ಮುದ್ದೇಬಿಹಾಳ: ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂಗಿ ಚಿಕುನ್‌ಗುನ್ಯಾ, ಮೆದುಳು ಜ್ವರ, ಆನೆಕಾಲು ರೋಗ ಸೇರಿದಂತೆ ವಿವಿಧ ಬಗೆಯ ಖಾಯಿಲೆಗಳು ಹರಡುತ್ತಿದ್ದು, ಸೊಳ್ಳೆಗಳನ್ನು ನಿಯಂತ್ರಣ ಮಾಡಿದಲ್ಲಿ ಇಂತಹ ಖಾಯಿಲೆಗಳನ್ನು ತಡೆಗಟ್ಟಬಹುದು. ಹಾಗಾಗಿ ಸಾರ್ವಜನಿಕರು ಸೊಳ್ಳೆ ಸಂತಾನೋತ್ಪತ್ತಿ ತಾಣಗಳ ಬಗ್ಗೆ ಜಾಗೃತಿ ವಹಿಸಿ ಸೊಳ್ಳೆ ನಿರ್ಮೂಲನೆ ಬಗ್ಗೆ ಎಚ್ಚರ ವಹಿಸಬೇಕು ಎಂದು ತಾಲೂಕಿನ ತಂಗಡಗಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಸಂಗಮೇಶ ದಶವಂತ ಹೇಳಿದರು.
ಪಟ್ಟಣದ ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಮಲೇರಿಯಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.
ಸೊಳ್ಳೆಗಳಿಂದ ಪ್ರಸಾರವಾಗುವ ರೋಗಗಳಲ್ಲಿ ಮಲೇರಿಯಾ ರೋಗವು ಕೂಡ ಒಂದು. ಇದು ಪ್ಲಾಸ್ಮೋಡಿಯಾ ಎಂಬ ಸೂಕ್ಷ್ಮಾಣು ಪರಾವಲಂಬಿ ಮೂಲಕ ಬರುತ್ತದೆ. ಹೆಣ್ಣು ಅನಾಫಿಲಿಸ್ ಸೊಳ್ಳೆಯು ಮಲೇರಿಯಾ ಸೋಂಕಿತ ವ್ಯಕ್ತಿಗೆ ಕಚ್ಚಿ ರಕ್ತ ಹೀರಿ ಆರೋಗ್ಯವಂತ ವ್ಯಕ್ತಿಗೆ ಕಚ್ಚುವುದರಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಮಲೇರಿಯಾ ರೋಗದ ಲಕ್ಷಣಗಳಲ್ಲಿ ಮೊದಲು ಚಳಿ ನಂತರ ವಿಪರೀತ ಜ್ವರ ಬಂದು ಕೊನೆಗೆ ಬೆವರುವಿಕೆಯಿಂದ ಆರಾಮ ಎನಿಸುತ್ತದೆ. ಇದೇ ಲಕ್ಷಣಗಳು ಪುನರಾವರ್ತನೆಗೊಳ್ಳುತ್ತದೆ. ಇದೇ ಅವಧಿಯಲ್ಲಿ ರಕ್ತ ಲೇಪನವನ್ನು ತೆಗೆದು ಪರೀಕ್ಷೆ ಮಾಡಿದಾಗ ಮಲೇರಿಯಾ ರೋಗವೆಂದು ಖಚಿತ ಪಡಿಸಬಹುದು. ಮಲೇರಿಯಾ ರೋಗವೆಂದು ಖಚಿತಪಟ್ಟಾಗ ತಕ್ಷಣ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಸಂಪೂರ್ಣ ಗುಣವಾಗುತ್ತದೆ. ಕಾರಣ ಸಾರ್ವಜನಿಕರು ಯಾವುದೇ ಜ್ವರ ಬಂದಾಗ ಆರೋಗ್ಯ ನಿರೀಕ್ಷಣಾಧಿಕಾರಿಗಳ ಹತ್ತಿರ ಅಥವಾ ಸಮೀಪದ ಸರಕಾರಿ ಆಸ್ಪತ್ರೆಯಲ್ಲಿ ರಕ್ತಲೇಪನ ತಗೆಸಿ ಚಿಕಿತ್ಸೆ ಪಡೆಯಬೇಕು ಎಂದು ತಿಳಿಸಿದರು
ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಅನುಸೂಯಾ ತೇರದಾಳ ಮಾತನಾಡಿದರು.
ಈ ವೇಳೆ ಆರೋಗ್ಯ ಇಲಾಖೆಯ ಸಿಬ್ಬಂದಿಗಳಾದ ಯಲ್ಲಪ್ಪ ಛಲವಾದಿ, ಎ.ಐ.ಕೇಶಾಪುರ, ಐ.ಸಿ.ಮಾನಕರ್, ಎಸ್.ಸಿ.ರುದ್ರವಾಡಿ, ಎಸ್.ಐ.ಕಮಲಪ್ಪನವರ, ಸಿ.ಜಿ.ಬಿದರಕುಂದಿ, ಸಿದ್ದು ಬಿದಗೊಂಡ ಸೇರಿದಂತೆ ಆಶಾ ಕಾರ್ಯಕರ್ತೆಯರು ಹಾಜರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

