Author: editor.udayarashmi@gmail.com

ವಿಜಯಪುರ: ಭಾರತೀಯ ಜನತಾ ಪಾರ್ಟಿಯ ಲೋಕಸಭಾ ಅಭ್ಯರ್ಥಿ ರಮೇಶ ಜಿಗಜಿಣಗಿ ಪರ ನಗರ ಶಾಸಕರ ಚಿರಂಜೀವಿ ರಾಮನಗೌಡ ಪಾಟೀಲ ನೇತೃತ್ವದಲ್ಲಿ ಶುಕ್ರವಾರ ಚುನಾವಣಾ ಪ್ರಚಾರವನ್ನು ಶಿವಶಕ್ತಿ ನಗರ, ಪಾಣಿ ನಗರ, ಸರಸ್ವತಿ ನಗರ, ಸಾಯಿಸಮರ್ಥ ನಗರ, ರಾಜರತ್ನ ಕಾಲನಿ, ಮಿಣಿಮಾದರ ಓಣಿ, ರಜಪೂತ ಗಲ್ಲಿಯಲ್ಲಿ ಬಿರುಸಿನ ಪ್ರಚಾರ ಹಮ್ಮಿಕೊಳ್ಳಲಾಗಿದೆ.ಈ ಸಮಯದಲ್ಲಿ ರಾಮನಗೌಡ ಪಾಟೀಲ ರವರು ಮಾತನಾಡಿ, ೨೦೧೪ ಮತ್ತು ೨೦೧೯ರಲ್ಲಿ ಭಾರತೀಯ ಜನತಾ ಪಕ್ಷಕ್ಕೆ ದೇಶದ ಜನತೆ ಪೂರ್ಣ ಬಹುಮತ ನೀಡಿದ್ದು, ಬಿಜೆಪಿ ೧೦ ವರ್ಷಗಳಿಂದ ಪೂರ್ಣ ಬಹುಮತದ ಸರ್ಕಾರ ನಡೆಸುತ್ತಿದೆ, ಆದರೆ ಒಂದು ಬಾರಿಯೂ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ಕಾಂಗ್ರೆಸ್ನAತೆ ತುರ್ತು ಪರಿಸ್ಥಿತಿ ಘೋಷಿಸಿಲ್ಲ ಅಥವಾ ಅವಧಿಯನ್ನು ವಿಸ್ತರಿಸಿಲ್ಲ. ಅದರ ಬದಲಿಗೆ ಮೋದಿ ನೇತೃತ್ವದ ಮತ್ತು ಅಮಿತ್ ಶಾ ಅವರ ಕೌಶಲ್ಯಪೂರ್ಣ ಮಾರ್ಗದರ್ಶನದ ಈ ಸರ್ಕಾರ ಪೂರ್ಣ ಬಹುಮತವನ್ನು ೩೭೦ ನೇ ವಿಧಿಯನ್ನು ತೆಗೆದುಹಾಕಲು, ತ್ರಿವಳಿ ತಲಾಖ್ ರದ್ದುಗೊಳಿಸಲು, ಬ್ರಿಟಿಷರು ಮಾಡಿದ ಕಾನೂನುಗಳನ್ನು ಬದಲಾಯಿಸಲು, ಕರೋನಾ ಸಾಂಕ್ರಾಮಿಕ ಸಮಯದಲ್ಲಿ ಲಾಕ್ಡೌನ್…

