ಮುದ್ದೇಬಿಹಾಳ: ನೇಹಾಳಿಗೆ ಒಂಬತ್ತು ಬಾರಿ ಚುಚ್ಚಿ ಕೊಲೆ ಮಾಡಲಾಗುತ್ತೆ ಅಂದರೆ ಈ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇದೆಯಾ? ಮುಖ್ಯಮಂತ್ರಿ, ಗೃಹಮಂತ್ರಿ ಈ ರಾಜ್ಯದಲ್ಲಿ ಇದಾರಾ? ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಆಕ್ರೋಶ ಹೊರಹಾಕಿದರು.
ಪಟ್ಟಣದಲ್ಲಿ ಎ.ಬಿ.ವಿ.ಪಿ ಮತ್ತು ಬಿಜೆಪಿ ವತಿಯಿಂದ ನೇಹಾ ಹತ್ಯೆ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಬೃಹತ್ ಪ್ರತಿಭಟನೆಯಲ್ಲಿ, ಪಟ್ಟಣದ ಬಸವೇಶ್ವರ ವೃತ್ತದಲ್ಲಿ ನಾಲ್ಕೂ ರಸ್ತೆಗಳನ್ನು ಬಂದ್ ಮಾಡಿ ಪ್ರತಿಭಟಿಸುವ ವೇಳೆ ನಡೆದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ನೇಹಾಳ ತಂದೆ ಕಾಂಗ್ರೇಸ್ ಪಕ್ಷದ ಕಾರ‍್ಪೋರೇಟರ್ ಮಗಳನ್ನು ಕಳೆದುಕೊಂಡು ದುಃಖದಲ್ಲಿದ್ರೆ ಅವರನ್ನು ಸಮಾಧಾನ ಮಾಡೋದು ಬಿಟ್ಟು ಗೃಹಮಂತ್ರಿ ಪರಮೇಶ್ವರ ಅವರು, ಕೊಲೆಗಡುಕ ಮತ್ತು ನೇಹಾ ಅವರಿಬ್ಬರು ಪರಸ್ಪರ ಪ್ರೀತಿಸ್ತಿದ್ರು ಅಂತ ಹೇಳಿಕೆ ಕೋಟ್ಟಿದ್ದಾರೆ. ಅವರಿಬ್ಬರು ಲವ್ ಮಾಡೋದನ್ನ ಯಾವತ್ತಾದ್ರು ಇವರು ನೋಡಿದ್ರಾ? ಬೆಂಗಳೂರಿನಲ್ಲಿ ಕುಳಿತು ಇಂಥ ಹೇಳಿಕೆ ಕೊಡೋ ಇವರಿಗೆ ನಾಚಿಕೆಯಾಗ್ಬೇಕು. ಇವರಿಗೆ ಮಾನ ಮರ್ಯಾದೆ ಇದೆಯಾ? ಇಂತಹ ಗೃಹಮಂತ್ರಿ ಈ ರಾಜ್ಯಕ್ಕೆ ಬೇಕಾ ಎಂದೆಲ್ಲ ಹರಿಹಾಯ್ದರು.
