ಚಿಮ್ಮಡ: ಇಂದಿನ ಆಧುನಿಕ ಯುಗದಲ್ಲಿ ಸಂಸ್ಕೃತಿ, ಸಂಸ್ಕಾರ ಕಲಿಯಬೇಕಾದ ಅವಶ್ಯಕತೆ ಪ್ರತಿಯೊಬ್ಬರಿಗೂ ಇದೆ. ಸಂಸ್ಕಾರ ಇಲ್ಲದ ಮನೆ ಸ್ಮಶಾನಕ್ಕೆ ಸಮ ಎಂದು ಬೀಳಗಿ ಕಲ್ಮಠದ ಶ್ರೀ ಗುರುಪಾದ ಶಿವಾಚಾರ್ಯರು ಹೇಳಿದರು.
ಸ್ಥಳೀಯ ಪ್ರಭುಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಳ್ಳದಾಗಿದ್ದ ಲಿಂಗೈಕ್ಯ ಶ್ರೀ ವಿರಕ್ತಮಹಾಸ್ವಾಮಿಗಳ ೩೧ನೇ ಪುಣ್ಯಸ್ಮರನೋತ್ಸವ, ಹಾಗೂ ಸಾಧಕರ ಸನ್ಮಾನ ಕಾರ್ಯಕ್ರಮದ ಚಿಂತನ ಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಮಠಗಳಲ್ಲಿ ಸಂಸ್ಕಾರ, ಸಂಸ್ಕೃತಿ, ಆದರ್ಶಗಳು ಹಾಸುಹೊಕ್ಕಾಗಿರುತ್ತದೆ ಅದನ್ನ ಸಾರ್ವಜನಿಕರ ಜೀವನದಲ್ಲಿ ತುಂಬುವುದು ಮಠಾಧೀಶರ ಕರ್ತವ್ಯ, ಮನುಷ್ಯ ಸುಖ ಶಾಂತಿ ನೆಮ್ಮದಿ ಪಡೆಯಬೇಕಾದರೆ ಶರಣ ಮಹಾತ್ಮರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು, ಶರಣರ ನೆನೆಯುವುದೇ ಪುಣ್ಯಸ್ಮರಣೋತ್ಸವವೆಂದರು,
ಸಾನಿಧ್ಯ ವಹಿಸಿದ ಸ್ಥಳಿಯ ವಿರಕ್ತಮಠದ ಶ್ರೀ ಪ್ರಭು ಮಹಾಸ್ವಾಮಿಗಳು ಮಾತನಾಡಿ, ಯಾವುದೇ ಧರ್ಮಬೇಧವಿಲ್ಲದೆ ಬಸವಾದಿ ಶರಣರ ಮಾರ್ಗದಲ್ಲಿ ನಡೆಯುತ್ತಿರುವ ಐತಿಹಾಸಿಕ ಮಠಗಳೆಂದರೆ ವಿರಕ್ತಮಠಗಳು ಮಾತ್ರ ಅವು ತಮ್ಮ ಸಾಮಾಜಿಕ ಜವಾಬ್ದಾರಿ ನಿಭಾಯಿಸುತ್ತಿವೆ ಎಂದರು.
ಸನ್ಮಾನ ಸ್ವೀಕರಿಸಿದ ವಾಸುದೇವ ಇಗವೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ಕಳೆದ ಹದಿನೈದು ದಿನಗಳಿಂದ ಕಿತ್ತೂರು-ಕುಲವಳ್ಳಿಯ ಸುಕುಮಾರ ಯೋಗಾಶೃಮದ ಶ್ರೀ ಓಂ ಗುರೂಜಿಯವರಿಂದ ಪ್ರಸ್ತುತಪಡಿಸಿದ ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳ ಜೀವನ ದರ್ಶನ ಪ್ರವಚನ ಕಾರ್ಯಕ್ರಮವನ್ನು ಮಂಗಲಗೊಳಿಸಲಾಯಿತು.
ಮುಖ್ಯ ಅಥಿತಿಗಳಾಗಿ ರಾಮಣ್ಣ ಮುಗಳಖೋಡ, ಪುಂಡಲಿಕಪ್ಪಾ ಪೂಜಾರಿ, ಬಾಳಪ್ಪಾ ಹಳಿಂಗಳಿ, ಅಣ್ಣಪ್ಪ ಪಾಟೀಲ, ರಾಮಣ್ಣ ಬಗನಾಳ,ಬಿ.ಎಸ್. ಪಾಟೀಲ ಗ್ರಾ.ಪಂ. ಮಾಜಿ ಅಧ್ಯಕ್ಷ ಗುರಲಿಂಗಪ್ಪಾ ಪೂಜಾರಿ, ಪರಪ್ಪಾ ಪಾಲಭಾವಿ ಸೇರಿದಂತೆ ಹಲವಾರು ಜನ ಪ್ರಮುಖರು ಉಪಸ್ಥಿತರಿದ್ದರು.
ಇದೇ ವೇಳೆ ಕಾನಿಪ ಮಹಾಲಿಂಗಪುರ ಘಟಕದ ಅಧ್ಯಕ್ಷ ಮಹೇಶ ಮನ್ನಯನವರಮಠ, ರಬಕವಿ-ಬನಹಟ್ಟಿ ಘಟಕದ ಅಧ್ಯಕ್ಷ ವಿಶ್ವಜ ಕಾಡದೇವರ, ಭೂಮಿಕಾ ಪಬ್ಲಿಕ್ ಪತ್ರಿಕೆ ಸಂಪಾದಕ ಮಾನಿಂಗಯ್ಯ ಜೇ. ಮಠದ, ವಾಸುದೇವ ಇಗವೇ ಸೇರಿದಂತೆ ಹಲವಾರು ಜನ ಸಾಧಕರನ್ನು ಸನ್ಮಾನಿಸಲಾಯಿತು.
ಶಿಕ್ಷಕ ಪ್ರಕಾಶ್ ಬಡಿಗೇರ ಸ್ವಾಗತಿಸಿದರು, ಪ್ರಕಾಶ್ ಪೂಜೆರಿ ನಿರೂಪಿಸಿದರು, ಕಾಳು ಬಡಿಗೇರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