Read More

ಧಾರವಾಡದಲ್ಲಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ಧಾರವಾಡ: 2024ರ ಐತಿಹಾಸಿಕ ಚುನಾವಣೆ ₹ 12 ಲಕ್ಷ ಕೋಟಿ ಹಗರಣ ಮಾಡಿರುವ ಭ್ರಷ್ಟ ಕಾಂಗ್ರೆಸ್ ಪಕ್ಷ ಮತ್ತು ನಯಾ ಪೈಸೆಯಷ್ಟು ಹಗರಣ ಮಾಡದ ಪ್ರಮಾಣಿಕ ಪ್ರಧಾನಿ ನರೇಂದ್ರ ಮೋದಿ ಅವರ ನಡುವಿನ ನೇರ ಸ್ಪರ್ಧೆಯಾಗಿದೆ. ಎಲ್ಲಾ ಸ್ಥಾನಗಳಲ್ಲಿ ಬಿಜೆಪಿಯನ್ನು ಗೆಲ್ಲಿಸುವ ಮೂಲಕ ಕರ್ನಾಟಕದ ಜನತೆ ಕಾಂಗ್ರೆಸ್ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಹಾಗೂ ಬಿಜೆಪಿಯ ವರಿಷ್ಠ ನಾಯಕ ಅಮಿತ್ ಶಾ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಕಾಶ್ಮೀರದ ಬಗೆಗಿನ ಅರ್ಥಹೀನ ಟೀಕೆಗಳ ಬಗ್ಗೆ ತೀವ್ರ ವಾಗ್ದಾಳಿ ನಡೆಸಿದ ಅವರು, ಕರ್ನಾಟಕ ಮತ್ತು ರಾಜಸ್ಥಾನದ ಜನರಿಗೂ ಕಾಶ್ಮೀರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಖರ್ಗೆ ಹೇಳಿದ್ದಾರೆ, ಇದು ಭಾರತದ ರಾಜ್ಯಗಳ ಒಕ್ಕೂಟದ ಬಗ್ಗೆ ಅವರಿಗಿರುವ…

Read More

ವಿಜಯಪುರ: ದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದು ಹೆಮ್ಮೆಯ ನಾಯಕ ನರೇಂದ್ರ ಮೋದಿಯವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ ಎಂದು ಪ್ರಾರ್ಥಿಸಿ ವಿಜಯಪುರ ಬಿಜೆಪಿ ಮಹಿಳಾ ಮೊರ್ಚಾ ಕಾರ್ಯಕರ್ತೆಯರು ಕಾಳಿಕಾಂಬ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.ದೇಶದ ರಕ್ಷಣೆ, ಅಭಿವೃದ್ಧಿಗಾಗಿ ದಿಟ್ಟ ನಿರ್ಧಾರಗಳನ್ನು ಕೈಗೊಂಡು ವಿಶ್ವವೇ ಭಾರತದತ್ತ ತಿರುಗಿ ನೋಡುವಂತೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇವರು ಇನ್ನಷ್ಟು ಶಕ್ತಿ, ಆಯುರಾರೋಗ್ಯ ಕರುಣಿಸಿ, ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗಲಿ. ಅವರ ನೇತೃತ್ವದಲ್ಲಿ ಬಿಜೆಪಿ ಪಕ್ಷವೂ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗಳಿಸಿ ಮತ್ತೆ ಅಧಿಕಾರಕ್ಕೆ ಬರಲಿ ಎಂದು ಪ್ರಾರ್ಥಿಸಿ, ಬಿಜೆಪಿ ಮಹಿಳಾ ಮೊರ್ಚಾದ ಜಿಲ್ಲಾಧ್ಯಕ್ಷೆ ಸಪ್ನಾ ಕಣಮುಚನಾಳ ಅವರ ನೇತೃತ್ವದಲ್ಲಿ ನೂರಾರು‌ ಸಂಖ್ಯೆಯ ಮಹಿಳಾ‌ ಕಾರ್ಯಕರ್ತೆಯರು ನಗರದ ಕಾಳಿಕಾಂಬ ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ನೆರವೇರಿಸಿ ಭಕ್ತಿಯಿಂದ ಪ್ರಾರ್ಥಿಸಿದರು.ಈ ವೇಳೆ ಮಹಿಳಾ ಮೊರ್ಚಾದ ಹಲವಾರು ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.

