Author: editor.udayarashmi@gmail.com

ವಿಜಯಪುರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಫೆಬ್ರುವರಿ ೧೦ ರಂದು ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಕಾಯಕ ಶರಣ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಅಂದು ಬೆಳಗ್ಗೆ ೯:೩೦ ಗಂಟೆಗೆ ನಗರದ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದವರೆಗೆ ಕಾಯಕ ಶರಣರ ಭಾವಚಿತ್ರದ ಮೆರವಣಿಗೆ ಹಾಗೂ ಬೆಳಿಗ್ಗೆ ೧೦:೩೦ಕ್ಕೆ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ನಡೆಯುವ ಜಯಂತಿ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವರು ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಬಿ.ಪಾಟೀಲ ಅವರು ಉದ್ಘಾಟಿಸುವರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ವಹಿಸಲಿದ್ದಾರೆ. ಜವಳಿ,ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ, ನವದೆಹಲಿಯಲ್ಲಿನ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿ-೨ ಹಾಗೂ ವಿಧಾನ ಪರಿಷತ್ ಶಾಸಕರಾದ ಪ್ರಕಾಶ ಹುಕ್ಕೇರಿ, ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ ನಿಯಮಿತದ ಅಧ್ಯಕ್ಷರಾದ ಶಾಸಕ ಅಪ್ಪಾಜಿ…

Read More

ವಿಜಯಪುರ: ನಗರದ ಕೇಂದ್ರ ಕಾರಾಗೃಹಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶಶಿಧರ್ ಕೋಸಂಭೆ ಅವರು ಭೇಟಿ ನೀಡಿ, ಕಾರಾಗ್ರಹ ಬಂದಿಗಳ ಆರೋಗ್ಯ, ಆಹಾರ, ಮೂಲ ಸೌಕರ್ಯದ ಜೊತೆಗೆ ಅವರ ಮಕ್ಕಳ ಕುರಿತು ಮಾಹಿತಿ ಪಡೆದರು.ಕಾರಾಗೃಹ ಬಂದಿಗಳ ಅವರ ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ಸ್ಥಿತಿಗತಿಗಳ ಕುರಿತು ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಕಾರಾಗೃಹದ ಅಧಿಕಾರಿಗಳು ಮತ್ತು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರಿಗೆ ಸೂಚನೆ ನೀಡಿದರು.ಈ ಸಂದರ್ಭದಲ್ಲಿ ಕಾರಾಗೃಹದ ಪ್ರಭಾರ ಅಧೀಕ್ಷಕರಾದ ಮಂಜುನಾಥ ಎಚ್. ಜಿ,ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ದೀಪಾಕ್ಷಿ ಜಾನಕಿ ಸೇರಿದಂತೆ ಕಾರಾಗೃಹದ ಅಧಿಕಾರಿಗಳು ಉಪಸ್ಥಿತರಿದ್ದರು.

