Author: editor.udayarashmi@gmail.com

ಫೆ.೧೫ರಂದು ಶ್ರೀ ಸಂತ ಸೇವಾಲಾಲ್ & ಫೆ.೧೬ರಂದು ಸವಿತಾ ಮಹರ್ಷಿ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ ವಿಜಯಪುರ: ಜಿಲ್ಲಾಡಳಿತದ ವತಿಯಿಂದ ಇದೇ ಫೆಬ್ರವರಿ೧೦ರಂದು ಕಾಯಕ ಶರಣರ ಜಯಂತಿ, ಫೆಬ್ರವರಿ೧೫ರಂದು ಶ್ರೀ ಸಂತ ಸೇವಾಲಾಲ್ ಜಯಂತಿ, ಫೆಬ್ರವರಿ ೧೬ರಂದು ಸವಿತಾ ಮಹರ್ಷಿ ಜಯಂತಿ ಕಾರ್ಯಕ್ರಮಗಳನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ, ಫೆಬ್ರವರಿ೧೦ರಂದು ಕಾಯಕ ಶರಣರ ಜಯಂತಿ ಆಚರಣೆಯನ್ನು ಬೆಳಿಗ್ಗೆ ೯:೩೦ಕ್ಕೆ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ಭಾವಚಿತ್ರದ ಮೆರವಣಿಗೆ ಬೆಳಿಗ್ಗೆ ೧೧ಕ್ಕೆ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ ಏರ್ಪಡಿಸಿ, ಓರ್ವ ಉಪನ್ಯಾಸಕರನ್ನು ಆಹ್ವಾನಿಸಿ, ಮಹನೀಯರ ಕುರಿತ ಉಪನ್ಯಾಸ ನೀಡಲು ತೀರ್ಮಾನಿಸಲಾಯಿತು.ಫೆಬ್ರವರಿ೧೫ರಂದು ಶ್ರೀ ಸಂತ ಸೇವಾಲಾಲ್ ಜಯಂತಿ : ಜಯಂತಿ ಕಾರ್ಯಕ್ರಮದ ಅಂಗವಾಗಿ ಶ್ರೀ ಸಿದ್ಧೇಶ್ವರ ದೇವಸ್ಥಾನದಿಂದ ವಿವಿಧ ಕಲಾ ತಂಡಗಳೊಂದಿಗೆ ೧೧ ಗಂಟೆಗೆ ಭಾವಚಿತ್ರದ ಮೆರವಣಿಗೆ ಹಾಗೂ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸಭಾ ಕಾರ್ಯಕ್ರಮ,…

Read More

ಫೆ.೨೬-೨೭ ರಂದು ಬೆಂಗಳೂರಿನಲ್ಲಿ ಬೃಹತ್ ಉದ್ಯೋಗ ಮೇಳ ವಿಜಯಪುರ: ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆ.೨೬ ಹಾಗೂ ೨೭ ರಂದು ರಾಜ್ಯ ಮಟ್ಟದ ಯುವ ಬೃಹತ್ ಉದ್ಯೋಗ ಮೇಳ-೨೦೨೪ ಅಯೋಜಿಸಲಾಗಿದ್ದು, ಈ ಉದ್ಯೋಗ ಮೇಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ನಿರುದ್ಯೋಗಿಗಳು ಭಾಗವಹಿಸಲು ನೋಂದಣಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಸೂಚನೆ ನೀಡಿದರು.ಜಿಲ್ಲಾ ಕೌಶಲ್ಯ ಮಿಷನ್ ಅಧ್ಯಕ್ಷರಾದ ಟಿ.ಭೂಬಾಲನ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ಜಿಲ್ಲಾಧಿಕಾರಗಳ ಸಭಾ ಭವನದಲ್ಲಿ ಜರುಗಿದ ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯಲ್ಲಿ, ಸದರಿ ಉದ್ಯೋಗ https://skillconnect.kaushalkar.com ಪೋರ್ಟಲ್‌ದಲ್ಲಿ ನೋಂದಣಿ ಮಾಡಿಸುವಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹಾಗೂ ಉಪ ನಿರ್ದೇಶಕರು, ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಉಪ ನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ವಿಜಯಪುರ ಇವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.ಜಿಲ್ಲೆಯ ನಿರುದ್ಯೋಗಿಗಳು ರಾಜ್ಯಮಟ್ಟದ ಉದ್ಯೋಗ ಮೇಳದಲ್ಲಿ ಭಾಗವಹಿಸಿ ಉದ್ಯೋಗ ದೊರೆಯಲು ಅನುಕೂಲವಾಗುವಂತೆ ವ್ಯಾಪಕ ಪ್ರಚಾರ ಕೈಗೊಳ್ಳಬೇಕು. ಗ್ರಾಮ ಪಂಚಾಯತ್, ನಗರ ಸ್ಥಳೀಯ ಸಂಸ್ಥೆಗಳ ಸ್ವಚ್ಛವಾಹಿನಿಯ…

