Subscribe to Updates
Get the latest creative news from FooBar about art, design and business.
Author: editor.udayarashmi@gmail.com
ಇಂಡಿ: ಇಂದು ಬಾನುವಾರ ನಡೆಯುವ ಶ್ರೀ ಭೀಮಾಶಂಕರ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಗುರುತಿನ ಪತ್ರ ಇಲ್ಲದವರು ಎರಡು ಪೋಟೋ ತರಬೇಕು ಎಂದು ಚುನಾವಣೆ ಅಧಿಕಾರಿ ಮತ್ತು ಕಂದಾಯ ಉಪವಿಭಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.ಗುರುತಿನ ಪತ್ರ ಇಲ್ಲದವರಿಗೆ ಮತ ನೀಡಲು ಅವಕಾಶವಿಲ್ಲ. ಹೀಗಾಗಿ ಎರಡು ಫೋಟೋ ತಂದರೆ ಮೊದಲು ಗುರುತಿನ ಪತ್ರ ಪಡೆದು ನಂತರ ಮತದಾನಕ್ಕೆ ಅವಕಾಶ ಕೊಡಲಾಗುವುದೆಂದು ಗದ್ಯಾಳ ತಿಳಿಸಿದ್ದಾರೆ.ಅದಲ್ಲದೆ ಮತದಾನಕ್ಕೆ ಆಧಾರ ಕಾರ್ಡ ಅಥವಾ ಯಾವದೇ ಗುರುತಿನ ಚೀಟಿ ತಂದು ಮತ ಸಲ್ಲಿಸಬಹುದಾಗಿದೆ ಎಂದು ಗದ್ಯಾಳ ತಿಳಿಸಿದ್ದಾರೆ.ಅದಲ್ಲದೆ ಚುನಾವಣೆ ನಡೆಯುವ ಮರಗೂರ ಸಕ್ಕರೆ ಕಾರ್ಖಾನೆಯ ಸಿದ್ದೇಶ್ವರ ಗೋದಾಮಿನ ಸುತ್ತಲೂ ೫೦೦ ಮೀ ವ್ಯಾಪ್ತಿಯಲ್ಲಿ ೧೪೪ ಅಡಿ ನಿಷೇದಾಜ್ಞೆ ಇದೆ. ಚುನಾವಣೆ ಗೋದಾಮಿನಲ್ಲಿ ಬೆಳಗ್ಗೆ ೯ ರಿಂದ ೪ ಗಂಟೆಯ ವರೆಗೆ ನಡೆಯಲಿದ್ದು ಸಂಜೆಯೇ ಫಲಿತಾಂಶ ನಿರೀಕ್ಷಿಸಲಾಗಿದೆ ಎಂದು ಗದ್ಯಾಳ ತಿಳಿಸಿದ್ದಾರೆ.
ವಿಜಯಪುರ: ದೇಹ ಮತ್ತು ಮನುಸುಗಳನ್ನು ಒಂದುಗೂಡಿಸಿ ವಿದ್ಯಾರ್ಥಿಗಳನ್ನು ಕ್ರೀಡಾ ಸಾಧನೆಯ ಮಾರ್ಗದಲ್ಲಿ ಕೈ ಹಿಡಿದು ನಡೆಸುವ ಶಕ್ತಿ ಇರುವುದು ದೈಹಿಕ ಶಿಕ್ಷಣ ಶಿಕ್ಷಕರಲ್ಲಿ ಮಾತ್ರ ಎಂದು ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯ ಕುಲಸಚಿವರು ಮೌಲ್ಯ ಮಾಪನ ಪ್ರೊ. ಎಚ್.ಎಂ. ಚಂದ್ರಶೇಖರ ಹೇಳಿದರು.ಇಲ್ಲಿನ ಮಹಿಳಾ ವಿವಿ ಆವರಣದಲ್ಲಿ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕರುಗಳ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.ಸಂಘವು ದೈಹಿಕ ಶಿಕ್ಷಣದ ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ತರಬೇತಿ ನೀಡಿ, ಅವರ ಜೀವನನ್ನು ಉನ್ನತ ಮಟ್ಟಕ್ಕೆ ಕರೆದುಕೊಂಡು ಹೋಗಬೇಕು. ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರುಗಳ ಪಾತ್ರ ಮಹತ್ವದಾಗಿದೆ ಎಂದರು.ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಶಿಕ್ಷಣ ನಿಕಾಯದ ಡೀನ್, ಸಿಂಡಿಕೇಟ್ ಸದಸ್ಯ ಪ್ರೊ. ರಾಜಕುಮಾರ ಮಾಲಿಪಾಟೀಲ, ಮಾನವ ಸಂಘ ಜೀವಿ, ಸಮಾಜ ಜೀವಿಯಾಗಿರುವುದರಿಂದ ಕ್ರೀಡೆಗಳು ವಿದ್ಯಾರ್ಥಿಗಳನ್ನು ಸಮಾಜಮುಖಿಯಾಗಿ ಬದುಕಲು ಕಲಿಸುತ್ತವೆ. ಕ್ರೀಡೆಗಳು ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕ್ರೀಡೆಯಲ್ಲಿ ಸೋಲು, ಗೆಲವು ಸಹಜವಾದರೂ ನಿರಂತರ ಸಾಧನೆಯಿಂದ ಐತಿಹಾಸಿಕ ಗುರಿ ಮುಟ್ಟಲು ಸಾಧ್ಯವಾಗುತ್ತದೆ ಎಂದರು.ಕಾರ್ಯಕ್ರಮದ…
ವಿಜಯಪುರ: ವಾರಣಾಸಿಯ ಜ್ಞಾನವಾಪಿಯನ್ನು ನಾವೆಂದೂ ಮುಸ್ಲಿಂರಿಂದ ಕಸಿಯಲು ಬಿಟ್ಟು ಕೊಡುವುದಿಲ್ಲ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷ ತಿಳಿಸಿದೆ.ಶುಕ್ರವಾರ ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಪಕ್ಷವು, ಸಂವಿಧಾನದ ಮೂಲಕ ಬರುವ ಹಕ್ಕುಗಳನ್ನು ಯಾರು ಕಸಿಯಲಾರರು ಎಂಬ ನಂಬಿಕೆ ಅಚಲವಾಗಿರುತ್ತದೆ. ಆ ಸಂವಿಧಾನದ ಅಡಿಯಲ್ಲಿ ಕಾರ್ಯನಿರ್ವಹಿಸುವ ಸಂಸತ್ತು ಕೈಗೊಳ್ಳುವ ಕಾಯ್ದೆ, ಕಾನೂನುಗಳು ಸಂವಿಧಾನದ ಪರಿಧಿಯಲ್ಲಿರುತ್ತವೆ. ಅಂತಹದ್ದೇ ಒಂದು ಕಾಯ್ದೆ ೧೯೯೧ರ ಪೂಜಾ ಸ್ಥಳಗಳ ಕಾಯ್ದೆ. ಹಾಗಿದ್ದೂ ಜ್ಞಾನವಾಪಿ ಮಸೀದಿಯನ್ನು ಷಡ್ಯಂತ್ರದ ಮೂಲಕ ಮುಸ್ಲಿಮರಿಂದ ಕಸಿಯುವ ಪ್ರಯತ್ನ ನಡೆಯುತ್ತಿದೆ.ಬಿಜೆಪಿ ಮತ್ತು ಸಂಘಪರಿವಾರ ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ಮಾರ್ಪಡಿಸಬೇಕು ಎಂದು ಷಡ್ಯಂತ್ರ ರೂಪಿಸುತ್ತಿದೆ. ಅದರ ಭಾಗವಾಗಿ ಮುಸ್ಲಿಮರ ಸಾಂಸ್ಕೃತಿಕ ಗುರುತುಗಳನ್ನು ಅಳಿಸಿ ಹಾಕುವ ಅಪಾಯಕಾರಿ ಯೋಜನೆಗಳನ್ನು ರೂಪಿಸಿಕೊಂಡು ಅದನ್ನು ಹಂತ ಹಂತವಾಗಿ ಕಾರ್ಯರೂಪಕ್ಕೆ ತರುತ್ತಿದೆ. ಹೆಸರು ಬದಲಾವಣೆ ಎಂಬುದು ಅವರ ಒಂದು ಅಸ್ತ್ರವಾದರೆ, ಇನ್ನೊಂದು ಪ್ರಬಲ ಅಸ್ತ್ರ ಮುಸ್ಲಿಮರ ನಂಬಿಕೆಗಳ ಮೇಲೆ ಪ್ರಹಾರ ನಡೆಸುವುದು. ಮುಸ್ಲಿಮರ ಮಸೀದಿಗಳನ್ನು ಅವರಿಂದ ಕಿತ್ತುಕೊಳ್ಳುವ…
