ರ‍್ಯಾಲಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದ ಜಿಪಂ ಸಿಇಓ ಋಷಿ ಆನಂದ
ವಿಜಯಪುರ: ದೇಶದಲ್ಲಿ ನಡೆಯುವ ಚುನಾವಣೆಗಳು ಪ್ರಜಾಪ್ರಭುತ್ವದ ಗೌರವವನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತವೆ. ಸಂವಿಧಾನ ನೀಡಿರುವ ಮತದಾನದ ಹಕ್ಕು ದೇಶದ ಸಂಸತ್ತನ್ನು ನಿರ್ಮಿಸುವ ಹಕ್ಕಾಗಿದೆ. ನಾವೇಲ್ಲ ಚುನಾವಣೆ ದಿನ ಯಾರು ಕೂಡ ಮತದಾನದಿಂದ ಹಿಂದೆ ಉಳಿಯದೆ ನಿಮ್ಮ ಮತ ನಿಮ್ಮ ಹಕ್ಕು ತಪ್ಪದೇ ಮತ ಚಲಾಯಿಸುವ ಮೂಲಕ ಜಿಲ್ಲೆಯಲ್ಲಿ ನೂರರಷ್ಟು ಮತದಾನ ಮಾಡುವಂತೆ ಸಿಇಓ ಋಷಿ ಆನಂದ ಕರೆ ನೀಡಿದರು.
ಜಿಲ್ಲಾ ಸ್ವೀಪ್ ಸಮಿತಿ, ಜಿಲ್ಲಾ ಪಂಚಾಯತ, ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ವತಿಯಿಂದ ಸೋಮವಾರದಂದು ಹಮ್ಮಿಕೊಂಡಿದ್ದ ‘ವಿಶೇಷ ಚೇತನರ ಚುನಾವಣಾ ಜಾಗೃತಿ ಜಾಥಾ ಬೈಕ್ ರ‍್ಯಾಲಿಗೆ’ ಹಸಿರು ನಿಶಾನೆ ತೊರುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು. ಸುಭದ್ರ ಸರ್ಕಾರ ರಚನೆಗೆ ಪ್ರತಿಯೊಬ್ಬರ ಮತದಾನವು ಪ್ರಮುಖವಾಗಿದೆ. ಕಡ್ಡಾಯ ಮತದಾನ ರಕ್ತದಾನ, ಅನ್ನದಾನ ಸೇರಿದಂತೆ ಇನ್ನಿತರೆ ಯಾವುದೇ ದಾನಕ್ಕಿಂತಲೂ ಹೆಚ್ಚಿನ ದಾನವಾಗಿದೆ. ಕೂಲಿಕಾರರು ಎಲ್ಲರೂ ಮತಚಲಾಯಿಸಬೇಕು.ರ ಸ್ವಂತ ಊರಿನಿಂದ ಬೇರೆ ಊರಿಗೆ ತೆರಳಿರುವ ತಮ್ಮ ಕುಟುಂಬ ಸದಸ್ಯರನ್ನು ಮತದಾನದ ದಿನ ಕರೆಸಿಕೊಂಡು ಮತದಾನ ಮಾಡಿಸಿ ಎಂದರು.
ಈ ವೇಳೆಯಲ್ಲಿ ಜಿಲ್ಲಾ ವಿಶೇಷಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿಗಳಾದ ರಾಜಶೇಖರ ದೈವಾಡಿಯವರು ಮಾತನಾಡುತ್ತ. ಲೋಕಸಭಾ ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ತಮ್ಮ ಮತಗಟ್ಟೆಗೆ ಭೇಟಿ ನೀಡಿ ಮತದಾನ ಮಾಡಬೇಕು. ದೇಶದ ಉನ್ನತಿ ಹಾಗೂ ಏಳಿಗೆ ಎಂಬುದು ದೇಶದ ಪ್ರಜೆಗಳ ಅಬಿಪ್ರಾಯದ ಮೇಲೆ ನಿಂತಿರುತ್ತದೆ. ಅಂತಹ ಆಯ್ಕೆಯ ಹಕ್ಕು ಚುನಾವಣೆ ನೀಡುತ್ತದೆ. ಸಮಯೋಚಿತವಾಗಿ ಸೂಕ್ತ ಅಭ್ಯರ್ಥಿಗೆ ಮತ ನೀಡುವುದರಿಂದ ರಾಷ್ಟçದ ಅಬಿವೃದ್ಧಿಗೆ ಪೂರಕವಾಗುತ್ತದೆ. ಈ ಕಾರಣಕ್ಕಾಗಿ ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಗೂ ಕೂಡ ಮತದಾನದ ಹಕ್ಕು ನೀಡಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ವಿಶೇಷ ಚೇತನರ ಚುನಾವಣಾ ಜಾಗೃತಿ ಜಾಥಾ ಬೈಕ್ ರ‍್ಯಾಲಿಯು ಜಿಲ್ಲಾ ಆಸ್ಪತ್ರೆಯಿಂದ ಹೊರಟು ಶಿವಾಜಿ ಚೌಕ್, ಗಾಂಧಿ ಚೌಕ್, ಬಸವೇಶ್ವರ ಹಾಗೂ ಅಂಬೇಡ್ಕರ್ ಸರ್ಕಲ್‌ದ ಮೂಲಕ ಕಂದಗಲ ಹಣಮಂತರಾಯ ರಂಗಮಂದಿರದವರೆಗೆ ಸಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸುವ ಮೂಲಕ ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಡಿಎಚ್‌ಇಓ, ಜಿಲ್ಲಾ ಮತ್ತು ತಾಲೂಕಾ ಮಟ್ಟದ ಆರೋಗ್ಯ ಇಲಾಖೆಯ ಸಿಬ್ಬಂದಿ, ಸ್ವೀಪ್ ಸಮಿತಿಯ ನೋಡಲ್ ಅಧಿಕಾರಿಗಳು, ನಗರಪಾಲಿಕೆಯ ಆಯುಕ್ತರು, ತಾಲೂಕಾ ಪಂಚಾಯತ ಕಾರ್ಯನಿರ್ವಾಕ ಅಧಿಕಾರಿಗಳು, ನಗರ, ತಾಲೂಕು ಹಾಗೂ ಗ್ರಾಮ ಪಂಚಾಯತ ಮಟ್ಟದ ವಿಆರ್‌ಡಬ್ಲ್ಯೂ, ಎಂಆರ್‌ಡಬ್ಲ್ಯೂ ಮತ್ತು ವಿಶೇಷಚೇತನರು ಉಪಸ್ಥಿತರಿದ್ದರು.