Read More

ಮರಗೂರ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಫೆ.೧೧ರಂದು ಚುನಾವಣೆ ಇಂಡಿ: ತಾಲೂಕಿನ ಮರಗೂರ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಗೆ ಫೆಬ್ರವರಿ ೧೧ರಂದು ಚುನಾವಣೆ ನಿಗದಿಯಾಗಿದ್ದು, ಫೆಬ್ರವರಿ ೫ ಸೋಮವಾರ ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿತ್ತು.ಸೋಮವಾರ ೩೩ ಜನ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡರು, ಪ್ರಮುಖವಾಗಿ ಮಾಜಿ ಶಾಸಕ ರವಿಕಾಂತ ಪಾಟೀಲ್ ಅವರು ಸಹ ತಮ್ಮ ನಾಮಪತ್ರ ಹಿಂಪಡೆದಿದ್ದು ಅವರ ಅಭಿಮಾನಿಗಳಲ್ಲಿ ನಿರಾಶೆ ಮೂಡಿಸುವಂತಾಯಿತು.ಸ್ಥಳೀಯ ಶಾಸಕ ಹಾಗೂ ಕಾರ್ಖಾನೆಯ ಅಧ್ಯಕ್ಷರಾಗಿರುವ ಯಶವಂತರಾಯಗೌಡ ಪಾಟೀಲ್ ಅವರು ಅವಿರೋಧ ಆಯ್ಕೆ ಮಾಡುವ ಪ್ರಯತ್ನದಲ್ಲಿ ಇದ್ದರೂ ಅವರ ಪ್ರಯತ್ನ ಕೈಗೂಡಲಿಲ್ಲ, ಸಾಮಾನ್ಯ ಸ್ಥಾನದಲ್ಲಿ ಐದು ಸ್ಥಾನಗಳಿಗೆ ೮ ಜನ ಅಭ್ಯರ್ಥಿಗಳು ಉಳಿದುಕೊಂಡಿದ್ದು ನಾಳೆಯಿಂದಲೇ ಚುನಾವಣಾ ಪ್ರಚಾರ ಪ್ರಾರಂಭವಾಗಲಿದೆ.ಕಣದಲ್ಲಿರುವವರಲ್ಲಿ ಮಾಜಿ ಶಾಸಕ ಡಾ. ಸಾರ್ವಭೌಮ ಬಗಲಿ ಅವರು ಇರುವ ಕಾರಣ ಚುನಾವಣೆ ಕಾವು ದಿನಿ ದಿನೇ ಹೆಚ್ಚಾಗುವ ಸಾಧ್ಯತೆ ಇದೆ.ಸಾಮಾನ್ಯ ವರ್ಗದಲ್ಲಿ-ಚಂದ್ರಕಾಂತ್ ಬೋರಗಿ, ನಾಗನಾಥ ಬಿರಾದಾರ, ಬಸವರಾಜ ಧನಶ್ರೀ, ಮಲ್ಲನಗೌಡ ಪಾಟೀಲ, ಯಶವಂತರಾಯಗೌಡ ಪಾಟೀಲ, ರೇವಗೊಂಡಪ್ಪ ಪಾಟೀಲ, ಸಿದ್ದಣ್ಣ…

