Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಭೀಮಾಶಂಕರ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆಯಲ್ಲಿ ಆಯ್ಕೆ ಮಾಡಲು ಶಾಸಕ ಯಶವಂತರಾಯಗೌಡ ಮನವಿ ಇಂಡಿ: ೧೯೮೩ ರಲ್ಲಿ ಶಂಕು ಸ್ಥಾಪನೆ ಹೊಂದಿ ೨೦೧೭ ರ ವರೆಗೆ ನೆನೆಗುದಿಗೆ ಬಿದಿದ್ದ ಮರಗೂರ ಗ್ರಾಮದ ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆ ಸಮರ್ಪಣೆ ಹೊಂದಿತ್ತು. ಅದಕ್ಕೆ ಮರು ಜೀವ ನೀಡಿ ಸರ್ಕಾರದಿಂದ ೪೫.೮೯ ಕೋಟಿ ಅನುದಾನ ಮಂಜೂರಿ ಪಡೆದುಕೊಂಡು ಕೇವಲ ೩ ವರ್ಷಗಳಲ್ಲಿ ಕಾರ್ಖಾನೆ ಕಟ್ಟಿದ್ದೇನೆ ಎಂದು ಶಾಸಕ ಯಶವಂತರಾಯಗೌಡ ಪಾಟೀಲರು ಹೇಳಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ೫ ವರ್ಷಗಳ ಕಾಲ ಕಾರ್ಖಾನೆ ಸಮರ್ಪಕವಾಗಿ ನಡೆಸಿಕೊಂಡು ಬಂದಿದ್ದೇನೆ. ಪ್ರತೀ ವರ್ಷ ಹೆಚ್ಚಿನ ಕಬ್ಬು ನುರಿಸುತ್ತ ಕಳೆದ ವರ್ಷ ೫.೨೯ ಲಕ್ಷ ಮೆಟ್ರಿಕ್ ಟನ್ ಕಬ್ಬು ನುರಿಸಲಾಗಿದೆ. ಈ ಭಾಗದ ರೈತರಿಗೆ ಈ ಕಾರ್ಖಾನೆ ಜೀವನಾಡಿಯಾಗಿ ಕೆಲಸ ಮಾಡುತ್ತಿದೆ. ಈ ಎಲ್ಲಾ ಕೆಲಸಗಳು ಶೇರುದಾರ ರೈತರಿಗೆ ತೃಪ್ತಿತಂದಿದ್ದರೆ ಮಾತ್ರ ನನಗೆ ಮತ್ತು ಸಹೋದ್ಯೋಗಿಗಳಿಗೆ ಬೆಂಬಲಿಸಿ ಆಯ್ಕೆ ಮಾಡಿ ಎಂದು ಶಾಸಕ ಯಶವಂತರಾಯಗೌಡ…
ಭೀಮಾಶಂಕರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಚುನಾವಣೆ ಪ್ರಚಾರ ಸಭೆಯಲ್ಲಿ ಶಾಸಕ ಯಶವಂತ್ರಾಯಗೌಡ ಸ್ಪಷ್ಠನೆ ಇಂಡಿ: ೨೦೧೩ರ ಚುನಾವಣೆಯಲ್ಲಿ ಮಾತು ಕೊಟ್ಟಂತೆ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಕಟ್ಟಿ ಕಬ್ಬು ನುರಿಸಲು ಪ್ರಾರಂಭಿಸಲಾಗಿದೆ. ಈಗ ಇಥೆನಾಲ್ ಘಟಕವನ್ನೂ ಸ್ಥಾಪಿಸಲಾಗುತ್ತಿದೆ. ಅಲ್ಲದೆ ಕಾರ್ಖಾನೆಗೆ ಸಾಲ ನೀಡಿದ ಬ್ಯಾಂಕ್‌ಳಿಗೆ ಪ್ರತೀ ವರ್ಷ ಮಾರ್ಚ ೩೧ ರ ಒಳಗಾಗಿ ಕಂತು ಹಾಗೂ ಬಡ್ಡಿಯನ್ನು ನಿಯಮಿತವಾಗಿ ಕಟ್ಟಲಾಗುತ್ತಿದೆ ಎಂದು ಶಾಸಕ ಯಶವಂತ್ರಾಯಗೌಡ ಪಾಟೀಲ ಹೇಳಿದರು.