Read More

ವಿಜಯಪುರ: ಲೋಕಸಭಾ ಚುನಾವಣೆ ಹಿನ್ನೆಲೆ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಪರವಾಗಿ ವಾರ್ಡ್ ಸಂಖ್ಯೆ 29 ಹಾಗೂ 30 ರಲ್ಲಿ ಬಿಜೆಪಿ ಮಹಾಸಂಪರ್ಕ ಅಭಿಯಾನ ನಡೆಸಿ ಮನೆಮನೆಗೆ ಭೇಟಿ ನೀಡಿ ಮತಪ್ರಚಾರ ನಡೆಸಲಾಯಿತು.ಮಹಾಸಂಪರ್ಕ ಅಭಿಯಾನ ಪ್ರಯುಕ್ತ ಬಿಜೆಪಿ ಕಾರ್ಯಕರ್ತರು ವಾರ್ಡ್ ಸಂಖ್ಯೆ 29 ಹಾಗೂ 30 ಎರಡೂ ವಾರ್ಡುಗಳ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಗೆ ತೆರಳಿ ಕಳೆದ ಹತ್ತು ವರ್ಷಗಳ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಗಳು, ಜನಪರ ಕಾರ್ಯಕ್ರಮಗಳ ಕರಪತ್ರಗಳನ್ನು ಹಂಚಿ ಬಿಜೆಪಿಗೆ ಬೆಂಬಲಿಸುವಂತೆ ಮನವಿ ಮಾಡಿಕೊಳ್ಳಲಾಯಿತು.ಈ ವೇಳೆ ಬಿಜೆಪಿ ಬೆಳಗಾವಿ ವಿಭಾಗದ ಸಂಘಟನಾ ಪ್ರಭಾರಿ ಪ್ರಕಾಶ ಅಕ್ಕಲಕೋಟ, ವಿಜಯಪುರ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಪಾಪು ಸಿಂಗ್ ರಜಪೂತ್ ಮುಖಂಡರಾದ ವಿಜಯಕುಮಾರ ಗಚ್ಚಿನಕಟ್ಟಿ, ಗಿರೀಶ ಬಿರಾದಾರ, ವೇಣುಗೋಪಾಲ ಜೋಶಿ, ವಿಜಯಪುರದ ವಿಸ್ತಾರಕರಾದ ವೀರೇಂದ್ರ ಏಕ್ಕೆಮಠ ,ವಿಕಾಸ ಪದಕಿ, ಸಚಿನ ಘಾಟಿಗೆ, ಕೋಲಕಾರ್, ಗುರುರಾಜ್ ಹಜೇರಿ, ನಿಂಗರಾಜ್ ಪಾಟೀಲ್, ಗುರು ಓಕಳಿ, ಗುಂಡು ಹಿಪ್ಪರಗಿ, ಲಕ್ಷ್ಮಣ್…

Read More

ವಿಜಯಪುರ: ಸಂಸದ ರಮೇಶ ಜಿಗಜಿಣಗಿ ಅವರಿಗೆ ಅಭಿವೃದ್ಧಿ ಎಂದರೆ ಅಸಡ್ಡೆಯಿದೆ ಎಂದು ಕೈಗಾರಿಕೆ ಮೂಲಸೌಲಭ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.ಬಬಲೇಶ್ವರ ತಾಲೂಕಿನ ದೇವರ ಗೆಣ್ಣೂರ ಮತ್ತು ಗುಣದಾಳದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿದರು.ಅಭಿವೃದ್ಧಿ ನಮ್ಮ ಮೂಲಮಂತ್ರ. ಅದು ನಿತ್ಯ ನಿರಂತರವಾಗಿದೆ. ಕೋಮು ಭಾವನೆ ಕೆರಳಿಸುವವರಿಗೆ ತಕ್ಕ ಪಾಠ ಕಲಿಸಲು ಸರ್ವ ಜನಾಂಗದ ಶಾಂತಿಯ ತೋಟದ ಪಣತೊಟ್ಟಿರುವ ಕಾಂಗ್ರೆಸ್ಸನ್ನು ಬೆಂಬಲಿಸಿ ಸರ್ವಾಂಗೀಣ ಅಭಿವೃದ್ಧಿಗೆ ಕೈ ಜೋಡಿಸಬೇಕು ಎಂದು ಅವರು ಹೇಳದರು.ಶಾಸಕ ಸಂಸದರಾದವರು ತಮ್ಮ ಅಧಿಕಾರವಧಿಯಲ್ಲಿ ಕನಿಷ್ಠ ಶೇ. 80 ರಷ್ಟಾದರೂ ಕೆಲಸ ಮಾಡಬೇಕು. ಆದರೆ, ಶೂನ್ಯ ಅಭಿವೃದ್ಧಿ ಮಾಡಿರುವವರಿಗೆ ತಕ್ಕ ಪಾಠ ಕಲಿಸಬೇಕು. ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಕ್ರೀಯಾಶೀಲರಾಗಿದ್ದು, ಬಹುಭಾಷೆ ಬಲ್ಲವರಾಗಿದ್ದಾರೆ. ಇಂಥ ವಿದ್ಯಾವಂತ ಅಭ್ಯರ್ಥಿಯನ್ನು ಆಯ್ಕೆ ಮಾಡಿ ವಿಜಯಪುರ ಜಿಲ್ಲೆಯಲ್ಲಿ ಬಹುದಿನಗಳಿಂದ ನನೆಗುದಿಗೆ ಬಿದ್ದಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಅವಕಾಶ ಮಾಡಿ ಕೊಡಬೇಕು ಎಂದು ಅವರು…