Read More

ಇಂಡಿ: ತಾಲ್ಲೂಕಿನ ಆಳೂರ ಗ್ರಾಮದ ಶಿವಕುಮಾರ್ ಗಂಗಯ್ಯ ಹಿರೇಮಠ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಲಭಿಸಿದ್ದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಇತ್ತೀಚೆಗೆ ಹುಬ್ಬಳ್ಳಿಯಲ್ಲಿ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.ಏಷ್ಯಾ ಇಂಟರ್ನ್ಯಾಷನಲ್ ಟೀಚರ್ ರಿಸರ್ಚ್ ಯೂನಿವರ್ಸಿಟಿಯಲ್ಲಿ ವೇದಗಾಮ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ವಿಶೇಷ ಸಾಧನೆಗೈದಿದ್ದ ಅವರನ್ನು ನವನಗರ ಹುಬ್ಬಳ್ಳಿಯಲ್ಲಿರುವ ಕಾಶಿ ಜಗದ್ಗುರುಗಳ ಶಾಖಾ ಪೀಠವಾದ ಜಂಗಮವಾಡಿ ಶ್ರೀಮಠದ ಆವರಣದಲ್ಲಿ ಗೌರವ ಡಾಕ್ಟರೇಟ್ ಪ್ರಧಾನ ಮಾಡಲಾಯಿತು.ಹಿರಿಯ ಸಾಹಿತಿ, ಸಂಗೀತಗಾರ ಡಾ. ರಾಜಗುರು ಕಲಕೇರಿ, ಡಾ. ವಿರೂಪಾಕ್ಷ ದೇವರು, ಜಂಗಮವಾಡಿ ಮಠದ ಡಾ. ರಾಜೇಂದ್ರ ಶಿವಾಚಾರ್ಯರು ಉಪಸ್ಥಿತರಿದ್ದರು.

Read More

ವಿಜಯಪುರ: ಹೋನಾಗನಹಳ್ಳಿ ಗ್ರಾಮದಿಂದ ಸಂವಿಧಾನ ಜಾಗೃತಿ ಜಾತಾ ರಥಕ್ಕೆ ಗ್ರಾಮ ಪಂಚಾಯತಿಯಿಂದ ಪುಂಡಲಿಕ ಮಾನವರ ಉಪ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ವಿಜಯಪುರ ಇವರು ರಥಕ್ಕೆ ಅದ್ದೂರಿ ಚಾಲನೆ ನೀಡಿದರು.ಅಲ್ಲಿಂದ ಸಂವಿಧಾನ ರಥವು ತಿಕೋಟ ತಾಲೂಕು ಕೋಮಟೆ ಗ್ರಾಮ ಪಂಚಾಯಿತಿ ಹಲವು ಗ್ರಾಮಗಳ ಮೂಲಕ ಬಬಲೇಶ್ವರ ತಾಲೂಕಿಗೆ ಬಂದು ತಲುಪಿದಾಗ ಸಂವಿಧಾನ ಜಾಗೃತಿ ಜಾತಾರಥಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು,ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ವಿಜಯಪುರ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಎಸ್ ಎಂ ಪಾಟೀಲ ಮಾತನಾಡಿ, ಸಂವಿಧಾನವು ಜನತೆಯ ಹಕ್ಕುಗಳು ಮೂಲವಾಗಿದೆ. ವಿಶ್ವದ ದೀರ್ಘಸಂವಿಧಾನ ನಮ್ಮದು. ಹಾಗೂ ನಮ್ಮ ಸಂವಿಧಾನವು ಸೌಂದರ್ಯವೇ ಸಮಾನತೆ ಎಂದು ಹೇಳಿದರುಪ್ರತಿಯೊಬ್ಬರೂ ಸಂವಿಧಾನವನ್ನು ಓದಬೇಕು ಮಕ್ಕಳಿಗೆ ಓದಿ ಹೇಳಬೇಕು ಭಗವದ್ಗೀತೆ ಕುರಾನ್ ಬೈಬಲ್ ನಂತೆ ಸಂವಿಧಾನವು ಪ್ರತಿಯೊಬ್ಬರ ಮನೆಯಲ್ಲಿ ಅದರ ಪಠಣ ಮಾಡಬೇಕು ಎಂದು ಹೇಳಿದರು.ಸಮಾರಂಭದ ಇನ್ನೋರ್ವ ಅತಿಥಿ ಸದಾನಂದ ಬಡಿಗೇರವರು ಮನೆ ಮನಗಳಲ್ಲಿಯೂ ಸಂವಿಧಾನದ ಜ್ಯೋತಿ ಬೆಳಗಬೇಕು. ಮಕ್ಕಳಿಂದ ಹಿಡಿದು…