Read More

ಪರೀಕ್ಷೆ ಉತ್ತೀರ್ಣಕ್ಕೆ ಕಠಿಣ ಅಧ್ಯಯನ ಮುಖ್ಯ ಪರೀಕ್ಷೆ ಉತ್ತೀರ್ಣಕ್ಕೆ ಕಠಿಣ ಅಧ್ಯಯನ ಮುಖ್ಯ ವಿಜಯಪುರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮಹತ್ವದ ಮೊದಲ ಘಟ್ಟವಾಗಿದೆ. ಈ ಪರೀಕ್ಷೆಯು ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ಶೈಕ್ಷಣಿಕ ಜೀವನದ ಮಾರ್ಗಸೂಚಿಯಂತೆ ಕೆಲಸ ಮಾಡುವುದಲ್ಲದೇ, ಅವರಲ್ಲಿ ಆತ್ಮವಿಶ್ವಾಸ ಹೆಚ್ಚಿಸುತ್ತದೆ. ಅಲ್ಲದೇ ನಿಮ್ಮ ವಿದ್ಯಾರ್ಥಿಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ.೧೦೦ಕ್ಕೆ ತಲುಪಲು ಪ್ರಯತ್ನಿಸಿ ಎಂದು ನಗರ ವಲಯದ ಬಿಇಓ ಬಸವರಾಜ ತಳವಾರ ಹೇಳಿದರು.ಬಿಜಾಪುರ ಜಿಲ್ಲಾ ಬಂಜಾರಾ ವಿದ್ಯಾವರ್ಧಕ ಸಂಘದ ಬಂಜಾರಾ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಗೆ ನಗರ ವಲಯದ ಬಿಇಓ ಬಸವರಾಜ ತಳವಾರರವರು ಭೇಟಿ ನೀಡಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಯನ್ನು ತಗೆದುಕೊಂಡು ಮಾತನಾಡಿದ ಅವರು. ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಸುಧಾರಣೆಗಾಗಿ ಹಲವಾರು ಕ್ರಮಗಳನ್ನು ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಸೇರಿ ವಿವಿಧ ಮತ್ತು ವಿನೂತನ ಕ್ರಿಯಾಯೋಜನೆ ತಯಾರಿಸುವುದು ಅತ್ಯಂತ ಪ್ರಮುಖವಾಗಿದೆ.ಯಾವುದೇ ಒಂದು ಪರೀಕ್ಷೆ ಉತ್ತೀರ್ಣರಾಗಬೇಕೆಂದರೆ ಕಠಿಣ ಅಧ್ಯಯನ ಬಹಳ ಮುಖ್ಯ. ಈಗಾಗಲೇ ಪೂರಕ ಪರೀಕ್ಷೆಗಳನ್ನು…

Read More

ದೇವರಹಿಪ್ಪರಗಿ: ಮುಳಸಾವಳಗಿ ಗ್ರಾಮದ ಯುವಸಾಹಿತಿ ಮಮತಾ ಅಮರೇಶ ಮುಳಸಾವಳಗಿ ಇವರನ್ನು ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನದ ೨೦೨೪ ನೇ ಸ್ವರ್ಣಸಿರಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಹುಬ್ಬಳ್ಳಿಯಲ್ಲಿ ನಡೆಯಲಿರುವ ಭಾವಸಂಗಮ ದಶಮಾನೋತ್ಸವ ಸಮಾರಂಭದಲ್ಲಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಗುತ್ತಿದೆ. ಪ್ರಶಸ್ತಿಗೆ ಆಯ್ಕೆಯಾದ ಮಮತಾ ಅವರನ್ನು ದೇವರಹಿಪ್ಪರಗಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿ ನಿವೃತ್ತ ಡಿವೈಎಸ್‌ಪಿ ಎಸ್.ಕೆ.ಮುಳಸಾವಳಗಿ ಸೇರಿದಂತೆ ಇತರರು ಅಭಿನಂದಿಸಿದ್ದಾರೆ.

