ವಿಜಯಪುರ: ಲೋಕಸಭೆ ಸಾರ್ವತ್ರಿಕ ಚುನಾವಣೆ-೨೦೨೪ರ ಸಲುವಾಗಿ ಪ್ರಿಸೈಡಿಂಗ್, ಸಹಾಯಕ ಪ್ರಿಸೈಡಿಂಗ್ ಮತ್ತು ಪೋಲಿಂಗ್ ಅಧಿಕಾರಿಗಳಿಗೆ ಏಪ್ರಿಲ್ ೩೦ ರಂದು ಬೆಳಗ್ಗೆ ೯.೩೦ ರಿಂದ ತರಬೇತಿ ಏರ್ಪಡಿಸಲಾಗಿದೆ.
ಮುದ್ದೇಬಿಹಾಳ ಮತಕ್ಷೇತ್ರ ಸಂಬಂಧಿಸಿದ ಮತಗಟ್ಟೆ ಅಧಿಕಾರಿಗಳಿಗೆ ಮುದ್ದೇಬಿಹಾಳ ಎಮ್.ಜಿ.ವಿ.ಸಿ ಕಾಲೇಜು ನಲ್ಲಿ, ದೇವರ ಹಿಪ್ಪರಗಿ ಕ್ಷೇತ್ರದ ಅಧಿಕಾರಿಗಳಿಗೆ ದೇವರ ಹಿಪ್ಪರಗಿ ಶ್ರೀ ಸಿದ್ದೇಶ್ವರ ಸ್ವಾಮೀಜಿ ಪ್ರಾಥಮಿಕ ಹಾಗೂ ಪ್ರೌಡ ಶಾಲೆ, ಬಸವನ ಬಾಗೇವಾಡಿ ಮತಕ್ಷೇತ್ರಕ್ಕೇ ಬಸವನ ಬಾಗೇವಾಡಿ ಬಸವೇಶ್ವರ ಪಿಯು ಕಾಲೇಜು , ಬಬಲೇಶ್ವರ ಮತ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಬಲೇಶ್ವರ ಶಾಂತವೀರ ಪ್ರೌಡಶಾಲೆ ಮತ್ತು ಪಿ ಯು ಕಾಲೇಜು, ವಿಜಯಪುರ ನಗರ ಮತ ಕೆತ್ರದ ಅಧಿಕಾರಿಗಳಿಗೆ
ವಿ ವಿ ದರಬಾರ ಪ್ರೌಡ ಶಾಲೆ ಹಾಗೂ ಪಿಯು ಕಾಲೇಜು, ವಿಜಯಪುರನಲ್ಲಿ, ನಾಗಠಾಣ ಮಠಕ್ಷೆತ್ರಕ್ಕೆ ಪಿಡಿಜೆ ಪ್ರೌಡ ಶಾಲೆ ವಿಜಯಪುರ, ಇಂಡಿ ಮತಕ್ಸೇತ್ರಕ್ಕೆ ಇಂಡಿ ಸರ್ಕಾರಿ ಆದರ್ಶ ವಿದ್ಯಾಲಯದಲ್ಲಿ, ಸಿಂದಗಿ ಮತಕ್ಷೇತ್ರದ ಅಧಿಕಾರಿಗಳಿಗೆ ಸಿಂದಗಿ ಆರ್ ಡಿ. ಪಾಟೀಲ್ ಹಾಗೂ ಜೆ ಪಿ ಪೊರವಾಲ್ ಕಾಲೇಜಿನಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ.
ಚುನಾವಣೆ ಕರ್ತವ್ಯಕ್ಕೆ ನಿಯೋಜನೆಗೊಂಡ ಪ್ರಿಸೈಡಿಂಗ್, ಸಹಾಯಕ ಪ್ರಿಸೈಡಿಂಗ್ ಹಾಗೂ ಪೋಲಿಂಗ್ ಅಧಿಕಾರಿಗಳು ತರಬೇತಿಗೆ ಕಡ್ಡಾಯವಾಗಿ ಹಾಜರು ಇರಬೇಕು ಎಂದು ಚುನಾವಣೆ ಅಧಿಕಾರಿಯೂ ಆದ ಜಿಲ್ಲಾಧಿಕಾರಿ ಟಿ. ಭೂಬಾಲನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment
