ವಿಜಯಪುರ: ನಗರದ ವಿದ್ಯಾವರ್ಧಕ ಸಂಸ್ಥೆಯ ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ 2023-24ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಒಕ್ಕೂಟದ ಉದ್ಘಾಟನಾ ಸಮಾರಂಭ ಇಂದು ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ಮೌಲ್ಯಮಾಪನ ವಿಭಾಗದ ಕುಲಸಚಿವ ಡಾ.ರವೀಂದ್ರನಾಥ ಕದಂ ಉದ್ಘಾಟಕರಾಗಿ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಜೀವನ ಮೌಲ್ಯಗಳು ಹಾಗೂ ಶಿಕ್ಷಕ ವೃತ್ತಿಯ ಕೌಶಲ್ಯಗಳನ್ನು ರೂಢಿಸಿಕೊಳ್ಳಲು ಈ ಒಕ್ಕೂಟ ಸಹಾಯಕಾರಿಯಾಗಿದೆ ಎಂದು ಹೇಳಿದರು
ಮುಖ್ಯ ಅತಿಥಿಗಳಾಗಿ ಬೆಳಗಾವಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ನಿವೃತ್ತ ಉಪಕುಲಸಚಿವರಾದ ಡಾ. ಎಚ್ ವೆಂಕಟೇಶ ಮಾತನಾಡಿ, ವಿದ್ಯಾರ್ಥಿಗಳು ಸಂಘಟನಾ ಪ್ರವೃತ್ತಿ, ಏಕತಾ ಮನೋಭಾವವನ್ನು ರೂಡಿಸಿಕೊಳ್ಳುವಲ್ಲಿ ಇಂತಹ ಒಕ್ಕೂಟಗಳು ಬಹುಮುಖ್ಯವಾಗಿವೆ ಎಂದು ಹೇಳಿದರು
ಪ್ರಾಚಾರ್ಯೆ ಡಾ.ಶ್ರೀಮತಿ ಎಸ್ ಟಿ ಬೋಳರಡ್ಡಿ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಐಕ್ಯತಾ ಮನೋಭಾವನೆ ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಇಂತಹ ಒಕ್ಕೂಟಗಳು ಪೂರಕವಾಗಿವೆ ಎಂದು ಹೇಳಿದರು.
ಸಹ್ಯಾದ್ರಿ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಬಿ ಎಸ್ ಬಾಪಗೂಂಡ, ವಿಜಯಕುಮಾರ ಸಜ್ಜನ, ಡಾ.ಶಾರದಾ ಮನವಿ, ವಾಣಿಶ್ರೀ ವೀರಬಾಶೆಟ್ಟಿ, ವಾಣಿಶ್ರೀ ಬಂದಿ, ಡಾ. ವಿಜಯಲಕ್ಷ್ಮೀ ಪವಾರ, ಪ್ರದೀಪ ರೆಡ್ಡಿ, ರಿಯಾಜ್ ಫರೀದ್, ಪ್ರಧಾನ ಕಾರ್ಯದರ್ಶಿ ಆಕಾಶ ವಾಲೀಕಾರ, ವರ್ಗ ಪ್ರತಿನಿಧಿ ಹನುಮಂತ ಪೂಜಾರಿ, ಸಹಾಯಕಿ ಶೋಭಾ ನಾವಿ ಹಾಗೂ ಎಲ್ಲಾ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.
ರಶ್ಮಿ ನೇಗಿನಾಳ ಮತ್ತು ಸಂಗಡಿಗರು ಪ್ರಾರ್ಥನೆ,
ಮಾರಿ ಮಹಾದೇವಿ ಸ್ವಾಗತ ಗೀತೆ ನೆರವೇರಿಸಿದರು. ಸಹಾಯಕ ಪ್ರಾಧ್ಯಾಪಕ ಪ್ರವೀಣ ಡೋಣೂರ ಸ್ವಾಗತಿಸಿ, ಅತಿಥಿಗಳ ಪರಿಚಯ ಮಾಡಿದರು. ಪ್ರಾಚಾರ್ಯೆ ಡಾ. ಎಸ್ ಟಿ ಬೋಳರಡ್ಡಿ ವಿದ್ಯಾರ್ಥಿಗಳಿಗೆ ಪ್ರತಿಜ್ಞೆಯನ್ನು ಬೋಧಿಸಿದರು. ಡಾ.ಶಾರದಾ ಮನವಿ ವಂದಿಸಿದರು. ಮಲ್ಲಿಕಾರ್ಜುನ ಕೆಂಗನಾಳ ನಿರೂಪಿಸಿದರು.
Subscribe to Updates
Get the latest creative news from FooBar about art, design and business.
ವಿದ್ಯಾರ್ಥಿಗಳಲ್ಲಿ ಉತ್ತಮ ಜೀವನ ಮೌಲ್ಯ ಬೆಳೆಸಿ :ಡಾ.ರವೀಂದ್ರನಾಥ
Related Posts
Add A Comment

