ಬಸವನಬಾಗೇವಾಡಿ: ಪಟ್ಟಣದ ಚತುಷ್ಟ ಯತಿಗಳ ವೃಂದಾವನ ಸನ್ನಿದಾನ ಉತ್ತರಾದಿ ಮಠದಲ್ಲಿ ೭ ನೇ ವರ್ಷದ ವರ್ಧಂತಿ ಉತ್ಸವ ಗುರುವಾರ ಪವಮಾನ ಹೋಮ, ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ವೈಭವದಿಂದ ಜರುಗಿದವು.
ಬೆಳಗ್ಗೆ ೬ ಗಂಟೆಗೆ ವಾಯುಸ್ತುತಿ, ವಿಷ್ಣು ಸಹಸ್ರನಾಮ ಅಷ್ಟೋತ್ತರ ಜಪವಾದ ನಂತರ ಪವಮಾನ ಹೋಮ, ಪಂಚಾಮೃತ ಅಭಿಷೇಕ ಹಾಗೂ ಪುಷ್ಪಾಲಂಕಾರ ಜರುಗಿದ ನಂತರ ವಿಶೇಷ ಪೂಜೆ ಹಾಗೂ ಪಲ್ಲಕ್ಕಿ ಉತ್ಸವ ಜರುಗಿತು.
ಶ್ರೀಮಠದ ಅರ್ಚಕ ವಾದಿರಾಜಾಚಾರ್ಯ ಯಜುರ್ವೇದಿ ಮಾತನಾಡಿ, ಮಠದಲ್ಲಿರುವ ಚತುಷ್ಟ ಯತಿಗಳ ದರ್ಶನ ಹಾಗೂ ಸೇವೆಯನ್ನು ಮಾಡಿದರೆ ಸಕಲ ಕಷ್ಟಗಳು,ಪಾಪಗಳು ಪರಿಹಾರವಾಗಿ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎಂದರು.
ಸಾವಿರ ಹಾಡಿನ ಸರದಾರ ಎಂದು ಖ್ಯಾತರಾದ ಜಿ.ಬಿ.ಜೋಶಿ ಅವರಿಂದ ಸಂಗೀತ ಸೇವೆ ಜರುಗಿತು. ಶ್ರೀಮಠದ ಅಧ್ಯಕ್ಷ ವಸಂತಾಚಾರ್ಯ ಇಂಗಳೇಶ್ವರ ನೇತೃತ್ವದಲ್ಲಿ ಎಲ್ಲ ಪೂಜಾ ಕಾರ್ಯಕ್ರಮ, ವಿಶೇಷ ಕಾರ್ಯಕ್ರಮಗಳು ಜರುಗಿದವು. ಇದೇ ಸಂದರ್ಭದಲ್ಲಿ ವೇದಮೂರ್ತಿ ಶ್ರೀನಿವಾಸಾಚಾರ್ಯ ಜೋಶಿ (ಮುತ್ತಗಿ), ವೇದಮೂರ್ತಿ ರಾಮಾಚಾರ್ಯ ಜೋಶಿ(ಹಿಪ್ಪರಗಿ) ಹಾಗೂ ಜಿ.ಬಿ.ಜೋಶಿ ಅವರನ್ನು ಶ್ರೀಮಠದಿಂದ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಮುತ್ತಗಿಯ ಪಂ.ಪೂ. ನರಹರಿಆಚಾರ್ಯ ಜೋಶಿ, ವಸಂತ ಕುಲಕರ್ಣಿ, ವಿಠ್ಠಲ ಕುಲಕರ್ಣಿ, ಎ.ಆರ್.ಕುಲಕರ್ಣಿ, ಎ.ಜಿ.ಕುಲಕರ್ಣಿ, ರಾಮಾಚಾರ್ಯ ಯಜುರ್ವೇದಿ, ಪ್ರಲ್ದಾರ ಕುಲಕರ್ಣಿ, ವಿಠ್ಠಲ ದೇಶಪಾಂಡೆ, ಯಲಗೂರೇಶ ಯಜುರ್ವೇದಿ, ನಾರಾಯಣ ಕುಲಕರ್ಣಿ, ಜಿ.ವ್ಹಿ.ಕುಲಕರ್ಣಿ, ವಿಪ್ರ ಸಮಾಜದ ಸಮಸ್ತ ಬಾಂಧವರು, ಮಹಿಳೆಯರು ಇದ್ದರು.
ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