Read More

ಸರ್ವಾಧ್ಯಕ್ಷ ಸ್ಥಾನಕ್ಕೆ ಸಂಶೋಧಕ-ಸಾಹಿತಿ ಡಿ.ಎನ್. ಅಕ್ಕಿ ಆಯ್ಕೆ. – ಡಾ.ಸಂತೋಷ ನವಲಗುಂದಪತ್ರಕರ್ತ-ಲೇಖಕ ನಾಡಿನ ಸಂಶೋಧಕ-ಸಾಹಿತಿಗಳಲ್ಲಿ ಡಿ.ಎನ್.ಅಕ್ಕಿಯವರು ಮಹತ್ವದ ಸಂಶೋಧಕರಲ್ಲೊಬ್ಬರು. ಕಲ್ಯಾಣ ಕರ್ನಾಟಕದ ಈಗಿನ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಇವರ ಹುಟ್ಟೂರು. ಗ್ರಾಮದ ಪ್ರತಿಷ್ಠಿತ ವ್ಯಾಪಾರಸ್ಥ ಅಕ್ಕಿ ಮನೆತನದ ನಾಭಿರಾಜ ಮತ್ತು ಶ್ರೀಕಾಂತಮ್ಮ ದಂಪತಿಗಳ ಮಗನಾಗಿ ೩ನೇ ಅಕ್ಟೋಬರ್ ೧೯೪೮ರಲ್ಲಿ ಜನಿಸಿದರು. ಬಾಲ್ಯ ಕಳೆದು ಪ್ರೌಢಾವಸ್ಥೆ ತಲುಪುತ್ತಿದ್ದಂತೆ ಅನೇಕ ತೆರನಾದ ಕಷ್ಟಗಳನ್ನು ಎದುರಿಸುತ್ತಲೇ ಪ್ರೌಢ ಶಿಕ್ಷಣ ಮುಗಿಸಿಕೊಂಡರು. ನಂತರ ಗದಗದಲ್ಲಿ ಚಿತ್ರಕಲಾ ತರಬೇತಿಗೆಂದು ಹೋಗಿ ಅವರು ಅಲ್ಲಿ ಅನುಭವಿಸಿದ ಸಂಕಷ್ಟಗಳು ಅನೇಕ. ಆದರೆ ಗದಗದಲ್ಲಿ ಗೆಳಯರಾದ ಕಂಬಳಿಮಠ, ಗಾಣಿಗೇರ ಇನ್ನೂ ಅನೇಕ ಗೆಳೆಯರ ಸಹಾಯ-ಸಹಕಾರದಿಂದ ಯಶಸ್ವಿ ಚಿತ್ರಕಲಾ ತರಬೇತಿ ಶಿಕ್ಷಣ ಪಡೆದು, ಚಿತ್ರಕಲಾ ಶಿಕ್ಷಕರಾಗಿ ಸೇವೆ ಪ್ರಾರಂಭಿಸುತ್ತಾರೆ. ಅಷ್ಟೊತ್ತಿಗಾಗಲೇ ಮನೆಯಲ್ಲಿ ಸಾಲು ಸವಾಲುಗಳು ಅಕ್ಕಿಯವರ ಮುಂದೆ ನಿಂತಿದ್ದವು. ಅವೆಲ್ಲದಕ್ಕೂ ಸಮಾಧಾನಚಿತ್ತದಿಂದ ಪರಿಹಾರ ಕಂಡುಕೊಂಡು ಸಂಸಾರದ ನೊಗವ ಹೊತ್ತು, ಮನೆತನ ಮಾದರಿಯಾಗಿ ಮುನ್ನಡೆಸಿದರು. ಇಷ್ಟೆಲ್ಲಾ ತೊಂದರೆಗಳನ್ನು ಸಮರ್ಥವಾಗಿ ಎದುರಿಸಿ ವಿದ್ಯಾರ್ಥಿಗಳ ಪಾಲಿಗೆ…