ಅವರು ಶುಕ್ರವಾರ ಪಟ್ಟಣದ ಸಿಂದಗಿ ರಸ್ತೆಯ ಧನಶೆಟ್ಟಿ ಮಂಗಲ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಭೀಮಾಶಂಕರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿಯ ಚುನಾವಣಾ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.೧೮೪ ಎಕರೆ ಪ್ರದೇಶದಲ್ಲಿ ೧೦೦ ವರ್ಷ ಬಾಳಿಕೆ ಬರುವ ಟರ್ಬೈನ್ ಅಳವಡಿಸಿ ಕಾರ್ಖಾನೆ ಕಟ್ಟಲಾಗಿದೆ. ಇದು ಮುಂದಿನ ೧೦೦ ವರ್ಷಗಳ ಕಾಲ ಕೆಲಸ ಮಾಡುವಂತೆ ಕ್ರಮ ಜರುಗಿಸಲಾಗಿದೆ. ನನ್ನ ಶಕ್ತಿ ಮೀರಿ ಕಾರ್ಖಾನೆ ಕಟ್ಟಿದ್ದೇನೆ. ಇದಕ್ಕೆ ಸಾಲ ಇದ್ದದ್ದು ನಿಜ. ನಿಸರ್ಗ ಅನುಕೂಲ ಕೊಟ್ಟರೆ ಕಾರ್ಖಾನೆ…
ಆಲಮೇಲ: ೧೨ನೇ ಶತಮಾನದ ಬಸವಣ್ಣನವರ ನೇತೃತ್ವದ ಶರಣರ ಅನುಭಾವ ಮಂಟಪದ ಚಿಂತನೆಗಳು ಮತ್ತು ಅಂಬೇಡ್ಕರ ಅವರ ಸಂವಿಧಾನದ ಆಶಯಗಳು ಉದ್ದೇಶ ಒಂದೇಯಾಗಿದೆ ಎಂದು ಪ್ರೊ. ಎಸ್.ಜೆ.ಮಾಡ್ಯಾಳ ಹೇಳಿದರು.ಆಲಮೇಲ ತಾಲೂಕ ಆಡಳಿತ ನೇತೃತ್ವದಲ್ಲಿ ಬುಧವಾರ ಸಂವಿಧಾನ ಜಾಗೃತಿ ಜಾಥಾದ ರಥಯಾತ್ರೆ ನಿಮಿತ್ಯ ಹಮ್ಮಿಕೊಂಡಿದ್ದ ಬಹಿರಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು.ಶರಣರ ಅನುಭವ ಮಂಟಪದ ಉದ್ದೇಶ ಮತ್ತು ಅಂಬೇಡ್ಕರ ಅವರ ನೇತೃತ್ವದಲ್ಲಿ ರಚಿಸಿರುವ ಸಂವಿಧಾನದ ಆಶೆಯು ಎರಡು ಸಮಾನತೆ ಉದ್ದೇಶ ಹೊಂದಿದೆ, ಬಸವಣ್ಣನವರ ತತ್ವಗಳು ಸಂವಿಧಾನದಲ್ಲಿ ಅಳವಡಿಸಲಾಗಿದೆ. ೧೨ನೇ ಶತಮಾನದ ಅನುಭವ ಮಂಟಪದ ಚಿಂತನೆಗಳು ಮತ್ತು ಸಂವಿಧಾನ ಎರಡು ಒಂದು ನಾಣ್ಯದ ಎರಡು ಮುಖಗಳು ಎಂದರು.೧೨ನೇ ಶತಮಾನದಿಂದಲು ಜಾತಿ ತಾರತಮ್ಯ ತಾಂಡವಾಡುತ್ತಿದ್ದು ಅದನ್ನು ಮನಗಂಡ ಶರಣರು ಅಲ್ಲಮ ಪ್ರಭು ಅವರ ಅಧ್ಯಕ್ಷತೆಯಲ್ಲಿ ಅನುಭವ ಮಂಟಪ ಮೂಲಕ ಒಂದು ಮಾಹನ ಸಭೆ ಅಯೋಜನೆ ಮಾಡಿದರು. ನಂತರ ಶರಣರು ತಮ್ಮ ವಚನಗಳ ಮೂಲಕ ಜಾಗೃತಿ ಮೂಡಿಸಿದರು, ಸ್ವತಂತ್ರö್ಯ ಭಾರತದ ಕಾನೂನಿ ಮೂಲಕ ಸಂವಿಧಾನ ರಚನೆಯಾದರು ಜಾತಿ…