ವಿಜಯಪುರ: ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಫೆ.೧೨ರಂದು ಬನ್ಸಿಲಾಲ ವಿಠ್ಠಲದಾಸ ದರಬಾರ ಪದವಿ ಮಹಾವಿದ್ಯಾಲಯದಲ್ಲಿ ಬೆಳಗ್ಗೆ ೧೦ ಗಂಟೆಗೆ ಡಾ. ಸಿಂಪಿ ಲಿಂಗಣ್ಣನವರ ೧೧೯ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ವಿದ್ಯಾವರ್ಧಕ ಸಂಘದ ಸಮನ್ವಯ ಅಧಿಕಾರಿ ಡಾ. ವ್ಹಿ.ಬಿ. ಗ್ರಾಮಪುರೊಹೀತ ಅವರು ವಹಿಸುವರು. ವಿಶೇಷ ಅತಿಥಿಗಳಾಗಿ ಚಡಚಣದ ಶ್ರೀ ಸಂಗಮೇಶ್ವರ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಡಾ.ಎಸ್.ಎನ್. ಬೋರಗಿ ಭಾಗವಹಿಸಲಿದ್ದು, ಬಿ.ವಿ.ದರಬಾರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಎಸ್. ಮಣೂರ ಉಪಸ್ಥಿತರಿರುವರು. ಹಲಸಂಗಿ ಗೆಳೆಯರ ಪ್ರತಿಷ್ಠಾನದ ಅಧ್ಯಕ್ಷರಾದ ಜಿಲ್ಲಾಧಿಕಾರಿ ಟಿ.ಭೂಬಾಲನ್, ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯ ಸಂಚಾಲಕರಾದ ಪ್ರೋ. ದೊಡ್ಡಣ್ಣ ಬ. ಬಜಂತ್ರಿ ಹಾಗೂ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ ಅವರು ಭಾಗವಹಿಸುವರು.ಮಂಜುನಾಥ ಜುನಗೊಂಡ ಡಾ. ಸಿಂಪಿ ಲಿಂಗಣ್ಣನವರ ಜೀವನ ಹಾಗೂ ಸಾಧನೆಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಶ್ರೀಮಂತ ಮಾದರ…
ವಿಜಯಪುರ: ನಾವು ಮಾಡುವ ಕೆಲಸವನ್ನು ನಿಷ್ಠೆಯಿಂದ, ಪ್ರೀತಿಯಿಂದ, ಪ್ರಾಮಾಣಿಕವಾಗಿ ಮಾಡಿದಾಗ ನಮಗೆ ಅದರಲ್ಲಿ ತೃಪಿ ಸಿಗುತ್ತದೆ ಎಂಬ ಸಂದೇಶ ಸಾರಿದ ಕಾಯಕ ಶರಣರ ಆದರ್ಶ ಜೀವನ ಸಂದೇಶ ನಮಗೆ ಪ್ರೇರೆಣೆಯಾಗಬೇಕು ಎಂದು ಅಪರ ಜಿಲ್ಲಾಧಿಕಾರಿ ಮಹದೇವ ಮುರಗಿ ಹೇಳಿದರು.