Read More

“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ ಎಲ್ಲಿ ನೋಡಿದರಲ್ಲಿ ಬಿಸಿಲ ಧಗೆಯಿಂದ ಒಣಗಿರುವ ಗಿಡ ಮರಗಳು, ನೆರಳು ಹುಡುಕಿ ಮಲಗುವ ಜಾನುವಾರುಗಳು, ಪಶು ಪಕ್ಷಿಗಳು.. ಇನ್ನು ಮನುಷ್ಯರದಂತೂ ಕೇಳಬೇಡಿ ಆಗೊಮ್ಮೆ ಈಗೊಮ್ಮೆ ಹುಶ್ ಎಂದು, ಅಬ್ಬ ಎಂದು ನಿಡುಸುಯ್ಯುವ ಮನುಷ್ಯರು. ದುಡ್ಡಿದ್ದವರು ಏರ್ ಕಂಡೀಷನರ್ ಗಳು ಏರ್ ಕೂಲರ್ಗಳ ಮೊರೆ ಹೋಗಿದ್ದರೆ ಉಳಿದವರು ಫ್ಯಾನುಗಳ ಮೊರೆ ಹೋಗಿದ್ದಾರೆ. ಯಾವುದಕ್ಕೂ ಕರೆಂಟ್ ಬೇಕಲ್ಲವೇ?? ಒಂದು ಕ್ಷಣ ಕರೆಂಟ್ ಹೋದರೆ ಒದ್ದಾಡುವ ಜನರ ಪರಿಸ್ಥಿತಿ ಯಾರಿಗೂ ಬೇಡ?? ಮತ್ತೆ ಕೆಲವರು ಊರ ಹೊರಗಿರುವ ಮರಗಳ ದೊಡ್ಡ ದೊಡ್ಡ ಕಟ್ಟಡಗಳ ಕೆಳಗೆ ಕುಳಿತು, ಮಲಗಿ ದಣಿವಾರಿಸಿಕೊಳ್ಳುತ್ತಾರೆ.ಈಗಾಗಲೇ ಭೂಮಿಯ ಒಡಲು ಕಾದುಹೋಗಿದೆ. ಬಿಸಿಲಿನ ಬೇಗೆಗೆ ಗಿಡ ಮರಗಳು ಸುಟ್ಟು ಹೋಗುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಇನ್ನು ಕೆಲವೇ ವರ್ಷಗಳಲ್ಲಿ ವಾತಾವರಣದಲ್ಲಿನ ತಾಪಮಾನವು ಇನ್ನಷ್ಟು ಹೆಚ್ಚಾಗಿ ಭೂಮಿಯ ಮೇಲಿನ ತೇವಾಂಶ ಕುಸಿದು ಹೋಗಬಹುದು. ವಿವಿಧ ಬಗೆಯ ಚರ್ಮರೋಗಗಳು ಆರೋಗ್ಯ ಸಂಬಂಧಿ ತೊಂದರೆಗಳು ಕಾಣಿಸಿಕೊಳ್ಳಬಹುದು. ಈಗಾಗಲೇ ಜನರು ಬಿಸಿಲಿನ…