ಆಲಮೇಲ: ಹುಬ್ಬಳ್ಳಿಯ ಉಮಾಶಂಕರ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ನೀಡುವ ಪ್ರಸಕ್ತ ಸಾಲಿನ ಪುಸ್ತಕ ಪ್ರಶಸ್ತಿಗೆ ಪಟ್ಟಣದ ವೈದ್ಯ ಸಾಹಿತಿ ಡಾ ಸಮೀರ ಹಾದಿಮನಿ ಅವರ ‘ನಗೆಗುಳಿಗೆ’ ಕೃತಿ ಆಯ್ಕೆ ಆಗಿದೆ.ಚುನಾವಣೆ, ಕೋರೋನಾ, ಬೆಲೆಏರಿಕೆ, ರಾಜಕೀಯ, ಪ್ರಚಲಿತ ವಿದ್ಯಮಾನಗಳು ಹೀಗೆ ವಿವಿಧ ವಿಷಯಗಳ 108 ಪ್ರಕಟಿತ ವ್ಯಂಗ್ಯಚಿತ್ರಗಳ ಸಂಕಲನ ಆಗಿರುವ ಈ ಕೃತಿಗೆ ಖ್ಯಾತ ವ್ಯಂಗ್ಯಚಿತ್ರಕಾರ ಪಂಜು ಗಂಗೋಳ್ಳಿ ಮತ್ತು ದಿನೇಶ ಕುಕ್ಕುಜಡ್ಕ ಅವರು ಮುನ್ನುಡಿ-ಬೆನ್ನುಡಿ ಬರೆದಿರುವರು.ವೃತ್ತಿಯಲ್ಲಿ ವೈದ್ಯರಾಗಿರುವ ಡಾ ಸಮೀರ ಹಾದಿಮನಿಯವರು ಉಪ್ಪು ನೀರಿನ ಸೆಲೆ, ಶ್ಲಾಘನೆ-ಖಂಡನೆ ಸೇರಿದಂತೆ ಐದು ಕೃತಿಗಳನ್ನು ರಚಿಸಿರುವರು. ಇವರು ಜಿಲ್ಲಾ ರಾಜ್ಯೋತ್ಸವ, ಸಗರನಾಡು ಸೇವಾ ಪ್ರತಿಷ್ಟಾನದ ಯುವ ಪ್ರಶಸ್ತಿ, ಬಸವಶಾಂತಿ ರಾಜ್ಯಪ್ರಶಸ್ತಿ ಮುಂತಾದ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.ಮಾರ್ಚ್ ೧೦ ರಂದು ಹುಬ್ಬಳ್ಳಿಯಲ್ಲಿ ಜರುಗಲಿರುವ ಭಾವಸಂಗಮ ಪ್ರತಿಷ್ಠಾನದ ದಶಮಾನೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಜರುಗಲಿದ್ದು, ಪ್ರಶಸ್ತಿಯು ಸ್ಮರಣಿಕೆ, ಪ್ರಶಸ್ತಿ ಫಲಕ ಮತ್ತು ಗೌರವ ಸನ್ಮಾನ ಒಳಗೊಂಡಿರುತ್ತದೆ ಎಂದು ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯಾಧ್ಯಕ್ಷ ರಾಜೇಂದ್ರ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೋರವಾರದಲ್ಲಿ ಶಿಕ್ಷಣ ಕ್ಷೇತ್ರದ ಸಾಧಕರಿಗೆ ಮಕ್ಕಳಮಿತ್ರ ಪ್ರಶಸ್ತಿ ಪ್ರಧಾನ ದೇವರಹಿಪ್ಪರಗಿ: ಮಕ್ಕಳು ದೇವರ ಸಮಾನ ಅವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ ಎಂದು ಮಕ್ಕಳ ಸಾಹಿತಿ, ಚಿಂತಕ ಹ.ಮ.