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಗರದ ಕಂದಗಲ್ ಶ್ರೀ ಹನುಮಂತರಾಯ ರಂಗಮಂದಿರದಲ್ಲಿ ಹಮ್ಮಿಕೊಂಡ ಕಾಯಕ ಶರಣರಾದ ಮಾದರ ಚೆನ್ನಯ್ಯ, ಮಾದರ ಧೂಳಯ್ಯ, ಸಮಗಾರ ಹರಳಯ್ಯ, ಡೋಹರ ಕಕ್ಕಯ್ಯ, ಉರಿಲಿಂಗ ಪೆದ್ದಿ ಕಾಯಕ ಶರಣರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಕಾಯಕದಲ್ಲಿ ಯಾವುದೇ ಮೇಲು-ಕೀಳು ಎಂಬುದು ಇಲ್ಲ. ನಾವು ಮಾಡುವ ಕೆಲಸದಿಂದ ಸಮಾಜಕ್ಕೆ ಒಳಿತಾಗಬೇಕು. ೧೨ನೇ ಶತಮಾನದ ಎಲ್ಲಾ ಶರಣರು ತಮ್ಮ ಕಾಯಕ ತತ್ವದಿಂದ ಸಮಾಜವನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಿದ್ದಾರೆ ಎಂದರು.ವಿಜಯಪುರದ ಬಿ.ವಿ ದರಬಾರ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕರಾದ ಕಾಶಿನಾಥ ಕೋಣೆನವರ ಮಾದರ ಧೂಳಯ್ಯ ಹಾಗೂ ಸಮಗಾರ ಹರಳಯ್ಯ ಅವರ ಜೀವನ ಚರಿತ್ರೆ ಬಗ್ಗೆ ತಿಳಿಸಿಕೊಟ್ಟರು.ತಾಳಿಕೋಟೆಯ…
ಸಾವು-ಬದುಕಿನ ಹೋರಾಟದಲ್ಲಿ ಮಂಜುನಾಥ ಬೂದಿಹಾಳ | ಚಿಕಿತ್ಸೆಗೆ ರೂ.15ಲಕ್ಷ ನೆರವಿನ ಅಗತ್ಯ – ಇಂದುಶೇಖರ ಮಣೂರ ವಿಜಯಪುರ: ಕೇವಲ ಜ್ವರ ಬಂದರೇನೇ ಆಸ್ಪತ್ರೆಗಳಲ್ಲಿ ಸಾವಿರ-ಸಾವಿರ ಪೀಕುವ ಈ ದಿನಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆ ತಲೆದೋರಿದರೆ ಲಕ್ಷ-ಲಕ್ಷ ಹಣ ಚೆಲ್ಲಬೇಕು. ದುಡ್ಡಿರುವ ಶ್ರೀಮಂತರೇನೋ ಹೈಟೆಕ್ ಆಸ್ಪತ್ರೆಗಳಲ್ಲಿ ನೀರಿನಂತೆ ಹಣ ಖರ್ಚುಮಾಡಿ ಗುಣಮುಖರಾಗ್ತಾರೆ. ಆದರೆ ತಮ್ಮ ದೈನಂದಿನ ತುತ್ತಿನ ಚೀಲ ತುಂಬಿಸಿಕೊಳ್ಳಲೇನೇ ಹೆಣಗುವ ಬಡ ಕುಟುಂಬಗಳಿಗೆ ಗಂಭೀರ ಆರೋಗ್ಯ ಸಮಸ್ಯೆ ತಲೆದೋರಿದರೆ ಅವರೆಲ್ಲಿ ಹೋಗಬೇಕು?ಈಗ ಇಂತಹದ್ದೇ ಸಂಕಷ್ಠದ ಪ್ರಕರಣವೊಂದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಬೆಳಕಿಗೆ ಬಂದಿದೆ. ಪಟ್ಟಣದ ಮಂಜುನಾಥ ಕಾಳಪ್ಪ ಬೂದಿಹಾಳ ಎಂಬ ನತದೃಷ್ಟ ಯುವಕನ ಎರಡೂ ಕಿಡ್ನಿಗಳು ವಿಫಲಗೊಂಡು ಈಗ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದು, ಅವನ ಕುಟುಂಬವೀಗ ನಿತ್ಯ ಕಣ್ಣೀರಿನಲ್ಲಿ ಕೈ ತೊಳೆಯುವಂತಾಗಿದೆ.ಮೂಲತ: ಸೊಂಪೂರ ಗ್ರಾಮದ, ಸಧ್ಯ ಸಿಂದಗಿ ಪಟ್ಟಣದಲ್ಲಿ ವಾಸವಿರುವ ಕಾಳಪ್ಪ ಬೂದಿಹಾಳ ದಂಪತಿಗೆ ಐದು ಜನ ಮಕ್ಕಳು. ಮಗ ಮಂಜುನಾಥ ಹೊರತುಪಡಿಸಿದರೆ ಉಳಿದವರು ಹೆಣ್ಣುಮಕ್ಕಳು. ತಂದೆ ಕಾಳಪ್ಪ ಪೆಟ್ರೋಲ್…