Read More

ತಕ್ಷಣವೇ ನಿಯೋಜನೆಗೊಂಡ ಸಿಬ್ಬಂದಿ ಮತ್ತು ಅಂಬುಲನ್ಸ್ ವಾಪಸ್ ಆದೇಶ ಕಲಕೇರಿ: ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಮತ್ತು ಮೂಲಭೂತ ಸೌಕರ್ಯ, ಅಂಬುಲನ್ಸ್ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ದಿ. ೫ರ ರಾತ್ರಿಯಿಂದ ಅಂಬೇಡ್ಕರ್ ಸೇನೆ ಮತ್ತು ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದ ಸ್ಥಳಕ್ಕೆ ಬುಧವಾರ ಸಾಯಂಕಾಲ ಆಗಮಿಸಿದ ಜಿಲ್ಲಾ ಆರೋಗ್ಯಾಧಿಕಾರಿ (ಡಿಹೆಚ್‌ಓ) ಡಾ. ಬಸವರಾಜ ಹುಬ್ಬಳ್ಳಿ ಅವರು ಧರಣಿನಿರತರ ಸಮಸ್ಯೆಗಳನ್ನು ಆಲಿಸಿ ೧೦ ದಿನಗಳಲ್ಲಿ ಬೇಡಿಕೆ ಈಡೇರಿಸುವ ಭರವಸೆ ನೀಡಿದರು. ಆದರೆ ಸುಮಾರು ವರ್ಷಗಳಿಂದ ಇರುವ ಸಮಸ್ಯೆಗಳು ಹೋರಾಟ ಮಾಡಿದಾಗ ಮಾತ್ರ ಮೇಲಾಧಿಕಾರಿಗಳು ಬಂದು ಆಶ್ವಾಸನೆ ನೀಡಿ ಹೋಗುತ್ತಾರೆ ಮತ್ತೆ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದ್ದು, ಜನಸಾಮಾನ್ಯರ ಗೋಳು ಕೇಳುವವರಾರು ಎಂದು ವಸ್ತುಸ್ಥಿತಿಯನ್ನು ಬಿಚ್ಚಿಟ್ಟ ಪ್ರತಿಭಟನಾಕಾರರು ಕೂಡಲೇ ಡೆಪ್ಯುಟೇಶನ್ ಮೇಲೆ ತೆರಳಿದ ಸಿಬ್ಬಂದಿಗಳನ್ನು ವಾಪಸ್ ಕರೆಸುವ ಆದೇಶ ಕೊಡುವುದು ಮತ್ತು ಕಾಲಮಿತಿಯೊಳಗೆ…

Read More

ಇಂಡಿ: ನಿಂಬೆ ನಾಡಿನ ಹೆಸರಾಂತ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ, ಹಿರಿಯ ಸಂಶೋಧಕ, ಯುವ ಸಾಹಿತಿಗಳಿಗೆ ಮತ್ತು ಸಂಶೋಧಕರಿಗೆ ಮಾರ್ಗದರ್ಶಕ ಡಿ.ಎನ್.ಅಕ್ಕಿ ಅವರು ೪ ನೇ ಶಹಾಪುರ ತಾಲೂಕಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಯಾಗಿದ್ದಾರೆ.ಈ ಕುರಿತು ಇಂದು ಪಟ್ಟಣದ ಅವರ ಮನೆಗೆ ಶಹಾಪುರದ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡಾಭಿಮಾನಿಗಳು ಬಂದು ಸನ್ಮಾನಿದರು.ಸಭೆಯಲ್ಲಿ ಮಾತನಾಡಿದ ಶಹಾಪುರ ಕಸಾಪ ಅಧ್ಯಕ್ಷ ಡಾ. ರವೀಂದ್ರ ಹೊಸಮನಿ, ಫೆ. ಕೊನೆಯ ವಾರದಲ್ಲಿ ಸಮ್ಮೇಳನ ನಡೆಸಲು ತಿರ್ಮಾನಿಸಿ ಡಿ.ಎನ್.ಅಕ್ಕಿಯವರ ಹೆಸರನ್ನು ಸೂಚಿಸಿದಾಗ ಒಮ್ಮತದಿಂದ ಸಹಮತ ಸೂಚಿಸಿದರು ಎಂದರು.ಸಂಶೋಧಕ ಡಿ.ಎನ್.ಅಕ್ಕಿಯವರು ಮಾತನಾಡಿದರು.ಶಹಾಪುರದ ಪರ್ತಕರ್ತರಾದ ನಾರಾಯಣಚಾರ್ಯ ಸಗರ, ಶರಣು ಬಿರಾದಾರ, ಮಲ್ಲನಗೌಡ ಪೋಲಿಸ ಪಾಟೀಲ, ರಾಘವೇಂದ್ರ ಹರಣಗೇರಾ, ಗೌಡಪ್ಪಗೌಡ ಬಿರಾದಾರ, ಮಡಿವಾಳಪ್ಪ ಪಾಟೀಲ, ಸಾಯಬಣ್ಣ ಕುರ್ಲೆ, ನಿಂಗಣ್ಣ ತಿಪ್ಪನಹಳ್ಳಿ, ತಿಪ್ಪಣ್ಣಕ್ಯಾತನಾಳ, ಪರಶುರಾಮ ನಾಗನಟಕಿ, ಮಹಾವೀರ ಅಕ್ಕಿ, ಗೌತಮ ಕಡ್ಡಿಹಳ್ಳಿ ಮಾತನಾಡಿದರು.ಇಂಡಿ ಕರ್ನಾಟಕ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಪಿ.ಬಿ.ಕತ್ತಿ, ನಿವೃತ್ತ ಪ್ರಾಚಾರ್ಯ ಐ.ಸಿ.ಪೂಜಾರಿ, ಉಪನ್ಯಾಸಕ ಶರಣು ಕಾಂಬಳೆ ಮತ್ತಿತರಿದ್ದರು.