ಪೂಜಾರ ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಉಜ್ವಲ ಗ್ರಾಮೀಣಭಿವೃದ್ಧಿ ಸೇವಾಸಂಸ್ಥೆ, ಇಂಡಿಯಾ ಲಿಟ್ರಸಿ ಪ್ರೋಜೆಕ್ಟ್ “ಶಿಕ್ಷಣಯಾತ್ರೆ” ಯೋಜನೆ ಹಾಗೂ ಜಿಲ್ಲಾ ಆಡಳಿತ ಸಹಯೋಗದೊಂದಿಗೆ ಜರುಗಿದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮಕ್ಕಳಲ್ಲಿ ಕ್ರಿಯಾಶೀಲತೆ ಅಡಗಿದೆ ಅದನ್ನು ಹೊರ ತರುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಮಕ್ಕಳ ಅಭಿವೃದ್ಧಿಗಾಗಿ ಗ್ರಂಥಾಲಯ, ಶಿಕ್ಷಣ, ಮಕ್ಕಳ ಹಕ್ಕುಗಳು ಬಹಳ ಅಗತ್ಯ ಎಂದರು.ಉಜ್ವಲ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ ರೆಡ್ಡಿ ಮಾತನಾಡಿ, ಮಕ್ಕಳು ಎಂದರೆ ನಗು, ಹಬ್ಬ, ಯಾವ ಗ್ರಾಮ ಮತ್ತು ಪಟ್ಟಣದಲ್ಲಿ ಮಕ್ಕಳ ಪರ ಚಿಂತಕರು ಇರುತ್ತಾರೆಯೋ ಅದು ಸ್ವರ್ಗವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಸಹಾಯಕ ಯೋಜನಾಧಿಕಾರಿ ಎಸ್.ಎ.ಕೋರವಾರ, ಯಶೋಧಾ ಜೋಷಿ ಉಜ್ಜಲ ಸಂಸ್ಥೆಯ-ಐಎಲ್‌ಪಿ…
ಕೋರವಾರದಲ್ಲಿ ಶಿಕ್ಷಣ ಕ್ಷೇತ್ರದ ಸಾಧಕರಿಗೆ ಮಕ್ಕಳಮಿತ್ರ ಪ್ರಶಸ್ತಿ ಪ್ರಧಾನ ದೇವರಹಿಪ್ಪರಗಿ: ಮಕ್ಕಳು ದೇವರ ಸಮಾನ ಅವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ ಎಂದು ಮಕ್ಕಳ ಸಾಹಿತಿ, ಚಿಂತಕ ಹ.ಮ.ಪೂಜಾರ ಹೇಳಿದರು.ತಾಲ್ಲೂಕಿನ ಕೋರವಾರ ಗ್ರಾಮದ ಸರಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ಉಜ್ವಲ ಗ್ರಾಮೀಣಭಿವೃದ್ಧಿ ಸೇವಾಸಂಸ್ಥೆ, ಇಂಡಿಯಾ ಲಿಟ್ರಸಿ ಪ್ರೋಜೆಕ್ಟ್ “ಶಿಕ್ಷಣಯಾತ್ರೆ” ಯೋಜನೆ ಹಾಗೂ ಜಿಲ್ಲಾ ಆಡಳಿತ ಸಹಯೋಗದೊಂದಿಗೆ ಜರುಗಿದ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.ಮಕ್ಕಳಲ್ಲಿ ಕ್ರಿಯಾಶೀಲತೆ ಅಡಗಿದೆ ಅದನ್ನು ಹೊರ ತರುವಲ್ಲಿ ಶಿಕ್ಷಕರ ಪಾತ್ರ ಬಹಳ ಮುಖ್ಯ. ಮಕ್ಕಳ ಅಭಿವೃದ್ಧಿಗಾಗಿ ಗ್ರಂಥಾಲಯ, ಶಿಕ್ಷಣ, ಮಕ್ಕಳ ಹಕ್ಕುಗಳು ಬಹಳ ಅಗತ್ಯ ಎಂದರು.ಉಜ್ವಲ ಸಂಸ್ಥೆಯ ಅಧ್ಯಕ್ಷೆ ಗೌರಮ್ಮ ರೆಡ್ಡಿ ಮಾತನಾಡಿ, ಮಕ್ಕಳು ಎಂದರೆ ನಗು, ಹಬ್ಬ, ಯಾವ ಗ್ರಾಮ ಮತ್ತು ಪಟ್ಟಣದಲ್ಲಿ ಮಕ್ಕಳ ಪರ ಚಿಂತಕರು ಇರುತ್ತಾರೆಯೋ ಅದು ಸ್ವರ್ಗವಾಗುತ್ತದೆ ಎಂದರು.ಕಾರ್ಯಕ್ರಮದಲ್ಲಿ ಶಿಶು ಅಭಿವೃದ್ಧಿ ಸಹಾಯಕ ಯೋಜನಾಧಿಕಾರಿ ಎಸ್.ಎ.ಕೋರವಾರ, ಯಶೋಧಾ ಜೋಷಿ ಉಜ್ಜಲ ಸಂಸ್ಥೆಯ-ಐಎಲ್‌ಪಿ…