ಇಷ್ಟೊಂದು ಕ್ರೂರವಾಗಿ ಕೊಲೆ ಮಾಡಬೇಕಾದ್ರೆ ಈ ಪ್ರಕರಣ ಹಿಂದೆ ನೂರಕ್ಕೆ ನೂರು ಲವ್ ಜಿಹಾದ್ ಸಂಘಟನೆ ಇದೆ. ಆ ಸಂಘಟನೆಯಲ್ಲಿ ಯಾರ‍್ಯಾರು ಇದಾರೆ ಅವರನ್ನೆಲ್ಲ ಹೆಡೆ ಮುರಿ ಕಟ್ಟುವ ಕೆಲಸ ಮುಖ್ಯಮಂತ್ರಿ ಮತ್ತು ಸರ್ಕಾರ ಮಾಡಬೇಕು, ಅದನ್ನ ಬಿಟ್ಟು ಕೊಲೆಗಡುಕನಿಗೆ ಮತ್ತು ಆತನ ಕುಟುಂಬಕ್ಕೆ ರಕ್ಷಣೆ ಕೊಡಲಾಗುತ್ತಿದೆ. ಕೊಲೆಗಡುಕರ ರಕ್ಷಣೆ ಮಾಡೋದೇ ಕಾಂಗ್ರೇಸ್ ಸರ್ಕಾರದ ಉದ್ದೇಶ. ಇದನ್ನ ಇಡೀ ಹಿಂದು ಸಮಾಜ ಉಗ್ರವಾಗಿ ಖಂಡಿಸುತ್ತದೆ. ಗೃಹ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಮತ್ತು ಇವರ ಸರ್ಕಾರಕ್ಕೆ ಶಿಕ್ಷೆ ಕೊಡೋ ದಮ್ ಇಲ್ದಿದ್ರೆ ನೇಹಾಳ ಕುಟುಂಬಸ್ಥರ ಮತ್ತು ಸಮಾಜದ ಕೈಯಲ್ಲಿ ಅವನನ್ನು ಕೊಡಿ, ೯ ಬಾರಿ ಚೂರಿ ಇರಿದ ಆರೋಪಿಗೆ ನೂರು ಬಾರಿ ಚೂರಿ ಇರಿದು ತೋರಿಸ್ತೇವೆ ಎಂದು ಆಕ್ರೋಶ ಹೊರಹಾಕಿದರು.
ಬೆಂಗಳೂರಲ್ಲಿ ತನ್ನ ಅಂಗಡಿಯಲ್ಲಿಯೊಬ್ಬ ಹನುಮಾನ ಚಾಲೀಸಾ ಹಾಕಿದನೆಂದು ಅವನ ಮೇಲೆ ಹಲ್ಲೆ ಮಾಡಲಾಗಿದೆ. ರಾಮನವಮಿ ದಿನ ಜೈ ಶ್ರೀರಾಮ್ ಘೋಷಣೆ ಕೂಗಿದರೆ ಅಲ್ಲಾಹು ಅಕ್ಬರ್ ಕೂಗಬೇಕು ಅಂತಾ ಪುಡಾರಿಗಳು ಹಲ್ಲೆ ಮಾಡಿದ್ದಾರೆ. ಗದಗ ನಲ್ಲಿ ನಗರಸಭೆ ಉಪಾಧ್ಯಕ್ಷೆ ಮನೆ ಹೊಕ್ಕು ಕೊಲ್ಲಲಾಗಿದೆ. ರಾಮೇಶ್ವರ ಕೆಫೆ ನಲ್ಲಿ ಬಾಂಬ್ ಬ್ಲಾಸ್ಟ್ ಆಗಿದೆ, ಬಾಂಬ್ ಬ್ಲಾಸ್ಟ್ ಮಾಡಿದ ವ್ಯಕ್ತಿಯನ್ನ ರಾಜ್ಯ ಬಿಟ್ಟು ಹೋಗೋದಕ್ಕೆ ಸಹಾಯ ಮಾಡಿ ೪೮ ಗಂಡೆಗಳ ನಂತರ ಎನ್‌ಐ ಕೊಟ್ಟಿದ್ರು. ಬಾಂಗ್ಲಾ ಗೆ ಓಡಿ ಹೋಗುತ್ತಿದ್ದ ಬಾಂಬರ್ ನನ್ನ ವೆಸ್ಟ್ ಬೆಂಗಾಲ್ ನಲ್ಲಿ ಹೆಡೆ ಮುರಿ ಕಟ್ಟುವಲ್ಲಿ ನರೇಂದ್ರ ಮೋದಿ ಸರ್ಕಾರ ಸಫಲವಾಗಿದೆ. ಯಾರು ದೇಶ ದ್ರೋಹಿಗಳಿದೀರಿ, ಪಾಕಿಸ್ತಾನದ ಪರವಾಗಿದ್ದೀರಿ, ಯಾರು ಹಿಂದು ಸಮಾಜದ ಹೆಣ್ಣು ಮಕ್ಕಳ ಮೇಲೆ ಕಣ್ಣು ಹಾಕ್ತಿದ್ದೀರಿ ನಿಮ್ಮೆಲ್ಲರ ಹೆಡೆ ಮುರಿ ಕಟ್ಟುವ ಕೆಲಸ ನರೇಂದ್ರ ಮೋದಿ ಸರ್ಕಾರ ಮಾಡುತ್ತದೆ ಎಂದರು.
