ದೇಶದ & ಹೆಣ್ಣುಮಕ್ಕಳ ರಕ್ಷಣೆಗಾಗಿ ಮೋದಿ ಪ್ರಧಾನಿಯಾಗಬೇಕು :ಯತ್ನಾಳ
ಆಲಮೇಲ: ಹಿಂದೂಗಳ ಪುರಾತನ ಭಾರತ ದೇಶ ಭಾರತವಾಗಿ ಉಳಿಯಬೇಕು, ಹಿಂದುತ್ವ, ಹಿಂದೂಗಳ ರಕ್ಷಣೆಯಾಗಬೇಕು ಎಂದರೆ ನರೇಂದ್ರ ಮೋದಿಜಿ ಮತ್ತೆ ಪ್ರಧಾನಿ ಆದರೆ ಮಾತ್ರ ಸಾಧ್ಯ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಬುಧವಾರ ಸಂಜೆ ಲೋಕಸಭೆ ಚುನಾವಣೆ ನಿಮಿತ್ಯ ಪಟ್ಟಣದಲ್ಲಿ ರೋಡ್ ಶೋ ಮೂಲಕ ಮತಯಾಚನೆ ಮಾಡಿ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡಿದರು.
ನರೇಂದ್ರ ಮೋದಿಯವರು ದೇಶಕ್ಕಾಗಿ, ಹಿಂದೂ ಧರ್ಮ ರಕ್ಷಣೆಗಾಗಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ. ಕಾಂಗ್ರೇಸ್ ಪಕ್ಷದ ಉಚಿತ ಯೋಜನೆಗಳು ಗ್ರಾರೆಂಟಿಗಳು ನಂಬಬೇಡಿ, ದೇಶದ ರಕ್ಷಣೆ, ನಮ್ಮ ಮನೆಯ ಹೆಣ್ಣುಮಕ್ಕಳ ರಕ್ಷಣೆಗಾಗಿ ಮೋದಿ ಅವರ ಅವಶ್ಯಕತೆ ಇದೆ ಎಂದರು.
ಕಾಂಗ್ರೇಸ್ ಪಕ್ಷದವರು ಮುಸ್ಲಿಂ ಓಲೈಕೆಯಿಂದ ಈ ದೇಶದ ಬಹುಸಂಖ್ಯಾತ ಹಿಂದೂಗಳನ್ನು ಕಡೆಗಣಿಸುತ್ತಿದ್ದಾರೆ. ಅದಕ್ಕೆ ತಕ್ಕ ಉತ್ತರ ನೀಡುವ ಕಾಲ ಸದ್ಯ ಬಂದಿದೆ. ಕಾಂಗ್ರೇಸ್ ಅಧಿಕಾರಕ್ಕೆ ಬಂದರೆ ಹಿಂದೂಗಳ ಸಂಪತ್ತನ್ನು ಮುಸ್ಲಿಂರಿಗೆ ವಿತರಿಸುವ ಆಲೋಚನೆ ಇದೆ. ಅವರಿಂದ ಹಿಂದೂಗಳ ರಕ್ಷಣೆ ಅಸಾಧ್ಯ. ಕಾರಣ ಯಾವುದೆ ಆಸೆ ಆಮಿಶಗಳಿಗೆ ಬಲಿಯಾಗದೆ ಬಿಜೆಪಿಗೆ ಮತ ನೀಡಿ ಎಂದರು.
ಲೋಕಸಭೆ ಚುನಾವಣೆ ಬಳಿಕ ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗಲಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತೆ. ಆಗ ನಾನೇ ಮುಖ್ಯಮಂತ್ರಿ ಆಗುತ್ತೇನೆ. ರಾಜ್ಯದ ಎಲ್ಲ ಬಿಪಿಎಲ್ ಕುಟುಂಬಕ್ಕೆ ಪ್ರತಿ ತಿಂಗಳು ರೂ.೫ ಸಾವಿರ ನೀಡುತ್ತೇನೆ ಎಂದರು.
ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ, ಮಾಜಿ ಶಾಸಕ ರಮೇಶ ಭೂಸನೂರ ಮಾತನಾಡಿದರು.
ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮಲ್ಲಿಕಾರ್ಜುನ ಜೋಗೂರ, ಜಿ.ಪಂ ಮಾಜಿ ಸದಸ್ಯ ಬಿ.ಆರ್. ಎಂಟಮಾನ,ಜಿ.ಪಂ ಮಾಜಿ ಉಪಾಧ್ಯಕ್ಷ ಸಿದ್ದುಗೌಡ ಪಾಟೀಲ, ಶ್ರೀಮಂತ ನಾಗೂರ, ಸಿಂದಗಿ ಬಿಜೆಪಿ ಅಧ್ಯಕ್ಷ ಸಂತೋಷ ಪಾಟೀಲ ಡಂಬಳ, ಆಲಮೇಲದ ಅಧ್ಯಕ್ಷ ಅಶೋಕ ವಾರದ, ಪಿ.ಟಿ. ಪಾಟೀಲ, ಗುಂಡು ಮೇಲಿನಮನಿ, ಪ.ಪಂ ಸದಸ್ಯರಾದ ಹಣಮಂತ ಹೂಗಾರ, ಸಂಜುಕುಮಾರ ಎಂಟಮಾನ, ಶ್ರೀಶೈಲದಾದ ರಜಪೂತ, ಚಂದ್ರಶೇಖರ ಹಳೆಮನಿ, ವಿಶ್ವನಾಥ ಹಿರೇಮಠ, ಅಪ್ಪು ಶೆಟ್ಟಿ, ಹಣಮಂತ ಬೆಳ್ಳಿ, ಶಿವು ಗುರಕಾರ, ಗುರು ತಳವಾರ, ಅಮೃತ ಕೊಟ್ಟಲಗಿ, ಕಮಲಾಕರ ಪತ್ತಾರ, ರತನ ಒಣಕುದರಿ, ಮದನ ರಜಪೂತ, ಮಹಿಳಾ ಮುಖಂಡರಾದ ಮಂಗಲಾ ಗುಡಿ, ಗಂಗುಬಾಯಿ ಅಮಲಝರಿ ಮುಂತಾದವರು ಇದ್ದರು.