Read More

ಸಿಂದಗಿ: ಪಟ್ಟಣದಲ್ಲಿ ಫೆ.೦೫ರಂದು ನಡೆಯಬೇಕಿದ್ದ ಸಿಂದಗಿ ತಾಲೂಕು ೬ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಕೆಲವು ಕಾರಣಗಳಿಂದ ಮುಂದೂಡಲಾಗಿದೆ. ಮುಂದಿನ ದಿನಾಂಕವನ್ನು ಶೀಘ್ರವೇ ತಿಳಿಸಲಾಗುವುದು ಎಂದು ಕಸಾಪ ತಾಲೂಕಾಧ್ಯಕ್ಷ ಶಿವಾನಂದ ಬಡಾನೂರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

ಡಾ.ಚೈತನಾ ಸಂಕೊಂಡ ರಚಿತ ’ಬಯಲು ಬೊಂಬೆ’ ಕೃತಿ ಲೋಕಾರ್ಪಣೆ ವಿಜಯಪುರ: ಸಂಶೋಧನಾ ಲೇಖನಗಳ ಸಂಗ್ರಹಿತ ’ಬಯಲು ಬೊಂಬೆ’ ಕೃತಿಯು ವಿಭಿನ್ನ ವಿಶೇಷ ಲೇಖನಗಳು, ಭಕ್ತಿ, ಸಾಮಾಜಿಕ ಚಿಂತನ, ವೈವಿಧ್ಯತೆಯನ್ನು ಒಳಗೊಂಡಿದೆ ಎಂದು ಪ್ರಾಚಾರ್ಯ ಡಾ:ಆರ್.ಎಂ.ಮಿರ್ದೆ ಹೇಳಿದರು.ನಗರದ ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಸಂಶೋಧನಾ ಕೇಂದ್ರದಲ್ಲಿ ಗ್ರಂಥ ಲೋಕಾರ್ಪಣೆಗೊಳಿಸಿ ಮಾತನಾಡಿದರು.ಸಾಹಿತ್ಯ ಲೋಕದಲ್ಲಿ ಸಂಶೋದನಾ ಬಹಳಷ್ಟು ವಿರಳ ಅಂತಹದರಲ್ಲಿ ಸಂಶೋಧನಾ ಕೈಗೊಂಡಿರುವ ಉಪನ್ಯಾಸಕಿ ಡಾ.ಚೈತನಾ ಸಂಕೊಂಡ ಇವರ ಕಾರ್ಯ ನಿಜಕ್ಕೂ ಶ್ಲಾಘನೀಯವಾದದ್ದು ಎಂದರು.ಈ ಗ್ರಂಥವು ವಿಭಿನ್ನ ವಿಶೇಷತೆಗಳನ್ನು ಹೊಂದಿದೆ. ರಾಮಾಯಣ ಮಹಾಭಾರತ, ಜೈನ ಧರ್ಮದ ದಿಗ್ದರ್ಶನ ಬಸವಣ್ಣನ ನವರ ವಿಚಾರ ಧಾರೆಗಳನ್ನು ಬಿತ್ತರಿಸುವ ಕಾಯ ವಾಚನ ಬಿತ್ತರಿಸುವ ಪಂಚವಿಂಶತಿ ಲೀಲೆಗಳು, ಸಂತ ಶರಣರ ಸಾಹಿತ್ಯದಲ್ಲಿ ಸಾಮಾಜಿಕ ಚಿಂತನೆ, ಕನಕದಾಸರ ಕೀರ್ತನೆಗಳಲ್ಲಿ ಭಕ್ತಿ, ನಿಜಗುಣ ಶಿವಯೋಗಿಗಳ ಅನುಭಾವ ಇಂತಹ ಹಲವಾರು ಸಾಮಾಜಿಕ ಸದೃಡ, ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಒಟ್ಟು ೧೩ ವಿಶೇಷ ಸಂಶೋಧನಾ ಲೇಖನಗಳ ವಿರಚಿತ ಈ ಗ್ರಂಥವು…