Read More

ಬಸವನ ಬಾಗೇವಾಡಿ: ಪಟ್ಟಣದ ತಾಲೂಕು ಆಸ್ಪತ್ರೆಗೆ ೨೦೨೨-೨೩ ನೇ ಸಾಲಿನ ರಾಷ್ಟ್ರೀಯ ಆರೋಗ್ಯ ಅಭಿಯಾನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಕಾಯಕಲ್ಪ ಪ್ರಶಸ್ತಿ ಸಂದಿರುವ ಹಿನ್ನೆಲೆಯಲ್ಲಿ ಗುರುವಾರ ಸ್ಥಳೀಯ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿಯವರು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಸಾಬೀರ ಪಟೇಲ ಅವರನ್ನು ಶ್ರೀಮಠದಿಂದ ಸನ್ಮಾನಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, ತಾಲೂಕು ಆಸ್ಪತ್ರೆಯಲ್ಲಿ ತಾಲೂಕಿನ ಜನತೆಗೆ ಉತ್ತಮ ಚಿಕಿತ್ಸೆ ಸಿಗುತ್ತಿರುವಲ್ಲಿ ಇಲ್ಲಿನ ವೈದ್ಯರ ಪಾತ್ರ ಮರೆಯುವಂತಿಲ್ಲ. ವೈದ್ಯರು ಉತ್ತಮ ಚಿಕಿತ್ಸೆ ನೀಡುವ ಜೊತೆಗೆ ಆಸ್ಪತ್ರೆಯ ಸ್ವಚ್ಛತೆ, ನೈರ್ಮಲ್ಯ ಮತ್ತು ಸೋಂಕು ನಿಯಂತ್ರಣ ಮಾಡುವಲ್ಲಿ ತಮ್ಮದೇ ಪಾತ್ರ ವಹಿಸಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದಿಂದ ಕೊಡಲ್ಪಡುವ ಕಾಯಕಲ್ಪ ಪ್ರಶಸ್ತಿಗೆ ಭಾಜನವಾಗಿರುವದು ವೈದ್ಯರ, ಸಿಬ್ಬಂದಿಗಳ ಶ್ರಮಕ್ಕೆ ಸಂದ ಗೌರವವಾಗಿದೆ ಎಂದರು.ಕೋವಿಡ್-೧೯ ರ ಸಂದಿಗ್ಧ ಸನ್ನಿವೇಶದಲ್ಲಿಯೂ ಇಲ್ಲಿನ ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ತಮ್ಮ ಜೀವ ಹಂಗು ತೊರೆದು ಸೇವೆ ಮಾಡಿದ್ದು ಸ್ಮರಣೀಯ. ಇದು ರಾಜ್ಯದ ಗಮನ ಸೆಳೆದಿತ್ತು. ತಾಲೂಕು ಆಸ್ಪತ್ರೆಗೆ ಕಾಯಕಲ್ಪ ಪ್ರಶಸ್ತಿ ಸಂದಿರುವುದು ಬಸವನಾಡಿಗೆ…

