ಮುದ್ದೇಬಿಹಾಳ: ನಮ್ಮ ಅವಧಿಯಲ್ಲಿ ಮುದ್ದೇಬಿಹಾಳ ಮತಕ್ಷೇತ್ರ ಇಷ್ಟೊಂದು ಅಭಿವೃದ್ಧಿ ಕಂಡಿದೆ ಎಂದರೆ ಅದಕ್ಕೆ ಯಡಿಯೂರಪ್ಪನವರ ಆಶೀರ್ವಾದ ಬಹಳ ಇದೆ. ಕರ್ನಾಟಕದಲ್ಲಿಯೇ ಅತೀ ಹೆಚ್ಚು ಅನುದಾನವನ್ನು ನಮ್ಮ ಭಾಗಕ್ಕೆ ಕೊಟ್ಟ ಪುಣ್ಯಾತ್ಮ ಅವರು. ಅವರ ಋಣವನ್ನು ಯಾವತ್ತೂ ನಮ್ಮ ಜನತೆ ಮುಟ್ಟಿಸಲು ಸಾಧ್ಯವಿಲ್ಲ. ನಾಳೆ ಲೋಕಸಭಾ ಚುನಾವಣಾ ಪ್ರಚಾರಾರ್ಥವಾಗಿ ಮಾ.೨೭ ರಂದು ಪಟ್ಟಣಕ್ಕೆ ಅವರು ಆಗಮಿಸಲಿದ್ದು ಅತ್ಯಂತ ಅದ್ಧೂರಿಯಾಗಿ ಅವರನ್ನು ಸ್ವಾಗತಿಸಲು ತಯಾರಿ ಮಾಡಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ, ಭಾಜಪಾ ರೈತ ಮೋರ್ಚಾ ರಾಜ್ಯಾಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು.
ಪಟ್ಟಣದ ಬನಶಂಕರಿ ದೇವಸ್ಥಾನದಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಬೆಳಿಗ್ಗೆ ೧೦ ಗಂಟೆಗೆ ಅವರ ಆಗಮನದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಮಾತನಾಡುವರು. ನಂತರ ಪಟ್ಟಣದ ಅಂಬೇಡ್ಕರ ವೃತ್ತದಿಂದ, ಬಸವೇಶ್ವರ ವೃತ್ತ, ಮುಖ್ಯ ಬಜಾರ, ಇಂದಿರಾ ವೃತ್ತ ಮಾರ್ಗವಾಗಿ ಬನಶಂಕರಿ ದೇವಸ್ಥಾನದವರೆಗೆ ತೆರೆದ ವಾಹನದ ಮೂಲಕ ಮತಯಾಚನೆ ನಂತರ ಬಹಿರಂಗ ಸಭೆಯಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಪಟ್ಟಣದ ಪ್ರತೀ ವಾರ್ಡ ನಿಂದ ೨೦೦ ಜನ ಸೇರಿದಂತೆ ಮತಕ್ಷೇತ್ರದಿಂದ ಅಂದಾಜು ೧೫ ರಿಂದ ೨೦ ಸಾವಿರ ಜನ ಭಾಗಿಯಾಗುವ ಸಾಧ್ಯತೆ ಇದ್ದು ಕಾರಣ ಎಲ್ಲ ಭಾಜಪಾ ಕಾರ್ಯಕರ್ತರು, ಯಡಿಯೂರಪ್ಪನವರ ಅಭಿಮಾನಿಗಳು ಈ ಶೋಭಾಯಾತ್ರೆಯಲ್ಲಿ ಮತ್ತು ಬಹಿರಂಗ ಸಭೆಯಲ್ಲಿ ಭಾಗಿಯಾಗಬೇಕು ಎಂದು ಮನವಿ ಮಾಡಿದರು.
ಯಡಿಯೂರಪ್ಪನವರಿಂದಲೇ ಚಿಮ್ಮಲಗಿ-ಮುಳವಾಡ ಏತ ನೀರಾವರಿಯಾಗಿದ್ದು. ೨೦೧೨ ರಲ್ಲಿ ನಾನು ಬಂಡಿ ಯಾತ್ರೆ ಮಾಡಿದ್ದೆ. ಆವಾಗಲೇ ಟೆಂಡರ್ ಆಗಿದ್ದು. ನನ್ನ ಬಳಿ ದಾಖಲೆಗಲಿವೆ. ನಾರಾಯಣಪುರ ಹಿನ್ನೀರಿನ ದಡದ ಕೆಲ ಹಳ್ಳಿಗಳ ಮುಳುಗಡೆ ನಂತರ ಪುನರ್ವಸತಿ ಕೇಂದ್ರಗಳಾಗಿ ಅಲ್ಲಿ ಯಾವುದೇ ಮೂಲಭೂತ ಸೌಕರ್ಯಗಳಿರಲಿಲ್ಲ. ಈ ಕುರಿತು ನಾನು ಅವರಲ್ಲಿ ಮನವಿ ಮಾಡಿದಾಗ ೧೨೦ ಕೋಟಿ ಪ್ರೊಜೆಕ್ಟ್ ಅಪ್ರೂ ಮಾಡಿ ಅರ್ಧ ಹಣ ಕೂಡ ಬಿಡುಗಡೆ ಮಾಡಿದ್ರು. ಕೆಲಸವನ್ನೂ ಮಾಡಲಾಯಿತು ಮುಂದಿನ ಕೆಲಸ ಮಾಡಲು ಕೋರೋನಾ ಅಡ್ಡವಾಯಿತು. ಹೀಗೆ ಸಾವಿರಾರು ಕೋಟಿ ಅನುದಾನ ನಮ್ಮ ಭಾಗಕ್ಕೆ ಕೊಟ್ಟ ಕರ್ನಾಟಕದ ಭೀಷ್ಮ ನಮ್ಮೂರಿಗೆ ಆಗಮಿಸುತ್ತಿದ್ದು ಮತಕ್ಷೇತ್ರದ ಎಲ್ಲ ಜನತೆ ಭಾಗಿಯಾಗಬೇಕು ಎಂದರು. ಈ ವೇಳೆ ಭಾಜಪಾ ಪಕ್ಷದ ಪ್ರಮುಖರಾದ ಮಲಕೇಂದ್ರಗೌಡ ಪಾಟೀಲ, ಸಿದ್ದರಾಜ ಹೊಳಿ, ಅಶೋಕ ರಾಠೋಡ, ರವೀಂದ್ರ ಬಿರಾದಾರ, ಜಗದೀಶ ಪಂಪಣ್ಣವರ, ಶ್ರೀಶೈಲ ದೊಡಮನಿ, ಎಂ.ಆರ್.ಪಾಟೀಲ ವಕೀಲರು ಸೇರಿದಂತೆ ಮತ್ತೀತರರು ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