Udayarashmi kannada daily newspaper
ಆಲಮಟ್ಟಿ: ಆಲಮಟ್ಟಿಯ ವಿವಿಧ ಉದ್ಯಾನಗಳನ್ನು ನಿರ್ವಹಣೆಯನ್ನು ಹೊರಗುತ್ತಿಗೆ ಟೆಂಡರ್ ಕರೆಯಲಾಗಿದ್ದು, ಅದನ್ನು ತಕ್ಷಣವೇ ರದ್ದುಗೊಳಿಸಿ ಈಗಿದ್ದ ಸ್ಥಿತಿಯನ್ನೇ ಮುಂದುವರೆಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯ ದಿನಗೂಲಿ ನೌಕರರ ಸಂಘ ಆಗ್ರಹಿಸಿದೆ.ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ವಿರೂಪಾಕ್ಷಿ ಮಾದರ, ಕಳೆದ 25 ವರ್ಷಕ್ಕೂ ಹೆಚ್ಚಿನ ಕಾಲದಿಂದ 370 ಕ್ಕೂ ಅಧಿಕ ಅರಣ್ಯ ದಿನಗೂಲಿ ಕಾರ್ಮಿಕರು ಇಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಲಮಟ್ಟಿಯ ವಿವಿಧ ಉದ್ಯಾನಗಳ ನಿರ್ಮಾಣ ಹಾಗೂ ನಿರ್ವಹಣೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.ಅವರಿಗೆಲ್ಲಾ ಅರಣ್ಯ ಇಲಾಖೆಯ ನಿಗದಿಪಡಿಸಿರುವ ದಿನಗೂಲಿಗಳ ಆಧಾರದ ಮೇಲೆ ಕೃಷ್ಣಾ ಭಾಗ್ಯ ಜಲ ನಿಗಮದ ಅರಣ್ಯ ವಿಭಾಗವೂ ವೇತನ ಪಾವತಿ ಮಾಡುತ್ತಿದೆ.ಅತ್ಯಂತ ಕಡಿಮೆ ಸಂಬಳದಲ್ಲಿ ಇಲ್ಲಿ ದುಡಿಯುತ್ತಿದ್ದಾರೆ. ಆದರೆ ಈಗ ಈ ಉದ್ಯಾನದ ನಿರ್ವಹಣೆಯ ಹೊಣೆಯನ್ನು ಹೊರಗುತ್ತಿಗೆ ನೀಡಲು ಟೆಂಡರ್ ಕರೆಯಲಾಗಿದೆ. ಇದರಿಂದ ಕಳೆದ 25 ವರ್ಷಗಳಿಂದಲೂ ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ನೌಕರಿ ಕಳೆದುಕೊಳ್ಳುವ ಭೀತಿ ಆವರಿಸಿದೆ. ಇದೇ ಸಂಬಳದಲ್ಲಿ ತಮ್ಮ…
ವಿಜಯಪುರ: ಎನ್‌ಡಿಪಿಎಸ್ ಕಾಯ್ದೆ ಅಡಿಯಲ್ಲಿ ಮಾದಕ ವಸ್ತುಗಳು ಜಪ್ತಿಗೈದು ನಾಶ ಪಡಿಸಿರುವ ಘಟನೆ ವಿಜಯಪುರ ನಗರದ ಇಂಡಿ ರಸ್ತೆಯಲ್ಲಿರುವ ಕೆಪಿಎಂಪಿ ಟ್ರಸ್ಟ್‌ನಲ್ಲಿ ಶುಕ್ರವಾರ ನಡೆದಿದೆ.ವಿಜಯಪುರ ಜಿಲ್ಲೆಯ ವಿವಿಧ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ 32 ಕೇಸ್ ದಾಖಲು ಮಾಡಿದ್ದಾರೆ. 32 ಕೇಸ್‌ಗಳಲ್ಲಿ 32,15,450 ಮೌಲ್ಯದ 202 ಕೆಜಿ 380 ಗ್ರಾಂ ಮಾದಕ ವಸ್ತುಗಳು ವಶಪಡಿಸಿಕೊಂಡು, ಎಸ್ಪಿ ಋಷಿಕೇಸ್ ಸೋನವಾಣೆ ನೇತೃತ್ವದಲ್ಲಿ ನಾಶ ಪಡಿಸಲಾಗಿದೆ.