Read More

ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಬೆದರಿಕೆಯೊಡ್ಡಿರುವ ಆರೋಪ | ಸುದ್ದಿಗೋಷ್ಠಿಯಲ್ಲಿ‌ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಮಾಹಿತಿ ಬೆಂಗಳೂರು: ಪೆನ್‌ಡ್ರೈವ್‌ ವಿಡಿಯೋ ವೈರಲ್‌ ಬಳಿಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿರುವ ಹಾಸನ ಕ್ಷೇತ್ರದ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ.ಲೈಂಗಿಕ ದೌರ್ಜನ್ಯ ಎಸಗಿ ಕೊಲೆ ಬೆದರಿಕೆಯೊಡ್ಡಿರುವ ಆರೋಪದಡಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮಹಿಳೆಯೊಬ್ಬರು ಪ್ರಕರಣ ದಾಖಲಿಸಿದ್ದಾರೆ.ಈ ಕುರಿತು ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್‌, ರೇವಣ್ಣ ಅವರು ಇಂದು ಅಧಿಕಾರಿಗಳ ಮುಂದೆ ಹಾಜರಾಗುತ್ತೆನೆ ಎಂದು ಹೇಳಿದ್ದಾರೆ. ಲುಕ್ ಔಟ್ ನೋಟಿಸ್ ನೀಡಲಾಗಿದೆ. ಪ್ರಜ್ವಲ್ ರೇವಣ್ಣ ಅವರು ವಕೀಲರ ಮೂಲಕ 6 ದಿನ ಕಾಲಾವಕಾಶ ಕೇಳಿದ್ದಾರೆ. ನಿನ್ನೆ ಮತ್ತೊಬ್ಬ ಮಹಿಳೆ ದೂರು ನೀಡಿದ್ದಾರೆ. ಇದು ಎರಡನೇ ದೂರು. ಮಹಿಳೆಯರು ಧೈರ್ಯವಾಗಿ ಬಂದು ದೂರು ನೀಡಬಹುದು. ತಮಗೆ ಸರ್ಕಾರ ಎಲ್ಲ ರೀತಿಯ ಭದ್ರತೆ ನೀಡಲಿದೆ ಎಂದು ಹೇಳಿದ್ದಾರೆ.ಇಂತಹ ಸೂಕ್ಷ್ಮ ವಿಚಾರದಲ್ಲಿ ಸ್ವಯಂ ಪ್ರೇರಿತ ದೂರು…

Read More

ಮುದ್ದೇಬಿಹಾಳ: ತಾಲೂಕಿನ’ಉದಯರಶ್ಮಿ’ ಹಾಗೂ ’ಸಂಯುಕ್ತ ಕರ್ನಾಟಕ’ ದಿನಪತ್ರಿಕೆಗಳ ವರದಿಗಾರ ಮತ್ತು ನ್ಯಾಯವಾದಿ ಚೇತನ ಶಿವಶಿಂಪಿ ಅವರ ತಂದೆ ಮಹಾದೇವಪ್ಪ ಗುರುಬಸಪ್ಪ ಶಿವಶಿಂಪಿ (೬೪) ಬುಧವಾರ ರಾತ್ರಿ ಹೃದಯಾಘಾತದಿಂದ ನಿಧನರಾದರು.ಮೃತರು ಪತ್ನಿ, ಪತ್ರಕರ್ತ ಚೇತನ ಶಿವಶಿಂಪಿ ಸೇರಿದಂತೆ ಇಬ್ಬರು ಪುತ್ರರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.ಸಂತಾಪ: ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ, ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ, ಭಾಜಪಾ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಜಿಲ್ಲಾ ಪಂಚಾಯತ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಅಹಿಲ್ಯಾಬಾಯಿ ಹೋಳ್ಕರ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್.ಮದರಿ, ನಿವೃತ್ತ ಡಿವಾಯ್‌ಎಸ್‌ಪಿ ಎಸ್.ಎಸ್.ಹುಲ್ಲೂರ, ಬಾಲಾಜಿ ಶುಗರ್ಸ್ ನ ರಾಹುಲಗೌಡ ಪಾಟೀಲ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಇಂದುಶೇಖರ ಮಣೂರ, ರಾಜ್ಯ ಸಮಿತಿ ಸದಸ್ಯ ಡಿ.ಬಿ.ವಡವಡಗಿ, ನಿವೃತ್ತ ನ್ಯಾಯಾಧೀಶ ಜಿ.ಡಿ.ಇನಾಮದಾರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಎಸ್.ಮಾಲಗತ್ತಿ, ಹಿರಿಯ ನ್ಯಾಯವಾದಿಗಳಾದ ವಿ.ಎಂ.ನಾಗಠಾಣ, ಜೆ.ಎ.ಚಿನಿವಾರ, ಎಸ್.ಎಂ.ಗುಡದಿನ್ನಿ, ಎಂ.ಎಸ್.ನಾವದಗಿ, ಆರ್.ಬಿ.ಪಾಟೀಲ, ಎಂ.ಎಚ್.ಕ್ವಾರಿ, ಬಿ.ಎ.ನಾಡಗೌಡರ, ಎಂ.ಎ.ಮುದ್ದೇಬಿಹಾಳ ಸೇರಿ ತಾಲೂಕಿನ ಎಲ್ಲ ಪತ್ರಕರ್ತರು ಹಾಗೂ ವಕೀಲರು ಮತ್ತು…