Read More

ಬಸವನಬಾಗೇವಾಡಿ: ಪಟ್ಟಣಕ್ಕೆ ಬುಧವಾರ ಸಂಜೆ ಆಗಮಿಸಿದ್ದ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯು ಹಮ್ಮಿಕೊಂಡಿರುವ ಕನ್ನಡ ಜ್ಯೋತಿ ರಥ ಯಾತ್ರೆಯ ಭವ್ಯ ಮೆರವಣಿಗೆ ಗುರುವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ಆಧಿಕಾರಿಗಳ, ವಿವಿಧ ಕನ್ನಡಪರ ಸಂಘಟನೆಗಳ ಪದಾಧಿಕಾರಗಳ, ವಿವಿಧ ಸಾಹಿತಿಗಳ, ವಿವಿಧ ಶಾಲಾ-ಕಾಲೇಜುಗಳ ಸಿಬ್ಬಂದಿ, ವಿದ್ಯಾರ್ಥಿಗಳ, ವಿವಿಧ ನೃತ್ಯ, ವಾದ್ಯಮೇಳಗಳ ಮಧ್ಯ ಸಂಭ್ರಮ, ಸಡಗರದಿಂದ ಜರುಗಿತು.ಪಟ್ಟಣದ ಬಸವೇಶ್ವರ ದೇವಸ್ಥಾನದ ಮುಂಭಾಗದಿಂದ ಆರಂಭವಾದ ಕರ್ನಾಟಕ ಸಂಭ್ರಮ 50 ರ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಜ್ಯೋತಿ ರಥ ಭುವನೇಶ್ವರಿದೇವಿ ಕನ್ನಡ ರಥದ ಮೆರವಣಿಗೆಯು ತೆಲಗಿ ರಸ್ತೆ, ಡಾ.ಬಿ.ಆರ್.ಅಂಬೇಡ್ಕರ್ ವೃತ್ಥ, ಸಂಗೊಳ್ಳಿ ರಾಯಣ್ಣ ವೃತ್ತ, ಬಸವ ಭವನ ಮಾರ್ಗದಿಂದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತಕ್ಕೆ ತಲುಪಿತು. ನಂತರ ರಥಯಾತ್ರೆಯು ತಾಲೂಕಿನ ಮಸಬಿನಾಳ, ಇಂಗಳೇಶ್ವರ, ದಿಂಡವಾರ, ಹೂವಿನಹಿಪ್ಪರಗಿ ಗ್ರಾಮಕ್ಕೆ ತೆರಳಿತು.ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಲಂಬಾಣಿ ನೃತ್ಯ, ಲೇಜಿಮ್, ಕೋಲಾಟ, ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಮಹನೀಯರ ಛದ್ಮವೇಷ ಧರಿಸಿದ ವಿದ್ಯಾರ್ಥಿಗಳು, ಕಾಖಂಡಕಿ ಸಂಬಾಳ ಮತ್ತು ಕರಡಿ ಮಜಲು ಗಮನ ಸೆಳೆದರೆ,…