ಈ ಬಗ್ಗೆ ಕೂಡಲೇ ಸಭೆ ಕರೆದು ಕ್ರಮ ವಹಿಸುವುದಾಗಿ ಸಿಎಂ ಸಿದ್ದರಾಮಯ್ಯ ಸ್ಪಷ್ಠನೆ ಹರಿಹರ: ಮೈಸೂರು, ಚಾಮರಾಜನಗರ, ಕೊಡಗು, ಹಾಸನ, ಮಂಡ್ಯ, ಜಿಲ್ಲೆಗಳಲ್ಲಿರುವ ಪರಿವಾರ/ತಳವಾರ ಜನಾಂಗದವರನ್ನು ಪರಿಶಿಷ್ಟ ಪಂಗಡ (ಎಸ್‌ಟಿ)ಕ್ಕೆ ಸೇರಿಸಲು ತೀರ್ಮಾನ ಮಾಡಲಾಗಿದೆ. ಕೂಡಲೇ ಈ ಬಗ್ಗೆ ಸಭೆ ಕರೆದು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.ಹರಿಹರದ ರಾಜನಹಳ್ಳಿಯ ಶ್ರೀ ಮಹರ್ಷಿ ವಾಲ್ಮೀಕಿ ಗುರಪೀಠದ ವತಿಯಿಂದ ಯೋಜಿಸಿದ್ದ ಮಹರ್ಷಿ ವಾಲ್ಮೀಕಿ ಜಾತ್ರೆ- 2024 ಹಾಗೂ ಜನಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರ ಈಗಾಗಲೇ ಈ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆ ಮಾಡಿದೆ. ಇಲ್ಲಿ ಇನ್ನೂ ಪ್ರವರ್ಗದಲ್ಲಿರುವ ಸಮುದಾಯದ ಜನರ ಮೇಲಿರುವ ಎಲ್ಲಾ ಪ್ರಕರಣಗಳನ್ನು ವಾಪಸ್ಸು ಪಡೆಯಲೂ ಸೂಚನೆ ನೀಡಲಾಗಿದೆ ಎಂದರು.*ಬುದ್ಧಿವಂತಿಕೆ ಯಾರ ಸ್ವತ್ತಲ್ಲ*ಅಕ್ಷರ ಸಂಸ್ಕೃತಿಯಿಂದ ವಂಚಿತರಾದಾಗ ಸಾಮಾಜಿಕ, ಆರ್ಥಿಕ ಅಸಮಾನತೆ ನಿರ್ಮಾಣವಾಗುತ್ತದೆ. ವಿದ್ಯೆ, ಬುದ್ಧಿವಂತಿಕೆ ಯಾರ ಸ್ವತ್ತಲ್ಲ. ಬುದ್ಧಿ, ಜ್ಞಾನ ಪಡೆದಾಗ ಸ್ವಾಭಿಮಾನಿಗಳಾಗಿ ಬದುಕಲು ಸಾಧ್ಯ. ಎಲ್ಲರಿಗೂ ಸಮಾನ ಎಂಬ ಭಾವ ಬರಲು ಸ್ವಾಭಿಮಾನ ಅಗತ್ಯ ಎಂದು…