Read More

ದೇವರಹಿಪ್ಪರಗಿ: ಶಿಕ್ಷಕರಾಗಿ ರಾಷ್ಟ್ರಪತಿಯಾದ ಎಸ್.ರಾಧಾಕೃಷ್ಣನ್ ನಮ್ಮೆಲ್ಲರ ಹೆಮ್ಮೆ ಎಂದು ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಎ.ಎಚ್.ವಾಲೀಕಾರ ಹೇಳಿದರು.ತಾಲ್ಲೂಕಿನ ಪಡಗಾನೂರ ಎಲ್.ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಹಶಿಕ್ಷಕ ವಾಯ್.ಜಿ. ತಾವರಖೇಡ ಸೇವಾನಿವೃತ್ತಿಯಾದ ಸಂದರ್ಭದಲ್ಲಿ ಸನ್ಮಾನಿಸಿ ಮಾತನಾಡಿದರು.ಶಾಲಾ ಮುಖ್ಯಗುರು ಎಸ್.ಪಿ.ಇಂಗಳೇಶ್ವರ, ಎಸ್.ಎಮ್.ಹೊಕ್ಕುಂಡಿ, ಖಾದ್ರಿ, ಬಾಳು ರಾಠೋಡ, ವಿಜಯಲಕ್ಷ್ಮಿ ನವಲಿ, ನಾಗೇಶ ನಾಗೂರ, ಜಿ.ಪಿ.ಬಿರಾದಾರ ನಿವೃತ್ತ ಶಿಕ್ಷಕರ ಸೇವೆಯ ಕುರಿತು ಮಾತನಾಡಿದರು.ಸನ್ಮಾನಿತ ತಾವರಖೇಡ ಶಿಕ್ಷಕರು ಮಾತನಾಡಿ, ವೃತ್ತಿಯಲ್ಲಿ ನನಗೆ ಸಂತೃಪ್ತಿಯಿದೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಕಾರ್ಯ ನಿರ್ವಹಿಸಿದರೆ ಉತ್ತಮ ಪ್ರಜೆಗಳನ್ನು ನಿರ್ಮಿಸಬಹುದು. ಮಕ್ಕಳ ಉನ್ನತಿಯಲ್ಲಿಯೇ ನಮ್ಮ ಸಾರ್ಥಕ ಜೀವನ ಕಾಣಬೇಕು ಎಂದು ತಮ್ಮ ವೃತ್ತಿ ಜೀವನ ನೆನೆಸಿಕೊಂಡು ಭಾವುಕರಾದರು.ಎಸ್‌ಡಿಎಮ್‌ಸಿ ಅಧ್ಯಕ್ಷ ಜಿ.ಎಚ್.ರಾಠೋಡ, ಗ್ರಾಮ ಪಂಚಾಯಿತಿ ಸದಸ್ಯ ರಾಜು ರಾಠೋಡ, ತಾರಾಸಿಂಗ್ ರಾಠೋಡ, ಗೀತಾ ರಾಠೋಡ, ಭೀಮರಾಯ ಪೋಲೇಶಿ, ದಾನು ರಾಠೋಡ, ಸಿ.ಆರ್.ನಾಯಿಕ್, ಎ.ಟಿ.ಲಮಾಣಿ, ಕವಿತಾ ಬ್ಯಾಳಿ, ಗಂಗಾಬಾಯಿ ಗುಡಿಮನಿ, ಅಮೃತಾ ಕರಾಬಿ, ಶೃತಿ ಪಾಟೀಲ, ಮಹಾದೇವಿ ಬಿರಾದಾರ, ಮಲ್ಲಿಕಾರ್ಜುನ ತಳಕೇರಿ, ಎಸ್.ಎಸ್.ತಳವಾರ ಸೇರಿದಂತೆ ಮಕ್ಕಳು,…