ದೇವರಹಿಪ್ಪರಗಿ: ಮಾಜಿಸಚಿವ, ಕೋಲಿ ಕಬ್ಬಲಿಗ ಸಮುದಾಯದ ಮುಖಂಡ ಪ್ರಮೋದ ಮದ್ವರಾಜ್ ಇವರಿಗೆ ಉಡುಪಿ-ಚಿಕ್ಕಮಗಳೂರು ಮತಕ್ಷೇತ್ರದಿಂದ ಲೋಕಸಭಾ ಟಿಕೆಟ್ ನೀಡುವಂತೆ ಕೋಲಿ ಕಬ್ಬಲಿಗ ಯುವವೇದಿಕೆ ರಾಜ್ಯಾಧ್ಯಕ್ಷ ಶಿವಾಜಿ ಮೆಟಗಾರ ಬಿಜೆಪಿ ನಾಯಕರನ್ನು ಆಗ್ರಹಿಸಿದ್ದಾರೆ.ಪಟ್ಟಣದಲ್ಲಿ ಶುಕ್ರವಾರ ಪತ್ರಿಕೆಯೊಂದಿಗೆ ಮಾತನಾಡಿದ ಶಿವಾಜಿ, ಪ್ರಮೋದ ಮಧ್ವರಾಜ್ ಹಲವು ವರ್ಷಗಳ ಹಿಂದೆ ಕಾಂಗ್ರೆಸ್ ತೊರೆದು ಯಾವುದೇ ಬೇಡಿಕೆಯನ್ನಿಡದೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿದ್ದಾರೆ. ಕರಾವಳಿ ಭಾಗದ ರಾಜಕೀಯ ವಲಯದಲ್ಲಿ ಇವರ ತಂದೆ ಶಾಸಕರು, ಇವರ ತಾಯಿ ಶಾಸಕರು, ಸಚಿವರಾಗಿದ್ದರು, ಇವರು ಸಹ ಶಾಸಕರಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.ಕಾಂಗ್ರೆಸ್ ತೊರೆದು ಯಾವುದೇ ಷರತ್ತು ಇಲ್ಲದೆ ಬಿಜೆಪಿಗೆ ಬಂದಿರುವ ಪ್ರಮೋದ ಮಧ್ವರಾಜ್ ಕೋಲಿ, ಕಬ್ಬಲಿಗ, ಅಂಬಿಗ ಸಮುದಾಯದ ರಾಜ್ಯ ಪ್ರಮುಖರಾಗಿದ್ದಾರೆ. ಇಡೀ ರಾಜ್ಯಾದ್ಯಂತ ಸುಮಾರು ೫೦ಲಕ್ಷ ಕೋಲಿ ಕಬ್ಬಲಿಗ ಮತದಾರರಿದ್ದು, ಇವರಿಗೆ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವುದರಿಂದ ಬಿಜೆಪಿಗೆ ಹೆಚ್ಚಿನ ಅನುಕೂಲವಾಗಲಿದೆ. ಜೊತೆಗೆ ನಮ್ಮ ಸಮುದಾಯವು ಸಹ ಬಿಜೆಪಿಯನ್ನು ಬೆಂಬಲಿಸಲಿದೆ. ಆದ್ದರಿಂದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ…
ಬಸವನಬಾಗೇವಾಡಿ: ತಾಲೂಕಿನ ಮನಗೂಳಿ ಪಟ್ಟಣ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಈಗಿರುವ ಪ್ರಾಚಾರ್ಯರನ್ನು ಮುಂದುವರಿಸಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.