ಎಬಿವಿಪಿಯ ರವೀಂದ್ರ ಬಿರಾದಾರ, ಬಿಜೆಪಿ ಮುಖಂಡ ರವಿ ನಾಯಕ ಮಾತನಾಡಿ, ಈ ಪ್ರಕರಣದಲ್ಲಿ ಚಾಕು ಚುಚ್ಚಿದ್ದು ಬಬ್ಬ ಹೆಣ್ಣುಮಗಳಿಗಲ್ಲ, ಭಾರತ ಮಾತೆಗೆ ಚುಚ್ಚಲಾಗಿದೆ. ಆರೋಪಿಗೆ ಶಿಕ್ಷೆಯಾಗದೇ ಹೋದರೆ ಡಾ.ಬಾಬಾ ಸಾಹೇಬರು ಬರೆದ ಸಂವಿಧಾನಕ್ಕೆ ಅರ್ಥ ಬರುವದಿಲ್ಲ ಎಂದರು.
ಪಟ್ಟಣದ ಬಜಾರ್ ನ ಹನುಮಾನ ದೇವಸ್ಥಾನದಿಂದ ಶುರುವಾದ ಪ್ರತಿಭಟನಾ ಮೆರವಣಿಗೆ ಬಸವೇಶ್ವರ ವೃತ್ತ, ಕಿತ್ತೂರು ರಾಣಿ ಚನ್ನಮ್ಮ ವೃತ್ತ ಮಾರ್ಗವಾಗಿ ತಹಶೀಲ್ದಾರ ಕಚೇರಿಯವರೆಗೂ ಸಾಗಿತು. ಅಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಎಬಿವಿಪಿ ಯ ಪ್ರಾಂತ ಕಾರ್ಯಕಾರಣಿ ಶಿವನಗೌಡ ಬಿರಾದಾರ, ಓಂಕಾರ ಪವಾರ, ಗಂಗಾ ಹಡಪದ, ಸ್ವಾತಿ ಬಂಗಾರಗುಂಡ, ನೇಹಾ ಪವಾರ, ಸೌಖ್ಯ ಸಜ್ಜನ ಡಿಎಸ್‌ಎಸ್ ನ ಹರೀಶ ನಾಟೆಕಾರ ಮತ್ತೀತರರು ಮಾತನಾಡಿ, ಆರೋಪಿಗೆ ಗಲ್ಲು ಶಿಕ್ಷೆ ನೀಡುವಂತೆ ಒತ್ತಾಯಿಸಿದರು. ಈ ವೇಳೆ ಹೋರಾಟಗಾರ ಬಸಯ್ಯ ನಂದಿಕೇಶ್ವರಮಠ, ವಿಕ್ರಂ ಓಸ್ವಾಲ್, ಸಿದ್ಧರಾಜ ಹೊಳಿ, ಸಂಜು ಬಾಗೇವಾಡಿ, ಅಶೋಕ ರಾಠೋಡ, ಪುನೀತ ಹಿಪ್ಪರಗಿ ಸೇರಿದಂತೆ ಎಬಿವಿಪಿಯ ಮತ್ತು ಭಾಜಪಾ ಕಾರ್ಯಕರ್ತರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