Read More

ಕಲಕೇರಿ: ಗ್ರಾಮದ ಎಸ್.ಎಮ್.ವ್ಹಿ.ವ್ಹಿ.ಸಂಘದ ಶ್ರೀ ಬಸವೇಶ್ವರ ಪದವಿಪೂರ್ವ ಕಾಲೇಜಿನ ವಾರ್ಷಿಕ ಸ್ನೇಹ ಸಮ್ಮೇಳನ ಮತ್ತು ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿಗಳಿಗೆ ಶುಭಕೋರುವ ಸಮಾರಂಭವು ದಿ. ೧೦ರ ಶನಿವಾರ ಮುಂಜಾನೆ ೯:೩೦ಕ್ಕೆ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ನಡೆಯಲಿದ್ದು, ಕಾರ್ಯಕ್ರಮದ ಸಾನಿಧ್ಯವನ್ನು ಗುರುಮರುಳಾರಾಧ್ಯ ಸಂಸ್ಥಾನ ಹಿರೇಮಠದ ಸಿದ್ದರಾಮ ಶಿವಾಚಾರ್ಯರು ವಹಿಸಲಿದ್ದು, ಗೌರವಾಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಎಸ್.ಎಮ್.ಜೋಗೂರ, ಅಧ್ಯಕ್ಷರಾದ ಎಸ್.ಬಿ.ಪಾಟೀಲ ಮತ್ತು ಎಸ್.ಎಮ್.ಕಡಕೋಳ ವಹಿಸಲಿದ್ದು, ಉದ್ಘಾಟಕರಾಗಿ ಸಂಸ್ಥೆಯ ನಿರ್ಧೇಶಕರುಗಳಾದ ಎಸ್.ಜಿ.ಝಳಕಿ, ಎಸ್.ಸಿ.ಚಳ್ಳಗಿ ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಜಯಪುರ ನೂತನ ಚಾಣಕ್ಯ ಕರಿಯರ್‌ನ ಸಂಸ್ಥಾಪಕ ಅಧ್ಯಕ್ಷರಾದ ಬಿ.ಡಿ.ಪಾಟೀಲ ಮತ್ತು ಕಲಕೇರಿ ಠಾಣಾಧಿಕಾರಿ ಶ್ರೀಮತಿ ಜಿ.ಜಿ. ಬಿರಾದಾರ ಆಗಮಿಸಲಿದ್ದು, ಅತಿಥಿಗಳಾಗಿ ಸಂಸ್ಥೆಯ ನಿರ್ಧೇಶಕರುಗಳಾದ ಎಸ್.ಎನ್.ಮಠ, ವ್ಹಿ.ಆರ್.ಝಳಕಿ, ಎಮ್.ಜೆ.ಬಿರಾದಾರ, ಜಿ.ಎಮ್.ಗುಮಶೆಟ್ಟಿ, ಎಮ್.ಎಸ್.ಕವದಿ, ಡಿ.ಎಮ್.ಗುಮಶೆಟ್ಟಿ, ಕೆ.ಡಿ.ದೇಸಾಯಿ, ಎಸ್.ಎಸ್.ಝಳಕಿ ಭಾಗವಹಿಸಲಿದ್ದು, ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ಮತ್ತು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ, ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Read More

ಮುದ್ದೇಬಿಹಾಳ: ಸಾಲಭಾಧೆಯಿಂದ ರೈತನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ನಡಹಳ್ಳಿ ಗ್ರಾಮದಲ್ಲಿ ಗುರುವಾರ ಸಂಭವಿಸಿದೆ.ಶಾಂತಗೌಡ ಬಲವಂತರಾಯ ಬಿರಾದಾರ(೬೦) ನೇಣಿಗೆ ಶರಣಾದ ದುರ್ದೈವಿ. ನಡಹಳ್ಳಿ ಗ್ರಾಮದ ತನ್ನ ಜಮೀನಿನಲ್ಲಿರುವ ಮನೆಯ ಕೊಟ್ಟಿಗೆಯ ಕಂಬಕ್ಕೆ ಹಗ್ಗದಿಂದ ನೇಣಿಗೆ ಶರಣಾಗಿದ್ದಾಗಿ ಮೂಲಗಳು ತಿಳಿಸಿವೆ.೪ಎಕರೆ ೧೦ಗುಂಟೆ ಜಮೀನು ಹೊಂದಿದ್ದ ಶಾಂತಗೌಡ ಬ್ಯಾಂಕ್, ಪಿಕೆಪಿಎಸ್, ಕೈಸಾಲ ಅಂತಾ ಅಂದಾಜು ೫ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ತಲಾಟೆ ರಿಯಾಜ ನಾಯ್ಕೋಡಿ ಭೇಟಿ ನೀಡಿ ಪರಿಶೀಲಿಸಿದ್ದು, ಸಾಲ ಪಡೆದ ಬಗ್ಗೆ ಖಚಿತಪಡಿಸಿಕೊಂಡಿದ್ದಾರೆ. ಘಟನೆಯ ಮಾಹಿತಿ ತಿಳಿದ ತಾಳಿಕೋಟೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More