ಪ್ರತಿಭಟನೆ ಉದ್ದೇಶಿಸಿ ಕಾಲೇಜಿನ ಸಲಹಾ ಸಮಿತಿ ಸದಸ್ಯ, ವ್ಹಿಡಿಸಿಸಿ ಬ್ಯಾಂಕಿನ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಮಾತನಾಡಿ, ಮನಗೂಳಿ ಪಟ್ಟಣ ಸೇರಿದಂತೆ ಈ ಭಾಗದ ವಿದ್ಯಾರ್ಥಿಗಳಿಗೆ ಪದವಿ ಶಿಕ್ಷಣ ಸಿಗುವಂತಾಗಲಿ ಎಂಬ ಉದ್ದೇಶದಿಂದ ಇಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಅನ್ನು ಸಚಿವ ಶಿವಾನಂದ ಪಾಟೀಲರ ಮುತುವರ್ಜಿಯಿಂದ ಆರಂಭವಾಗಿದೆ. ಮೊದಲು ಉರ್ದು ಶಾಲೆಯಲ್ಲಿ ಆರಂಭವಾಗಿತ್ತು. ಈ ಭಾಗದ ಜನರಿಗೆ ಮನದಟ್ಟು ಮಾಡುವ ಮೂಲಕ ತಮ್ಮ ಮಕ್ಕಳನ್ನು ಸರ್ಕಾರಿ ಪದವಿ ಕಾಲೇಜಿಗೆ ಪ್ರವೇಶ ಮಾಡುವಂತೆ ಮಾಡಲಾಗಿದೆ. ಅಲ್ಲದೇ ಸುಮಾರು ೫ ಕೋಟಿ ವೆಚ್ಚದಲ್ಲಿ ಕಾಲೇಜು ಕಟ್ಟಡ ನಿರ್ಮಾಣವಾಗಿದೆ. ಅಲ್ಲದೇ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ವಸತಿ ನಿಲಯದ ಕಟ್ಟಡವನ್ನು ಸಹ ಸಚಿವರು ನಿರ್ಮಾಣ ಮಾಡಿಸಿದ್ದಾರೆ. ಪದವಿ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಐ.ಎಸ್. ಮಠಪತಿ ಎಂಬ ಉಪನ್ಯಾಸಕರು ಕಾಲೇಜಿನ ಸಲಹಾ ಸಮಿತಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ವಿದ್ಯಾರ್ಥಿಗಳಿಗೂ ತೊಂದರೆ ಕೊಡುತ್ತಿದ್ದಾರೆ.…
ಬಸವನ ಬಾಗೆವಾಡಿ ತಾಲೂಕು ದಂಡಾಧಿಕಾರಿ ಯಮನಪ್ಪ ಸೋಮನಕಟ್ಟಿ ಅಭಿಮತ ಬಸವನ ಬಾಗೆವಾಡಿ: ಕನ್ನಡ ಆಡಳಿತ ಭಾಷೆಯಾಗಿರುವದರಿಂದ ಪರಿಣಾಮಕಾರಿಯಾಗಿ ನಾಡಿನ ಎಲ್ಲ ಜನತೆ ಮಾತನಾಡಲಿ ಎಂದು ಬಸವನ ಬಾಗೆವಾಡಿ ತಾಲೂಕಾ ದಂಡಾಧಿಕಾರಿ ಯಮನಪ್ಪ ಸೋಮನಕಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.ಶುಕ್ರವಾರ ಬಸವನಬಾಗೇವಾಡಿ ಪಟ್ಟಣದಲ್ಲಿ ತಾಯಿ ಭುವನೇಶ್ವರಿ ಹೊತ್ತ ಕನ್ನಡ ರಥ ಬಸವೇಶ್ವರ ದೇವಾಲಯದಿಂದ ಡಾ ಅಂಬೇಡಕರ ಹಾಗು ಸಂಗೋಳ್ಳಿ ರಾಯಣ್ಣ ವೃತ್ತ ಮುಖಾಂತರ ಬಸವ ಭವನ ಮೂಲಕ ಸಾವಿರಾರು ವಿದ್ಯಾರ್ಥಿಗಳು, ಶಿಕ್ಷಕರು, ಸಾಹಿತಿಗಳು. ಹೋರಾಟಗಾರರು ಕಂದಾಯ ಇಲಾಖೆ ,ಕನ್ನಡ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು,ಕನ್ನಡ ರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗು