯವರು ಹೇಳಿದ ಹಾಗೆ ದೇಶದ ಭವಿಷ್ಯ ರೂಪಿಸುವ ಬಜೆಟ್ ಆಗಿದೆ. ಕಾರ್ಯಕರ್ತೆಯರಿಗೆ, ಸಹಾಯಕರಿಗೆ, ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಭಾರತ ಯೋಜನೆಯನ್ನು ಜಾರಿಗೆ ತಂದಿರುವುದು ಉತ್ತಮ ಬೆಳವಣಿಗೆಯಾಗಿದೆ. ಒಂದು ಕೋಟಿ ಮನೆಗಳಿಗೆ ಸೋಲಾರ್ ವಿದ್ಯುತ್ತನ್ನು, ಪ್ರತಿ ಮನೆಗೆ 300 ಯುನಿಟ್ ಪುಕ್ಕಟೆಯಾಗಿ ಒದಗಿಸುವುದು ಬಜೆಟ್ ನ ಮುಖ್ಯ ಗುರಿಯಾಗಿದೆ. ಆಧುನಿಕ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು, ಪ್ರವಾಸೋದ್ಯಮ ಇಲಾಖೆಗೆ ಹೆಚ್ಚಿನ ಗಮನ ನೀಡಿರುವುದು, ರಕ್ಷಣಾ ಇಲಾಖೆಗೆ 11 ಲಕ್ಷ ಕೋಟಿ ಹಣವನ್ನು ಮೀಸಲಾಗಿರಿಸಿರುವದು ಸೇರಿದಂತೆ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತರುವಲ್ಲಿ ಒತ್ತುಕೊಡಲಾಗಿದೆ. ಒಟ್ಟಾರೆಯಾಗಿ ಬಜೆಟ್ ಬಡವರ ಹಾಗೂ ಮಧ್ಯಮ ವರ್ಗದವರ ಪರವಾಗಿದೆ ಎಂದು ಭಾರತೀಯ ಜನತಾ ಪಕ್ಷದ ಮಹಿಳಾ ಮಂಡಲ ಅಧ್ಯಕ್ಷೆ ಸಾವಿತ್ರಿ ಕಲ್ಯಾಣಶೆಟ್ಟಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ಇಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ ಅವರು ಮಂಡಿಸಿರುವ ಮಧ್ಯಂತರ ಬಜೆಟ್ಟು ಸಂಪೂರ್ಣ ನಿರಾಶಾದಾಯಕವಾಗಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಜೆಟ್ ಮಂಡಿಸಲಾಗಿದೆ. ಬಜೆಟ್ ನಲ್ಲಿ ವಿದ್ಯಾರ್ಥಿಗಳಿಗೆ, ಧೀನದಲಿತರಿಗೆ, ಮಧ್ಯಮ ವರ್ಗದವರಿಗೆ ಯಾವುದೇ ತರಹದ ಆಶಾದಾಯಕ ಬಜೆಟ್ ಅಲ್ಲ. ಭಾರತ ದೇಶದ ಎಲ್ಲ ಜನರಿಗೂ ಸಂಪೂರ್ಣ ನಿರಾಶೆಯಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ಎಂ ರಾಥೋಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಬಸವನಬಾಗೇವಾಡಿ: ಇಂದಿನ ಕೇಂದ್ರ ಸರ್ಕಾರದಿಂದ ಮಂಡನೆಯಾಗಿರುವ ಬಜೆಟ್ ಚುನಾವಣೆ ಮತ್ತು ಕಾರ್ಪೊರೇಟ್ ಮಂದಿ ಬಜೆಟ್ ಆಗಿದೆ.ರೈತ ಮತ್ತು ರೈತ ಕಾರ್ಮಿಕರಿಗೆ ಇದರಿಂದ ಏನು ಲಾಭ ಇಲ್ಲ. ಹಳ್ಳಿಗಳಿಂದ ದೇಶ ಅನ್ನೋದನ್ನು ಮತ್ತು ರೈತ ದೇಶದ ಬೆನ್ನೆಲಬು ಅನ್ನೋದನ್ನು ಮರೆತು ಕೇವಲ ಶ್ರೀಮಂತರಿಗಾಗಿ ಮಾಡಿರುವ ಬಜೆಟ್ ಇದಾಗಿದೆ. ಮಧ್ಯಮ ವರ್ಗದ ಜನರಿಗೆ ಏನು ಲಾಭ ಇಲ್ಲ. ಶಿಕ್ಷಣ ಮತ್ತು ಕೃಷಿಗೆ ಹಾಗೂ ಕೈಗಾರಿಕೆಗೆ ಏನು ಕೊಟ್ಟಿಲ್ಲ. ಅತಿ ಹೆಚ್ಚು ತೆರಿಗೆ ಕೊಡುವ ಕರ್ನಾಟಕ ರಾಜ್ಯಕ್ಕೆ ಯಾವುದೇ ವಿಶೇಷವಾದ ಕೊಡುಗೆ ನೀಡಿಲ್ಲ. ಇಂದಿನ ಬಜೆಟ್ ಅವೈಜ್ಞಾನಿಕ ಬಜೆಟ್ ಆಗಿದೆ ಎಂದು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಗ್ಯರಾಜ ಶ್ರೀಶೈಲ ಸೊನ್ನದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More