Read More

ವಿಜಯಪುರ: ದೇಶದ ಸುರಕ್ಷತೆ, ಸನಾತನ ಹಿಂದೂ ಧರ್ಮ ಉಳಿವಿಗಾಗಿ ಹಾಗೂ ಅಭಿವೃದ್ಧಿಗೋಸ್ಕರ ವಿಶ್ವ ನಾಯಕ ನರೇಂದ್ರ ಮೋದಿಯವರನ್ನು ಮತ್ತೋಮ್ಮೆ ಪ್ರಧಾನಿಯನ್ನಾಗಿಸುವ ಸಂಕಲ್ಪದೊಂದಿಗೆ ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರ ಚುನಾವಣಾ ಪ್ರಚಾರಾರ್ಥವಾಗಿ ಗುರುವಾರ ಯುವ ಮುಖಂಡ ರಾಮನಗೌಡ ಪಾಟೀಲ ಯತ್ನಾಳ ಅವರ ನೇತೃತ್ವದಲ್ಲಿ ಬೃಹತ್ ಬೈಕ್ ರ‍್ಯಾಲಿ ನಡೆಯಿತು.ದಕ್ಷ ಪೊಲೀಸ್ ಅಧಿಕಾರಿಯಾಗಿ ಕರ್ನಾಟಕ ರಾಜ್ಯದಲ್ಲಿ ಕರ್ನಾಟಕ ಸಿಂಗಂ ಎಂಬ ಖ್ಯಾತಿ ಗಳಿಸಿರುವ ತಮಿಳುನಾಡು ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ರಾಜ್ಯ ಲೋಕಸಭಾ ಚುನಾವಣೆ ಸ್ಟಾರ್ ಪ್ರಚಾರಕರಾದ ಕೆ.ಅಣ್ಣಾಮಲೈ ಅವರೊಂದಿಗೆ, ಆಶ್ರಮ ರಸ್ತೆಯ ಎಂಜಿನಿಯರಿಂಗ್ ಕಾಲೇಜು ಹತ್ತಿರ ಆರಂಭಗೊಂಡ ಬೃಹತ್ ಬೈಕ್ ರ‍್ಯಾಲಿ ಸಿದ್ದೇಶ್ವರ ದೇವಸ್ಥಾನ, ಮಹಾತ್ಮ ಗಾಂಧಿ ಚೌಕ್ ಮಾರ್ಗವಾಗಿ ಮೀನಾಕ್ಷಿ ಚೌಕ್ ಗೆ ತೆರಳಿಯಿತು.ರ‍್ಯಾಲಿಯುದ್ದಕ್ಕೋ ಬೊಲೋ ಭಾರತ್ ಮಾತಾ ಕೀ ಜೈ, ಒಂದೇ ಮಾತರಂ, ಜೈ ಶ್ರೀ ರಾಮ, ಅಬ್ ಕಿ ಬಾರ್ ಮೋದಿ ಸರ್ಕಾರ್, ನರೇಂದ್ರ ಮೋದಿಯವರಿಗೆ ಜಯವಾಗಲಿ, ಬಸನಗೌಡ ಪಾಟೀಲ ಯತ್ನಾಳ ಅವರಿಗೆ…

Read More