ಪದಾಧಿಕಾರಿಗಳ ನೇತೃತ್ವದಲ್ಲಿ ಬೃಹತ್ ಪ್ರಮಾಣದ ಮೆರವಣಿಗೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಕನ್ನಡ ಸಾಹಿತ್ಯದ ಮೂಲಕ ಕನ್ನಡ ಬೆಳೆಸೋಣ ಹಾಗು ಉಳಿಸೋಣ ಎಂದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಮಾತನಾಡಿ, ಕನ್ನಡ ಸಂಸ್ಕೃತಿ ಹಾಗು ಸಾಹಿತ್ಯ ಕನ್ನಡ ನಾಡನ್ನು ಶ್ರೀಮಂತಗೊಳಿಸಿದೆ. ನಾಡಿನ ಏಳು ಕೋಟಿ ಜನರು ಕನ್ನಡ ಬರೆಯುವ ಹಾಗು ಮಾತನಾಡುವದನ್ನು ಸರ್ಕಾರ ಕಡ್ಡಾಯಗೊಳಿಸಬೇಕು. ಮೈಸೂರು…
ಮುದ್ದೇಬಿಹಾಳ: ಪಟ್ಟಣದ ಮಾರುತಿ ನಗರದ ಯಲ್ಲಾಲಿಂಗ ದೇವಸ್ಥಾನದ ಬಳಿಯ ವಿದ್ಯಾಜ್ಯೋತಿ ಪಬ್ಲಿಕ್ ಶಾಲೆಯ ಎರಡನೇ ವಾರ್ಷಿಕೋತ್ಸವ ಸಮಾರಂಭವನ್ನು ಫೆ೧೨ ರಂದು ಸಂಜೆ ೫:೩೦ ಕ್ಕೆ ಆಯೋಜಿಸಲಾಗಿದೆ.ಸಮಾರಂಭದ ದಿವ್ಯ ಸಾನಿಧ್ಯವನ್ನು ಬಿಲ್‌ಕೆರೂರಿನ ಬಿಲ್ವಾಶ್ರಮ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಲಿದ್ದು, ಪಟ್ಟಣದ ಮಾರುತಿ ನಗರದ ದೇವಿ ಉಪಾಸಕರಾದ ಲಾಲಲಿಂಗೇಶ್ವರ ಶರಣರು ಸಾನಿಧ್ಯವಹಿಸಲಿದ್ದಾರೆ. ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅಧ್ಯಕ್ಷತೆ ವಹಿಸುವರು, ಕಾಂಗ್ರೇಸ್ ಮುಖಂಡ ಶಾಂತಗೌಡ ಪಾಟೀಲ ಉಪಸ್ಥಿತಿಯಲ್ಲಿ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಸಾವಳಗಿ ಮತ್ತು ನಿವೃತ್ತ ದೈಹಿಕ ಶಿಕ್ಷಕ ಎಸ್.ಬಿ.ಚಲವಾದಿ ಉದ್ಘಾಟಿಸುವರು. ನಿವೃತ್ತ ಡಿ.ವಾಯ್.ಎಸ್.ಪಿ ಎಸ್.ಎಸ್.ಹುಲ್ಲೂರ, ಹೆಸ್ಕಾಂ ನ ಎ.ಇ.ಇ ರಾಜಶೇಖರ ಹಾದಿಮನಿ ಮುಖ್ಯ ಅತಿಥಿಗಳಾಗಿ, ಚಿಂತಕ ಅರವಿಂದ ಕೊಪ್ಪ, ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕರಾದ ಎಂ.ಎಚ್.ಹಾಲ್ಯಾಳ, ಕಾಂಗ್ರೇಸ್ ಮುಖಂಡ ವಾಯ್.ಎಚ್.ವಿಜಯಕರ, ಮಂಗಳೂರು ಭಾಗದ ಪಿಡಿಓ ಮುತ್ತಪ್ಪ ಢವಳಗಿ ಅತಿಥಿಗಳಾಗಿ ಆಗಮಿಸಲಿರುವದಾಗಿ ಸಂಸ್ಥೆಯ ಕಾರ್ಯಾಧ್ಯಕ್ಷ ವಿರೇಶ ಗುರುಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