Read More

ದೇವರಹಿಪ್ಪರಗಿ: ಕಳೆದ ೧೦ ವರ್ಷಗಳಿಂದ ಪಟ್ಟಣದ ಬಾಲಹನುಮಾನ ಜಾತ್ರೆ ಮಾಲಾಧಾರಿಗಳ ನೇತೃತ್ವದಲ್ಲಿ ವಿಜೃಂಭಣೆಯಿಂದ ಜರುಗುತ್ತಿರುವುದು ಅವರ ಭಕ್ತಿಭಾವಕ್ಕೆ ಸಾಕ್ಷಿಯಾಗಿದೆ ಎಂದು ಶಾಸಕ ರಾಜುಗೌಡ ಪಾಟೀಲ(ಕುದರಿಸಾಲವಾಡಗಿ) ಹೇಳಿದರುಪಟ್ಟಣದ ಗಂಗಾನಗರದಲ್ಲಿ ಶನಿವಾರ ಬಾಲಹನುಮಾನ ದೇವಸ್ಥಾನದ ೧೦ನೇ ವರ್ಷದ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು. ನಮ್ಮ ಕಷ್ಟಕಾರ್ಪಣ್ಯಗಳನ್ನು ದೂರಮಾಡುವ ಮೂಲಕ ಹನುಮಾನ ಪ್ರತಿ ಗ್ರಾಮ, ಪಟ್ಟಣದಲ್ಲಿ ಪೂಜ್ಯನೀಯ ದೈವವಾಗಿದ್ದಾನೆ ಎಂದು ಹೇಳುತ್ತಾ, ಕ್ಷೇತ್ರದಲ್ಲಿ ಕೆರೆ, ಕಾಲುವೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಹನುಮನ ಆಶೀರ್ವಾದದಿಂದ ದೇಶದಲ್ಲಿ ಸಮೃದ್ಧತೆ ಕಾಣುವಂತಾಗಲಿ ಎಂದರು.ಪಟ್ಟಣದ ಪ್ರಮುಖರಾದ ಬಿ.ಕೆ.ಪಾಟೀಲ ಮಾತನಾಡಿದರು.ಧಾರವಾಡ ಶ್ರೀಗುರು ಚೈತನ್ಯ ಆಶ್ರಮದ ಸರ್ಪಭೂಷಣ ದೇವರು, ಪರದೇಶಿಮಠಶ್ರೀ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಜಾತ್ರಾ ಮಹೋತ್ಸವದ ಅಂಗವಾಗಿ ನಿಂಗು ಯಂಭತ್ನಾಳ ನೇತೃತ್ವದಲ್ಲಿ ಮಾಲಾಧಾರಿಗಳು ಬೆಳಿಗ್ಗೆ ಹೋಮ ಹವನಗಳು ಸೇರಿದಂತೆ ಪೂಜಾವಿಧಿ ವಿಧಾನಗಳನ್ನು ಶಾಸ್ತ್ರೋಕ್ತವಾಗಿ ನೆರವೇರಿಸಿ ನಂತರ ಮಹಾಪ್ರಸಾದ ವಿತರಿಸಿದರು.ನಿವೃತ್ತ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಸಿ.ಕೆ.ಕುದರಿ, ವಿಜಯಪುರ ಅನುಗ್ರಹ ಆಸ್ಪತ್ರೆಯ ದತ್ತಾತ್ರೇಯ ಹೊಸಮಠ, ಸಮೃದ್ಧಿ ಸಹಕಾರ ಸಂಘದ…

Read More